ಆರ್ಯನ್ ಖಾನ್ ಡ್ರಗ್ಸ್ ಕೇಸ್: ಅಪ್ಪ ಶಾರುಖ್ ಖಾನ್ ಕುರಿತು ತನಿಖಾಧಿಕಾರಿ ವಾಂಖೆಡೆ ಹೇಳಿದ್ದೇನು?
2021ರಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್ನಲ್ಲಿ ಸಿಲುಕಿರುವುದು ಎಲ್ಲರಿಗೂ ತಿಳಿದೇ ಇದೆ. ಕ್ರೂಸ್ ಡ್ರಗ್ಸ್ ಪ್ರಕರಣ (Cruise Drugs Case) ಎಂದು ಇದು ಫೇಮಸ್ ಆಗಿತ್ತು. ಶಾರುಖ್ ಪುತ್ರ ಆರ್ಯನ್ ಸೇರಿದಂತೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು, ಅವರ ಮಕ್ಕಳು ಈ ಕೇಸ್ನಲ್ಲಿ ಸಿಲುಕಿದ್ದರಿಂದ ಇದು ಭಾರಿ ಸದ್ದು ಮಾಡಿತ್ತು. ಈ ಘಟನೆಯಿಂದ ಶಾರುಖ್ ಖಾನ್ ಝರ್ಜರಿತರಾಗಿದ್ದೂ ಸುಳ್ಳಲ್ಲ. ಇಂದಿಗೂ ಇದರ ಕುರಿತು ಚರ್ಚೆಯಾಗುತ್ತಲೇ ಇದೆ. 2021 ಅಕ್ಟೋಬರ್ 2 ರಂದು, ಕ್ರೂಸ್ ಶಿಪ್ ಮೇಲೆ ಎನ್ ಸಿಬಿ ದಾಳಿ ನಡೆಸಿತ್ತು. ಇದರಲ್ಲಿ ಡ್ರಗ್ಸ್ ಪತ್ತೆ ಇದರಲ್ಲಿ ಆರ್ಯನ್ ಖಾನ್ ಸೇರಿದಂತೆ ಒಟ್ಟು 19 ಮಂದಿಯನ್ನು ಬಂಧಿಸಲಾಗಿತ್ತು. ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಡ್ರಗ್ ಪಾರ್ಟಿ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಈ ಕಾರ್ಯಾಚರಣೆ ನಡೆದಿತ್ತು. ನಂತರ ಆರ್ಯನ್ ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. 28 ದಿನಗಳವರೆಗೆ ಜೈಲಿನಲ್ಲಿದ್ದ ಆರ್ಯನ್ ಅವರಿಗೆ ನಂತರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಕೊನೆಗೆ ಕೋರ್ಟ್ ಕ್ಲೀನ್ ಚಿಟ್ ನೀಡಿತ್ತು.
ಅಂತಿಮವಾಗಿ ಅವರು ಅಕ್ಟೋಬರ್ 30 ರಂದು ತಮ್ಮ ತಂದೆಯ ಹುಟ್ಟುಹಬ್ಬದ (Birthday) ಸಮಯದಲ್ಲಿ ಜೈಲಿನಿಂದ ಹೊರಬಂದಿದ್ದರು. ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಶುಕ್ರವಾರ 6 ಸಾವಿರ ಪುಟಗಳ ಚಾರ್ಜ್ ಶೀಟ್ (Chargesheet) ಸಲ್ಲಿಕೆ ಮಾಡಿದ್ದು, 14 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಿದೆ. ಹಲವರು ಇನ್ನೂ ಕೇಸ್ನಲ್ಲಿ ಒಳಗೇ ಇದ್ದರೆ, ಆರ್ಯನ್ ಖಾನ್ ನಿರಪರಾಧಿ ಎನ್ನುವುದನ್ನು ಸಾಬೀತು ಮಾಡುವಲ್ಲಿ ವಕೀಲರು ಯಶಸ್ವಿಯಾಗಿದ್ದರು. ಆದರೆ ಕುತೂಹಲದ ಬೆಳವಣಿಗೆಯಲ್ಲಿ, ಆರ್ಯನ್ ಖಾನ್‌ಗೆ ಕ್ಲೀನ್‌ಚಿಟ್ (Cleanchit) ಅಂದರೆ ಅವರ ನಿರಪರಾಧಿ ಎಂದು ಸಾಬೀತು ಮಾಡಲು ರಾಷ್ಟ್ರೀಯ ಮಾದಕವಸ್ತು ನಿಗ್ರಹ ದಳದ ಹಿಂದಿನ ಅಧಿಕಾರಿ ಸಮೀರ್ ವಾಂಖೇಡೆ 25 ಕೋಟಿ ರೂ. ಲಂಚ ಕೇಳಿದ್ದ ಗಂಭೀರ ಆರೋಪ ಕೇಳಿಬಂದಿತ್ತು. ಡ್ರಗ್ಸ್ ಪ್ರಕರಣದಲ್ಲಿ ತಾವೇ ಹಿಡಿದಿದ್ದ ಆರ್ಯನ್ ಖಾನ್‌ಗೆ ಕ್ಲೀನ್‌ಚಿಟ್ ಕೊಡಿಸಲು ಸಮೀರ್ ವಾಂಖೇಡೆ ತಂತ್ರ ರೂಪಿಸಿದ್ದರು. ಇದಕ್ಕಾಗಿ 25 ಕೋಟಿ ರೂ. ಕೇಳಿದ್ದರು ಎನ್ನಲಾಗಿತ್ತು. ಆದರೆ ಆರ್ಯನ್ ಖಾನ್ ಅವರನ್ನು ಅರೆಸ್ಟ್ ಮಾಡಿದುದಕ್ಕಾಗಿ ತಮ್ಮನ್ನು ಹೇಗೆ ಸಿಲುಕಿಸುತ್ತಿದ್ದಾರೆ ಎಂದು ವಾಂಖೆಡೆ ಈ ಹಿಂದೆಯೇ ಹೇಳಿದ್ದರು. ನಿಯತ್ತಾಗಿ ಕೆಲಸ ಮಾಡಿದರೆ ಸಿಗುವ ಶಿಕ್ಷೆ ಇದು ಎಂದು ಅವರ ಪತ್ನಿ ಕ್ರಾಂತಿ ರೆಡ್ಕಾರ್ (Kranti Redkar) ಕೂಡ ದುಃಖಿತರಾಗಿದ್ದರು. ಇದೊಂದು ದೊಡ್ಡ ಷಡ್ಯಂತ್ರ ಎಂದೂ ಹೇಳಲಾಗುತ್ತಿದ್ದು, ಅದರ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕಿದೆ.
ಬೆಂಕಿಯನ್ನೇ ನೆಕ್ಕಿದವ ನಾನು, ಇನ್ನು... ಶಾರುಖ್ಗೆ ಮಾತಿನಿಂದ ತಿವಿದ ಎನ್ಸಿಬಿ ಅಧಿಕಾರಿ ವಾಂಖೆಡೆ
ಇದೀಗ ಮೊದಲ ಬಾರಿಗೆ ವಾಂಖೆಡೆ ಅವರು ಈ ವಿಷಯದ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಶಾರುಖ್ ಖಾನ್ ಅವರಿಗೆ ವಾರ್ನಿಂಗ್ ನೀಡುತ್ತಿದ್ದೀರಾ ಎಂಬ ಬಗ್ಗೆ ಅವರಿಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ವಾಂಖೆಡೆ ಅವರು, ಯಾರಿಗಾದರೂ ವಾರ್ನ್ ಮಾಡೋಕೆ ನಾನು ಯಾರು? ನಾನು ಸಣ್ಣ ಮನುಷ್ಯ. ನಾನು ಸಿನಿಮಾಗಳನ್ನು ನೋಡುವುದಿಲ್ಲ. ನನಗೆ ಅವರ ಹೆಸರುಗಳು ಗೊತ್ತಿಲ್ಲ ಎಂದಿದ್ದಾರೆ. ಆದರೆ ಶಾರುಖ್ರಂಥ ನಟರ ಹೆಸರು ಗೊತ್ತಿಲ್ಲ ಎಂದು ಹೇಳಿದ್ದ ಬೆನ್ನಲ್ಲೇ ಅವರಿಗೆ ‘ಶಾರುಖ್ ಖಾನ್ ಸ್ಟಾರ್ಡಂ ಬಗ್ಗೆ ನಿಮಗೆ ಗೊತ್ತಿಲ್ಲವೇ’ ಎಂದು ಪ್ರಶ್ನೆ ಮಾಡಲಾಯಿತು. ಆಗ ವಾಂಖೆಡೆ ಅವರು, ಪ್ರಧಾನಿ ನರೇಂದ್ರ ಮೋದಿ, ಛತ್ರಪತಿ ಶಿವಾಜಿ ಮಹಾರಾಜ್ ಅವರಂಥ ನಿಜವಾದ ಹೀರೋಗಳ ಬಗ್ಗೆ ನನಗೆ ಕೇಳಿ ಎನ್ನುವ ಮೂಲಕ ಶಾರುಖ್ ಯಾವ ಲೆಕ್ಕ ಎಂದು ಪರೋಕ್ಷವಾಗಿ ತಿವಿದಿದ್ದಾರೆ.
ಮಗನನ್ನು ಬಿಡಿಸಲು ಶಾರುಖ್ ನಿಮ್ಮನ್ನು ರಿಕ್ವೆಸ್ಟ್ ಮಾಡಿಕೊಂಡಿರುವ ಚಾಟ್ ವೈರಲ್ ಆಗಿತ್ತಲ್ಲ, ಅದರ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದಾಗ, ‘ನನಗೆ ಆ ವ್ಯಕ್ತಿ ಬಗ್ಗೆ ಮಾತನಾಡಲು ಇಷ್ಟ ಇಲ್ಲ. ಈ ರೀತಿ ಪ್ರಕರಣದಲ್ಲಿ ಆ್ಯಕ್ಷನ್ ತೆಗೆದುಕೊಂಡಾಗ ಪಾಲಕರು ನಮ್ಮನ್ನು ಸಂಪರ್ಕಿಸುತ್ತಾರೆ. ಡ್ರಗ್ ಸೇವಿಸುವ ಮಕ್ಕಳ ಪಾಲಕರ ಬಗ್ಗೆ ಬೇಸರ ಇದೆ’ ಎಂದಿದ್ದಾರೆ. ವ್ಯಕ್ತಿ ಯಾರೇ ಆಗಿದ್ದರೂ ಡ್ಯೂಟಿ ನಮಗೆ ಮುಖ್ಯ ಎಂದಿದ್ದಾರೆ.
ಡ್ರಾಮಾ ಜ್ಯೂನಿಯರ್ಸ್ ವೇದಿಕೆಗೆ ಪ್ರಕಾಶ್ ರಾಜ್: ಪ್ರೇಕ್ಷಕರಿಂದ ಭಾರಿ ವಿರೋಧ- ಏನೆಲ್ಲಾ ಹೇಳಿದ್ರು ನೋಡಿ...