ಸಿಕ್ಸ್ ಪ್ಯಾಕ್ ರಿಯಲ್ ಅಲ್ಲ ವಿಎಕ್ಸ್‌ಎಫ್ ಎಂದವರಿಗೆ ವೇದಿಕೆ ಮೇಲೆಯೇ ಶರ್ಟ್ ಬಿಚ್ಚಿ ತೋರಿಸಿದ್ದಾರೆ ನಟ ಸಲ್ಮಾನ್ ಖಾನ್.
ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಸದ್ಯ ಕಿಸಿ ಕ ಭಾಯ್ ಕಿಸಿ ಕಿ ಜಾನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಪ್ರಮೋಷನ್ ನಲ್ಲಿ ಬ್ಯುಸಿಯಾಗಿರುವ ಸಲ್ಮಾನ್ ಅನೇಕ ಕಡೆ ತೆರಳಿ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ದೊಡ್ಡ ಅಭಿಮಾನಿ ಬಳಗ ಹೊಂದಿರುವ ಸಲ್ಮಾನ್ ಖಾನ್ ಪ್ರಚಾರಕ್ಕೆ ಹೋದಲೆಲ್ಲ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ. ಕಿಸಿ ಕ ಭಾಯ್ ಕಿಸಿ ಕಿ ಜಾನ್ ಚಿತ್ರ ಇದೇ ಏಪ್ರಿಲ್ 21ರಂದು ತೆರೆಗೆ ಬರಲಿದೆ. ಅದಕ್ಕೂ ಮೊದಲು ಸಿನಿಮಾ ತಂಡ ಟ್ರೇಲರ್ ರಿಲೀಸ್ ಮಾಡಿದೆ. ಇದರಲ್ಲಿ ಸಲ್ಮಾನ್ ಸಿಕ್ಸ್ ಪ್ಯಾಕ್ನಲ್ಲಿ ಮಿಂಚಿದ್ದಾರೆ. ಕೆಲವರು ಸಲ್ಲು ಸಿಕ್ಸ್ ಪ್ಯಾಕ್ ನೋಡಿ ವಿಎಫ್ಎಕ್ಸ್ ಎಂದು ಕರೆದಿದ್ದಾರೆ. ಇದು ರಿಯಲ್ ಅಲ್ಲ ಎಂದವರಿಗೆ ಸಲ್ಲು ವೇದಿಕೆ ಮೇಲೆ ಉತ್ತರ ನೀಡಿದ್ದಾರೆ.
ಸಲ್ಮಾನ್ ಖಾನ್ ವರ್ಕೌಟ್ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ವಯಸ್ಸು 57 ದಾಟಿದರೂ ಫಿಟ್ ಅಂಡ್ ಫೈನ್ ಆಗಿದ್ದಾರೆ. ಪ್ರತಿ ದಿನ ಅವರು ಜಿಮ್ನಲ್ಲಿ ಹೆಚ್ಚಾಗಿ ಸಮಯ ಕಳೆಯುತ್ತಾರೆ. ಈ ಕಾರಣಕ್ಕೆ ಅವರು ಬಾಡಿಯನ್ನು ಉತ್ತಮವಾಗಿ ಕಾಯ್ದುಕೊಂಡಿದ್ದಾರೆ. ಆದರೆ, ಕೆಲವರಿಗೆ ಸಲ್ಮಾನ್ ಖಾನ್ ಸಿಕ್ಸ್ ಪ್ಯಾಕ್ ಬಗ್ಗೆ ಅನುಮಾನ ಮೂಡಿದೆ. ವೇದಿಕೆ ಮೇಲೆ ಈ ಅನುಮಾನವನ್ನು ಸಲ್ಮಾನ್ ಖಾನ್ ಬಗೆಹರಿಸಿದ್ದಾರೆ.
ಸಲ್ಮಾನ್ ಖಾನ್ ಬೆತ್ತಲೆ ಫೋಟೋ ವೈರಲ್; ನಮ್ಗೂ ಬದುಕೋಕೆ ಬಿಡಪ್ಪ ಎಂದ ಹುಡುಗರು
ಏಪ್ರಿಲ್ 10 ರಂದು ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮವನ್ನು ಮುಂಬೈನಲ್ಲಿ ಅದ್ದೂರಿಯಾಗಿ ನಡೆಸಲಾಯಿತು. ಸಲ್ಮಾನ್ ಖಾನ್, ಚಿತ್ರದ ನಾಯಕಿ ಪೂಜಾ ಹೆಗ್ಡೆ ಮೊದಲಾದವರು ವೇದಿಕೆಯಲ್ಲಿದ್ದರು. ಟ್ರೈಲರ್ ನೋಡಿದ ಅನೇಕರು ಸಲ್ಲು ಸಿಕ್ಸ್ ಪ್ಯಾಕ್ ಬಗ್ಗೆ ಪ್ರಶ್ನೆ ಮಾಡಿ ವಿಎಫ್ಎಕ್ಸ್ ಎಂದು ಕರೆದರು. ಆಗ ಸಲ್ಲು ವೇದಿಕೆ ಮೇಲೆ ಶರ್ಟ್ ಬಿಚ್ಚಿ ಮಾಡಿ ತೋರಿಸಿದ್ದಾರೆ. ಈ ಮೂಲಕ ಸಲ್ಮಾನ್ ಖಾನ್ ಕಷ್ಟಪಟ್ಟು ಹುರಿಗೊಳಿಸಿದ ಬಾಡಿ ಎಂಬುದನ್ನು ಸಾಬೀತು ಮಾಡಿದರು.
Saw his abs live 🔥🔥🔥🔥🔥 pic.twitter.com/CB4ph02xZH
— SALMAN KI SENA™ (@Salman_ki_sena)ರಾಮ್ ಚರಣ್-ವೆಂಕಟೇಶ್ ಜೊತೆ ಸಲ್ಮಾನ್ ಮಸ್ತ್ ಲುಂಗಿ ಡಾನ್ಸ್; ಪಂಚೆ ಕಟ್ಟಿ ಕುಣಿದ ಪೂಜಾ ಹೆಗ್ಡೆ
ಕಿಸಿ ಕ ಭಾಯ್ ಕಿಸಿ ಕಿ ಜಾನ್ ಸಿನಿಮಾ ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ್ಗಮನ ಸಳೆಯುತ್ತಿದೆ. ಈ ಸಿನಿಮಾ ಮೂಲಕ ಸಲ್ಮಾನ್ ದಕ್ಷಿಣ ಭಾರತದ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಈ ಸಿನಿಮಾದಲ್ಲಿ ತೆಲುಗಿನ ಸ್ಟಾರ್ ನಟ ದಗ್ಗುಬಾಟಿ ವೆಂಕಟೇಶ್ ನಟಿಸಿದ್ದಾರೆ. ಜೊತೆಗೆ, ಜಗಪತಿ ಬಾಬು ಖಳನಾಯಕನಾಗಿ ಅಬ್ಬರಿಸಿದ್ದಾರೆ. ವಿಶೇಷ ಪಾತ್ರದಲ್ಲಿ ತೆಲುಗು ಸ್ಟಾರ್ ರಾಮ್ ಚರಣ್ ಕಾಣಿಸಿಕೊಂಡಿದ್ದಾರೆ. ‘ಯೆಂಟಮ್ಮಾ..’ ಹಾಡಿನಲ್ಲಿ ರಾಮ್ ಚರಣ್ ಸಲ್ಮಾನ್ ಮತ್ತು ವೆಂಕಟೇಶ್ ಜೊತೆ ಮಸ್ತ್ ಹೆಜ್ಜೆ ಹಾಕಿದ್ದಾರೆ. ಸಾಕಷ್ಟು ಕಾರಣಗಳಿಗೆ ಕಿಸಿ ಕ ಭಾಯ್ ಕಿಸಿ ಕಿ ಜಾನ್ ಕುತೂಹಲ ಹೆಚ್ಚಿಸಿದ್ದು ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.