Shaakuntalam; ಅನಾರೋಗ್ಯದ ನಡುವೆಯೂ ಶಾಕುಂತಲೆಯಾಗಿ ಎಂಟ್ರಿ ಕೊಡ್ತಿದ್ದಾರೆ ಸಮಂತಾ; ರಿಲೀಸ್ ಡೇಟ್ ಬಹಿರಂಗ

Published : Jan 02, 2023, 02:45 PM ISTUpdated : Jan 02, 2023, 02:46 PM IST
Shaakuntalam; ಅನಾರೋಗ್ಯದ ನಡುವೆಯೂ ಶಾಕುಂತಲೆಯಾಗಿ ಎಂಟ್ರಿ ಕೊಡ್ತಿದ್ದಾರೆ ಸಮಂತಾ; ರಿಲೀಸ್ ಡೇಟ್ ಬಹಿರಂಗ

ಸಾರಾಂಶ

ನಟಿ ಸಮಂತಾ ನಟನೆಯ ಬಹುನಿರೀಕ್ಷೆಯ ಶಾಕುಂತಲಂ ಸಿನಿಮಾ ರಿಲೀಸ್ ಡೇಟ್ ಬಹಿರಂಗವಾಗಿದೆ. 

ಸೌತ್ ಸ್ಟಾರ್ ಸಮಂತಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ.  ಸಿನಿಮಾ, ಶೂಟಿಂಗ್, ಫೋಟೋಶೂಟ್ ಅಂತ ಸಖತ್ ಅಕ್ಟೀವ್ ಆಗಿದ್ದ ಸಮಂತಾ ಸದ್ಯ ವಿಶ್ರಾಂತಿಯಲ್ಲಿದ್ದಾರೆ.  Myositis ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಸದ್ಯ ಚೇತರಿಸಿಕೊಳ್ಳುತ್ತಿದ್ದಾಕೆ.  ಸಮಂತಾ ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ. ಸಾಮಾಜಿಕ ಜಾಲತಾಲಣದಿಂದನೂ ದೂರ ಇರುವ ಸಮಂತಾ ಇದೀಗ ಶಾಕುಂತಲೆಯಾಗಿ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಹೌದು ಸಮಂತಾ ನಟನೆಯ ಬಹುನಿರೀಕ್ಷೆಯ ಶಾಕುಂತಲಮ್ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಹೊಸ ವರ್ಷಕ್ಕೆ ಶಾಕುಂತಲಮ್ ಸಿನಿಮಾದ ರಿಲೀಸ್ ಡೇಟ್ ಬಹಿರಂಗ ಪಡಿಸುವ ಮೂಲಕ ಸ್ಯಾಮ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ ಸಿನಿಮಾತಂಡ. 

ಸಮಂತಾ ಮತ್ತು ದೇವ್ ಮೋಹನ್ ಪೋಸ್ಟರ್ ಶೇರ್ ಮಾಡುವ ಮೂಲಕ ಸಿನಿಮಾತಂಡ ಬಿಡುಗಡೆ ಡೇಟ್ ಬಹಿರಂಗ ಪಡಿಸಿದೆ. ಅಂದಹಾಗೆ ಬಹನಿರೀಕ್ಷೆಯ ಶಾಕುಂತಲಂ ಸಿನಿಮಾ ಫೆಬ್ರವರಿ 17ರಂದು ತೆರೆಗೆ ಬರುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿರುವ ಸಿನಿಮಾತಂಡ, 'ಎಪಿಕ್ ಲವ್ ಸ್ಟೋರಿ ಶಾಕುಂತಲಂ ಅನ್ನು ಫೆಬ್ರವರಿ 17ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ' ಎಂದು ಹೇಳಿದ್ದಾರೆ. 3ಡಿಯಲ್ಲಿ ಬರ್ತಿದೆ ಎಂದು ಹೇಲುವ ಮೂಲಕ ಸ್ಯಾಮ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ನೀಡಿದೆ.   

ಅಂದಹಾಗೆ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಕಳೆದ ವರ್ಷ ನವೆಂಬರ್ ನಲ್ಲೇ ರಿಲೀಸ್ ಆಗಬೇಕಿತ್ತು. ಆದರೆ ಕೆಲವು ಕಾರಣಗಳಿಂದ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿತ್ತು. ಇನ್ನು ಮೂಲಗಳ ಪ್ರಕಾರ ಸಿನಿಮಾ ನೋಡಿದ ಸಮಂತಾ ಅವರಿಗೆ ಇಷ್ಟವಾಗದ ಕಾರಣ ರಿ ವರ್ಕ್ ಮಾಡುವಂತೆ ಸೂಚಿಸಿದ್ದರು ಎನ್ನಲಾಗಿದೆ. ಹಾಗಾಗಿ ರಿಲೀಸ್ ತಡವಾಗುತ್ತಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಇದೀಗ ಕೊನೆಗೂ ಸಿನಿಮಾ ರಿಲೀಸ್ ಡೇಟ್ ಬಹಿರಂಗವಾಗಿದ್ದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 

ಸಮಂತಾ ವಿಶ್ರಾಂತಿಯಲ್ಲಿದ್ದಾರೆ; ವೈರಲ್ ಆಗಿದ್ದ ಗಾಸಿಪ್‌ಗೆ ಸ್ಯಾಮ್ ತಂಡದ ರಿಯಾಕ್ಷನ್

ಶಾಕುಂತಲಂ ಸಿನಿಮಾಗೆ ಗುಣಶೇಖರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಕಾಳಿದಾಸ ಅವರ ಅಭಿಜ್ಞಾನ ಶಾಕುಂತಲ ಆಧಾರಿತ ಸಿನಿಮಾವಾಗಿದೆ. ಈ ಸಿನಿಮಾ ಶಾಕುಂತಲಾ ಮತ್ತು ರಾಜ ದುಶ್ಯಂತ ಮಹಾಕಾವ್ಯದ ಪ್ರೇಮಕಥೆಯ ಸುತ್ತ ಸುತ್ತುತ್ತದೆ. ಈ ಚಿತ್ರದಲ್ಲಿ ಸಮಂತಾ ಮತ್ತು ದೇವ್ ಮೋಹನ್ ಜೊತೆಗೆ ಕಬೀರ್ ಬೇಡಿ, ಪ್ರಕಾಶ್ ರಾಜ್, ಸಚಿನ್ ಖೇಡೇಕರ್, ಜಿಶು ಸೇನ್‌ಗುಪ್ತ ಸೇರಿದಂತೆ ಅನೇಕ ಕಲಾವಿದರು ನಟಿಸುತ್ತಿದ್ದಾರೆ. ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲೂ ಈ ಚಿತ್ರ ಬಿಡುಗಡೆಯಾಗುತ್ತಿದೆ.

'IMDb' 2022ರ ಪಟ್ಟಿಯಲ್ಲಿ ಸೌತ್ ಸ್ಟಾರ್ಸ್‌; ಯಶ್ ಪಡೆದಿರುವ ಸ್ಥಾನ ಯಾವುದು?

ಸಮಂತಾ ಕೊನೆಯದಾಗಿ ಯಶೋದಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಅನಾನರೋಗ್ಯದ ಬಳಿಕ ರಿಲೀಸ್ ಆದ ಸಮಂತಾ ಅವರ ಮೊದಲ ಸಿನಿಮಾವಾಗಿದೆ. ಆರೋಗ್ಯ ಸರಿ ಇಲ್ಲದಿದ್ದರೂ ಸಿನಿಮಾ ರಿಲೀಸ್ ಸಮಯದಲ್ಲಿ ಪ್ರಮೋಷನ್ ಮಾಡಿದ್ದರು. ಸಂದರ್ಶನಗಳನ್ನು ನೀಡಿದ್ದರು. ಇದೀಗ ಚೇತರಿಸಿಕೊಳ್ಳುತ್ತಿರುವ ಸಮಂತಾ ಮತ್ತೆ ಬ್ಯಾಕ್ ಆಗುತ್ತಿದ್ದಾರೆ. ಸ್ಯಾಮ್ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗುವುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಹಾರಾಷ್ಟ್ರದಿಂದ ನನ್ನನ್ನು ಓಡಿಸಿದವರಿಗೆ ಈಗ ತಕ್ಕ ಶಾಸ್ತಿ ಆಗಿದೆ: ಕಂಗನಾ ಈ ಹೇಳಿಕೆ ಹಿಂದೆ ಇರೋ ಕಥೆ ಇದು..!
ಪ್ರೇಮಿಗಳ ದಿನ ಧನುಷ್-ಮೃಣಾಲ್ ಮದುವೆ? ಮರಾಠಿ ಬ್ಯೂಟಿ ಜೊತೆ ಪ್ರೀತಿಯಲ್ಲಿ ಬಿದ್ದ ರಜಿನಿಕಾಂತ್ ಮಾಜಿ ಅಳಿಯ!