Pushpa OTT Release: ರಶ್ಮಿಕಾ, ಅಲ್ಲು ಮೀರಿಸಿ ಸಮಂತಾ ಹೈಲೈಟ್

Published : Jan 08, 2022, 02:41 PM ISTUpdated : Jan 08, 2022, 02:47 PM IST
Pushpa OTT Release: ರಶ್ಮಿಕಾ, ಅಲ್ಲು ಮೀರಿಸಿ ಸಮಂತಾ ಹೈಲೈಟ್

ಸಾರಾಂಶ

ಪುಷ್ಪಾ ಒಟಿಟಿ ರಿಲೀಸ್‌: ಸಮಂತಾ ಕ್ಲಿಪ್‌ಗಳೇ ವೈರಲ್ ಪ್ರಮೋಷನ್ ತುಂಬಾ ಸಮಂತಾ ವಿಡಿಯೋ, ಫೋಟೋ ರಶ್ಮಿಕಾರನ್ನು ಸೈಡ್‌ಲೈನ್ ಮಾಡಿದ್ರಾ ನಟಿ

ಸಮಂತಾ ರುಥ್ ಪ್ರಭು ಅವರ ಊ ಅಂಟಾವಾ ಸಾಂಗ್ ಸಖತ್ ಹಿಟ್ ಆಗಿದೆ. ರಶ್ಮಿಕಾರ ಸಾಮಿ ಮತ್ತು ಸಮಂತಾ ಊ ಅಂಟಾವಾ ಮಧ್ಯೆ ಯಾವುದು ಸೂಪರ್ ಎಂಬ ಚರ್ಚೆಯೂ ಇತ್ತು. ಆದರೆ ಸಮಂತಾರ ಐಟಂ ಸಾಂಗ್ ಕಮಾಲ್ ಮಾಡಿದೆ. ಸೌತ್ ನಟಿ ಮೊದಲ ಐಟಂ ಸಾಂಗ್‌ನಲ್ಲೇ ಈ ರೀತಿ ಕ್ಲಿಕ್ ಆಗುತ್ತಾರೆನ್ನುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ. ಬಿಗ್‌ಬಜೆಟ್ ಸಿನಿಮಾ ಪುಷ್ಪಾದಲ್ಲಿ ಒಂದೇ ಒಂದು ಸಾಂಗ್‌ಗೆ ಕಾಣಿಸಿಕೊಂಡರೂ ಈಗ ಹಾಡು ವೈರಲ್ ಆಗಿದ್ದು, ಸಮಂತಾ ಅಭಿಮಾನಿಗಳೂ ಹೆಚ್ಚಾಗಿದ್ದಾರೆ. ರಶ್ಮಿಕಾ ಹಾಗೂ ಅಲ್ಲು ಅರ್ಜುನ್ ನಟಿಸಿರೋ ಸಿನಿಮಾವನ್ನು ಒಟಿಟಿಗಾಗಿ ಪ್ರಚಾರ ಮಾಡುವಾಗ ಬಳಸಿದ್ದು ಮಾತ್ರ ಸಮಂತಾರ ಕ್ಲಿಪ್ ಅನ್ನೋದು ಗಮನಾರ್ಹ.

ಅಲ್ಲು ಅರ್ಜುನ್‌ನ ಪುಷ್ಪ: ದಿ ರೈಸ್‌ನ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಆವೃತ್ತಿಗಳು ಈಗ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಸ್ಟ್ರೀಮ್ ಆಗುತ್ತಿವೆ. ಪುಷ್ಪಾ ಅವರ OTT ಬಿಡುಗಡೆಗೆ ಸಂಬಂಧಿಸಿದ ಆಸಕ್ತಿದಾಯಕ ಬೆಳವಣಿಗೆ ಇಲ್ಲಿದೆ. ಸಾಮಾನ್ಯವಾಗಿ, ಒಂದು ದೊಡ್ಡ-ಟಿಕೆಟ್ ತೆಲುಗು ಚಲನಚಿತ್ರವು OTT ನಲ್ಲಿ ಬಂದಾಗ, ಸಾಮಾಜಿಕ ಮಾಧ್ಯಮವು ಆಯಾ ಚಿತ್ರದ ಎಲಿವೇಶನ್ ಬ್ಲಾಕ್‌ಗಳ ವೀಡಿಯೊ ಕ್ಲಿಪ್ಪಿಂಗ್‌ಗಳಿಂದ ತುಂಬಿರುತ್ತದೆ. ಆದರೆ ಈಗ ಪುಷ್ಪಾ ವಿಷಯದಲ್ಲಿ ಹಾಗಾಗುತ್ತಿಲ್ಲ.

ಸಮಂತಾ ನಂಬಿಕೆಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ ಅಲ್ಲು

ಪುಷ್ಪಾ: ದಿ ರೈಸ್ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಾಗಿದೆ. ಚಿತ್ರದಲ್ಲಿ ಸಮಂತಾ ಅವರ ರೆಡ್-ಹಾಟ್ ಐಟಂ ಸಾಂಗ್‌ನ ವೀಡಿಯೊ ಕ್ಲಿಪ್ಪಿಂಗ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಹೈಲೈಟ್ ಆಗಿವೆ. ಟ್ವಿಟ್ಟರ್ ಟೈಮ್‌ಲೈನ್ ಬಹುತೇಕ ಸಂಪೂರ್ಣವಾಗಿ ಪುಷ್ಪಾದಲ್ಲಿನ 'ಊ ಅಂತವ' ಹಾಡಿನಲ್ಲಿ ಸಮಂತಾ ಅವರ ಬೋಲ್ಡ್ ಡ್ಯಾನ್ಸ್ ಮೂವ್‌ಗಳ ವೀಡಿಯೊಗಳಿಂದ ತುಂಬಿದೆ. ಇದು ಚಿತ್ರದಲ್ಲಿ ಸಮಂತಾ ಅವರ ಐಟಂ ಸಾಂಗ್ ಸುತ್ತಲಿನ ಪ್ರಚಾರದ ಮುಖ್ಯ ಭಾಗ. ಸಮಂತಾ ಆರಂಭದಲ್ಲಿ ಪುಷ್ಪಾದಲ್ಲಿ ಐಟಂ ಸಾಂಗ್ ಮಾಡಲು ಹಿಂದೇಟು ಹಾಕಿದರು. ಸುಕುಮಾರ್ ಅವರ ಸ್ವಲ್ಪ ಮನವೊಲಿಸಿದ ನಂತರ ಅವರು ಒಪ್ಪಿಕೊಂಡರು.

'ಊ ಅಂತಾವಾ ಮಾವಾ.. ಊಊ ಅಂತಾವಾ ಮಾವಾ' (Oo Antava..Oo Oo Antava) ಎಂಬ ಸಾಲಿನ ಲಿರಿಕಲ್ ಹಾಡು ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 2 ಮಿಲಿಯನ್‌ಗೂ ಹೆಚ್ಚು ವೀವ್ಸ್ ಪಡೆದು ಮುನ್ನುಗುತ್ತಿದೆ.

ಈ  ಐಟಂ ಸಾಂಗ್​ಗೆ ಸಿನಿಮಂದಿಯಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಟಾಲಿವುಡ್ ನಟಿ ಸಮಂತಾ (Samantha) ನೀಲಿ ಬಣ್ಣದ ಉಡುಗೆ ತೊಟ್ಟು ಸಖತ್ ಆಗಿ ಸೊಂಟ ಬಳುಕಿಸಿದ್ದಾರೆ. ವಿಶೇಷವಾಗಿ ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಅದ್ಧೂರಿ ಸೆಟ್‌ನಲ್ಲಿ ಈ ವರ್ಷದ ರಾಕಿಂಗ್ ಹಾಡಿಗೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ಸಮಂತಾ ಹೆಜ್ಜೆ ಹಾಕಿದ್ದಾರೆ. ಈ ಪೆಪ್ಪಿ ಹಾಡಿಗೆ ಬಾಲಿವುಡ್‌ನ ಹೆಸರಾಂತ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ (Ganesh Acharya) ನೃತ್ಯ ಸಂಯೋಜಿಸಿದ್ದಾರೆ. ಇಂದ್ರಾವತಿ ಚೌಹಾಣ್ (Indravathi Chauhan) ದನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಚಂದ್ರಬೋಸ್ (Chandrabose) ಸಾಹಿತ್ಯ ಬರೆದಿದ್ದಾರೆ. ದೇವಿ ಶ್ರೀ ಪ್ರಸಾದ್‌ (Devi Sri Prasad) ಸಂಗೀತದ ಕಿಕ್ ಈ ಹಾಡಿಗಿದೆ.

ಮುಖ್ಯವಾಗಿ ಸಮಂತಾ ಅವರು ವಿಚ್ಛೇದನ ಪಡೆದ ಬಳಿಕ ಮತ್ತೆ ಸಿನಿಮಾ ಕೆಲಸಗಳಲ್ಲಿ ಸಕ್ರಿಯರಾಗಿದ್ದಾರೆ. ನಾಗ ಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿರುವ ಅವರು ಸಿನಿಮಾಗಳ ಆಯ್ಕೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದು, 'ಪುಷ್ಪ' ಸಿನಿಮಾದ ಐಟಂ ಸಾಂಗ್​ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮುಸ್ಲಿಂ ಆಗಿ ಮತಾಂತರವಾದ್ರಾ ಬಾಲಿವುಡ್‌ನ ಪ್ರಖ್ಯಾತ ನಟಿಯ ಸಹೋದರಿ? ಬುರ್ಖಾ, ಹಿಜಾಬ್‌ ಧರಿಸಿ ಮಸೀದಿ ಪ್ರವೇಶ!
'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!