ಶಿಲ್ಪಾ ಅತ್ತಿದ್ದು ಮಾನಹಾನಿ ಸುದ್ದಿಯಲ್ಲ ಎಂದ ಕೋರ್ಟ್..!

By Suvarna NewsFirst Published Jul 30, 2021, 6:52 PM IST
Highlights
  • ಮಾನನಷ್ಟ ಮೊಕದ್ದಮೆ ಹೂಡಿದ ಶಿಲ್ಪಾ ಶೆಟ್ಟಿಗೆ ಮುಖಭಂಗ
  • ಪೊಲೀಸರು ಹೇಳಿದ್ದನ್ನು ರಿಪೋರ್ಟ್ ಮಾಡೋದು ತಪ್ಪಲ್ಲ ಎಂದ ಕೋರ್ಟ್

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅರೆಸ್ಟ್ ಆಗಿದ್ದು, ಕಳೆದೊಂದು ವಾರದಿಂದ ಈ ವಿಚಾರ ಸುದ್ದಿಯಾಗುತ್ತಿದೆ. ಈ ನಡುವೆ ಬಾಲಿವುಡ್ ಜೋಡಿಯ ಹಳೆದ ಸಂದರ್ಶನ ತುಣುಕುಗಳು, ವಿಡಿಯೋ ಕ್ಲಿಪ್‌ಗಳೂ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಲೇ ಇವೆ. ಇದೀಗ ಪತಿಯ ಅರೆಸ್ಟ್ ಆದ ಬೆನ್ನಲ್ಲೇ ಮಾಧ್ಯಮದ ಕಣ್ಣು ನಟಿಯತ್ತ ನೆಟ್ಟಿದೆ. ಶಿಲ್ಪಾ ಶೆಟ್ಟಿ ಅವರೂ ಕೇಸ್‌ ಮೂಲಕ ಕಷ್ಟಕ್ಕೆ ಸಿಲುಕಿದ್ದು, ಪೋರ್ನ್‌ ವಿಡಿಯೋ ದಂಧೆಯಂತ ಕೇಸ್‌ನಲ್ಲಿ ನಟಿಯ ಹೆಸರೂ ತಳುಕು ಹಾಕುತ್ತಿದೆ.

ರಾಜ್‌ ಕುಂದ್ರಾ ಬಂಧನದ ನಂತರ ಶಿಲ್ಪಾ ಶೆಟ್ಟಿ ಅವರ ಮುಂಬೈನಲ್ಲಿರುವ ಬಂಗಲೆಯಲ್ಲಿ ಪೊಲೀಸರು ರೈಡ್ ಮಾಡಿದ್ದು, ಅಲ್ಲಿ ರಾಜ್ ಕುಂದ್ರಾ ಎದುರೇ ವಿಚಾರಣೆಯೂ ನಡೆದಿದೆ. ಮುಂಬೈ ಪೊಲೀಸರು ಶಿಲ್ಪಾ ಶೆಟ್ಟಿ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದು ಈ ಘಟನೆಗೆ ಸಂಬಂಧಿಸಿ ನಟಿಗೆ ಇನ್ನೂ ಕ್ಲೀನ್ ಚಿಟ್ ಕೊಟ್ಟಿಲ್ಲ. ಈ ಮಧ್ಯೆ ನಟಿಗೆ ಪ್ರಕರಣದಲ್ಲಿ ಸಹಭಾಗಿತ್ವ ಇದೆಯೇ, ಈ ದಂಧೆಯಲ್ಲಿ ನಟಿಯ ಪಾತ್ರದ ಕುರಿತು ತೀವ್ರ ಚರ್ಚೆಗಳಾಗುತ್ತಿವೆ.

ಬಸ್ ಕಂಡಕ್ಟರ್ ಮಗ ಬಾಲಿವುಡ್ ನಟಿಯ ಪತಿಯಾಗಿದ್ದು ಹೇಗೆ ?

ಇತ್ತೀಚೆಗೆ ನಟಿಯ ವಿಚಾರಣೆ ನಂತರ ಈ ಬಗ್ಗೆ ಪ್ರತಿಕ್ರಿಯಿಸಿದ ಮುಂಬೈ ಪೊಲೀಸರು ನಟಿ ಶಿಲ್ಪಾ ಶೆಟ್ಟಿ ವಿಚಾರಣೆ ಸಂದರ್ಭ ಅತ್ತಿದ್ದಾರೆ ಎಂದು ಹೇಳಿದ್ದರು. ಅದೇ ರೀತಿ ಇದನ್ನೆಲ್ಲಾ ಯಾಕಾಗಿ ಮಾಡಿದಿರಿ ಎಂದು ಪತಿಯ ಮೇಲೆಯೂ ರೇಗಾಡಿದ್ದರು ಎಂಬ ಸುದ್ದಿ ವೈರಲ್ ಆಗಿತ್ತು. ಹಾಗೆಯೇ ಕುಟುಂಬದ ಮಾರ್ಯದೆ ಹೋಯಿತು. ನನಗೆ ಬರುತ್ತಿದ್ದ ಜಾಹೀರಾತು, ಸಿನಿಮಾ ಆಫರ್‌ಗಳೂ ಈಗ ಕ್ಯಾನ್ಸಲ್ ಆಗಿವೆ ಎಂದು ನಟಿ ಸಿಬ್ಬಂದಿಯೊಬ್ಬರಲ್ಲಿ ಹೇಳಿದ್ದಾರೆ ಎಂಬ ಸುದ್ದಿಯೂ ಬಹಿರಂಗವಾಗಿದೆ.

ಈ ಎಲ್ಲ ಬೆಳವಣಿಗೆ ಬೆನ್ನಲ್ಲೇ ನಟಿ ಶಿಲ್ಪಾ ಶೆಟ್ಟಿ ಈ ಬಗ್ಗೆ ಮುಂಬೈ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ತನ್ನ ಕುರಿತು ಸುಳ್ಳು ಸುದ್ದಿ ಬಿತ್ತರಿಸಿದ 29 ಪತ್ರಕತ್ರರ ವಿರುದ್ಧ ಹಾಗೂ ಹಲವು ಮಾಧ್ಯಮ ಸಂಸ್ಥೆಗಳ ವಿರುದ್ಧ ನಟಿ ಮೊಕದ್ದಮೆ ದಾಖಲಿಸಿ ಈ ಘಟನೆಯ ಸಂಬಂಧಿಸಿ ತಮ್ಮ ಮಾನನಸ್ಟವಾಗಿದ್ದು, ಘನತೆಗೆ ಧಕ್ಕೆ ಬಂದಿದೆ ಎಂದೂ ಆರೋಪಿಸಿದ್ದಾರೆ. ಹಾಗಾಗಿ ಈ ಎಲ್ಲ ವಿಚಾರಗಳನ್ನು ಪರಿಶೀಲಿಸಿ ತನಗೆ 25 ಕೋಟಿ ರೂಪಾಯಿ ಮಾನನಷ್ಟ ಪರಿಹಾರ ನೀಡಬೇಕೆಂದು ನಟಿ ಬೇಡಿಕೆ ಇಟ್ಟಿದ್ದರು.

ಪತ್ರಕರ್ತರ ವಿರುದ್ಧ ಮಾನನಷ್ಟ ಮೊಕದ್ದಮೆ, 25 ಕೋಟಿ ಪರಿಹಾರ ಕೇಳಿದ ಶಿಲ್ಪಾ ಶೆಟ್ಟಿ

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಪೊಲೀಸರು ಹೇಳಿದ ವಿಚಾರಗಳನ್ನು ಸುದ್ದಿಯಾಗಿ ಬಿತ್ತರಿಸುವುದು ಮಾನನಷ್ಟ ಸುದ್ದಿಯಾಗಿ ಪರಿಗಣಿಸಲ್ಪಡುವುದಿಲ್ಲ ಎಂದು ಹೇಳಿದೆ. ಹಾಗೆಯೇ ರಾಜ್ ಕುಂದ್ರಾ ಕೇಸ್‌ನಲ್ಲಿ ಶಿಲ್ಪಾ ಶೆಟ್ಟಿ ಸುದ್ದಿಗಳನ್ನು ತೆಗೆದುಹಾಕುವಂತೆ ಕೋರ್ಟ್ ಮಧ್ಯಂತರ ಆದೇಶವನ್ನು ನೀಡಿದೆ. ಕಂಟೆಂಟ್ ತೆಗೆಯುವವರಲ್ಲದೆ ಸುದ್ದಿ ಬಿತ್ತರಿಸಿದವರು ಅಫಿಡವಿಟ್ ಸಲ್ಲಿಸಬೇಕು ಎಂದು ಆದೇಶ ನೀಡಿದೆ.

"

ಅಪರಾಧ ಶಾಖೆ ಅಥವಾ ಪೊಲೀಸ್ ಮೂಲಗಳು ಹೇಳಿದ್ದನ್ನು ವರದಿ ಮಾಡುವುದು ಎಂದಿಗೂ ಮಾನಹಾನಿಕರವಲ್ಲ. ಅದೇ ಸಮಯಕ್ಕೆ ಇಬ್ಬರು ಅಪ್ರಾಪ್ತ ಮಕ್ಕಳ ತಾಯಿಯಾಗಿರುವ ಶಿಲ್ಪಾ ಶೆಟ್ಟಿ ಸಾರ್ವಜನಿಕ ವ್ಯಕ್ತಿಯಾಗಿದ್ದರಿಂದ ಅವರು ತಮ್ಮ ಖಾಸಗಿತನವನ್ನು ತ್ಯಾಗ ಮಾಡಿದ್ದಾರೆ ಎಂದು ಅರ್ಥವಲ್ಲ ಎಂದು ಕೋರ್ಟ್ ಹೇಳಿದೆ.

ಪತಿ ರಾಜ್ ಜೊತೆ ವಾಗ್ವಾದ: ಕಣ್ಣೀರಾದ ಶಿಲ್ಪಾ ಶೆಟ್ಟಿ

ನಟಿ ತನ್ನ ಇಬ್ಬರು ಮಕ್ಕಳೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದು ರಾಜ್ ಕುಂದ್ರಾ ತಾಯಿ ಹಾಗೂ ತನ್ನ ತಾಯಿಯೂ ಒಟ್ಟಿಗೇ ಇದ್ದಾರೆ. ಆದರೆ ರಾಜ್ ಬಂಧನದ ನಂತರ ನಟಿ ಒಬ್ಬಂಟಿಯಾಗಿದ್ದಾರೆ. ಜು.27ರಂದು ಬಿಡುಗಡೆಯಾಗಬೇಕಾಗಿತ್ತು. ಅವರ ನ್ಯಾಯಾಂಗ ಬಂಧನವನ್ನು 14 ದಿನ ವಿಸ್ತರಿಸಲಾಗಿದೆ. ಬಾಲಿವುಡ್‌ನಲ್ಲಿ ಅಮೀರ್ ಖಾನ್-ಕಿರಣ್ ರಾವ್ ವಿಚ್ಛೇದನೆ ಸುದ್ದಿ ಮುಗಿಯುತ್ತಲೇ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ಸುದ್ದಿಯಾಗಿದ್ದಾರೆ.

click me!