ಇತ್ತೀಚೆಗೆ ಸೌತ್ ನಟಿ ಸಮಂತಾ ರುಥ್ ಪ್ರಭು(Samantha Ruth Prabhu) ಅವರು ಊ ಅಂಟಾವಾ(Oo Antava) ಹಾಡಿನ ಡ್ಯಾನ್ಸ್ ಪ್ರಾಕ್ಟೀಸ್ ವಿಡಿಯೋ ಶೇರ್ ಮಾಡಿದ್ದರು. ಈಗ ನಟಿ ಸಾಂಗ್ ಸೆಟ್‌ನಿಂದ ಬಿಟಿಎಸ್ ಶೇರ್ ಮಾಡಿದ್ದು ಸಖತ್ ಫನ್ನಿ ಆಗಿದೆ.
ಸೌತ್ ನಟಿ ಸಮಂತಾ ರುಥ್ ಪ್ರಭು(Samantha Ruth Prabhu) ಅವರು ಊ ಅಂಟಾವಾ(Oo Antava) ಐಟಂ ಸಾಂಗ್ ಮಾಡಿ ಹಿಟ್ ಆಗಿದ್ದಾರೆ. ನಟಿ ಐಟಂ ಸಾಂಗ್ ಮಾಡಿದ್ದೇ ಮೊದಲ ಬಾರಿ. ಆದರೆ ಮೊದಲ ಐಟಂ ಸಾಂಗ್‌ನಲ್ಲೇ ಭಾರೀ ಸಕ್ಸಸ್ ಪಡೆದಿದ್ದಾರೆ ಸಮಂತಾ. ನಟಿ ಈ ಸಾಂಗ್‌ಗೆ ಒಪ್ಪಿಕೊಳ್ಳುವ ಬಗ್ಗೆ ಅಷ್ಟಾಗಿ ಕಾನ್ಫಿಡೆಂಟ್ ಆಗಿರಲಿಲ್ಲ. ಆದರೆ ಅಲ್ಲು ಅರ್ಜುನ್(Allu Arjun) ಅವರೇ ಸಮಂತಾರನ್ನು ಹಾಡಿಗಾಗಿ ಮನವೊಲಿದ್ದಾರೆ ಎನ್ನಲಾಗಿದೆ. ಅದೇ ರೀತಿ ಅಲ್ಲು ಅರ್ಜುನ್ ಅವರನ್ನು ನಂಬಿ ಸಮಂತಾ ಸಮಂತಾ ಐಟಂ ಸಾಂಗ್ ಮಾಡಿದ್ದಾರೆ ಎಂದು ಸ್ವತಃ ನಟ ಪುಷ್ಪಾ ಸಕ್ಸಸ್ ಇವೆಂಟ್‌ನಲ್ಲಿ ಹೇಳಿದ್ದರು. ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಅವರು ತಮಗೆ ಹಾಗೂ ನಟ ಅಲ್ಲು ಅರ್ಜುನ್ ಅವರಿಗೆ ಪುಷ್ಪ: ದಿ ರೈಸ್ ಚಿತ್ರದ ಊ ಅಂತಾವಾ ಹಾಡಿಗೆ ಸ್ಟೆಪ್ಟ್ ಹೇಳಿಕೊಡುವಾಗ ನಟಿಗೆ ನಗು ತಡೆಯಲಾಗಲಿಲ್ಲ.
ಭಾನುವಾರದಂದು Instagramನಲ್ಲಿ ನಟಿ ಗಣೇಶ್ ಅವರು ಸಮಂತಾ ಮತ್ತು ಅಲ್ಲು ಅರ್ಜುನ್ ಅವರಿಗೆ ಡ್ಯಾನ್ಸ್ ಕಲಿಸಿಕೊಡುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ವೀಡಿಯೊದಲ್ಲಿ ಗಣೇಶ್ ಅವರಿಗೆ ಸ್ಟೆಪ್ ತೋರಿಸಿದ ನಂತರ ಸಮಂತಾ ರುತ್ ಪ್ರಭು ಮತ್ತು ಅಲ್ಲು ಅರ್ಜುನ್ ನಗಲು ಪ್ರಾರಂಭಿಸಿದ್ದಾರೆ. ಗಣೇಶ್ ಮತ್ತು ಅವರ ಪಾರ್ಟ್‌ನರ್ ಕೂಡ ಅವರೊಂದಿಗೆ ಸೇರಿಕೊಂಡಿದ್ದಾರೆ. ಸಮಂತಾ ಕೈ ಚಪ್ಪಾಳೆ ತಟ್ಟಿ ನಗುತ್ತಾ ನಡೆಯುತ್ತಿದ್ದಾಗ ಅಲ್ಲು ಅರ್ಜುನ್ ಗಣೇಶ್ ಗೆ ಟೈಮಿಂಗ್ ಹೇಳಿ ತಲೆ ಅಲ್ಲಾಡಿಸಿದರು.
3 ನಿಮಿಷದ ಹಾಡಿಗೆ 5 ಕೋಟಿ ಪಡೆದ ಸಮಂತಾ
ಸಮಂತಾ ಕೂಡ ಅವರಿಗೆ 'ಕಮಾಲ್ (ವಾವ್) ಮಾಸ್ಟರ್' ಎಂದು ಹೇಳಿದರು. ನಂತರ ನಟಿ ಮತ್ತು ಅಲ್ಲು ಅರ್ಜುನ್ ಹಾಡಿಗೆ ಹೆಜ್ಜೆ ಹಾಕಲು ನೃತ್ಯ ನಿರ್ದೇಶಕರಿದ್ಧ ಸ್ಥಳಕ್ಕೆ ಬರುವುದನ್ನು ಕಾಣಬಹುದು. ಕ್ಲಿಪ್ ಅನ್ನು ಹಂಚಿಕೊಂಡ ಗಣೇಶ್, ನನ್ನ ಮೆಚ್ಚಿನವುಗಳೊಂದಿಗೆ ಮತ್ತೊಂದು ಹಿಟ್, ಈ ಇಬ್ಬರೊಂದಿಗೆ ಅಲ್ಲು ಅರ್ಜುನ್ ಹಾಗೂ ಸಮಂತಾ ರುಥ್ ಪ್ರಭು. ಜೊತೆಗೆ ಅತ್ಯಂತ ಮೋಜಿನ ಸಮಯವನ್ನು ಕಳೆದಿದ್ದೇವೆ ಎಂದು ಶೀರ್ಷಿಕೆ ನೀಡಲಾಗಿದೆ.
ನನ್ನ ಕೊಲ್ಲುತ್ತಿದ್ದಾರೆ ಎಂದ ಸಮಂತಾ
ಊ ಅಂಟಾವಾ ಜೊತೆಗೆ, ಸಮಂತಾ ಮೊದಲ ಬಾರಿಗೆ ತನ್ನ ವೃತ್ತಿಜೀವನದಲ್ಲಿ ಚಲನಚಿತ್ರವೊಂದಕ್ಕಾಗಿ ವಿಶೇಷ ನೃತ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ತಿಂಗಳು ನಡೆದ ಸಮಾರಂಭವೊಂದರಲ್ಲಿ, ಅಲ್ಲು ಅರ್ಜುನ್ ಸಮಂತಾಗೆ ಧನ್ಯವಾದ ಹೇಳಿದ್ದರು. ಹಾಡಿನಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಒಂದು ಕೆಲವು ಮಾತು ಹಂಚಿಕೊಂಡಿದ್ದರು. ಸಮಂತ ಒಂದು ಹಾಡು ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು. ಸೆಟ್‌ನಲ್ಲಿ ನನಗೆ ಗೊತ್ತು, ನಿಮಗೆ ಎಷ್ಟು ಅನುಮಾನಗಳಿದ್ದವು. ಐಟಂ ಸಾಂಗ್ ಮಾಡಲೋ, ಅದು ಸರಿಯೋ ಇಲ್ಲವೋ ಹೀಗೆ ನಿಮಗೆ ಗೊಂದಲಗಳಿದ್ದವು. ನಿಮಗೆ ಗೊತ್ತಾ, ನಾನು ನಿಮಗೆ ಒಂದು ವಿಷಯವನ್ನು ಹೇಳಿದ್ದೆ, 'ನನ್ನನ್ನು ನಂಬಿ ಮತ್ತು ಅದನ್ನು ಮಾಡಿ ಎಂದಿದ್ದೆ. ನೀವು ನನ್ನನ್ನು ಪೂರ್ತಿಯಾಗಿ ನಂಬಿದಿರಿ ಎಂದಿದ್ದಾರೆ ಅಲ್ಲು ಅರ್ಜುನ್.
ನೀವು ಒಂದು ಪ್ರಶ್ನೆಯನ್ನೂ ಕೇಳಲಿಲ್ಲ, ನಮ್ಮ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ತುಂಬಾ ಧನ್ಯವಾದಗಳು. ನೀವು ನನ್ನ ಹೃದಯವನ್ನು ಗೆದ್ದಿದ್ದೀರಿ, ನನ್ನ ಗೌರವವನ್ನು ಗೆದ್ದಿದ್ದೀರಿ. ಓ ಅಂಟಾವಾ ವಿಶ್ವದ ನಂಬರ್ 1 ಹಾಡಿಗೆ ನಿಮಗೆ ಅಭಿನಂದನೆಗಳು ಎಂದು ಅವರು ಹೇಳಿದ್ದರು. ಇದಕ್ಕೆ ಉತ್ತರಿಸಿದ ಸಮಂತಾ ಟ್ವಿಟರ್‌ನಲ್ಲಿ ಇನ್ನು ನಾನು ಯಾವಾಗಲೂ ನಿಮ್ಮನ್ನು ನಂಬುತ್ತೇನೆ ಅಲ್ಲು ಅರ್ಜುನ್ ಎಂದು ಪ್ರೀತಿಯಿಂದ ಉತ್ತರಿಸಿದ್ದರು.