ಸ್ಯಾಂಡಲ್ ವುಡ್ ನಟಿ ಚೈತ್ರಾ ಆಚಾರ್ ಅವರು ಇತ್ತೀಚೆಗೆ ಅಭಿಮಾನಿಗಳ ಜೊತೆ ಸಂವಾದ ನಡೆಸಿದರು, ಈ ವೇಳೆ ಅವರ ಪ್ರೀತಿ, ಮದುವೆ ಬಗ್ಗೆ ಹಲವು ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಸ್ಯಾಂಡಲ್ವುಡ್ ಮಲ್ಟಿ ಟ್ಯಾಲೆಂಟೆಡ್ ನಟಿ ಚೈತ್ರಾ ಆಚಾರ್ (Sandalwood multi talented actress Chaitra Achar), ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಕನೆಕ್ಟ್ ಆಗಿರ್ತಾರೆ. ಸೋಶಿಯಲ್ ಮೀಡಿಯಾ (social media ) ದಲ್ಲಿ ಬೋಲ್ಡ್ ಫೋಟೋ ಹಾಕ್ತಾ, ಇಷ್ಟದ ಹಾಡು ಹಾಡ್ತಾ ಸದಾ ಆಕ್ಟಿವ್ ಆಗಿರುವ ನಟಿ ಚೈತ್ರಾ ಆಚಾರ್ ಈಗ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ನನಗೆ ಪ್ರಶ್ನೆ ಕೇಳಿ ಎನ್ನುತ್ತಲೇ ಇನ್ಸ್ಟಾ ಸ್ಟೋರಿ (Insta Story) ಗೆ ಬಂದ ಚೈತ್ರಾ ಆಚಾರ್, ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಫಟಾ ಫಟ್ ಉತ್ತರ ನೀಡಿದ್ದಾರೆ. ಎಲ್ಲ ವಿಷ್ಯವನ್ನು ಸಿಕ್ಕಿಲ್ಲದೆ ಹಂಚಿಕೊಳ್ಳುವ ಚೈತ್ರಾಗೆ ಮದುವೆ, ರಿಲೇಶನ್ಶಿಪ್ (Relationship) ಬಗ್ಗೆ ಅಭಿಮಾನಿಗಳು ಪ್ರಶ್ನೆ ಕೇಳಿ ಉತ್ತರ ಕಂಡ್ಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಅದ್ರಲ್ಲಿ ಒಬ್ಬರು, ಯಾರ್ ಮೇಲಾದ್ರೂ ಲವ್ ಆಗಿತ್ತಾ ಅಂತ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಚೈತ್ರಾ ಆಚಾರ್, ಯಸ್. ಆಗಿತ್ತು. ನಂತ್ರ ಬ್ರೇಕ್ ಅಪ್ ಆಯ್ತು. ಲೈಫ್ ನಲ್ಲಿ ಮೂವ್ ಆನ್ ಆದೆ ಎಂದಿದ್ದಾರೆ. ಈಗ ಚೈತ್ರಾ ಅಭಿಮಾನಿಗಳ ತಲೆಯಲ್ಲಿ ಹುಳು ಕೊರೆಯಲು ಶುರುವಾಗಿದೆ. ಚೈತ್ರಾ ಯಾರನ್ನು ಲವ್ ಮಾಡಿದ್ರಪ್ಪ ಅಂತಾ ಗೆಸ್ ಮಾಡೋಕೆ ಶುರು ಮಾಡಿದ್ದಾರೆ.
Bigg Boss: ಅಂತೂ ಬಂತು ಬಿಗ್ಬಾಸ್ ಕಾರು… ಕಾರ್ತಿಕ್ ಮಹೇಶ್ ಫುಲ್ ಖುಷ್
ಚೈತ್ರಾ ಆಚಾರ್ ಅವರಿಗೆ ಅನೇಕರು ಮದುವೆ ಬಗ್ಗೆಯೇ ಪ್ರಶ್ನೆ ಕೇಳಿದ್ದಾರೆ. ಮದುವೆ ಯಾವಾಗಾ ಅತ್ತಿಗೆ ಅಂತ ಒಬ್ಬರು ಕೇಳಿದ ಪ್ರಶ್ನೆಗೆ ಚೈತ್ರಾ ತಮಾಷೆಯಾಗಿ ಉತ್ತರ ನೀಡಿದ್ದಾರೆ. ಅತ್ತಿಗೆನಾ? ಅಣ್ಣನೆ ಸಿಗ್ಲಿಲ್ಲ, ಈಗ್ಲೇ ಅತ್ತಿಗೇನಾ ಅಂತ ಕೇಳಿದ ಚೈತ್ರಾ, ಮದುವೆ ಯಾವಾಗ ಅಂತ ಯಾಕೆ ಎಲ್ಲರೂ ಕೇಳ್ತೀರಾ? ಮದುವೆ ಬಿಟ್ಟು ಮಾಡೋಕೆ ಬೇಕಾದಷ್ಟು ಕೆಲಸ ಇದೆ ಎಂದಿದ್ದಾರೆ. ಅಷ್ಟೇ ಅಲ್ಲ, ಅಭಿಮಾನಿ ಕೇಳಿದ ಪ್ರಶ್ನೆಗೆ ಎರಡು ಸಲ ಮದುವೆ ಆಗಿದೆ ಅಂತ ಉತ್ತರ ನೀಡಿದ್ದಾರೆ.
ಯು ಆರ್ ಸೆಕ್ಸಿ ಆಂಡ್ ಹಾಟ್ (You Are Sexy And Hot).. ಒಮ್ಮೆ ಸಿಗೋಣ್ವಾ ಎಂಬ ಪ್ರಶ್ನೆಯನ್ನು ತುಂಬಾ ಸ್ವಾಭಾವಿಕ ಎನ್ನುವಂತೆ ಸ್ವೀಕರಿಸಿದ ಚೈತ್ರಾ, ಸಿಕ್ಕಿ ಏನ್ ಮಾಡೋದು ಅಂತ ಕೇಳಿದ್ದಾರೆ.
ಚೈತ್ರಾ ಆಚಾರ್, ತಮ್ಮ ಅಡ್ಡ ಹೆಸರು ರಾಣಿ ಎಂದಿದ್ದಾರೆ. ವರ್ಕ್ ಔಟ್, ಜಿಮ್ ಬಗ್ಗೆಯೂ ಹೇಳಿದ ಚೈತ್ರಾ, ಬ್ರೇಕ್ ಇಲ್ದೆ 15 ಪುಶ್ ಅಪ್ ಮಾಡ್ತಾರೆ. ನಂತ್ರ ಕಷ್ಟಪಟ್ಟು ಮತ್ತೆ ಐದು ಪುಶ್ ಅಪ್ ಮಾಡೋದಾಗಿ ಹೇಳಿದ್ದಾರೆ. ಜಿಮ್ ಟ್ರೈನರ್ ಬಾಡಿ ತುಂಬಾ ಫಿಟ್ ಆಗಿದೆ. ಅವ್ರನ್ನು ನೋಡಿ ನನಗೆ ಜಿಮ್ ಗೆ ಹೋದಾಗ ಎಕ್ಸ್ಟಾ ಎನರ್ಜಿ ಬರುತ್ತೆ. ಅವರಂತೆ ನಾನು ಫಿಟ್ ಆಗಿರ್ಬೇಕು ಎನ್ನಿಸುತ್ತೆ. ಹಾಗಾಗಿ ಜಿಮ್ ಗೆ ಹೋಗ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ ಚೈತ್ರಾ ಆಚಾರ್.
ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾದ ಚೈತ್ರಾ ಆಚಾರ್, ಹಾಡಿನಲ್ಲಿ ಮುಂದಿದ್ದಾರೆ. ತಮ್ಮ ಸುಮಧುರ ಕಂಠದಿಂದ ಹೊರ ಬಂದ ಹಾಡಿನ ವಿಡಿಯೋವನ್ನು ಆಗಾಗ ಹಂಚಿಕೊಳ್ಳುವ ಚೈತ್ರಾ ಆಚಾರ್, ಅಭಿಮಾನಿಗಳ ಬೇಡಿಕೆ ಮೇರೆಗೆ ಒಂದೆರಡು ಹಾಡನ್ನು ಹಾಡಿದ್ದಾರೆ. ಚೈತ್ರಾ ಅವರಿಗೆ ಅನಂತ್ ನಾಗ್, ಶಂಕರ್ ನಾಗ್, ವಿಷ್ಣುವರ್ಧನ್ ಸೇರಿದಂತೆ ಅನೇಕ ಫೆವರೆಟ್ ನಟರಿದ್ದಾರೆ.
ಶ್ರೀಮಂತ ಹಿನ್ನೆಲೆಯಿಂದ ಬಂದ್ರು ತಿನ್ನಲು ದುಡ್ಡಿಲ್ಲದ ಸ್ಥಿತಿ ತಲುಪಿದ್ದು ಹೇಗೆ: ಕಷ್ಟದ ದಿನಗಳ ನೆನೆದ ವಿಜಯ್ ವರ್ಮಾ
ಕನ್ನಡದಲ್ಲಿ ಟೋಬಿ, ಸಪ್ತಸಾಗರದಾಚೆ ಎಲ್ಲೋ, ಸೈಡ್ ಬಿ ಸಿನಿಮಾಗಳ ಪಾತ್ರಗಳ ಮೂಲಕ ಕನ್ನಡದ ಭರವಸೆಯ ನಟಿಯಾಗಿ ಕಾಣಿಸಿಕೊಂಡಿರುವ ಚೈತ್ರಾ, ಈಗ ಕನ್ನಡದ ಜೊತೆ ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸ್ಟ್ರಾಬೆರ್ರಿ, ಹ್ಯಾಪಿ ಬರ್ತ್ ಡೇ ಟು ಮಿ, ಉತ್ತರಕಾಂಡ, ಸಿದ್ಧಾರ್ಥ್ ಸಿನಿಮಾಗಳಲ್ಲಿ ಚೈತ್ರಾ ನಟಿಸುತ್ತಿದ್ದಾರೆ.