ಸುಶಾಂತ್​ ಸಿಂಗ್​ ಸಾವಿನ ಮರಣೋತ್ತರ ಪರೀಕ್ಷಾ ವರದಿ ಏಮ್ಸ್​ನಲ್ಲಿ ಅದಲು- ಬದಲು: ನಟಿ ಸೋಮಿ ಸ್ಫೋಟಕ ಹೇಳಿಕೆ!

By Suchethana D  |  First Published Nov 5, 2024, 6:58 PM IST

ಸುಶಾಂತ್​ ಸಿಂಗ್​ ರಜಪೂತ್​ ಅವರ ಸಾವು ಇನ್ನೂ ನಿಗೂಢವಾಗಿ ಇರುವ ನಡುವೆಯೇ, ಸಾವಿನ ಮರಣೋತ್ತರ ಪರೀಕ್ಷಾ ವರದಿ ಏಮ್ಸ್​ನಲ್ಲಿ ಅದಲು- ಬದಲಾಗಿದೆ ಎಂದಿದ್ದಾರೆ ನಟಿ ಸೋಮಿ ಅಲಿ 
 


2020 ಜೂನ್ 14ರಂದು ನಿಧನರಾದ  ಬಾಲಿವುಡ್  ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರು ಎಲ್ಲರನ್ನೂ ಅಗಲಿ ನಾಲ್ಕುವರೆ ವರ್ಷಗಳೇ ಕಳೆದಿವೆ. ಇವರದ್ದು ಸಹಜ ಸಾವಲ್ಲ, ಕೊಲೆ ಎಂದು ಹೇಳುತ್ತಿರುವವರೇ ಬಹುತೇಕ ಮಂದಿ. ಆದರೆ ಅವರ ಸಾವಿನ ರಹಸ್ಯ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ.    ಸುಶಾಂತ್ ಸಿಂಗ್  ಸಾವಿನ  ಪ್ರಕರಣ ಸದ್ಯ ಸಿಬಿಐ ಅಂಗಳದಲ್ಲಿದೆ. ಆದರೆ ಇನ್ನೂ ಕಾರಣ ಬಹಿರಂಗವಾಗಿಲ್ಲ. ತನಿಖೆಯ ಪ್ರಗತಿಯ ಬಗ್ಗೆಯೂ ಸಿಬಿಐ ತುಟಿ ಬಿಚ್ಚುತ್ತಿಲ್ಲ.  ಆದರೆ ಸುಶಾಂತ್ ಸಾವು ತೀವ್ರ ಚರ್ಚೆ ಹುಟ್ಟುಹಾಕುತ್ತಲೇ ಇದೆ. ಈ ಸಾವು ಕೆಲವು ಬಾಲಿವುಡ್ ಸ್ಟಾರ್ಸ್​ಗೆ ಸಂಕಷ್ಟ ತಂದಿತ್ತು  ಎನ್ನುವಷ್ಟರಲ್ಲಿ ಪ್ರಕರಣ ತನಿಖೆಯ ಪ್ರಗತಿ ನಿಧಾವಾಯಿತು ಎಂದು ಆರೋಪಿಸಲಾಗುತ್ತಿದೆ. ನಟನ  ಸಾವಿನ ಸುತ್ತ ಅನುಮಾನದ ಹುತ್ತ ಬೆಳೆಯುತ್ತಲೇ ಸಾಗಿದೆ.  ಸುಶಾಂತ್ ಸಿಂಗ್ ರಜಪೂತ್ ಅವರದ್ದು ಕೊಲೆ ಎಂದು ಅವರ ಮರಣೋತ್ತರ ಪರೀಕ್ಷೆ ಮಾಡಿದ್ದ ಕೂಪರ್​ ಆಸ್ಪತ್ರೆ ಸಿಬ್ಬಂದಿ ಸ್ಫೋಟಕ ಹೇಳಿಕೆ ನೀಡಿದ್ದರು. ಈ ಆಯಾಮದಲ್ಲೂ ಸಹ ಈಗಾಗಲೇ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ. ಆದರೆ ಇದುವರೆಗೆ ಸತ್ಯಾಂಶ ಹೊರ ಬಂದಿಲ್ಲ. 

ಆದರೆ ಇದರ ನಡುವೆಯೇ, ಇದೀಗ ಸಲ್ಮಾನ್​ ಖಾನ್​ ಮಾಜಿ ಲವರ್​ ಸೋಮಿ ಅಲಿ, ಇದು ಆತ್ಮಹತ್ಯೆಯಲ್ಲ, ಕೊಲೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸುಶಾಂತ್​ ಸಿಂಗ್​ ಅವರ ಪೋಸ್ಟ್​ ಮಾರ್ಟಮ್​ ರಿಪೋರ್ಟ್​ ಅನ್ನು ಆಸ್ಪತ್ರೆಯಲ್ಲಿ ಬದಲು ಮಾಡಲಾಗಿದೆ. ಇದನ್ನು ಆತ್ಮಹತ್ಯೆ ಎನ್ನುವಂತೆ ಬದಲಾಯಿಸಲಾಗಿದೆ. ಅಸಲಿಗೆ ಸುಶಾಂತ್​ದು ಕೊಲೆ ಎಂದಿದ್ದಾರೆ.  ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ ರೆಡ್ಡಿಟ್​ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ ಅನ್ನು ಅವರು ಶುರು ಮಾಡಿದ್ದರು. ಸಾಮಾನ್ಯವಾಗಿ ಚಿತ್ರ ತಾರೆಯರು ತಮ್ಮ ಅಭಿಮಾನಿಗಳ ಜೊತೆ ಮಾತನಾಡಲು ಇದೊಂದು ಟ್ರೆಂಡ್​ ಆಗಿದೆ. ಇದರಲ್ಲಿ ಸೋಮಿ ಅವರಿಗೆ ಸುಶಾಂತ್ ಸಿಂಗ್ ಪ್ರಶ್ನೆ ಕೇಳಿದಾಗ, ಈ ವಿಷಯವನ್ನು ಹೇಳಿದ್ದಾರೆ.

Tap to resize

Latest Videos

undefined

ಸುಶಾಂತ್ ಸಿಂಗ್​ ನಿಗೂಢವಾಗಿ ಸತ್ತ 'ಭೂತ ಬಂಗ್ಲೆ'ಯಲ್ಲೇ ನೆಲೆಸಿರೋ ನಟಿ ಅದಾ ಶರ್ಮಾ ಅನುಭವ ಕೇಳಿ...
 
ಸುಶಾಂತ್​ ಸಾವಿನ ಬಗ್ಗೆ ಏನು ಹೇಳುತ್ತೀರಾ ಎಂದು ಪ್ರಶ್ನಿಸಿದಾಗ, ಸೋಮಿ “ಅವರನ್ನು ಕೊಲೆ ಮಾಡಲಾಗಿದೆ. ಆದರೆ  ಇದನ್ನು ಆತ್ಮಹತ್ಯೆ ಎಂಬಂತೆ ಬಿಂಬಿಸಲು ಎಲ್ಲಾ ರೀತಿಯ ಪ್ರಯತ್ನಗಳೂ ನಡೆದಿವೆ. ನಾನು ಹೇಳಿದ್ದರ ಬಗ್ಗೆ ಡೌಟ್​ ಇದ್ದರೆ ಏಮ್ಸ್  ಡಾ. ಸುಧೀರ್ ಗುಪ್ತಾ ಹಾಗೂ ಅವರ ಪೋಸ್ಟ್ ಮಾರ್ಟಂ ರಿಪೋರ್ಟ್​ ಬದಲಿಸಿದವರನ್ನು ಈ ಬಗ್ಗೆ ಕೇಳಿ ಎಂದು ನೇರಾನೇರವಾಗಿಯೇ ಹೇಳಿದ್ದಾರೆ. ಇದರಿಂದಾಗಿ ಮತ್ತೆ ಜಸ್ಟೀಸ್​ ಫಾರ್​ ಸುಶಾಂತ್​ ಸಿಂಗ್​ ಎನ್ನುವ ಹ್ಯಾಷ್​ಟ್ಯಾಗ್​ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.     

 ಸುಶಾಂತ್​ ಸಿಂಗ್​ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯೇ ಅಲ್ಲ ಎಂದು ಇದಾಗಲೇ ಹಲವರು ನುಡಿದಿದ್ದಾರೆ. ಇವರ ಸಾವಿನ ನಂತರ ಚಿತ್ರರಂಗದಲ್ಲಿನ ಡ್ರಗ್ಸ್​ ಮಾಫಿಯಾದ (Drugs Mafia) ಬಗ್ಗೆ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿ ಹಲವಾರು ತಾರೆಗಳ ನೈಜ ಮುಖಗಳು ಬೆಳಕಿಗೆ ಬಂದರೂ, ಸುಶಾಂತ್​ ಅವರ ಸಾವಿನ ನೈಜ ಚಿತ್ರಣ ಮಾತ್ರ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಇವರದ್ದು ಆತ್ಮಹತ್ಯೆ ಎಂದು ಬಿಂಬಿತವಾಗಿದ್ದರೂ, ಇದು ಕೊಲೆ ಎಂಬ ಕುರಿತು ಸುಶಾಂತ್ ಸಿಂಗ್ ಅವರ ಮರಣೋತ್ತರ ಪರೀಕ್ಷೆ ಮಾಡಿದ್ದ ಕೂಪರ್​ ಆಸ್ಪತ್ರೆ  ಸಿಬ್ಬಂದಿ ಸ್ಫೋಟಕ ಹೇಳಿಕೆ ನೀಡಿದ್ದರು. ಸುಶಾಂತ್ ಅವರದ್ದು ಆತ್ಮಹತ್ಯೆಯಲ್ಲ, ಇದು ಕೊಲೆ ಎಂದು  ಕೂಪರ್ ಆಸ್ಪತ್ರೆಯ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ ರೂಪಕುಮಾರ್ ಶಾ ಆರೋಪಿಸಿದ್ದರು. ಸುಶಾಂತ್ ಶವ ಪತ್ತೆಯಾದಾಗ ಅವರ ದೇಹದ ಮೇಲೆ ಗಾಯಗಳಿದ್ದವು ಮತ್ತು ಅವರ ದೇಹವನ್ನು ಥಳಿಸಲಾಗಿತ್ತು ಎಂದಿದ್ದ ರೂಪಕುಮಾರ್ ಶಾ, ಸುಶಾಂತ್ ಸಿಂಗ್ ಮೃತದೇಹದ ಮರಣೋತ್ತರ ಪರೀಕ್ಷೆ (Post mortum) ನಡೆಯುವಾಗ ನಾನು ಅಲ್ಲಿಯೇ ಇದ್ದೆ. ಇದು ಆತ್ಮಹತ್ಯೆಯಲ್ಲ ಕೊಲೆ (murder) ಎಂದು ವೈದ್ಯರಿಗೆ ಹೇಳಿದ್ದೆ. ಆದರೆ ಯಾರೂ ನನ್ನತ್ತ ಗಮನ ಹರಿಸಲಿಲ್ಲ ಎಂಬ ಹೇಳಿಕೆ ನೀಡಿದ್ದು ಇಡೀ ಘಟನೆ ತಿರುವು ಪಡೆದುಕೊಂಡಿತ್ತು. 

ಘಟಾನುಘಟಿ ಪೊಲೀಸರೂ ಕೈಚೆಲ್ಲಿ ಕೂತಿದ್ದ ಕೊಲೆ ಪ್ರಕರಣ ಬೇಧಿಸಿದ ನೊಣಗಳು! ವಿಚಿತ್ರ ಸ್ಟೋರಿ ಇಲ್ಲಿದೆ...

click me!