
ತೆಲುಗು ಚಿತ್ರರಂಗ (Tollywood) ಜನಪ್ರಿಯ ಚಿತ್ರಸಾಹಿತಿ, ಶ್ವಾಸಕೋಶದ ಕ್ಯಾನ್ಸರ್‌ನಿಂದ (Lungs Cancer) ಬಳಲುತ್ತಿದ್ದ ಸಿರಿವೆನ್ನಲ ಸೀತಾರಾಮಶಾಸ್ತ್ರಿ (Sirivennela Seetharama Sastry) ಅವರು ನವೆಂಬರ್ 30ರಂದು ಕೊನೆಯುಸಿರೆಳೆದಿದ್ದಾರೆ. ಸಿಕಂದರಾಬಾದ್ ಕಿಮ್ಸ್ ಆಸ್ಪತ್ರೆಯಲ್ಲಿ (Kims Hospital) ಚಿಕಿತ್ಸೆ ಪಡೆಯುತ್ತಿದ್ದ ಸೀತಾರಾಮಶಾಸ್ತ್ರಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.
ನವೆಂಬರ್ 24ರಂದು ನ್ಯುಮೋನಿಯಾವೆಂದು ಹೇಳಲಾಗಿತ್ತು. ತಕ್ಷಣವೇ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿಸಿದ್ದರು. ದಿನೇ ದಿನೇ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದಂತೆ, ಐಸಿಯುನಲ್ಲಿ ಇಟ್ಟುಕೊಂಡು ಇಸಿಎಂಓ ಬಳಸಿ ಚಿಕಿತ್ಸೆ ನೀಡುತ್ತಿದ್ದರಂತೆ. ತೆಲುಗು ಚಿತ್ರರಂಗದ ಗಣ್ಯರು ಸೀರಾರಾಮಶಾಸ್ತ್ರಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
'ಜಗತ್ತೆಲ್ಲ ಕುಟುಂಬ ನಿಮಗೆ, ನೀವಿಲ್ಲದೆ ಏಕಾಂಗಿ ಜೀವನ ನಮ್ಮದು. ನಿಮ್ಮ ಅಗಲಿಕೆ ಸರಿತೂಗಲಾರದ ನಷ್ಟ. ನಮ್ಮ ಜೀವನಗಳಿಗೆ ನೀವು ಕಾವ್ಯಾತ್ಮಕ ದೃಷ್ಟಿಕೋನ ನೀಡಿದಿರಿ,' ಎಂದು ನಟ ಪ್ರಕಾಶ್ ರೈ (Prakash Raj) ಟ್ಟೀಟ್ ಮಾಡಿದ್ದಾರೆ. ರಾಜಕಾರಣಿಗಳು ಕೂಡ ಇವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಸೀತಾರಾಮಶಾಸ್ತ್ರಿ ಅವರು 1955ರಲ್ಲಿ ಆಂಧ್ರ ಪ್ರದೇಶದಲ್ಲಿ ಹುಟ್ಟಿದ್ದರು. ತೆಲುಗು ಚಿತ್ರರಂಗ ಮತ್ತು ತೆಲುಗು ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾರೆ. ಸುಮಾರು 3000ಕ್ಕೂ ಹೆಚ್ಚು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. 2012ರಲ್ಲಿ ಲೈಫ್‌ಟೈಮ್ ಅಚೀವ್‌ಮೆಂಟ್ ಪ್ರಶಸ್ತಿ ಪಡೆದುಕೊಂಡಿದ್ದಾರೆ ಹಾಗೂ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ (Padmashri award) ಪಡೆದುಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಶ್ವಾಸಕೋಶ ಹಾನಿಯಿಂದ ಖ್ಯಾತ ನೃತ್ಯ ನಿರ್ದೇಶಕ ಶಿವ ಶಂಕರ್ (Shiva Shankar) ಅವರು ನೋವೆಲ್ ಕೊರೋನಾ ವೈರಸ್ (Covid19) ತಗುಲಿದ್ದು, ಶ್ವಾಸಕೋಶ ಹಾನಿಯಿಂದ ನಿಧನರಾಗಿದ್ದರು. ಇಡೀ ಕುಟುಂಬಕ್ಕೆ ಕೊರೋನಾ ಸೋಂಕು ತಗುಲಿದ್ದು ಪುತ್ರ ಆರ್ಥಿಕ ಸಹಾಯ ಬೇಡಿದ್ದರು. ಬಾಲಿವುಡ್ ನಟ ಸೋನು ಸೂದ್ (Sonu Sood) ಆಸ್ಪತ್ರೆಯ ವೆಚ್ಚವನ್ನು ನೋಡಿಕೊಳ್ಳುವುದಾಗಿ ತಿಳಿಸಿದ್ದರು. ಆಗರೆ ವಿಧಿ ಆಟವೇ ಬೇರೆ ಇತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.