ಹೆಂಗಸ್ರು ಬಿಟ್ರು- ಗಂಡಸ್ರು ಅಪ್ಪಿಕೊಂಡ್ರು: ಈಗ ಮಂಗಳಸೂತ್ರದ ಸರದಿ! ಪ್ರಿಯಾಂಕಾ ಪತಿಯ ಬ್ರೇಸ್​ಲೈಟ್​ ನೋಡಿ

Published : Feb 22, 2026, 04:28 PM IST
Priyanka Chopra and Nick Jonas

ಸಾರಾಂಶ

ಭಾರತೀಯ ಮಹಿಳೆಯರು  ಸಾಂಪ್ರದಾಯಿಕ ಆಭರಣಗಳನ್ನು ತ್ಯಜಿಸುತ್ತಿದ್ದರೆ, ಪುರುಷರು ಮಹಿಳೆಯರ ಆಭರಣಗಳನ್ನು ಧರಿಸುವ ಟ್ರೆಂಡ್ ಶುರುವಾಗಿದೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ, ನಟಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಮಂಗಳಸೂತ್ರದ ವಿನ್ಯಾಸದ ಬ್ರೇಸ್ಲೆಟ್ ಧರಿಸಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.

ಫ್ಯಾಷನ್​ ಹೆಸರಿನಲ್ಲಿ, ಹಲವಾರು ಭಾರತೀಯ ನಾರಿಯರು ತಮ್ಮ ಒಂದೊಂದೇ ಆಭರಣ, ಬಟ್ಟೆ ಎಲ್ಲಾ ತೆಗೆದಿಟ್ಟು ಬಹಳ ವರ್ಷಗಳೇ ಆಗಿ ಹೋಗಿವೆ. ವಿದೇಶಿಗರು ಭಾರತೀಯ ಸಂಸ್ಕೃತಿಗೆ ಮೊರೆ ಹೋಗಿ ಇಲ್ಲಿಯ ಸಂಪ್ರದಾಯ ಫಾಲೋ ಮಾಡುತ್ತಿದ್ದರೆ, ನಮ್ಮವರು ವಿದೇಶಿಗರ ತುಂಡುಡುಗೆಯ ಮೊರೆ ಹೋಗಿ ದಶಕಗಳೇ ಕಳೆದು ಹೋಗಿವೆ. ಹಣೆಯಲ್ಲಿ ಕುಂಕುಮ, ಕೈಯಲ್ಲಿ ಬಳೆ, ಎಲ್ಲಕ್ಕಿಂತ ಮುಖ್ಯವಾಗಿ ಕೊರಳಲ್ಲಿ ಮಾಂಗಲ್ಯ ಇವು ಮುತ್ತೈದೆಯ ಲಕ್ಷಣ ಎಂದೇ ಹೇಳಲಾಗುತ್ತದೆ. ಆದರೆ ಇದೀಗ ಇದು ಉಲ್ಟಾ ಆಗಿದೆ. ಫ್ಯಾಷನ್​ ಹೆಸರಿನಲ್ಲಿ ಮದುವೆಯಾದ ಹೆಣ್ಣುಮಕ್ಕಳ ಕೊರಳಲ್ಲಿ ಮಂಗಳಸೂತ್ರ ಇಲ್ಲದೇ ಇರುವುದು ಫ್ಯಾಷನ್​ ಆಗಿದ್ದರೆ, ಇನ್ನು ಕುಂಕುಮ ಅಂತೂ ಕೇಳೋದೇ ಬೇಡ. ಸೆಲೆಬ್ರಿಟಿಗಳೇ ಇವರಿಗೆ ಮಾದರಿ. ತಾವೂ ಹಾಗೆಯೇ ಮಾಡಿಕೊಂಡು ಬಿಟ್ಟರೆ ಸೆಲೆಬ್ರಿಟಿ ಆಗಿಬಿಡುತ್ತೇವೆ ಎನ್ನುವ ಮನಸ್ಥಿತಿಯೂ ಇದಕ್ಕೆ ಕಾರಣವಾಗಿದೆ.

ಕೇಳೋಕೆ ನೀವ್ಯಾರು?

ಇವೆಲ್ಲಾ ಹಾಕಿಕೊಂಡರಷ್ಟೇ ಸುಖಮಯ ದಾಂಪತ್ಯ ಎನ್ನೋದೇನು ಇಲ್ಲವಲ್ಲ. ಇವೆಲ್ಲಾ ಒಂದು ಫ್ಯಾಷನ್​ ಅಷ್ಟೇ. ದಂಪತಿ ಸಂತೋಷದಿಂದ ಇರಬೇಕು ಎಂದರೆ ಮನಸ್ಥಿತಿ ಮುಖ್ಯವೇ ಹೊರತು ಇವೆಲ್ಲಾ ತೋರಿಕೆಗಳಲ್ಲ ಎನ್ನುವ ಮಾತೂ ಇದ್ದರೂ, ಹೆಣ್ಣು ಇವೆಲ್ಲಾ ಧರಿಸಲು ಸಂಪ್ರದಾಯವಷ್ಟೇ ಅಲ್ಲದೇ ವೈಜ್ಞಾನಿಕ ಕಾರಣಗಳೂ ಇರುವ ಹಿನ್ನೆಲೆಯಲ್ಲಿ ಎಲ್ಲವನ್ನೂ ಕಳಚಿ ಇಡಬೇಡ್ರಮ್ಮಾ ಎನ್ನುವುದು ಹಿರಿಯರ ಮಾತು. ಇದನ್ನು ಕೇಳೋಕೆ ನೀವ್ಯಾರು? ನಮ್ಮಿಷ್ಟ ಎನ್ನುವುದು ಹೆಣ್ಣುಮಕ್ಕಳ ಮಾತು.

ಗಂಡಸರ ಪಾಲಾಗ್ತಿದೆ ಹೆಂಗಸರ ಆಭರಣ

ಅದೇನೇ ಇರಲಿ. ಅವೆಲ್ಲಾ ಅವರವರ ಅನಿಸಿಕೆ, ಅಭಿಪ್ರಾಯಕ್ಕೆ ಬಿಟ್ಟ ವಿಷಯ. ಆದರೆ ವಿಚಿತ್ರ ಎಂದರೆ, ಹೆಣ್ಣು ಮಕ್ಕಳು ಬಿಟ್ಟಿದ್ದನ್ನೆಲ್ಲಾ ಪುರುಷರು ಧರಿಸಿಕೊಳ್ಳಲು ಶುರು ಮಾಡಿದ್ದಾರೆ.ಕಿವಿಯೋಲೆ, ಕೈಬಳೆಯಿಂದ ಹಿಡಿದು ಇತ್ತೀಚಿಗೆ ನಟ ಸುದೀಪ್​ ಅವರು ಹೇರ್​ಕ್ಲಿಪ್​ ಟ್ರೆಂಡ್​ ಸೃಷ್ಟಿ ಮಾಡಿರುವುದರವರೆಗೆ, ಎಲ್ಲವೂ ಗಂಡಸರ ಪಾಲಾಗುತ್ತಿದೆ. ಹೆಣ್ಣುಮಕ್ಕಳು ಜೀನ್ಸ್​ ಮೊರೆ ಹೋಗಿದ್ದರೆ, ಗಂಡಸರು ಹೆಣ್ಣುಮಕ್ಕಳ ಡ್ರೆಸ್​ ಹೋಲುವ ಕುರ್ತಾ ಹಾಕಿಕೊಳ್ಳುವುದ ಟ್ರೆಂಡ್​ ಕೂಡ ಶುರುವಾಗಿ ಬಿಟ್ಟಿದೆ. ಇನ್ನು ಕುಂಕುಮ ಇಡುವುದು ಮಾಮೂಲು. ಮುಗುತಿಯನ್ನೂ ಗಂಡಸರು ಹಾಕಿಕೊಳ್ಳಲು ಶುರು ಮಾಡಿದ್ದಾರೆ. ಒಟ್ಟಿನಲ್ಲಿ ಈ ದುನಿಯಾ ಅದಲು ಬದಲು ಆಗ್ತಿದೆ ಎನ್ನೋ ಮಾತಂತೂ ನಿಜವಾಗ್ತಿದೆ.

ಮಂಗಳಸೂತ್ರದ ಬ್ರೇಸ್​ಲೈಟ್​

ಇದೀಗ ನಟಿ ಪ್ರಿಯಾಂಕಾ ಚೋಪ್ರಾ ಅವರ ಪತಿ ನಿಕ್​ ಜೋನಸ್​ ಕೈಯಲ್ಲಿ ಮಂಗಳಸೂತ್ರ ನೋಡಿ ನೆಟ್ಟಿಗರು ಹೌಹಾರಿದ್ದಾರೆ. ಅಷ್ಟಕ್ಕೂ ಈ ಮಂಗಳಸೂತ್ರವನ್ನೇನು ಅವರು ಪ್ರಿಯಾಂಕಾಳ ಕೊರಳಿಗೆ ಹಾಕಲು ಇಟ್ಟುಕೊಂಡಿರುವುದಲ್ಲ. ಬದಲಿಗೆ ಅದನ್ನು ಬ್ರೇಸ್​ಲೈಟ್​ ರೂಪದಲ್ಲಿ ಧರಿಸಿದ್ದಾರೆ. ಇದೊಂದು ಬಾಕಿ ಇತ್ತು ಎಂದು ನೆಟ್ಟಿಗರು ಹೇಳ್ತಿದ್ದಾರೆ. ಕೆಲವೊಂದು ಸಂಪ್ರದಾಯದಲ್ಲಿ ಮದುವೆಯ ದಿನ ಗಂಡಿಗೆ ತಾಳಿ ಕಟ್ಟುವುದು, ಕಾಲುಂಗುರ ಹಾಕುವ ಪದ್ಧತಿಯೂ ಇದೆ. ಆದರೆ ಅದನ್ನು ಕೆಲವು ದಿನಗಳ ಬಳಿಕ ಗಂಡಸರು ತೆಗೆಯುತ್ತಾರೆ. ಆದರೆ ಈಗ ನಿಕ್​ ಜೋನಸ್​ ಅವರನ್ನು ನೋಡಿ ಇನ್ನು ಮಂಗಳಸೂತ್ರ ಗಂಡಸರು ಕೈಗೆ ಫ್ಯಾಷನ್​ ರೂಪದಲ್ಲಿ ಹಾಕುವ ದಿನ ದೂರವಿಲ್ಲ ಎನ್ನಲಾಗುತ್ತಿದೆ. ಏಕೆಂದರೆ ಬಹುತೇಕ ಮಂದಿಗೆ, ಸಿನಿಮಾ ತಾರೆಯರೇ ಗಾಡ್​ ಫಾದರ್​, ಗಾಡ್​ ಮದರ್​, ದೇವರು ಎಲ್ಲವೂ ಅಲ್ಲವೆ?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

OTT Release this Week: ಒಟಿಟಿಗೆ ಬಂದ ಒಂದಕ್ಕಿಂತ ಒಂದು ಸೂಪರ್‌ ಹಿಟ್‌ ಸಿನಿಮಾಗಳು! ಅಬ್ಬಬ್ಬಾ.. ಏನ್‌ ಕಥೆ, ಥ್ರಿಲ್ಲರ್!
'ಜೈ ಹನುಮಾನ್' ಮುಹೂರ್ತಕ್ಕೆ ಆಗಮಿಸಿದ ರಿಷಬ್ ಶೆಟ್ಟಿ ದಂಪತಿಗಳು; ಅಂಜನಾದ್ರಿ ಬೆಟ್ಟದಲ್ಲಿ ಕಾಂತಾರ 'ಶಿವ'ನ ಮಿಂಚು!