
ಬಾಲಿವುಡ್ ಕಪರ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ ಮಗುವಿನ ಆಗಮನವಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅನೌನ್ಸ್ ಮಾಡಿದ್ದಾರೆ. ದೀಪಿಕಾ ಸದ್ಯಕ್ಕೆ ಎರಡನೇ ಟ್ರೈಮಿಸ್ಟರ್‌ನಲ್ಲಿದ್ದಾರೆ ಎಂದು ಕೆಲವು ಮೂಲಗಳಿಂದ ಮಾಹಿತಿ ಕೇಳಿ ಬಂದಿದೆ. 2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿ ಸೆಪ್ಟೆಂಬರ್ 2024ರಲ್ಲಿ ಪೋಷಕರಾಗಲಿದ್ದಾರೆ.
ಪುಟ್ಟ ಮಕ್ಕಳ ಬಟ್ಟೆ ಚಪ್ಪಲಿ ಮತ್ತು ಆಟದ ವಸ್ತುಗಳು ಸೇರಿಕೊಂಡಿರುವ ಫೋಟೋದಲ್ಲಿ 'ಸೆಪ್ಟೆಂಬರ್ 2024. ದೀಪಿಕಾ ಮತ್ತು ರಣವೀರ್' ಎಂದು ಬರೆಯಲಾಗಿದೆ. ನಮಸ್ತೆ ಮಾಡುತ್ತಿರುವುದು ಹಾಗೂ ದೃಷ್ಠಿ ತೆಗೆಯುತ್ತಿರುವ ಎಮೋಷಿಯನ್ನು ಕ್ಯಾಪ್ಶನ್‌ನಲ್ಲಿ ಹಾಕಿದ್ದಾರೆ.
ಗ್ಲಿಟರಿಂಗ್ ವೈಟ್ ಸ್ಯಾರಿಯಲ್ಲಿ ದೀಪಿಕಾ ಹಾಟ್‌ಲುಕ್, ಆಲಿಯಾ ಈ ಪೋಸ್ ಕಾಪಿ ಮಾಡೋದು ಗ್ಯಾರಂಟಿ ಎಂದ ಫ್ಯಾನ್ಸ್!
ಹಲವು ದಿನಗಳಿಂದ ದೀಪಿಕಾ ಪಡುಕೋಣೆ ಪ್ರೆಗ್ನೆಂಟ್ ಅನ್ನೋ ವಿಚಾರ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. 77ನೇ ಬ್ರಿಟಿಷ್ ಅಕಾಡಮಿ ಫಿಲ್ಮ್ ಅವಾರ್ಡ್ ಕಾರ್ಯಕ್ರಮದಲ್ಲಿ ಚಿಣಿಮಿಣಿ ಸೀರೆಯಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಾಗಲೇ ಪ್ರೆಗ್ನೆಂಟ್ ಅನ್ನೋ ವಿಚಾರ ಹರಿದಾಡಲು ಶುರುವಾಗಿತ್ತು. ದೀಪಿಕಾ ಧರಿಸಿದ ಸೀರೆ ಮತ್ತು ಆಭರಣವನ್ನು ಸಬ್ಯಾಸಾಚಿ ಮುಖರ್ಚಿ ಡಿಸೈನ್ ಮಾಡಿದ್ದರು.
ಶಾರುಖ್ ಖಾನ್ ಜೊತೆ ಜವಾನ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೊನೆಯದಾಗಿ ನಟಿಸಿದ್ದು. ಸದ್ಯ ರೋಹಿಟ್ ಶರ್ಮಾ ನಿರ್ದೇಶನದ ಸಿಂಗಮ್ ಅಗೇನ್ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ರಣವೀರ್ ಸಿಂಗ್, ಅಜಯ್ ದೇವಗನ್, ಟೈಗರ್ ಶ್ರಾಪ್ ಮತ್ತು ಕರೀನಾ ಕಪೂರ್ ನಟಿಸಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.