ಪುಕ್ಸಟ್ಟೆ ಲೈಫಿಗಾಗಿ ಮುಸಲ್ಮಾನನಾದ ಸಂಚಾರಿ ವಿಜಯ್ !

By Suvarna News  |  First Published Feb 11, 2020, 9:58 AM IST

ಸಂಚಾರಿ ವಿಜಯ್ 'ನಾನು ಅವಳಲ್ಲ' ಚಿತ್ರದಲ್ಲಿ ವಿಭಿನ್ನ ಪಾತ್ರದ ಮೂಲಕ ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ ಪ್ರತಿಭಾನ್ವಿತ ನಟ. ತಮ್ಮ ಹೊಸ ಸಿನಿಮಾ 'ಪುಕ್ಸಟ್ಟೆ ಲೈಫು' ಸಿನಿಮಾದ ಬಗ್ಗೆ ಸುವರ್ಣನ್ಯೂಸ್.ಕಾಮ್‌ಗೆ ಮಾತನಾಡಿದ್ದಾರೆ.


 


- ಶಶಿಕರ ಪಾತೂರು

Tap to resize

Latest Videos

undefined

ಸದಾ ವಿಭಿನ್ನ ಪಾತ್ರಗಳ ಮೂಲಕ ಸುದ್ದಿಯಾಗುತ್ತಿರುವ ನಟ ಸಂಚಾರಿ ವಿಜಯ್. ಈ ಬಾರು ಅವರು ಸುದ್ದಿಯಾಗಿರುವುದು ಮುಸಲ್ಮಾನನ ಪಾತ್ರವನ್ನು ನಿರ್ವಹಿಸುವ  ಮೂಲಕ. ಇದು ಚಿತ್ರದಿಂದ ಚಿತ್ರಕ್ಕೆ ವೈವಿಧ್ಯಮಯ ಪಾತ್ರಗಳನ್ನು ಆಯ್ಕೆ ಮಾಡುವ ಅವರ ಕ್ಯಾಲಿಬರ್‌ಗೆ ಉದಾಹರಣೆ. ತೃತೀಯ ಲಿಂಗಿಯ ಪಾತ್ರದ ಮೂಲಕ ಶ್ರೇಷ್ಠ ನಟನಾಗಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ವಿಜಯ್ ಈ ವಾರ ಬಿಡುಗಡೆಯಾಗಲಿರುವ ಜಂಟ್ಲ್ ಮ್ಯಾನ್ ಚಿತ್ರದಲ್ಲಿ ಕಡಕ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ ! ಇತ್ತೀಚೆಗೆ ಬಿಡುಗಡೆಯಾದ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದಲ್ಲಿ ಸೈಕೋ ಗಂಡನ ಪಾತ್ರ ನಿರ್ವಹಿಸಿ ಅಚ್ಚರಿ ಮೂಡಿಸುವ ಅಭಿನಯ ನೀಡಿದ್ದರು ವಿಜಯ್. ಇದೀಗ ಅವರ ಸಂಚಾರಿ ಸಹಚರರ ಜತೆಗಿನ ಚಿತ್ರವೊಂದು ಮೇಕಿಂಗ್ ಮೂಲಕವೇ ಸುದ್ದಿ ಮಾಡುತ್ತಿದೆ. ಅದಕ್ಕೆ ಕಾರಣ ವಾಸು ದೀಕ್ಷಿತ್ ಸಂಗೀತದಲ್ಲಿರುವ ಹಾಡುಗಳು ಕೂಡಾ ಹೌದು. ಅವೆಲ್ಲದರ ಬಗ್ಗೆ ಸಂಚಾರಿ ವಿಜಯ್ ಅವರ ಮಾತು

ಪುಕ್ಸಟ್ಟೆ ಲೈಫು ಚಿತ್ರತಂಡದ ಬಗ್ಗೆ ಹೇಳಿ

ತಂಡದ ಬಗ್ಗೆ ಹೇಳುವ ಮುನ್ನ ನಿರ್ದೇಶಕ ಅರವಿಂದ್ ಕೊಪ್ಲೀಕರ್ ಬಗ್ಗೆ ಒಂದಷ್ಟು ಹೇಳಲೇಬೇಕು. ಈಗಾಗಲೇ ಅವರು ಸಾಕಷ್ಟು ಚಿತ್ರಗಳಿಗೆ ಅಸಿಸ್ಟೆಂಟ್ ಆಗಿ, ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದಾರೆ. ಬೇಸಿಕಲಿ ಅವರು ರಂಗಭೂಮಿ ಕಲಾವಿದರಾಗಿದ್ದು, ದಶಕಗಳಿಂದ ಬಿ.ಜಯಶ್ರೀ ಅವರ ತಂಡದ ಜತಗೆ ಕೆಲಸ ಮಾಡಿದ ಅನುಭವ ಇದೆ. ನಟರೂ ಆಗಿದ್ದು, 'ಹರಿವು' ಸಿನಿಮಾದಲ್ಲಿ ಡಾಮಿನೆಂಟ್ ರೋಲ್ ಮಾಡಿದ್ರು. ಪ್ರಕಾಶ್ ರೈ ಯವರ 'ಇದೊಳ್ಳೆ ರಾಮಾಯಣ' ದಲ್ಲಿ ಕೂಡಾ ನಟನೆ ಮಾಡಿದ್ರು. ಅವರ ನಿರ್ದೇಶನದ ಶಾರ್ಟ್ ಫಿಲ್ಮ್ ಗೆ ಪ್ರತಿಷ್ಠಿತ ಅವಾರ್ಡ್ ಬಂದಿದೆ. ಸರ್ವಸ್ವ ಪ್ರೊಡಕ್ಷನ್ ನಲ್ಲಿ ಫೋಕಸ್ ಅನ್ನೋ ಸ್ಟುಡಿಯೋ ಇದೆ. ಅದರ ಮೂಲಕ 'ಬೆಸ್ಟ್ ಆಕ್ಟರ್ ' ಅಂತ ಸಿನಿಮಾ ಮಾಡಿದ್ರು. ಅದು ಕೂಡ ಪ್ರಶಸ್ತಿಗಳನ್ನು ಬಾಚಿದೆ.

ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರ ಹೇಗಿದೆ?

ಚಿತ್ರದಲ್ಲಿ ನಟಿಸಿದ ಅನುಭವ ಹೇಗಿತ್ತು?

ಇದು ಹೆಚ್ಚು ಕಡಿಮೆ ನಾವು ಸಂಚಾರಿ ಥಿಯೇಟರ್ ನಲ್ಲಿರುವ ನಟರು, ತಂತ್ರಜ್ಞರು ಸೇರಿ ಮಾಡಿರುವಂತಹ ಸಿನಿಮಾ. 'ಪುಕ್ಸಟ್ಟೆ ಲೈಫು. ಪುರುಸೊತ್ತೇ ಇಲ್ಲ!' ಅದರಲ್ಲಿ ನಾನೊಬ್ಬ ಮುಸ್ಲಿಂ ಯುವಕನಾಗಿ ಪಾತ್ರ ಮಾಡಿದ್ದೇನೆ. ಕೆಳಮಧ್ಯಮ ವರ್ಗದ ಹುಡುಗನ ಪಾತ್ರ ಅದು. ಬೀಗ ರಿಪೇರಿ ಮಾಡುವ ಕೆಲಸ ನನ್ನದಾಗಿರುತ್ತದೆ. ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳ ಹುಡುಕಾಟದಲ್ಲಿರುವ ನನಗೆ ಖಂಡಿತವಾಗಿ ಇದು ಒಂದು ವಿಭಿನ್ನ ಅನುಭವವನ್ನೇ ನೀಡಿದೆ.

ಸಿನಿಮಾ ಕಥಾಹಂದರದ ಬಗ್ಗೆ ಹೇಳಿ

ಒಬ್ಬ ಮಧ್ಯಮ ವರ್ಗದ ವ್ಯಕ್ತಿ ಪರಿಸ್ಥಿತಿಗೆ ಅಥವಾ ದುಡ್ಡಿನ ಆಸೆಗೆ  ಬಿದ್ದರೆ ಏನಾಗುತ್ತದೆ ? ಯಾವೆಲ್ಲ ಸಮಸ್ಯೆಗಳು ಶುರುವಾಗುತ್ತದೆ ಅನ್ನೋ ಕಥಾ ಹಂದರ ಇರುವಂತಹ ಚಿತ್ರ. ಅಚ್ಯುತ್ ಕುಮಾರ್ ಮತ್ತು ರಂಗಾಯಣ ರಘು ಅವರು ಇದರಲ್ಲಿ ಪ್ರಾಮಿನೆಂಟ್ ರೋಲ್ ನಲ್ಲಿದ್ದಾರೆ. ಇಬ್ಬರಿಗೂ ಸಮಾನ ಪ್ರಾಮುಖ್ಯತೆ ಇರುವಂಥ ಕ್ಯಾರೆಕ್ಟರ್ ಇದೆ. ರಘುದೀಕ್ಷಿತ್ ಸಹೋದರ ವಾಸು ದೀಕ್ಷಿತ್ ಸಂಗೀತವಿದೆ. ಮಾತಂಗಿ ಪ್ರಸನ್ನ ಹಿರೋಯಿನ್. ಹೊಸತನ ತುಂಬಿದ ಹೊಸ ರೀತಿಯಲ್ಲಿ ಅಯ್ಯಪ್ಪನ ಹಾಡೊಂದನ್ನು ಮಾಡಿದ್ದಾರೆ. ಅದು ಈಗಾಗಲೇ ಕೇಳುಗರಿಂದ ಪ್ರಶಂಸೆ ಪಡೆದುಕೊಳ್ಳುತ್ತಿದೆ. 

ವಿಜಯ್ ನಟನೆಯ ನಾತಿ ಚರಾಮಿ ಬಗ್ಗೆ ಶೃತಿ ಹೇಳೋದೇನು?

ಹಾಡಿನ ಆಕರ್ಷಕ ಅಂಶವೇನು?

ಅಯ್ಯಪ್ಪ ಹಾಡಿಗೆ ವಾಸು ದೀಕ್ಷಿತ್ ಅವರೇ ಸಾಹಿತ್ಯ ಬರೆದಿದ್ದಾರೆ. ಅದರ ಲಿರಿಕಲ್ ವಿಡಿಯೋ ಮತ್ತು ಚಿತ್ರದ ಟೈಟಲ್ ಟ್ರ್ಯಾಕ್ ಹಾಡುಗಳು ಯೂ ಟ್ಯೂಬ್ ನಿಂದ ಜನಪ್ರಿಯತೆ ಪಡೆದಿದೆ. ಟೈಟಲ್ ಟ್ರ್ಯಾಕ್ ನಲ್ಲಿ ವಾಸು ದೀಕ್ಷಿತ್ ಅವರೇ ಕಾಣಿಸಿಕೊಂಡಿದ್ದಾರೆ. ಸಿನಿಮಾ ಕಂಪ್ಲೀಟ್ ಆಗಿದ್ದು ಪೋಸ್ಟ್ ಪ್ರೊಡಕ್ಷನ್ ಮುಕ್ತಾಯದ ಹಂತದಲ್ಲಿದೆ. ಇತರ ವಿಶೇಷತೆಗಳು ಸದ್ಯದಲ್ಲೇ ಹೊರಬರಲಿದೆ.

click me!