ದೇವತೆಯ ಪಾತ್ರದಿಂದಾಗಿ ನಟ ದುನಿಯಾ ವಿಜಯ್ಗೆ ಮೊದಲ ತಮಿಳಿನ ಚಿತ್ರದಲ್ಲಿಯೇ ಭಾರಿ ವಿಘ್ನ ಎದುರಾಗಿದ್ದು, ಶೂಟಿಂಗ್ ಸ್ಥಗಿತವಾಗಿದೆ. ಆಗಿದ್ದೇನು?
ಭೀಮಾ ಚಿತ್ರದ ಬಳಿಕ ತಮ್ಮ ಕ್ರೇಜ್ ಇನ್ನಷ್ಟು ಹೆಚ್ಚಿಸಿಕೊಂಡಿರುವ ದುನಿಯಾ ವಿಜಯ್ ಅವರಿಗೆ ಈಗ ತಮಿಳಿನಲ್ಲಿಯೂ ಅವಕಾಶ ಸಿಕ್ಕಿದೆ. ಆದರೆ, ಇವರಿಗೆ ಚೊಚ್ಚಲ ಚಿತ್ರದಲ್ಲಿಯೇ ವಿಘ್ನ ಎದುರಾಗಿದೆ. ದೇವತೆ ಪಾತ್ರ ದುನಿಯಾ ವಿಜಯ್ ಅವರಿಗೆ ಸಂಕಷ್ಟ ತಂದಿದ್ದು, ಮೊದಲ ಚಿತ್ರದಲ್ಲಿಯೇ ಕಿರಿಕ್ನಿಂದಾಗಿ ಶೂಟಿಂಗ್ ಕ್ಯಾನ್ಸಲ್ ಆಗಿದೆ. ಇದುದ ತಮಿಳಿನ "ಮೂಕುತಿ ಅಮ್ಮನ್ 2" ಸಿನಿಮಾದ ಕಥೆ. ಇದಾಗಲೇ ಈ ಸಿನಿಮಾದ ಮೊದಲ ಭಾಗ ತಮಿಳು ಮತ್ತು ತೆಲಗುವಿನಲ್ಲಿ ಸಕತ್ ಹಿಟ್ ಆಗಿದೆ. ಇದೀಗ ಎರಡನೆಯ ಭಾಗ ಮಾಡುತ್ತಿದ್ದು, ಇದರಲ್ಲಿ ದುನಿಯಾ ವಿಜಯ್ ಅವರು ವಿಲನ್ ಆಗಿ ಮಿಂಚುತ್ತಿದ್ದಾರೆ. ಆದರೆ, ಇದೀಗ ದೇವತೆ ಪಾತ್ರದಲ್ಲಿ ಮಿಂಚಬೇಕಿದ್ದ ನಟಿ ನಯನತಾರಾ ಅವರಿಂದಾಗಿ ಶೂಟಿಂಗ್ ತಾತ್ಕಾಲಿಕ ಸ್ಥಗಿತಗೊಂಡಿದೆ.
ಈ ಚಿತ್ರದಲ್ಲಿ, ನಯನತಾರಾ ದೇವತೆಯಾಗಿ ನಟಿಸುತ್ತಿದ್ದಾರೆ. ಇವರು ದೇವತೆಯಾಗಿದ್ದ ಮೊದಲ ಭಾಗ ಬ್ಲಾಕ್ ಬಸ್ಟರ್ ಆಗಿತ್ತು. ಕೊನೆಗೆ ಅದನ್ನು ತೆಲುಗುವಿನಲ್ಲಿ 'ಅಮ್ಮೋರು ತಲ್ಲಿ' ಹೆಸರಿನಲ್ಲಿ ಡಬ್ ಮಾಡಲಾಗಿತ್ತು. ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಇದು ಬಿಡುಗಡೆಯಾಗಿ ಸಕ್ಸಸ್ ಕಂಡಿತ್ತು. ಇದೀಗ 2ನೇ ಭಾಗ ಸೆಟ್ಟೇರಿದೆ. ವೇಲ್ಸ್ ಫಿಲ್ಮ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಐಸರಿ ಕೆ. ಗಣೇಶ್ ನಿರ್ಮಿಸಿದ ಈ ಚಿತ್ರವನ್ನು ಆರ್ ಜೆ ಬಾಲಾಜಿ ಮತ್ತು ಎನ್.ಜೆ. ಸರವಣನ್ ನಿರ್ದೇಶಿಸಿದ್ದಾರೆ. ಆದರೆ, ಇದೀಗ ಆರಂಭದಲ್ಲಿಯೇ ವಿಘ್ನ ಎದುರಾಗಿದೆ.
ಮಗನ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ವಿಜಯ ರಾಘವೇಂದ್ರ: ಸ್ಪಂದನಾ ಫೋಟೋಗೆ ಅಭಿಮಾನಿಗಳ ಕಣ್ಣೀರು!
ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ನಟಿ ನಯನತಾರಾ ಮತ್ತು ಸಹಾಯಕ ನಿರ್ದೇಶಕರ ನಡುವೆ ಕಿರಿಕ್ ಆಗಿದೆ ಎನ್ನಲಾಗಿದೆ. ಅದು ನಟಿಯ ವೇಷಭೂಷಣದ ವಿಷಯದಲ್ಲಿ ಕಿರಿಕ್ ಆಗಿದೆಯಂತೆ. ಇದರಿಂದಾಗಿ ನಯನತಾರಾ ಚಿತ್ರತಂಡದ ವಿರುದ್ಧ ಗರಂ ಆಗಿದ್ದು, ಶೂಟಿಂಗ್ ಬಿಟ್ಟು ಹೋಗಿದ್ದಾರೆ ಎನ್ನಲಾಗುತ್ತಿದೆ. ಅವರನ್ನು ವಾಪಸ್ ಕರೆಸಿಕೊಳ್ಳಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ವರದಿಯಾಗಿದ್ದರೂ, ನಯನತಾರಾ ಜಾಗಕ್ಕೆ ನಟಿ ತಮನ್ನಾ ಅವರನ್ನು ಕರೆತರಲಾಗುತ್ತಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಸದ್ಯ ಈ ಸಮಸ್ಯೆಯನ್ನು ಪರಿಹರಿಸಲು ಚಿತ್ರ ನಿರ್ಮಾಪಕ ಇಶಾರಿ ಕೆ.ಗಣೇಶ್ ಪ್ರಯತ್ನಿಸುತ್ತಿದ್ದಾರೆ. ಇವೆಲ್ಲವುಗಳ ನಡುವೆ ದುನಿಯಾ ವಿಜಯ್ಗೆ ಆರಂಭದ ಚಿತ್ರದಲ್ಲಿಯೇ ವಿಘ್ನ ಉಂಟಾಗಿದೆ.
ಅಂದಹಾಗೆ ಈ ಚಿತ್ರದಲ್ಲಿ, ವಿಲನ್ ಆಗಿ ದುನಿಯಾ ವಿಜಯ್ ಮಿಂಚಿದ್ದರೆ, ರೆಜಿನಾ ಕ್ಯಾಸಂಡ್ರ, ಯೋಗಿ ಬಾಬು, ಊರ್ವಶಿ, ಅಭಿನಯ ಸೇರಿದಂತೆ ಹಲವರು ಇದ್ದಾರೆ. ಇದರ ಶೂಟಿಂಗ್ ಚೆನ್ನೈನಲ್ಲಿ ನಡೆಯುತ್ತಿದೆ. ಮುಂದಿನ ಶೂಟಿಂಗ್ ಪೊಲ್ಲಾಚಿಯಲ್ಲಿ ಶೆಡ್ಯೂಲ್ ಮಾಡಲಾಗಿದೆ. ನಟಿ ನಯನತಾರಾ, ಎಲ್ಲರ ಮುಂದೆ ಸಹಾಯಕ ನಿರ್ದೇಶಕರ ಮೇಲೆ ಕೂಗಾಡಿದರು ಎಂಬ ಮಾತೂ ಕೇಳಿಬರುತ್ತಿದೆ. ಆದರೆ ಮುಂದೆ ಏನಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆಯಷ್ಟೇ. ಅಂದಹಾಗೆ ಈ ಚಿತ್ರಕ್ಕಾಗಿ ನಯನತಾರಾ ಮಾಂಸಾಹಾರವನ್ನೂ ತ್ಯಜಿಸಿದ್ದರಂತೆ. ಅವರದ್ದು ದೇವಿಯ ಪಾತ್ರವಾಗಿರುವ ಕಾರಣ ಹೀಗೆ ಮಾಡಿದ್ದರು ಎನ್ನಲಾಗುತ್ತಿದೆ. ಆದರೆ ಈಗ ಕಿರಿಕ್ ಆಗಿದೆ.
ಮದುವೆಯ ಬಿಗ್ ಅಪ್ಡೇಟ್ ಕೊಟ್ಟ ಬಿಗ್ಬಾಸ್ ಐಶ್ವರ್ಯಾ ಸಿಂಧೋಗಿ: ಹುಡುಗನ ಡಿಟೇಲ್ಸ್ ಹೇಳಿದ್ದು ಹೀಗೆ...