
Salman Khan Viral Fitness Video Climbing Tree : ಸಲ್ಮಾನ್ ಖಾನ್ ಅವರ ಸಿಕಂದರ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಅಷ್ಟೇನು ಗಳಿಕೆ ಮಾಡಲು ಸಾಧ್ಯವಾಗಿಲ್ಲ. ಆದರೆ, ಚಿತ್ರಮಂದಿರಗಳಲ್ಲಿ ಚಿತ್ರ ಹಿಟ್ ಆಗಿದೆ. ಮುರುಗದಾಸ್ ನಿರ್ದೇಶನದ ಈ ಚಿತ್ರದಲ್ಲಿ ದಬಾಂಗ್ ಖಾನ್ ಆಕ್ಷನ್-ಪ್ಯಾಕ್ಡ್ ಅವತಾರದಲ್ಲಿ ಕಾಣಿಸಿಕೊಂಡರು. ಅವರಿಗೆ ಈಗ 59 ವರ್ಷ, ಆದರೆ ಅವರ ಫಿಟ್ನೆಸ್ 40 ವರ್ಷ ವಯಸ್ಸಿನವರಂತೆಯೇ ಇದೆ.
ಸೂಪರ್‌ಸ್ಟಾರ್ ತಮ್ಮ ವೃತ್ತಿ ಜೀವನದಲ್ಲಿ ಫಿಟ್‌ನೆಸ್ ಬಗ್ಗೆ ಸಖತ್ ಕಾಳಜಿ ವಹಿಸುತ್ತಾರೆ. ಇತ್ತೀಚೆಗೆ ಅವರು ಮರವೊಂದನ್ನು ಏರಿ ನೇರಳೆ ಹಣ್ಣಿನಂತಹ ಹಣ್ಣುಗಳನ್ನು ಕಿತ್ತು ತಿನ್ನುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವರ್ಷ 60ನೇ ವಸಂತಕ್ಕೆ ಕಾಲಿಡುತ್ತಿರುವ ಸಲ್ಮಾನ್ ಯಾವ ಸ್ಪೀಡ್‌ನಲ್ಲಿ ಮರ ಹತ್ತಿ ಇಳಿದರೋ ಅದು ಅವರ ಫಿಟ್‌ನೆಸ್ ತೋರಿಸುತ್ತದೆ.
ಇದನ್ನೂ ಓದಿ: ‘ನನ್ನ ಸಿನಿಮಾಗೂ ಪ್ರಮೋಟ್ ಮಾಡಿ..’ ಸಿಕಂದರ್ ರಿಕ್ವೆಸ್ಟ್: ಸೋಲೊಪ್ಪಿಕೊಂಡ ಸಲ್ಮಾನ್.. ಸಹಾಯ ಕೇಳಿದ್ದು ಯಾರ ಬಳಿ?
ಫಾರ್ಮ್ ಹೌಸ್‌ನ ವಿಡಿಯೋ ಹಂಚಿಕೊಂಡ ಸಲ್ಮಾನ್ ಖಾನ್
ಏಪ್ರಿಲ್ 11, 2025 ರಂದು ಸಲ್ಮಾನ್ ಖಾನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕಪ್ಪು ಸ್ಲೀವ್‌ಲೆಸ್ ಟಿ-ಶರ್ಟ್ ಮತ್ತು ನೀಲಿ ಶಾರ್ಟ್ಸ್ ಧರಿಸಿ ಸಲ್ಮಾನ್ ಸ್ಯಾಂಡಲ್ ಹಾಕಿಕೊಂಡು ನೇರಳೆ ಮರವನ್ನು ಹತ್ತುತ್ತಿರುವುದು ಕಾಣಿಸುತ್ತದೆ. ಅವರು ಮಂಗನಂತೆ ಮರದ ಕೊಂಬೆಗಳನ್ನು ವೇಗವಾಗಿ ಹತ್ತುತ್ತಿದ್ದಾರೆ. ನೇರಳೆ ಹಣ್ಣುಗಳನ್ನು ಕೆಳಗೆ ಬೀಳಿಸಲು ಮರದ ಕೊಂಬೆಗಳನ್ನು ಅಲ್ಲಾಡಿಸುತ್ತಿದ್ದಾರೆ. ಅವರ ಸಹಾಯಕರೊಬ್ಬರು ಮರದಿಂದ ಕೆಳಗೆ ಬೀಳುತ್ತಿರುವ ಹಣ್ಣುಗಳನ್ನು ಬಟ್ಟೆಯಲ್ಲಿ ಹಿಡಿಯುತ್ತಿದ್ದಾರೆ. ಪೋಸ್ಟ್‌ನ ಕ್ಯಾಪ್ಶನ್‌ನಲ್ಲಿ “ಬೇರಿ ಗುಡ್ ಫಾರ್ ಯು” ಎಂದು ಬರೆಯಲಾಗಿದೆ. ಸಲ್ಮಾನ್ ತಮ್ಮ ಇತ್ತೀಚಿನ ಸಿಕಂದರ್ ಚಿತ್ರದ 'ಹಮ್ ಆಪ್ಕೆ ಬಿನಾ' ಹಾಡನ್ನು ಹಿನ್ನೆಲೆಯಲ್ಲಿ ಬಳಸಿದ್ದಾರೆ.
ಸಲ್ಮಾನ್ ಖಾನ್ ಮೇಲೆ ಫಿದಾ ಆದ ಫ್ಯಾನ್ಸ್
ಸಲ್ಮಾನ್ ಖಾನ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ನೆಟ್ಟಿಗರು ಇದಕ್ಕೆ ಭರ್ಜರಿ ಕಾಮೆಂಟ್ ಕೂಡ ಮಾಡಿದ್ದಾರೆ. ಒಬ್ಬ ವ್ಯಕ್ತಿ, “60ಕ್ಕೆ ಹತ್ತಿರವಾಗುತ್ತಿರುವ ಸಲ್ಮಾನ್ ಸಖತ್ ಫಿಟ್ ಆಗಿದ್ದಾರೆ, ಅವರ ಚರ್ಮ ಹೇಗೆ ಹೊಳೆಯುತ್ತಿದೆ” ಎಂದು ಹೇಳಿದ್ದಾರೆ. ಮತ್ತೊಬ್ಬರು, “ನೀವು ತುಂಬಾ ಹ್ಯಾಂಡ್ಸಮ್ ಆಗಿ ಕಾಣುತ್ತಿದ್ದೀರಿ” ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರ, “59 ವರ್ಷದ ಈ ವ್ಯಕ್ತಿ ಫಿಟ್ನೆಸ್ ಐಕಾನ್ ಎಂದು ಯಾರು ಹೇಳಿದರು, ಇವರು ಇನ್ನೂ ಟೈಗರ್” ಎಂದು ಹೇಳಿದ್ದಾರೆ. ಮತ್ತೊಂದು ಕಾಮೆಂಟ್‌ನಲ್ಲಿ, “ವಯಸ್ಸು ಕೇವಲ ಒಂದು ಸಂಖ್ಯೆ ಅಷ್ಟೇ” ಎಂದು ಬರೆಯಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.