
ನಟಿ ಸಮಂತಾ ರುತ್ ಪ್ರಭು ಅವರ ಬಹುನಿರೀಕ್ಷಿತ ಸಿನಿಮಾ 'ಮಾ ಇಂಟಿ ಬಂಗಾರಂ' ರಿಲೀಸ್ ಡೇಟ್ ಕೊನೆಗೂ ಫಿಕ್ಸ್ ಆಗಿದೆ. ಭಾನುವಾರ, ಸಮಂತಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸಿನಿಮಾದ ಹೊಸ ಪೋಸ್ಟರ್ ಜೊತೆಗೆ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಿದ್ದಾರೆ. ಈ ಚಿತ್ರವು 2026ರ ಮೇ 15 ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ.
"ಈ ಬೇಸಿಗೆಯಲ್ಲಿ ಥಿಯೇಟರ್‌ಗಳಲ್ಲಿ ಸಿಗೋಣ ಬಂಗಾರಾಲು... #MaaIntiBangaaram 2026ರ ಮೇ 15ರಂದು ವಿಶ್ವಾದ್ಯಂತ ಗ್ರ್ಯಾಂಡ್ ರಿಲೀಸ್. #MiBonMay15th #MiB," ಎಂದು ಸಮಂತಾ ಬರೆದುಕೊಂಡಿದ್ದಾರೆ.
ಹೊಸ ಪೋಸ್ಟರ್‌ನಲ್ಲಿ ಸಮಂತಾ ಗೋಡೆಯೊಂದರ ಮರೆಯಿಂದ ಇಣುಕಿ ನೋಡುತ್ತಿದ್ದು, ಅವರ ಮುಖದಲ್ಲಿ ಎಚ್ಚರಿಕೆಯ ಭಾವನೆ ಕಾಣಿಸುತ್ತಿದೆ. ಸರಳ ಸೀರೆ ಉಟ್ಟಿರುವ ಅವರ ಪಾತ್ರವು ಸಖತ್ ನಿಗೂಢವಾಗಿದೆ ಅನ್ನೋ ಫೀಲ್ ಕೊಡುತ್ತಿದೆ.
ಈ ಹಿಂದೆ ಜನವರಿಯಲ್ಲಿ, ಚಿತ್ರತಂಡ 'ಮಾ ಇಂಟಿ ಬಂಗಾರಂ' ಸಿನಿಮಾದ ಟೀಸರ್ ಟ್ರೈಲರ್ ಅನ್ನು ಬಿಡುಗಡೆ ಮಾಡಿತ್ತು. ಇದೊಂದು ರಾ ಮತ್ತು ರಿಯಲಿಸ್ಟಿಕ್ ಕಥೆಯಾಗಿದ್ದು, ಇದರಲ್ಲಿ ತೀವ್ರವಾದ ಡ್ರಾಮಾ ಮತ್ತು ಹೈ-ಆಕ್ಟೇನ್ ದೃಶ್ಯಗಳಿರಲಿವೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿತ್ತು. ಕೌಟುಂಬಿಕ ಹಿನ್ನೆಲೆಯಲ್ಲಿ ಸಾಗುವ ಈ ಕಥೆ, ಮನರಂಜನೆಯ ಜೊತೆಗೆ ಕುತೂಹಲವನ್ನೂ ಉಳಿಸಿಕೊಳ್ಳಲಿದೆ ಎನ್ನಲಾಗಿದೆ.
ಟೀಸರ್ ಬಗ್ಗೆ ಮಾತನಾಡಿದ್ದ ಸಮಂತಾ, "'ಮಾ ಇಂಟಿ ಬಂಗಾರಂ' ಚಿತ್ರವು ಒಬ್ಬ ಮಹಿಳೆಯ ಕಥೆಯನ್ನು ಹೇಳುತ್ತದೆ. ಅವಳ ಧೈರ್ಯದಷ್ಟೇ, ಅವಳ ದೌರ್ಬಲ್ಯವೂ ಅವಳ ಶಕ್ತಿಯಾಗಿರುತ್ತದೆ. ಈ ಪಾತ್ರದಲ್ಲಿ ನಟಿಸುವುದು ಮತ್ತು ನಿರ್ಮಾಪಕಿಯಾಗಿ ಈ ಸಿನಿಮಾವನ್ನು ಪೋಷಿಸುವುದು ನನಗೆ ಬಹಳ ತೃಪ್ತಿ ನೀಡಿದೆ. ಈ ಚಿತ್ರದ ಜಗತ್ತು ಭಾವನಾತ್ಮಕವಾಗಿದ್ದು, ಕೌಟುಂಬಿಕ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡುತ್ತದೆ. ಈ ಕಥೆಯನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂದು ನೋಡಲು ನಾನು ಉತ್ಸುಕಳಾಗಿದ್ದೇನೆ," ಎಂದು ಹೇಳಿದ್ದರು.
ಸಮಂತಾ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಈ ಚಿತ್ರದ ಶೂಟಿಂಗ್ ಆರಂಭಿಸಿದ್ದರು.
ರಾಜ್ ನಿಡಿಮೋರು, ಸಮಂತಾ ಮತ್ತು ಹಿಮಾಂಕ್ ದುವ್ವುರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಖ್ಯಾತ ನಿರ್ದೇಶಕಿ ನಂದಿನಿ ರೆಡ್ಡಿ ಇದಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ಚಿತ್ರರಂಗದ ಪ್ರತಿಭಾವಂತ ತಂತ್ರಜ್ಞರು ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಓಂ ಪ್ರಕಾಶ್ ಛಾಯಾಗ್ರಹಣ, ಸಂತೋಷ್ ನಾರಾಯಣನ್ ಸಂಗೀತ, ವಸಂತ್ ಮರಿಂಗಂಟಿ ಕಥೆ ಮತ್ತು ಚಿತ್ರಕಥೆ ಹಾಗೂ ಪಲ್ಲವಿ ಸಿಂಗ್ ವಸ್ತ್ರ ವಿನ್ಯಾಸದ ಜವಾಬ್ದಾರಿ ಹೊತ್ತಿದ್ದಾರೆ. (ANI)
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.