ಇಬ್ಬರು ಪತ್ನಿಯರ ಜೊತೆ ಮಗ ಸೋಹೈಲ್​ ಬರ್ತ್​ಡೇಗೆ ಬಂದ ಸಲ್ಮಾನ್​ ಖಾನ್​ ಅಪ್ಪ! ಸಲ್ಲು ಭಾಯಿ ಗರಂ ಆಗಿದ್ದೇಕೆ?

By Suvarna News  |  First Published Dec 20, 2023, 4:35 PM IST

 ನಟ ಸೋಹೈಲ್ ಖಾನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಸಲ್ಮಾನ್​ ಖಾನ್​ ತಂದೆ ಸಲೀಂ ಖಾನ್​ ಇಬ್ಬರು ಪತ್ನಿಯರ ಜೊತೆ ಬಂದಿರುವ ವಿಡಿಯೋ ವೈರಲ್​ ಆಗಿದೆ. 
 


ಸಲ್ಮಾನ್​ ಖಾನ್​ ಸಹೋದರ ನಟ ಸೋಹೈಲ್ ಖಾನ್ ಅವರಿಗೆ ಇಂದು 53 ನೇ ಹುಟ್ಟುಹಬ್ಬದ ಸಂಭ್ರಮ. ಸೊಹೈಲ್ ಖಾನ್ ಅವರಿಗೆ ಇಂದು 53 ವರ್ಷ. ಈ ದಿನವನ್ನು ಇಡೀ ಕುಟುಂಬ ಅದ್ಧೂರಿಯಾಗಿ ಆಚರಿಸಿದೆ. ಅವರ ಹುಟ್ಟುಹಬ್ಬದಂದು, ಅವರ ಸಹೋದರ ಮತ್ತು ಮೆಗಾಸ್ಟಾರ್ ಸಲ್ಮಾನ್ ಖಾನ್ ಸೇರಿದಂತೆ ಇಡೀ ಖಾನ್ ಕುಟುಂಬ ಉಪಸ್ಥಿತರಿದ್ದರು.  ಹಲವಾರು ಗಣ್ಯರು ಬಂದು ನಟನಿಗೆ ವಿಷ್​ ಮಾಡಿದ್ದಾರೆ. ಆದರೆ ಎಲ್ಲರ ಗಮನ ಸೆಳೆದಿದ್ದು, ಸಲ್ಮಾನ್​ ಖಾನ್​ ಅವರ ತಂದೆ ಸಲೀಂ ಖಾನ್​ ಅವರು ತಮ್ಮ ಇಬ್ಬರು ಪತ್ನಿಯರ ಜೊತೆ ಒಂದೇ ಕಾರಿನಲ್ಲಿ ಹುಟ್ಟುಹಬ್ಬದ ಸ್ಥಳಕ್ಕೆ ಬಂದಿರುವುದು. ಇದರ ವಿಡಿಯೋ ವೈರಲ್​ ಆಗಿದೆ. ಆರಂಭದಲ್ಲಿ  ಸಲ್ಮಾನ್ ಖಾನ್ ತಮ್ಮ ಐಷಾರಾಮಿ ಕಾರಿನಿಂದ  ಸರಳವಾದ ಕಪ್ಪು ಟಿ-ಶರ್ಟ್ ಮತ್ತು ಬರ್ಗಂಡಿ ಬಣ್ಣದ ಪ್ಯಾಂಟ್‌ನಲ್ಲಿ ಬಂದಿರುವುದನ್ನು ನೋಡಬಹುದು. ನಂತರ ಅವರ ತಂದೆ ತಮ್ಮ ಇಬ್ಬರು ಪತ್ನಿಯರ ಜೊತೆ ಬಂದಿದ್ದಾರೆ.  

ಇದೇ ವೇಳೆ ಪಾಪರಾಜಿಗಳು ಫೋಟೋಗಾಗಿ ಸಲ್ಮಾನ್​ ಖಾನ್​ ಅವರ ಪಾಲಕರನ್ನು ಮುತ್ತಿಗೆ ಹಾಕಿದಾಗ ಸಲ್ಮಾನ್​ ಖಾನ್​ ಸಿಕ್ಕಾಪಟ್ಟೆ ಗರಂ ಆಗಿ ಅವರಿಗೆ ಬೈದಿರುವ ವಿಡಿಯೋ ಕೂಡ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಅಂದಹಾಗೆ ಹಾಗೆ, ಸಲ್ಮಾನ್​ ಖಾನ್​ ಅವರ ತಂದೆ ಸಲೀಂ ಖಾನ್​ ಅವರಿಗೆ ಈಗ 88 ವರ್ಷ ವಯಸ್ಸು. ಅವರ ಮೊದಲ ಪತ್ನಿ ಸುಶೀಲಾ ಅಲಿಯಾಸ್​ ಸಲ್ಮಾ ಖಾನ್​ ಅವರಿಗೆ 81 ವರ್ಷ ವಯಸ್ಸು ಹಾಗೂ ಎರಡನೆಯ ಪತ್ನಿ ನಟಿ ಹೆಲನ್​ ಅವರಿಗೆ 85 ವರ್ಷ ವಯಸ್ಸು. ಎಲ್ಲರೂ ವಯೋಸಹಜವಾಗಿ ನಡೆಯಲು ಕಷ್ಟವಾಗಿದ್ದರಿಂದ ಸಹಾಯಕರು ಮೂವರನ್ನೂ ಕರೆದುಕೊಂಡು ಬರುವಾಗ ಅವರನ್ನು ಫೋಟೋಗಾಗಿ ಮುತ್ತಿಗೆ ಹಾಕಿದ್ದರಿಂದ ಸಲ್ಮಾನ್​ ಖಾನ್​ ಕೋಪಗೊಂಡ ವಿಡಿಯೋ ವೈರಲ್​ ಆಗುತ್ತಿದೆ.

 
 
 
 
 
 
 
 
 
 
 
 
 
 
 

Tap to resize

Latest Videos

A post shared by Viral Bhayani (@viralbhayani)

ಸಲ್ಮಾನ್​ ತಾಯಿ 81ನೇ ಹುಟ್ಟುಹಬ್ಬ: ಗಿಣಿಯಂತೆ ಸಾಕುವೆನೆಂದು ಸುಶೀಲಾಳನ್ನು ಮದ್ವೆಯಾಗಿದ್ದ ಸಲೀಂ- ಮುಂದೇನಾಯ್ತು?

ಅಷ್ಟಕ್ಕೂ ಸಲೀಂ ಖಾನ್​ ಅವರು ಎರಡು ಮದ್ವೆಯಾಗಿರುವ ವಿಷಯವೇ ಬಲು ರೋಚಕ. ಒಂದೇ ಅಪಾರ್ಟ್​ಮೆಂಟ್​ನಲ್ಲಿ ವಾಸಿಸುತ್ತಿದ್ದ ಸುಶೀಲಾ ಮತ್ತು ಸಲ್ಮಾನ್​ ಖಾನ್​ ತಂದೆ ಸಲೀಂ ಅವರ ನಡುವೆ ಪ್ರೇಮ ಉಂಟಾಯಿತು.  ಕದ್ದು ಮುಚ್ಚಿ ಭೇಟಿ ಆಗುತ್ತಿದ್ದರು. ಮದುವೆ ಮಾಡಿಕೊಳ್ಳಬೇಕೆಂದು ಮನಸ್ಸು ಮಾಡಿದ್ದಾಗ, ಇದಕ್ಕೆ ಧರ್ಮ ಅಡ್ಡಿ ಬಂದಿತ್ತು. ಮುಸ್ಲಿಮರನ್ನು ತಮ್ಮ ಮಗಳಿಗೆ ಕೊಡಲು ಸಾಧ್ಯವೇ ಇಲ್ಲ ಎಂದು  ಸುಶೀಲಾ ಪಾಲಕರು ಖಡಾಖಂಡಿತವಾಗಿ ಹೇಳಿದ್ದರು. ಈ ಬಗ್ಗೆ ಒಮ್ಮೆ ಖುದ್ದು ಸಲೀಂ ಅವರು ಹೇಳಿಕೊಂಡಿದ್ದರು.  'ನಾನು ಸುಶೀಲಾ ಮನೆಗೆ ಹೋದಾಗ ಎಲ್ಲರೂ ನನ್ನ ಜೂದಲ್ಲಿರುವ ಹೊಸ ಪ್ರಾಣಿ ರೀತಿ ನೋಡುತ್ತಿದ್ದರು. ಅವರು ಮದುವೆಗೆ ಒಪ್ಪೇ ಇರಲಿಲ್ಲ. ನೀನು ಒಳ್ಳೆಯವನು ಇರಬಹುದು. ಆದರೆ ಬೇರೆ ಧರ್ಮದವರಿಗೆ ಮಗಳನ್ನು ಕೊಡಲ್ಲ ಎಂದರು. ಆದರೆ ತಮ್ಮಿಬ್ಬರ ಮಧ್ಯೆ ಧರ್ಮ ಅಡ್ಡಿ ಬರುವುದಿಲ್ಲ,ಮಗಳನ್ನು ಗಿಣಿಯಂತೆ ಸಾಕುವೆ ಎಂದು ಭರವಸೆ ನೀಡಿದ್ದ ಸಲೀಂ ಜೊತೆ 1964 ನವೆಂಬರ್ 18ರಂದು  ಸುಶೀಲಾ ಮದುವೆ ನಡೆದಿತ್ತು. ಮದುವೆ ನಂತರ ಸಲ್ಮಾ ಎಂದು ಹೆಸರು ಬದಲಾಯಿಸಲಾಯಿತು.

ನಾಲ್ಕು ಮಕ್ಕಳಾದ ಬಳಿಕ ಸಲೀಂ ಅವರ ಕಣ್ಣು ನಟಿ ಹೆಲೆನ್​ ಮೇಲೆ ಬಿದ್ದಿತ್ತು. ಸುಶೀಲಾ ಅವರ ಅಪ್ಪ-ಅಮ್ಮನಿಗೆ ನೀಡಿದ್ದ ಭರವಸೆ ಮರೆತು ಹೋಗಿತ್ತು. ಹೆಲನ್​ ಜೊತೆ ಸಲೀಂ ಖಾನ್​ ಡೇಟಿಂಗ್ ಪ್ರಾರಂಭಿಸಿದರು. ಈ ಬಗ್ಗೆ ಹೆಲೆನ್​ ಒಮ್ಮೆ ಹೇಳಿಕೊಂಡಿದ್ದರು. ತಮ್ಮಿಂದಾಗಿ ಸಲೀಂ ಅವರ ಮೊದಲ ಪತ್ನಿಯ ಬಾಳು ನರಕವಾಯಿತು ಎಂದೂ ಹೇಳಿದ್ದರು. ಆದರೆ ತಾವಿಬ್ಬರೂ ಬಿಡಲಾರದಷ್ಟು ಒಂದಾಗಿದ್ದರಿಂದ  ಇಬ್ಬರೂ 1980 ರಲ್ಲಿ ವಿವಾಹವಾದರು. ಆಗ ಸಲೀಂಗೆ 45 ವರ್ಷ ವಯಸ್ಸಾಗಿದ್ದರೆ ಹೆಲೆನ್​ ಅವರಿಗೆ 42 ವರ್ಷ ವಯಸ್ಸಾಗಿತ್ತು. ಎರಡನೆಯ ಪತ್ನಿ ಬರುತ್ತಲೇ ಸಲೀಂ ಅವರ ವರಸೆ ಬದಲಾಗಿದ್ದರಿಂದ ಸುಶೀಲಾ ಅವರ ಬಾಳು ಕಣ್ಣೀರೇ ಆಗಿಹೋಯ್ತು. 1990 ರಲ್ಲಿ ಫಿಲ್ಮ್‌ಫೇರ್‌ಗೆ (Filmfare) ನೀಡಿದ ಸಂದರ್ಶನದಲ್ಲಿ, ಸಲ್ಮಾನ್ ಖಾನ್ ಕೂಡ ತಮ್ಮ ಅಮ್ಮನ ನೋವಿನ ಬದುಕಿನ ಕುರಿತು ಮಾತನಾಡಿದ್ದಾರೆ.  ತಂದೆ ಸಲೀಂ ಖಾನ್​ ಹೆಲೆನ್​ ಅವರನ್ನು ಮದುವೆಯಾಗುವುದಾಗಿ ಹೇಳಿದಾಗ ತಮ್ಮ ತಾಯಿ ಹೇಗೆ  ಅತೃಪ್ತರಾಗಿದ್ದರು, ಆ ನಂತರ ಅವರ ಜೀವನ ಏನಾಯಿತು ಎಂಬುದನ್ನು ತಿಳಿಸಿದ್ದರು. 

ಅಳಿಯನಿಗೆ 500 ಕೋಟಿ ರೂ. ವರದಕ್ಷಿಣೆ ಕೊಟ್ರಾ 'ದೃಶ್ಯ' ನಟ? ನಿರ್ದೇಶಕನ ದುಬಾರಿ ಮದ್ವೆಯದ್ದೇ ಚರ್ಚೆ!

click me!