Salman Khan: ಹೊಟ್ಟೆಗಿಲ್ಲದೇ ತೋಟಕ್ಕೆ ನುಗ್ತಿದ್ದೆ, ಛಡಿ ಏಟು ಬೀಳ್ತಿತ್ತು... ಎಂದು ನೆನಪಿಸಿಕೊಂಡ ನಟ

By Suchethana Naik  |  First Published Apr 17, 2023, 7:39 PM IST

ಇಂದು ಯಶಸ್ವಿ ನಟ ಎನಿಸಿಕೊಂಡಿರುವ ಸಲ್ಮಾನ್​ ಖಾನ್​ ಬಾಲ್ಯದಲ್ಲಿ ಬಡತನದಿಂದಾಗಿ ಅನುಭವಿಸಿದ ನೋವುಗಳನ್ನು ಹಂಚಿಕೊಂಡಿದ್ದಾರೆ. ಅವರು ಹೇಳಿದ್ದೇನು? 
 


ಬಾಲಿವುಡ್ ನಟ, ಮೋಸ್ಟ್​ ಎಲಿಜಿಬಲ್​ ಬ್ಯಾಚಲರ್​ ಎಂದೇ ಫೇಮಸ್​ ಆಗಿರೋ ಸಲ್ಮಾನ್ ಖಾನ್ (Salman Khan) ಪ್ರಸ್ತುತ ಫುಲ್​ ಜೋಶ್​ನಲ್ಲಿದ್ದಾರೆ.  ಅವರ ಮುಂಬರುವ ಫ್ಯಾಮಿಲಿ ಎಂಟರ್​ಟೇನ್​ಮೆಂಟ್​  ಕಿಸಿ ಕಾ ಭಾಯ್ ಕಿಸಿ ಕಿ ಜಾನ್  ಪ್ರಚಾರ ಮಾಡುವಲ್ಲಿ ನಿರತರಾಗಿದ್ದಾರೆ. ಪೂಜಾ ಹೆಗ್ಡೆ, ಶೆಹನಾಜ್ ಗಿಲ್, ಪಾಲಕ್ ತಿವಾರಿ, ವಿನಾಲಿ ಭಟ್ನಾಗರ್, ಸಿದ್ಧಾರ್ಥ್ ನಿಗಮ್, ರಾಘವ್ ಜುಯಲ್ ಮತ್ತು ಜಸ್ಸಿ ಗಿಲ್ ಅವರೊಂದಿಗೆ ಚಲನಚಿತ್ರವನ್ನು ಪ್ರಚಾರ ಮಾಡಲು ಅವರು ಇತ್ತೀಚೆಗೆ ಕಪಿಲ್ ಶರ್ಮಾ ಶೋನ ಸೆಟ್‌ಗಳನ್ನು ಅಲಂಕರಿಸಿದ್ದರು. ಅಲ್ಲಿ ಅವರು ತಮ್ಮ ಬಾಲ್ಯದ ನೆನಪುಗಳನ್ನು ನೆನಪಿಸಿಕೊಂಡಿದ್ದಾರೆ. ಕೆಲವೊಂದು ನೋವಿನ ದಿನಗಳನ್ನು ಅವರು ಮೆಲುಕು ಹಾಕಿದ್ದಾರೆ. ಮನೆಯಲ್ಲಿ ಹೇಗೆ ಕಿತ್ತು ತಿನ್ನುವ ಬಡತನವಿತ್ತು ಎಂಬುದನ್ನು ಅವರು ನೆನಪಿಸಿಕೊಂಡಿದ್ದಾರೆ, ಹಾಗೂ ಆಹಾರಕ್ಕಾಗಿ ಹೇಗೆಲ್ಲಾ ಹೊಡೆಸಿಕೊಂಡಿದ್ದೆ ಎಂಬ ಬಗ್ಗೆ ಆ ಕಹಿ ದಿನಗಳನ್ನು ಮೆಲುಕು ಹಾಕಿ ಭಾವುಕರಾಗಿದ್ದಾರೆ!

ಹೌದು. ಸಲ್ಮಾನ್ ಮತ್ತು ಪೂಜಾ ಅವರೊಂದಿಗಿನ ಮೋಜಿನ ತಮಾಷೆಯ ನಡುವೆಯೇ, ಕಪಿಲ್ ಶರ್ಮಾ ಅವರ ಕೇಳಿದ ಪ್ರಶ್ನೆಗೆ ನೋವಿನ ದಿನಗಳನ್ನು ನಟ ಸಲ್ಮಾನ್​ ಖಾನ್​ ನೆನಪಿಸಿಕೊಂಡಿದ್ದಾರೆ.  ಸಲ್ಮಾನ್ ಹಿರಿಯ ಚಿತ್ರಕಥೆಗಾರ ಸಲೀಂ ಖಾನ್ ಮತ್ತು ಸುಶೀಲಾ ಚರಕ್ ಅಲಿಯಾಸ್​ ಸಲ್ಮಾ ಖಾನ್ (Salmna Khan) ಅವರ ಪುತ್ರ. ಅವರಿಗೆ ನಾಲ್ಕು ಒಡಹುಟ್ಟಿದವರಿದ್ದಾರೆ. ಅರ್ಬಾಜ್ ಖಾನ್, ಸೊಹೈಲ್ ಖಾನ್, ಅಲ್ವಿರಾ ಖಾನ್ ಅಗ್ನಿಹೋತ್ರಿ ಮತ್ತು ಅರ್ಪಿತಾ ಖಾನ್. ಖಾನ್​ ಅವರ ತಂದೆ ಸಲೀಂ ಖಾನ್​ (Saleem Khan) ಅವರಿಗೆ ಇಬ್ಬರು ಪತ್ನಿಯರು. ಮೊದಲನೆಯವರ ಹೆಸರು ಸುಶೀಲಾ ಚರಕ್​ ಆದರೆ, ಎರಡನೆಯವರು ಆ ದಿನಗಳ ಖ್ಯಾತ ನಟಿ ಹೆಲೆನ್​. ಒಂದು ಕಡೆ ಮನೆಯಲ್ಲಿ ಬಡತನವಿದ್ದರೂ ನಾಲ್ಕು ಮಕ್ಕಳು, ಹಾಗೂ ಇನ್ನೊಂದು ಕಡೆ ಮತ್ತೊಬ್ಬರ ಜೊತೆ ಮದುವೆ...ಇವೆಲ್ಲವುಗಳಿಂದ ಮನೆಯ ವಾತಾವರಣ ಕಂಗೆಟ್ಟು ಹೋಗಿಟ್ಟು. ಇದರಿಂದಾಗಿ ಮನೆಯಲ್ಲಿ ಆಹಾರ ಕೂಡ ಸರಿಯಾಗಿ ಸಿಗುತ್ತಿರಲಿಲ್ಲ ಎನ್ನಲಾಗಿದೆ.

Tap to resize

Latest Videos

ಆಕೆ I Love You ಎಂದ್ರೆ ಲೈಫ್ ಬರ್ಬಾದ್​​​.... ಸಲ್ಮಾನ್​ ಹೇಳಿಕೆಗೆ ಮಹಿಳೆಯರು ಕಿಡಿಕಿಡಿ
 
ಈ ಕುರಿತು ಸಲ್ಮಾನ್​ ಖಾನ್​ ಈಗ ನೆನಪಿಸಿಕೊಂಡಿದ್ದಾರೆ.  ಆ ಸಮಯದಲ್ಲಿ ಮನೆಯಲ್ಲಿ ಸಾಕಷ್ಟು ಆಹಾರ ಅಡುಗೆ ಇರುತ್ತಿರಲಿಲ್ಲ. ಅಷ್ಟು ಮಂದಿಗೆ ಹೊಟ್ಟೆ ತುಂಬಿಸಿಕೊಳ್ಳುವುದು ಕಷ್ಟವಾಗಿತ್ತು. ಆದ್ದರಿಂದ ಮರಗಳಲ್ಲಿ ಬೆಳೆದ  ಹಣ್ಣುಗಳನ್ನು ಕಿತ್ತುಕೊಳ್ಳಲು ಬೇರೆಯವರ ಮನೆಯ ತೋಟಕ್ಕೆ (Garden) ನುಗ್ಗುತ್ತಿದ್ದೆ. ಅಲ್ಲಿಯ ಮರಗಳಿಂದ ಹಣ್ಣು ಕದಿಯುತ್ತಿದ್ದೆ ಎಂದಿರುವ ಸಲ್ಮಾನ್​ ಖಾನ್​, ತಾವು ಹೊಡೆಸಿಕೊಳ್ಳದೇ ಇರುವ ತೋಟದ ಮಾಲೀಕರೇ ಇಲ್ಲ. ಎಲ್ಲರೂ ನನ್ನನ್ನು ಚೆನ್ನಾಗಿ ಥಳಿಸಿದವರೇ ಎಂದಿದ್ದಾರೆ.  

ಇನ್ನು ಸಲ್ಮಾನ್​ ಅವರ ಕೆಲಸದ ವಿಷಯಕ್ಕೆ ಬರುವುದಾದರೆ,  ಸಲ್ಮಾನ್ ಖಾನ್ ಅವರ ಪೈಪ್‌ಲೈನ್‌ನಲ್ಲಿ ಸ್ಪೈ-ಆಕ್ಷನ್ ಥ್ರಿಲ್ಲರ್ ಟೈಗರ್ 3 ಅನ್ನು ಹೊಂದಿದ್ದಾರೆ. ಈ ಚಲನಚಿತ್ರವು ವೈಆರ್‌ಎಫ್‌ನ ಸ್ಪೈ ಯೂನಿವರ್ಸ್‌ನ ಒಂದು ಭಾಗವಾಗಿದೆ, ಇದರಲ್ಲಿ ಶಾರುಖ್ ಖಾನ್‌ನ ಪಠಾನ್ ಮತ್ತು ವಾರ್ ಚಲನಚಿತ್ರದಿಂದ ಹೃತಿಕ್ ರೋಷನ್‌ನ ಕಬೀರ್ ಸೇರಿವೆ. ಎಸ್‌ಆರ್‌ಕೆ ಮತ್ತು ಸಲ್ಮಾನ್ 'ಟೈಗರ್ ವರ್ಸಸ್ ಪಠಾನ್' ಎಂಬ ಎರಡು ನಾಯಕರ ಯೋಜನೆಗೆ ಸಹಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ನಾಲ್ಕು ಮಕ್ಕಳಾದ ಮೇಲೆ ಸಲ್ಮಾನ್​ ಖಾನ್​ ಅಪ್ಪನ ಕಣ್ಣು ನಟಿ ಹೆಲೆನ್​ ಮೇಲೆ ಬಿದ್ದಾಗ...

ಇದೇ ಷೋನಲ್ಲಿ ಹುಡುಗಿಯರ ಲವ್​ (Love) ವಿಷಯವಾಗಿಯೂ ಸಲ್ಮಾನ್​ ಖಾನ್​ ಮಾತನಾಡಿದ್ದಾರೆ. ಪರೋಕ್ಷವಾಗಿ ಮಾಜಿ ಗರ್ಲ್​ಫ್ರೆಂಡ್​ ನಟಿ ಐಶ್ವರ್ಯ ರೈಗೆ ಟಾಂಗ್​ ನೀಡಿರುವ ಸಲ್ಲು ಭಾಯ್​, ಮೊದಲು ಹುಡುಗಿಯರು 'ಜಾನ್' ಎಂದು ಕರೆಯಲು ಪ್ರಾರಂಭಿಸುತ್ತಾರೆ ಮತ್ತು ನಂತರ ನೀನೇ ನನ್ನ ಜೀವ ಎಂದೂ ಹೇಳುತ್ತಾರೆ.  ನಾನು ನಿಮ್ಮೊಂದಿಗೆ ಇರುವುದು ತುಂಬಾ ಸಂತೋಷವಾಗಿದೆ, ನಾನು ತುಂಬಾ ಅದೃಷ್ಟಶಾಲಿ  ಎಂದೆಲ್ಲಾ ಹೇಳುತ್ತಾರೆ.  ಸ್ವಲ್ಪ ಸಮಯ ಕಳೆದ ಮೇಲೆ ಐ ಲವ್​ ಯೂ (I Love You) ಎನ್ನುತ್ತಾರೆ. ಹುಡುಗಿ ಐ ಲವ್ ಯೂ ಅಂದಾಗ ನಿಮ್ಮ ಲೈಫ್ ನಾಶ ಆದಂತೆಯೇ  ಎಂದಿದ್ದಾರೆ!  ನಿನ್ನ ಜೀವನ ಮೊದಲು ನಾಶ ಮಾಡುತ್ತೇನೆ. ನಂತರ ಬೇರೊಬ್ಬನನ್ನು ಕಟ್ಟಿಕೊಂಡು ಅವರ ಜೀವನ ನಾಶಮಾಡುತ್ತೇನೆ ಎಂದು ಹುಡುಗಿಯರು ಹೇಳುತ್ತಾರೆ, ಹುಷಾರ್​ ಎಂದಿದ್ದಾರೆ.
 

click me!