ಸಮಂತಾ – ನಾಗ ಚೈತನ್ಯ ವಿಚ್ಛೇದನ ವಿವಾದ, ಕ್ಷಮೆ ಕೇಳಿದ ಕೊಂಡ ಸುರೇಖಾ

By Roopa HegdeFirst Published Oct 3, 2024, 11:14 AM IST
Highlights

ಸಮಂತಾ – ನಾಗ ಚೈತನ್ಯ ವಿಚ್ಛೇದನದ ಬಗ್ಗೆ ವಿವಾದಾತ್ಮಕ ಹೇಳಿಕೆ ಕೋಲಾಹಲವೆಬ್ಬಿಸಿದೆ. ಕೊಂಡಾ ಸುರೇಖಾ ವಿರುದ್ಧ ಚಿತ್ರರಂಗದ ದಿಗ್ಗಜರು ಕೆಂಡಕಾರಿದ್ದಾರೆ. ಸಮಂತಾ, ನಾಗಚೈತನ್ಯ, ಜೂನಿಯರ್ ಎನ್ ಟಿಆರ್ ವಿರೋಧಿಸಿದ್ದು, ಕೊನೆಗೂ ಕೊಂಡ ಕ್ಷಮೆ ಕೇಳಿದ್ದಾರೆ.
 

ನಟ ನಾಗ ಚೈತನ್ಯ ಮತ್ತು ನಟಿ ಸಮಂತಾ ರುತ್ ಪ್ರಭು (Actor Naga Chaitanya and actress Samantha Ruth Prabhu) ವಿಚ್ಛೇದನ ಪ್ರಕರಣದಲ್ಲಿ ಭಾರತ್ ರಾಷ್ಟ್ರ ಸಮಿತಿಯ ನಾಯಕ ಕೆಟಿ ರಾಮರಾವ್ (KT Rama Rao) ಅವರ ಕೈವಾಡವಿದೆ ಎಂದು ತೆಲಂಗಾಣ ಸಚಿವೆ ಕೊಂಡ ಸುರೇಖಾ ಮಾಡಿದ್ದ ಗಂಭೀರ ಆರೋಪ ಗದ್ದಲ ಎಬ್ಬಿಸಿತ್ತು. ಈಗ ಸುರೇಖಾ, ಸಮಂತಾ ಕ್ಷಮೆ ಕೇಳಿದ್ದಾರೆ. ಎಕ್ಸ್ ಖಾತೆಯಲ್ಲಿ ಸುರೇಖಾ, ಸಮಂತಾ ಕ್ಷಮೆ ಕೇಳಿದ ಪೋಸ್ಟ್ ಹಂಚಿಕೊಂಡಿದ್ದಾರೆ.

ಸಮಂತಾ ಪ್ರತಿಕ್ರಿಯೆ : ಇದಕ್ಕೂ ಮುನ್ನ ಸಮಂತಾ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ, ತಮ್ಮ ವಿಚ್ಛೇದನ ಪ್ರಕರಣವನ್ನು ರಾಜಕೀಯಕ್ಕೆ ಥಳಕು ಹಾಕ್ಬೇಡಿ ಎಂದಿದ್ದಾರೆ. ನಮ್ಮ ವಿಚ್ಛೇದನ ವೈಯಕ್ತಿಕ ವಿಚಾರ. ವಿಚ್ಛೇದನವು ಪರಸ್ಪರ ಮತ್ತು ಸೌಹಾರ್ದಯುತವಾಗಿದೆ. ಯಾವುದೇ ರಾಜಕೀಯ ಪಿತೂರಿ ಒಳಗೊಂಡಿಲ್ಲ ಎಂದು ಸಮಂತಾ ಹೇಳಿದ್ದಾರೆ.  ತಮ್ಮ ವಿಚ್ಛೇದನದ ಬಗ್ಗೆ ಊಹಾಪೋಹಗಳನ್ನು ನಿಲ್ಲಿಸುವಂತೆ ಸಮಂತಾ ಜನರಿಗೆ ಮನವಿ ಮಾಡಿದ್ದಾರೆ.  ಮಹಿಳೆಯಾಗಿ, ಹೊರಗೆ ಬರುವುದು ಮತ್ತು ಕೆಲಸ ಮಾಡುವುದು, ಪ್ರೀತಿಯಲ್ಲಿ ಬೀಳುವುದು ಮತ್ತು ಹೋರಾಡಿ ಅದರಿಂದ ಹೊರಗೆ ಬರುವುದು ಸೇರಿದಂತೆ ನನ್ನ ಜೀವನದಲ್ಲಿ ನಡೆದ ಎಲ್ಲ ಪಯಣದ ಬಗ್ಗೆ ನನಗೆ ಹೆಮ್ಮೆ ಇದೆ. ದಯವಿಟ್ಟು ಅದನ್ನು ಕೆಳಮಟ್ಟದಲ್ಲಿ ನೋಡಬೇಡಿ. ಒಬ್ಬ ಮಂತ್ರಿಯಾಗಿ ನಿಮ್ಮ ಮಾತುಗಳು ಬಹಳ ಮುಖ್ಯವೆಂದು ನೀವು ಅರಿತುಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ. ನೀವು ಜವಾಬ್ದಾರಿಯುತವಾಗಿ ವರ್ತಿಸಿ ಮತ್ತು ವ್ಯಕ್ತಿಗಳ ಗೌಪ್ಯತೆಯನ್ನು ಗೌರವಿಸಿ ಎಂದು ನಾನು ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಸಮಂತಾ ಹೇಳಿದ್ದಾರೆ.

Latest Videos

ಮಗಳು ಹುಟ್ಟಿದ ನಾಲ್ಕೇ ದಿನಕ್ಕೆ 'ಪರಿ' ಅಂತ ಹೆಸರಿಡಲು ಕಾರಣ ರಿವೀಲ್ ಮಾಡಿದ ಡಾರ್ಲಿಂಗ್ ಕೃಷ್ಣ!

ಜೂನಿಯರ್ ಎನ್ ಟಿಆರ್ ವಿರೋಧ : ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವೆ ಕೊಂಡ ಸುರೇಖಾ ವಿರುದ್ಧ ನಟ ಜೂನಿಯರ್ ಎನ್‌ಟಿಆರ್ ಕೂಡ ವಾಗ್ದಾಳಿ ನಡೆಸಿದ್ದಾರೆ. ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡ ಜೂನಿಯರ್ ಎನ್ ಟಿಆರ್, ಕೊಂಡ ಸುರೇಖಾ ಅವರೇ ರಾಜಕೀಯಕ್ಕೆ ವೈಯಕ್ತಿಕ ಬದುಕನ್ನು ಎಳೆದು ತರುವುದು ಹೊಸ ಗೀಳು. ಸಾರ್ವಜನಿಕರು ಅದರಲ್ಲೂ ನಿಮ್ಮಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಗೌರವ ಮತ್ತು ಗೌಪ್ಯತೆಯನ್ನು ಕಾಯ್ದುಕೊಳ್ಳಬೇಕು. ನಿರಾಸಕ್ತಿಯಿಂದ ನಿರಾಧಾರ ಹೇಳಿಕೆಗಳನ್ನು ಹೇಳುವುದು, ಅದರಲ್ಲೂ  ಚಿತ್ರರಂಗದ ಕಲಾವಿದರ ಬಗ್ಗೆ ಹೇಳಿಕೆ ನೀಡುವುದು ನಿರಾಸೆ ಮೂಡಿಸುತ್ತಿದೆ. ಆಧಾರರಹಿತ ಆರೋಪಗಳನ್ನು ಮಾಡುವವರ ಬಗ್ಗೆ ಉದ್ಯಮ ಸುಮ್ಮನಿರುವುದಿಲ್ಲ. ನಾವು ಪರಸ್ಪರರ ಗಡಿಗಳನ್ನು ಗೌರವಿಸಬೇಕು ಮತ್ತು ಪ್ರಜಾಸತ್ತಾತ್ಮಕ ಭಾರತದಲ್ಲಿ ಇಂತಹ ಅಜಾಗರೂಕ ನಡವಳಿಕೆಯನ್ನು ಸಾಮಾನ್ಯಗೊಳಿಸಬಾರದು ಎಂದು ಬರೆದಿದ್ದಾರೆ. 

ವಿಚ್ಛೇದನದ ಬಗ್ಗೆ ನಾಗಚೈತನ್ಯ ಪೋಸ್ಟ್ : ನಾಗಚೈತನ್ಯ ಕೂಡ ವಿಚ್ಛೇದನದ ಬಗ್ಗೆ ದೊಡ್ಡ ಪೋಸ್ಟ್ ಹಂಚಿಕೊಂಡಿದ್ದಾರೆ. ವಿಚ್ಛೇದನದ ನಿರ್ಧಾರವು ಯಾವುದೇ ವ್ಯಕ್ತಿಯ ಜೀವನದಲ್ಲಿ ಅತ್ಯಂತ ನೋವಿನ ಮತ್ತು ದುರದೃಷ್ಟಕರ ನಿರ್ಧಾರವಾಗಿದೆ. ಸಾಕಷ್ಟು ಚರ್ಚೆಯ ನಂತರ, ನನ್ನ ಮಾಜಿ ಪತ್ನಿ ಮತ್ತು ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದೆವು. ಈ ನಿರ್ಧಾರವನ್ನು ಶಾಂತಿಯುತವಾಗಿ ತೆಗೆದುಕೊಳ್ಳಲಾಗಿದೆ.  ಈ ವಿಷಯದ ಬಗ್ಗೆ ಇಲ್ಲಿಯವರೆಗೆ ಹಲವಾರು ಆಧಾರರಹಿತ ಮತ್ತು ಸಂಪೂರ್ಣವಾಗಿ ಹಾಸ್ಯಾಸ್ಪದ ಗಾಸಿಪ್‌ಗಳು ಬಂದಿವೆ ಎಂದು ನಾಗಚೈತನ್ಯ ಬರೆದಿದ್ದಾರೆ. 

ಆರೋಪ ಸುಳ್ಳು ಎಂದ ಅಕ್ಕಿನೇನಿ : ಸಚಿವೆ ಕೊಂಡಾ ಸುರೇಖಾ ಅವರ ಹೇಳಿಕೆ ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಹಲವಾರು ಬಿಆರ್‌ಎಸ್ ನಾಯಕರು ಹಾಗೂ ತೆಲುಗು ಚಿತ್ರರಂಗದ ನಟ ನಾಗಾರ್ಜುನ ಅಕ್ಕಿನೇನಿ ಇದನ್ನು ಖಂಡಿಸಿದ್ದಾರೆ. ಸಂಪೂರ್ಣವಾಗಿ ಅಪ್ರಸ್ತುತ ಮತ್ತು ಸುಳ್ಳು ಎಂದಿದ್ದಾರೆ.

ಪರಪ್ಪನ ಜೈಲಲ್ಲಿ ವಿಶೇಷ ಆತಿಥ್ಯ: ದರ್ಶನ್ ವಿರುದ್ಧ ಇನ್ನರೆಡು ಚಾರ್ಜ್‌ಶೀಟ್‌ಗೆ ಸಿದ್ಧತೆ

ಕ್ಷಮೆ ಕೇಳಿದ ಸುರೇಖಾ : ವಿವಾದಗಳು ಹೆಚ್ಚಾಗ್ತಿದ್ದಂತೆ ಸುರೇಖಾ ಕ್ಷಮೆ ಕೇಳಿದ್ದಾರೆ. ನನ್ನ ಕಾಮೆಂಟ್‌ಗಳ ಉದ್ದೇಶ, ನಿಮ್ಮ ಭಾವನೆಗಳಿಗೆ ಧಕ್ಕೆ ತರುವುದು ನನ್ನ ಉದ್ದೇಶವಾಗಿರಲಿಲ್ಲ ಸಮಂತಾ. ನೀವು ಆತ್ಮಸ್ಥೈರ್ಯದಿಂದ ಬೆಳೆದ ರೀತಿ ಮೆಚ್ಚುವಂತದ್ದು ಮಾತ್ರವಲ್ಲ, ಮಾದರಿಯೂ ಹೌದು. ನನ್ನ ಕಾಮೆಂಟ್‌ಗಳಿಂದ ನಿಮಗೆ ಅಥವಾ ನಿಮ್ಮ ಅಭಿಮಾನಿಗಳಿಗೆ ನೋವಾಗಿದ್ದರೆ, ನಾನು ನನ್ನ ಕಾಮೆಂಟ್‌ಗಳನ್ನು ಬೇಷರತ್ತಾಗಿ ಹಿಂಪಡೆಯುತ್ತೇನೆ. ಅನ್ಯಥಾ ಭಾವಿಸಬೇಡಿ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
 

click me!