ವೇದಿಕೆ ಮೇಲೆ ನಟಿಯ ಬಟ್ಟೆ ಬಗ್ಗೆ ಕಾಮೆಂಟ್ ಮಾಡಿದ ನಿರೂಪಕ; ಗಾಯಕಿ ಚಿನ್ಮಯಿ ಕಿಡಿ

Published : Nov 11, 2022, 01:23 PM IST
ವೇದಿಕೆ ಮೇಲೆ ನಟಿಯ ಬಟ್ಟೆ ಬಗ್ಗೆ ಕಾಮೆಂಟ್ ಮಾಡಿದ ನಿರೂಪಕ; ಗಾಯಕಿ ಚಿನ್ಮಯಿ ಕಿಡಿ

ಸಾರಾಂಶ

ಕಾರ್ಯಕ್ರಮವೊಂದರಲ್ಲಿ ನಿರೂಪಕ ಮತ್ತು ನಟ ಸತೀಶ್ ನಟಿ ದರ್ಶಾ ಗುಪ್ತಾ ಅವರ ಬಟ್ಟೆ ಬಗ್ಗೆ ಕಾಮೆಂಟ್ ಮಾಡಿ ವಿವಾದಲ್ಲಿ ಸಿಲುಕಿದ್ದಾರೆ.  ಸತೀಶ್ ವಿರುದ್ಧ ಅನೇಕರು ಕಿಡಿ ಕಾರುತ್ತಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ನಿರೂಪಕ ಮತ್ತು ನಟ ಸತೀಶ್ ನಟಿ ದರ್ಶಾ ಗುಪ್ತಾ ಅವರ ಬಟ್ಟೆ ಬಗ್ಗೆ ಕಾಮೆಂಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸತೀಶ್ ವಿರುದ್ಧ ಅನೇಕರು ಕಿಡಿ ಕಾರುತ್ತಿದ್ದಾರೆ.  ಕಾರ್ಯಕ್ರಮವೊಂದಕ್ಕೆ ನಟಿ ಸನ್ನಿ ಲಿಯೋನ್ ಹಾಜರಾಗಿದ್ದರು. ಈ ವೇಳೆ ನಟಿ ದರ್ಶಾ ಗುಪ್ತಾ ಕೂಡ ಜೊತೆಯಲ್ಲಿದ್ದರು. ನಿರೂಪಣೆಯ ಜವಾಬ್ದಾರಿ ವಹಿಸಿಕೊಂಡಿದ್ದ ನಟ ಸತೀಶ್ ವೇದಿಕೆ ಮೇಲೆಯೇ ಸನ್ನಿ ಲಿಯೋನ್ ಅವರ  ಉಡುಪನ್ನು ಹಾಡಿಹೊಗಳಿದರು. ಸೀರೆ ಧರಿಸಿದ್ದ ಸನ್ನಿ ಲಿಯೋನ್ ಅವರಿಗೆ ಹೋಲಿಕೆ ಮಾಡಿ ದರ್ಶಾ ಗುಪ್ತಾ ಅವರನ್ನು ತೆಗಳಿದರು. ಈ ವಿಡಿಯೋ ಈಗ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋಗೀಗ ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ ಪ್ರತಿಕ್ರಿಯೆ ನೀಡಿದ್ದು, ಸತೀಶ್ ವಿರುದ್ಧ ಕಿಡಿ ಕಾರಿದ್ದಾರೆ. 

ಅಂದಹಾಗೆ ಸನ್ನಿ ಲಿಯೋನ್ ಹಾಜರಾಗಿದ್ದು ತಮಿಳಿನ ಓಹ್ ಮೈ ಘೋಸ್ಟ್ ಸಿನಿಮಾದ ಆಡಿಯೋ ರಿಲೀಸ್ ಈವೆಂಟ್‌ಗೆ. ಸನ್ನಿ ಲಿಯೋನ್ ಜರಿ ಸೀರೆ ಧರಿಸಿ ಎಂಟ್ರಿ ಕೊಟ್ಟಿದ್ದರು. ಹಸಿರು ಮತ್ತು ಕೆಂಪು ಬಣ್ಣದ ಸೀರೆ ಧರಿಸಿದ್ದರು. ವೇದಿಕೆ ಮೇಲೆ ಮಾತನಾಡಿದ ನಿರೂಪಕ ಸತೀಶ್, 'ಸನ್ನಿ ಲಿಯೋನ್ ಮುಂಬೈನಿಂದ ಈವೆಂಟ್‌ಗೆ ಬಂದಿದ್ದಾರೆ. ಅವರು ಹೇಗೆ ಬಂದಿದ್ದಾರೆ ನೋಡಿ ಸೀರೆಯಲ್ಲಿ. ಆದರೆ ಕೊಯಮತ್ತೂರಿನ ಮತ್ತೋರ್ವ ನಟಿ (ದರ್ಶಾ ಗುಪ್ತಾ) ಕೂಡ ಅವರು ಏನು ಧರಿಸಿ ಬಂದಿದ್ದಾರೆ ಎನ್ನುವುದನ್ನು ನೋಡಿ' ಎಂದು ಹೇಳಿ ದರ್ಶಾ ಬಟ್ಟೆಯನ್ನು ಆಡಿಕೊಂಡಿದ್ದರು. ಅಂದಹಾಗೆ ದರ್ಶಾ ಗುಪ್ತಾ ನೀಲಿ ಬಣ್ಣದ ಲೆಹಂಗಾದಲ್ಲಿ ಎಂಟ್ರಿ ಕೊಟ್ಟಿದ್ದರು. 

ಸತೀಶ್ ಹೇಳಿಕೆ ಈಗ ವೈರಲ್ ಆಗಿದ್ದು ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಗಾಯಕಿ ಚಿನ್ಮಯಿ ಶ್ರೀಪಾದ ಕೂಡ ಪ್ರತಿಕ್ರಿಯೆ ನೀಡಿ ಕಿಡಿ ಕಾರಿದ್ದಾರೆ. ಸಾರ್ವಜನಿಕವಾಗಿ ಮಹಿಳೆಯರ ಬಟ್ಟೆಯ ಬಗ್ಗೆ ಕಾಮೆಂಟ್ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಮಹಿಳೆಯರ ಬಗ್ಗೆ ಬೊಟ್ಟು ಮಾಡಿ ತೋರಿಸುವುದು, ಸರಿಯಾಗಿ ಬಟ್ಟೆ ಧರಿಸಿಲ್ಲ ಎಂದು ಸಾರ್ವಜನಿಕವಾಗಿ ಪುರುಷರ ಸಮೂಹ ಹೇಳುವುದು ನೋಡಿ. ಇಂಥ ವರ್ತನೆಯನ್ನು ಪುರುಷರು ಯಾವಾಗ ನಿಲ್ಲಿಸುತ್ತಾರೆ' ಎಂದ ಪ್ರಶ್ನೆ ಮಾಡಿದ್ದಾರೆ. ಇದು ತಮಾಷೆಯಲ್ಲ' ಎಂದು ಚಿನ್ಮಯಿ ಟ್ವೀಟ್ ಮಾಡಿದ್ದಾರೆ.

ಟಿಇಟಿ ಹಾಲ್‌ ಟಿಕೆಟಲ್ಲಿ ಸನ್ನಿ ಲಿಯೋನ್‍ ಅಶ್ಲೀಲ ಫೋಟೋ: ದೂರು ದಾಖಲು

ಇನ್ನು ಬಗ್ಗೆ ಸತೀಶ್ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಆದರೆ ಆಂಗ್ಲ ಮಾಧ್ಯಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ಸತೀಶ್ 'ದಕ್ಷಿಣ ಭಾರತದ ಸಂಸ್ಕೃತಿಗೆ ಹೊಂದಿಕೊಳ್ಳಲು ಮತ್ತು ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಸೀರೆಯಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಸನ್ನಿ ಲಿಯೋನ್ ಅವರನ್ನು ಮಾತ್ರ ಹೊಗಳಿದ್ದೀನೆ. ಇದರಲ್ಲಿ ಅವಮಾನ ಮಾಡುವ ಉದ್ದೇಶ ಇರಲಿಲ್ಲ' ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

ಬಿಕಿನಿಯಲ್ಲಿ ಮಾಲ್ಡೀವ್ಸ್ ಬೀಚಿನ ಮಾದಕತೆ ಹೆಚ್ಚಿಸಿದ ಸನ್ನಿ!

ಸತೀಶ್ ಹೇಳಿಕೆಗೆ ನೆಟ್ಟಿಗರಿಂದ ತರೇವಾರಿ ಕಾಮೆಂಟ್ ಬರುತ್ತಿದೆ. ಸಾರ್ವಜನಿಕವಾಗಿ ಮಹಿಳೆಯ ಉಡುಪಿನ ಬಗ್ಗೆ ಮಾತನಾಡಿರುವುದು ಸರಿಯಲ್ಲ ಎಂದು ಹೇಳುತ್ತಿದ್ದಾರೆ. ಮಹಿಳೆಯರ ಬಗ್ಗೆ ಕಾಮಿಡಿ ಮಾಡಬೇಡಿ ಸತೀಶ್ ಎಂದು ನೆಟ್ಟಿಗರು ಬುದ್ಧಿವಾದ ಹೇಳುತ್ತಿದ್ದಾರೆ. ಸದ್ಯ ಸತೀಶ್ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಪರ ವಿರೋಧ ಚರ್ಚೆ ನಡೆಯುತ್ತಿದೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?