
ಟಾಲಿವುಡ್ ಬೆಡಗಿ ಸಮಂತಾ ರುತ್ ಪ್ರಭು ಹಾಟ್ ಟಾಪಿಕ್ ಆಗಿದ್ದಾರೆ. ಇದಕ್ಕೆ ಕಾರಣ ಇವರ ಮಾಜಿ ಪತಿ ನಾಗಚೈತನ್ಯ ಅವರು ಶೋಭಿತಾ ಧೂಲಿಪಾಲ್ ಅವರ ಜೊತೆಗೆ ಮದುವೆ ಕುರಿತು. ನಾಗಚೈತನ್ಯ ಅವರಿಗೆ ಸಮಂತಾ ಡಿವೋರ್ಸ್ ಪಡೆದ ಮೇಲೆ ಸದ್ಯ ಒಂಟಿಯಾಗಿರೋ ಅವರು, ಇದಾಗಲೇ ತಮ್ಮ ಬದುಕಿನ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಕೆಲವರು ತುಂಬಾ ಚಂಚಲ ಸ್ವಭಾವದರಾಗಿರುತ್ತಾರೆ. ಅವರು ನಿಮ್ಮನ್ನು ಪ್ರೀತಿಸೋದು ಕೆಲ ಕ್ಷಣ ಅಷ್ಟೇ. ಆದರೆ ಮೂರು ದಿನಗಳ ನಂತರ ನೀವು ಕೆಲವು ನಿರ್ಧಾರಗಳನ್ನು ತೆಗೆದುಕೊಂಡಾಗ ಅಥವಾ ನಿಮ್ಮ ಜೀವನದಲ್ಲಿ ಏನಾದರೂ ಕೆಟ್ಟದು ಸಂಭವಿಸಿದಾಗ ಅವರು ನಿಮ್ಮನ್ನು ಮತ್ತೆ ದ್ವೇಷಿಸಲು ಪ್ರಾರಂಭಿಸುತ್ತಾರೆ. ನಿಮ್ಮ ಕುಟುಂಬ ಮತ್ತು ನಿಕಟ ಸ್ನೇಹಿತರಿಗೆ ಮಾತ್ರ ಈ ಸತ್ಯ ತಿಳಿದಿರುತ್ತದೆ. ಆದ್ದರಿಂದ ಅವರಿಗೆ ನಿಜವಾಗಿಯೂ ಏನು ನಡೆದಿದೆ ಎಂಬುದನ್ನು ತಿಳಿದುಕೊಂಡು ನೀವು ತೃಪ್ತರಾಗಿರಬೇಕು’ ಎನ್ನುವ ಮೂಲಕ ನಾಗಚೈತನ್ಯ ಅವರ ಬಗ್ಗೆ ಪರೋಕ್ಷವಾಗಿ ನುಡಿದಿದ್ದರು.
ಇದೀಗ ನಟಿ ಮಹಿಳೆಯ ಮುಟ್ಟಿನ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಋತುಚಕ್ರದ ಬಗ್ಗೆ ಚರ್ಚೆಗಳು ಇನ್ನೂ ನಾಚಿಕೆ, ಪಿಸುಮಾತು ಮತ್ತು ಹಿಂಜರಿಕೆಯೊಂದಿಗೆ ನಡೆಯುತ್ತವೆ ಎಂದು ಅವರು ನೋವಿನಿಂದ ನುಡಿದಿದ್ದಾರೆ. "ನಾವು ಮಹಿಳೆಯರು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ, ಆದರೆ ಮುಟ್ಟಿನ ವಿಷಯಕ್ಕೆ ಬಂದಾಗ ಇನ್ನೂ ಮೌನ, ಪಿಸುಮಾತು ಮತ್ತು ಹಿಂಜರಿಕೆ ಇದೆ" ಎಂದು ಸಮಂತಾ ಹೇಳಿದರು. ತಮ್ಮ ಪಾಡ್ಕಾಸ್ಟ್ ಟೆಕ್ 20 ರ ಸಂಚಿಕೆಯಲ್ಲಿ ಪೌಷ್ಟಿಕತಜ್ಞೆ ರಾಶಿ ಚೌಧರಿ ಅವರೊಂದಿಗೆ ಋತುಚಕ್ರ, ಸೈಕಲ್ ಸಿಂಕ್, ಎಂಡೊಮೆಟ್ರಿಯೊಸಿಸ್ ಮತ್ತು ಇತರ ಮಹಿಳೆಯರ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತನಾಡುವ ಸಮಯದಲ್ಲಿ, ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಬಾಯ್‌ಫ್ರೆಂಡ್, ಗಂಡನಿಗೆ ದುಬಾರಿ ಗಿಫ್ಟ್ ಕೊಡೋ ಮೊದ್ಲು... ಯುವತಿಯರಿಗೆ ಸಮಂತಾ ನೀಡಿದ ಎಚ್ಚರಿಕೆ ಏನು?
ಕಾಲ ಬದಲಾಗಿದೆ. ಮಹಿಳೆಯರು ಇಲ್ಲಿಯವರೆಗೆ ಬಂದಿದ್ದೇವೆ. ಆದರೂ ಪೀರಿಯಡ್ಸ್ ಬಗ್ಗೆ ಮಾತನಾಡಲು ಹಿಂಜರಿಯುತ್ತೇವೆ. ಇದರ ಬಗ್ಗೆ ಮಾತನಾಡೋದು, ಅವಮಾನ ಎಂದು ಭಾವಿಸುತ್ತೇವೆ. ಇದು ನಾಚಿಕೆಪಡುವ ಅಥವಾ ಮರೆಮಾಡುವ ವಿಷಯವಲ್ಲ. ಈ ಮನಸ್ಥಿತಿ ಬದಲಾಗಬೇಕು ಎಂದಿದ್ದಾರೆ ನಟಿ. ನಮ್ಮ ಋತುಚಕ್ರವು ನಮ್ಮ ಮನಸ್ಸು ಮತ್ತು ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವ ಅಗತ್ಯವಿದೆ ಎಂದಿದ್ದಾರೆ.
ಇನ್ನು ನಟಿಯ ಸಿನಿಮಾಗಳ ಬಗ್ಗೆ ಹೇಳುವುದಾದರೆ, ಸೌತ್ ನಟಿ ಸಮಂತಾ ನಟನೆಯ ಜೊತೆಗೆ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಸದ್ಯ ಅವರು 'ಶುಭಂ' ಮೂಲಕ ನಿರ್ಮಾಣ ಜಗತ್ತಿಗೆ ಕಾಲಿಟ್ಟಿದ್ದಾರೆ. ಇದೇ 7 ರಂದು ತಮ್ಮ ಮೊದಲ ನಿರ್ಮಾಣದ ಟೀಸರ್ ಅನ್ನು ಅವರು ಶೇರ್ ಮಾಡಿಕೊಂಡಿದ್ದರು. ಟ್ರಲಾಲ ಮೂವಿ ಪಿಕ್ಚರ್ಸ್ ಹೆಸರಿನ ಸಿನಿಮಾ ನಿರ್ಮಾಣ ಸಂಸ್ಥೆ ಪ್ರಾರಂಭ ಮಾಡಿದ್ದು, ಶುಭಂ’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದಾರೆ. "ಸಿಟಾಡೆಲ್ ಹನಿ ಬನ್ನಿ"ಎಂಬ ವೆಬ್ ಸರಣಿಯ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದರು. ಸದ್ಯ ನಟಿಯಾಗಿ ಬಹಳ ಹೆಸರು ಮಾಡಿರುವ ಸಮಂತಾ ಇದೀಗ ನಿರ್ಮಾಪಕಿ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಸಮಯದಲ್ಲಿ ಋತುಚಕ್ರದ ವಿಷಯವಾಗಿ ಮಾತನಾಡಿದ್ದಾರೆ ನಟಿ.
"ನಮ್ಮ ಪ್ರೀತಿಯ ಸಣ್ಣ ಕೆಲಸವನ್ನು ಪ್ರಸ್ತುತಪಡಿಸುತ್ತಿದ್ದೇವೆ. ದೊಡ್ಡ ಕನಸುಗಳನ್ನು ಹೊಂದಿರುವ ಸಣ್ಣ ತಂಡ! ಈ ಪ್ರಯಾಣ ಮತ್ತು ನಾವು ಒಟ್ಟಾಗಿ ರಚಿಸಿದ್ದಕ್ಕಾಗಿ ನಾವು ನಂಬಲಾಗದಷ್ಟು ಕೃತಜ್ಞರಾಗಿರುತ್ತೇವೆ. ನಮ್ಮ ಚಿತ್ರ ನಿಮಗೆ ಇಷ್ಟವಾಗುತ್ತದೆ ಎಂದು ನಾವು ಭಾವಿಸುತ್ತೇವೆ" ಎಂದು ಸಮಂತಾ ಟೀಸರ್ ಬಿಡುಗಡೆ ಸಮಯದಲ್ಲಿ ಹೇಳಿಕೊಂಡಿದ್ದರು. ಸದ್ಯ ನಟಿ ವೆಬ್ ಸೀರಿಸ್ನಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಮಾ ಇಂಟಿ ಬಂಗಾರಂ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಇದೇ ವರ್ಷ ಇದು ಬಿಡುಗಡೆ ಸಾಧ್ಯತೆ ಇದೆ. ನಿರ್ದೇಶಕರಾಗಿರುವ ರಾಜ್ ಹಾಗೂ ಡಿಕೆ ಅವರ ‘ರಕ್ತ ಬ್ರಹ್ಮಾಂಡ ದಿ ಬ್ಲಡಿ ಕಿಂಗ್ಡಮ್’ ಹೆಸರಿನ ಸೀರಿಸ್ನಲ್ಲಿ ನಟಿಸುತ್ತಿದ್ದಾರೆ. ಸಿಟೆಡಾಲ್ ಹನಿ ಬನ್ನಿ ನಿರ್ದೇಶಕ ರಾಜ್ ನಿಡಿಮೋರು ಜೊತೆ ಡೇಟಿಂಗ್ ನಡೆಯುತ್ತಿದೆ ಎನ್ನುವ ಗಾಳಿಸುದ್ದಿಯೂ ಇದೆ.
ರಕ್ಷಿತ್ ಶೆಟ್ಟಿ ಜೊತೆಗಿನ ಆ ವಿಷ್ಯ ಮಾತ್ರ ಕನ್ನಡದಲ್ಲಿ ಕೇಳ್ಬಾರ್ದಂತೆ! ಅಲೆಲೆ... ರಶ್ಮಿಕಾ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.