ಟ್ವಿಟರ್‌ನಲ್ಲಿ ಗಂಡ ಅಕ್ಕಿನೇನಿ ಹೆಸರಿಗೆ ಕೊಕ್ ನೀಡಿದ ಸಮಂತಾ!

Published : Jul 31, 2021, 11:37 AM ISTUpdated : Jul 31, 2021, 11:50 AM IST
ಟ್ವಿಟರ್‌ನಲ್ಲಿ ಗಂಡ ಅಕ್ಕಿನೇನಿ ಹೆಸರಿಗೆ ಕೊಕ್ ನೀಡಿದ ಸಮಂತಾ!

ಸಾರಾಂಶ

ಸ್ಟಾರ್ ನಟ, ನಟಿಯರು ಏನೇನು ಮಾಡುತ್ತಾರೋ ಅವರಿಗಷ್ಟೇ ತಿಳಿಯಬೇಕು. ಅಷ್ಟು ವಿಚಿತ್ರವಾಗಿರುತ್ತೆ ಅವರ ಕೆಲವು ನಡೆ, ಕೆಲವು ಆಯ್ಕೆಗಳು. ಈಗ ಸಮಂತಾ ಕೂಡಾ ಹೊಸದೇನೋ ಮಾಡಿದ್ದಾರೆ ಏನದು ?

ಬಹುಭಾಷಾ ನಟಿ ಸಮಂತಾ ರುಥ್‌ಪ್ರಭು ಅವರು ಟ್ವಿಟರ್‌ನಲ್ಲಿ ತಮ್ಮ ಹೆಸರನ್ನು ಬದಲಾಯಿಸಿದ್ದಾರೆ. ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ನಟಿ ತಮ್ಮ ಹೆಸರನ್ನು ಬದಲಾಯಿಸಿದ್ದು, ಇದು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ. ಸಮಂತಾ ಅಕ್ಕಿನೇನಿ ಎಂದಿದ್ದ ಹೆಸರೀಗ ಸಮಂತಾ ರುಥ್‌ಪ್ರಭು ಆಗಿದೆ. ಯಾಕಪ್ಪಾ ಈ ಸಡನ್ ಚೇಂಜ್ ? ಸಮಂತಾಗೆ ಏನಾಯ್ತು ? ಯಾವುದರ ಸೂಚನೆ ಇದು ? ಏನಕ್ಕಾಗಿ ಮಾಡಿದ್ದಾರೆ ? ಹೀಗೆ ಬಹಳಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಫ್ಯಾಮಿಲಿ ಮ್ಯಾನ್ 2 ನಟಿಯ ಅಭಿಮಾನಿಗಳು.

ಸಕ್ಸಸ್‌ಫುಲ್ ನಟಿ ಎನ್ನುವುದರ ಹೊರತಾಗಿ ಸಮಂತಾ ಅಕ್ಕಿನೇನಿ ಉದ್ಯಮಿ, ಫಿಟ್ನೆಸ್ ಫ್ರೀಕ್ ಕೂಡಾ ಹೌದು. ಗಾರ್ಡನಿಂಗ್ ಮೂಲಕ ಹಸಿರು ಬೆಳೆಯುವುದಕ್ಕೆ ಉತ್ತೇಜನ ಕೊಡುವ ನಟಿ ಲಾಕ್‌ಡೌನ್ ಸಮಯದಲ್ಲಂತೂ ತಮ್ಮ ಟೆರೇಸ್‌ ಹಸಿರು ಮಾಡಿದ್ದರು. ಕ್ಯಾರೆಟ್ ಸೇರಿ ವಿವಿಧ ತರಕಾರಿಗಳನ್ನೂ ಬೆಳೆದಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಷಿವ್ ಆಗಿರುವ ನಟಿ ಈಗ ಇದ್ದಕ್ಕಿದ್ದಂತೆ ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಹೆಸರನ್ನು ಬದಲಾಯಿಸಿದ್ದಾರೆ. ಇದೀಗ ಎಲ್ಲರ ಸದ್ಯದ ಕುತೂಹಲ.

ಸಮಂತಾ - ರಶ್ಮಿಕಾ ಮಂದಣ್ಣ: ಸೌತ್‌ ನಟಿಯರ ರಿಯಲ್‌ ವಯಸ್ಸೆಷ್ಟು?

ವಿಡಿಯೋ, ಪೋಸ್ಟ್, ಗಾರ್ಡನಿಂಗ್, ಯೋಗ, ಫ್ಯಾಷನ್ ಸೇರಿ ಹಲವು ಬಗೆಯ ಫೋಟೋ ವಿಡಿಯೋ ಶೇರ್ ಮಾಡುವುದರಿಂದಲೇ ನಟಿಯ ಫಾಲೋವರ್ಸ್ ಸಂಖ್ಯೆಯೂ ಹೆಚ್ಚಿದೆ. ಸಮಂತಾ ಮದುವೆಯಾದ ನಂತರ ತಮ್ಮ ಹೆಸರನ್ನು ಇನ್‌ಸ್ಟಗ್ರಾಂ ಹಾಗೂ ಟ್ವಿಟರ್‌ನಲ್ಲಿ ಸಮಂತಾ ಅಕ್ಕಿನೇನಿ ಎಂದು ಬದಲಾಯಿಸಿಕೊಂಡಿದ್ದರು. ಆದರೆ ನಿನ್ನೆ ಹಠಾತ್ತನೆ ಅವರ ಹೆಸರನ್ನು ಯಾವುದೇ ಕಾರಣ ಹೇಳದೆ S ಎಂದು ಬದಲಾಯಿಸಿದ್ದಾರೆ. ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಡಿಸ್ಪ್ಲೇ ನೇಮ್ ಬದಲಾಯಿಸಿದ್ದರೆ ಫೇಸ್‌ಬುಕ್‌ನಲ್ಲಿ ಮಾತ್ರ ಸಮಂತಾ ಅಕ್ಕಿನೇನಿ ಎಂದೇ ಬರೆದಿದೆ. ಇದು ಅಭಿಮಾನಿಗಳ ಕುತೂಹಲ ಹೆಚ್ಚಿರುವುದಕ್ಕೆ ಕಾರಣ.

ಸಮಂತಾ ತಮ್ಮ ಮುಂದಿನ ಪ್ರಾಜೆಕ್ಟ್ ಕಾತು ವಾಕುಲ ರಂಡು ಕಾದಲ್ ಸಿನಿಮಾಗೆ ಶೂಟಿಂಗ್ ಶುರು ಮಾಡಲಿದ್ದಾರೆ. ಇದನ್ನು ನಯನತಾರಾ ಬಾಯ್‌ಫ್ರೆಂಡ್ ಕಾಲಿವುಡ್‌ನ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ವಿಜಯ್ ಸೇತುಪತಿ ಹಾಗೂ ನಯನತಾರಾ ಕೂಡಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗುಣಶೇಖರನ್ ಜೊತೆ ಶಾಕುಂತಲಂ ಹಾಗೂ ಅಶ್ವಿನ್ ನಿರ್ದೇಶನದ ಗೇಮ್ ಓವರ್ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸಿರೀಸ್‌ಗೆ ಸಮಂತಾ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಫ್ಯಾಮಿಲಿ ಮ್ಯಾನ್ 2 ವೆಬ್ ಸಿರೀಸ್ ಮೂಲಕ ಬಾಲಿವುಡ್‌ಗೂ ಧುಮುಕಿದ ಸೌತ್ ತಾರೆ ಇದರಲ್ಲಿ ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ. ಸಮಂತಾ ತಮ್ಮ ಪಾತ್ರಕ್ಕಾಗಿ ಭಾರೀ ಮೆಚ್ಚುಗೆಯನ್ನು ಪಡೆದಿದ್ದು, ಸದ್ಯ ಹಿಂದಿಯಲ್ಲಿ ಬೇರೆ ಪ್ರಾಜೆಕ್ಟ್‌ಗಳನ್ನು ಎನೌನ್ಸ್ ಮಾಡಿಲ್ಲ.

ಸೌತ್‌ನ ಬ್ಯೂಟಿಫುಲ್ ನಟಿ ಯೇ ಮಾಯ ಚೇಸಾವೆ ಸಿನಿಮಾದಲ್ಲಿ 2010ರಲ್ಲಿ ನಾಗ ಚೈತನ್ಯ ಜೊತೆ ನಟಿಸಿ ಮತ್ತೊಂದಷ್ಟು ಸಮಯ ಡೇಟ್ ಮಾಡಿದ್ದರು. ನಂತರ ಈ ಜೋಡಿ 2017ರಲ್ಲಿ ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಟ್ಯಾಲೆಂಟೆಡ್ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು ತಮ್ಮ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಲೇ ಇರುತ್ತಾರೆ.

ನಟಿ ಲಾಕ್‌ಡೌನ್ ಸಮಯದಲ್ಲಿ ಸಾಕಿ ವಲ್ರ್ಡ್ ಎಂಬ ಫ್ಯಾಷನ್ ಉಡುಗೆಯ ಬ್ರ್ಯಾಂಡ್ ಲಾಂಚ್ ಮಾಡಿದ್ದು, ಇದರ ಪ್ರಮೋಷನ್ ಕೂಡಾ ಮಾಡುತ್ತಿರುತ್ತಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!