ಚಿತ್ರಹಿಂಸೆಯ ಸಮಯವಿದು; ಐಸ್ ಬಾತ್ ಬಗ್ಗೆ ಸಮಂತಾ ರಿಯಾಕ್ಷನ್, ಇದರ ಪ್ರಯೋಜನ ಏನು?

By Shruthi Krishna  |  First Published May 2, 2023, 2:13 PM IST

ಸಮಂತಾ ರುತ್ ಪ್ರಭು ಐಸ್ ಬಾತ್ ಮಾಡುವ ಫೋಟೋ ಹಂಚಿಕೊಂಡು ಇದು ಚಿತ್ರಹಿಂಸೆಯ ಸಮಯವೆಂದು ಹೇಳಿದ್ದಾರೆ. 


ಸೌತ್ ಸ್ಟಾರ್ ಸಮಂತಾ ರುತ್ ಪ್ರಭು ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ಸದ್ಯ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಮಯೋಸೈಟೀಸ್‌ನಿಂದ ಬಳಲುತ್ತಿರುವ ನಟಿ ಸಮಂತಾ ಸಂಪೂರ್ಣವಾಗಿ ಚೇರಿಸಿಕೊಂಡಿಸಲ್ಲ. ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನೇಕ ಥೆರಪಿಗಳನ್ನು ಪಡೆಯುತ್ತಿದ್ದಾರೆ. ಅದರಲ್ಲಿ ಐಸ್ ಬಾತ್ ಕೂಡ ಒಂದು. ಸಮಂತಾ ಮಯೋಸೈಟೀಸ್‌ನಿಂದ ಗುಣಮುಖರಾಗುತ್ತಿರುವ ಜೊತೆಗೆ ಸಿನಿಮಾ ಕೆಲಸಗಳಲ್ಲೂ ಬ್ಯುಸಿಯಾಗಿದ್ದಾರೆ. ಹಾಗಾಗಿ ದೇಹವನ್ನು ಫಿಟ್ ಅಂಡ್ ಫೈನಾಗಿರಿಸಿಕೊಳ್ಳಲು ಸಮಂತಾ ಹರಸಾಹಸ ಪಡುತ್ತಿದ್ದಾರೆ. 

ಸಮಂತಾ ಸದ್ಯ ಸಿಟಾಡೆಲ್ ವೆಬ್ ಸೀರಿಸ್‌ನಲ್ಲಿ ಮಿಂಚುತ್ತಿದ್ದಾರೆ. ಈ ಸೀರಿಸಿ‌ನಲ್ಲಿ ಸಿಕ್ಕಾಪಟ್ಟೆ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಸ್ಯಾಮ್ ಸಖತ್ ವರ್ಕೌಟ್ ಮಾಡುತ್ತಿದ್ದಾರೆ. ಹಾಗಾಗಿ ಐಸ್ ಬಾತ್ ಥೆರಪಿಗೆ ಒಳಗಾಗಿದ್ದಾರೆ ಸಮಂತಾ. ಈ ಬಗ್ಗೆ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಫೋಟೋ ಶೇರ್ ಮಾಡಿ ಐಸ್ ಬಾತ್ ಥೆರಪಿ ಎಂದು ಹೇಳಿದ್ದಾರೆ. 'ಇದು ಚಿತ್ರಹಿಂಸೆಯ ಸಮಯ' ಎಂದು ಸಮಂತಾ ಬರೆದುಕೊಂಡಿದ್ದಾರೆ. 

Tap to resize

Latest Videos

ಅಂದಹಾಗೆ ಈ ಥೆರಪಿಯನ್ನು ಅನೇಕ ವೃತ್ತಿಪರ ಕ್ರೀಡಾಪಟುಗಳು ಹಾಗೂ ಫಿಟ್ನೆಸ್ ಫ್ರೀಕ್ಸ್ ಮಾಡುತ್ತಾರೆ. ತಮ್ಮ ದೇಹ ಪರಿಣಾಮಕಾರಿ ಚೇತರಿಕೆಗೆ ಐಸ್ ಬಾತ್ ಮಾಡುತ್ತಿದ್ದಾರೆ. ಕನಿಷ್ಠ 15 ನಿಮಿಷಕ್ಕಿಂತ ಹೆಚ್ಚು ಸಮಯ ಮಾಡಬೇಕಾಗಿದೆ. ಇದೀಗ ಸಮಂತಾ ಕೂಡ ಮಾಡುತ್ತಿದ್ದಾರೆ.  

ಪ್ರಯೋಜನಗಳು 

1. ಐಸ್ ಬಾತ್‌ನಿಂದ ಉರಿಯೂತ ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಿದೆ. 

2. ಸಿಕ್ಕಾಪಟ್ಟೆ ವರ್ಕೌಟ್ ಬಳಿಕ ಸ್ನಾಯುವಿನ ಚೇತರಿಕೆಗೆ ಸಹಾಯ ಮಾಡುತ್ತದೆ. 

3. ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ ಮತ್ತು ಚಿಕ್ಕದಾಗಿಸುತ್ತದೆ 

4. ಸ್ನಾಯುಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಸಹ ನೀಡುತ್ತದೆ

5. ಸ್ನಾಯು ನೋವು ಕೂಡ ಕಡಿಮೆ ಮಾಡುತ್ತೆ. 

6. ರೋಗನಿರೋಧಕ ಶಕ್ತಿಯನ್ನು ಬೆಂಬಲಿಸುತ್ತದೆ. ಇದು ರೋಗನಿರೋಧಕ ಶಕ್ತಿ ವರ್ಧಕವಾಗಿದೆ.

7. ಐಸ್ ಬಾತ್ ದೇಹವನ್ನು ತಂಪಾಗಿರುತ್ತದೆ ಇದರಿಂದ  ಮಾನಸಿಕ ಆರೋಗ್ಯ ಮತ್ತು ನಿದ್ರೆಯನ್ನು ಸುಧಾರಿಸುತ್ತದೆ.

ನಟಿ ಸಮಂತಾರಿಂದ ಬೇರ್ಪಟ್ಟಿದ್ದಕ್ಕೆ ನಾಗಚೈತನ್ಯ ಹೇಳ್ತಿರೋದೇನು?

ಸಮಂತಾ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸಮಂತಾ ಅವರಿಗೆ ಫಿಟ್ನೆಸ್ ತುಂಬಾ ಮುಖ್ಯವಾಗಿದೆ. ಇತ್ತೀಚೆಗೆ ಸಮಂತಾ ಸಾಕಷ್ಟು ವರ್ಕೌಟ್ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅನಾರೋಗ್ಯದ ನಡುವೆಯೂ ಸಿನಿಮಾ, ವರ್ಕೌಟ್ ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಸಮಂತಾ ಅವರಿಗೆ ಐಸ್ ಬಾತ್‌ ಥೆರಪಿ ಸಿಕ್ಕಾಪಟ್ಟೆ ಸಹಾಯಕವಾಗಲಿದೆ. 

ಡಿಯರೆಸ್ಟ್ ಸಮಂತಾ... ನಿಮ್ಮ ಬಗ್ಗೆ ತುಂಬಾ ಹೆಮ್ಮೆಯಿದೆ: ರಾಮ್ ಚರಣ್ ಪ್ರೀತಿಯ ವಿಶ್

ಮಂತಾ ಬಳಿ ಇರುವ ಸಿನಿಮಾಗಳು 

ಸಮಂತಾ ಸದ್ಯ ಸಿಟಾಡೆಲ್ ವೆಬ್ ಸೀರಿಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಿಟಾಡೆಲ್ ಹಿಂದಿ ವರ್ಷನ್‌ನಲ್ಲಿ ಸಮಂತಾ ನಟಿಸುತ್ತಿದ್ದಾರೆ. ವೆಬ್ ಸೀರಿಸ್‌ಗೆ ರಾಜ್ ಮತ್ತು ಡಿಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವರುಣ್ ಧವನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ. ಈ ಸಿನಿಮಾ ಜೊತೆಗೆ ಸಮಂತಾ ತೆಲುಗಿನಲ್ಲಿ ಖುಷಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಜಯ್ ದೇವರಕೊಂಡ ಜೊತೆ ಸಮಂತಾ ನಟಿಸುತ್ತಿದ್ದಾರೆ. ಕೊನೆಯದಾಗಿ ಸಮಂತಾ ಶಾಕುಂತಲಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಆ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ.  

 

click me!