ಏಪ್ರಿಲ್ 30ಕ್ಕೆ ಸಲ್ಮಾನ್ ಖಾನ್ ಮುಗಿಸ್ತೀವಿ ಎಂದು ರಾಕಿ ಭಾಯ್ ಹೆಸರಿನಿಂದ ಮತ್ತೊಂದು ಕೊಲೆ ಬೆದರಿಕೆ ಕರೆ ಬಂದಿದೆ.
ಸಲ್ಮಾನ್ ಖಾನ್ ಮುಗಿಸ್ತೀವಿ ಎಂದು ಮತ್ತೊಂದು ಕೊಲೆ ಬೆದರಿಕೆ ಕರೆ ಬಂದಿದೆ. ಸಲ್ಮಾನ್ ಖಾನ್‌ರನ್ನ ಮುಗಿಸಲು ಲಾರೆನ್ಸ್ ಬಿಷ್ಣೋಯ್ ತಂಡದವರು ಪ್ಲ್ಯಾನ್ ರೂಪಿಸಿದ್ದಾರೆ. ಈಗಾಗಲೇ ಅನೇಕ ಬಾರಿ ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಕೂಡ ಹಾಕಿದ್ದಾರೆ. ಈ ಹಿನ್ನಲೆಯಲ್ಲಿ ಸಲ್ಮಾನ್ ಖಾನ್‌ಗೆ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ. ಮನೆಯ ಸುತ್ತಮುತ್ತ ಯಾರನ್ನು ಓಡಾಡಲು ಬಿಡುತ್ತಿಲ್ಲ. ಅಭಿಮಾನಿಗಳು ಕೂಡ ಮನೆಯ ಬಳಿ ಬರದಂತೆ ನೋಡಿಕೊಳ್ಳಲಾಗುತ್ತಿದೆ. ಹೀಗಿರುವಾಗಲೇ ಸಲ್ಮಾನ್ ಖಾನ್‌ಗೆ ಮತ್ತೊಂದು ಬೆದರಿಕೆ ಕರೆ ಬಂದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಏಪ್ರಿಲ್ 30ರಂದು ಸಲ್ಮಾನ್ ಖಾನ್ ಅವರನ್ನು ಕೊಲೆ ಮಾಡುವುದಾಗಿ ರಾಕಿ ಭಾಯ್ ಹೆಸರಿನ ವ್ಯಕ್ತಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಗಾಯಕ ಸಿಧು ಮೂಸೇವಾಲ ಕೊಲೆಯ ಹಿಂದಿನ ರುವಾರಿ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಈ ಬೆದರಿಕೆ ಕರೆಯ ಹಿಂದಿದ್ದಾರೆ ಎಂದು ಶಂಕಿಸಲಾಗಿದೆ. ಸೋಮವಾರ (ಏಪ್ರಿಲ್ 10) ರಾತ್ರಿ 9 ಗಂಟೆ ಸುಮಾರಿಗೆ ಮುಂಬೈ ಪೊಲೀಸರ ಕಂಟ್ರೋಲ್ ರೂಂಗೆ ಕರೆ ಬಂದಿದೆ. ಏಪ್ರಿಲ್ 30ರಂದು ಸಲ್ಲುನ ಹತ್ಯೆ ಮಾಡಲಾಗುವುದು ಎಂದು ಕರೆಯಲ್ಲಿ ಹೇಳಿದ್ದಾರೆ. ರಾಕಿ ಭಾಯ್ ಹೆಸರಿನಿಂದ ಕರೆ ಬಂದಿದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಸದ್ಯ ತನಿಖೆ ನಡೆಯುತ್ತಿದೆ. ಕರೆ ಮಾಡಿದ ವ್ಯಕ್ತಿ ಪುರದವನು ಎನ್ನಲಾಗಿದೆ. ಸದ್ಯ ಕರೆ ಮಾಡಿದ ವಯಕ್ತಿಗೂ ಲಾರೆನ್ಸ್ ಬಿಷ್ಣೋಯ್ ತಂಡಕ್ಕೂ ಲಿಂಕ್ ಇದಿಯಾ ಎಂದು ಪೊಲೀಸರು ಪತ್ತೆಹಚ್ಚುತ್ತಿದ್ದಾರೆ.
ಕೊಲೆ ಬೆದರಿಕೆಯಿಂದ ಹೆದರಿದ ಖಾನ್ ಕುಟುಂಬ; ನಿದ್ದೆ ಇಲ್ಲದ ರಾತ್ರಿ ಕಳೆಯುತ್ತಿರುವ ಸಲ್ಮಾನ್ ತಂದೆ
ಸಲ್ಮಾನ್ ಖಾನ್ ತನ್ನ ಸುರಕ್ಷತೆಗಾಗಿ ಇತ್ತೀಚೆಗಷ್ಟೆ ಹೊಸ ಬುಲೆಟ್ಪ್ರೂಫ್ ಕಾರು ಖರೀದಿಸಿದ್ದಾರೆ ಎಂದು ವರದಿ ಆಗಿದೆ. ನಿಸಾನ್ ಪೆಟ್ರೋಲ್ ಎಸ್ಯುವಿ ಕಾರು ಖರೀದಿಸಿದ್ದು ಇದರ ಬೆಲೆ ಬರೋಬ್ಬರಿ 2 ಕೋಟಿ ರೂಪಾಯಿ ಎನ್ನಲಾಗಿದೆ. ಇತ್ತೀಚೆಗೆ ‘ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್’ ಉದ್ಘಾಟನೆಗೆ ಇದೇ ಕಾರಿನಲ್ಲಿ ಸಲ್ಮಾನ್ ಖಾನ್ ಆಗಮಿಸಿದ್ದರು. ಭದ್ರತೆಯ ಜೊತೆಗೆ ಹಲವು ಐಷಾರಾಮಿ ಸೌಲಭ್ಯಗಳು ಈ ಕಾರಿನಲ್ಲಿ ಇವೆ. ಶೂಟಿಂಗ್ ವೇಳೆಯೂ ಸಲ್ಮಾನ್ ಖಾನ್ ಹೆಚ್ಚಿನ ಭದ್ರತೆಯೊಂದಿಗೆ ಓಡಾಡುತ್ತಿದ್ದಾರೆ. ಇದೀಗ ಮತ್ತೊಂದು ಬೆದರಿಕೆ ಕರೆಯಿಂದ ಸಲ್ಮಾನ್ ಖಾನ್ ಅವರ ಕುಟುಂಬಕ್ಕೆ ಮತ್ತಷ್ಟು ಆತಂಕ ಹೆಚ್ಚಾಗಿದೆ.
ರಿಯಲ್ ಅಲ್ಲ ವಿಎಕ್ಸ್‌ಎಫ್ ಎಂದವರಿಗೆ ವೇದಿಕೆ ಮೇಲೆಯೇ ಶರ್ಟ್ ಬಿಚ್ಚಿ ತೋರಿಸಿದ ಸಲ್ಮಾನ್ ಖಾನ್
ಸಲ್ಮಾನ್ ಹತ್ಯೆ ಸಂಚಿಗೆ ಕಾರಣವೇನು?
1998ರಲ್ಲಿ ಹಮ್ ಸಾಥ್ ಸಾಥ್ ಹೇ ಚಿತ್ರದ ಶೂಟಿಂಗ್ಗಾಗಿ ರಾಜಸ್ಥಾನದ ಜೋಧ್‌ಪುರಕ್ಕೆ ಹೋಗಿದ್ದರು. ಸಫಾರಿಗೆ ಹೋದಾಗ ಒಂದು ಕೃಷ್ಣ ಮೃಗವನ್ನು ಬೇಟೆಯಾಡಿದ್ದರು. ಬಿಷ್ಣೋಯ್ ಸಮುದಾಯದವರು ಪ್ರಕೃತಿ ಆರಾಧಕರು. ವನ್ಯಜೀವಿ ಸಂರಕ್ಷಣೆಗಾಗಿ ಅವರು ಪ್ರಾಣವನ್ನು ಬೇಕಾದರೂ ನೀಡುತ್ತಾರೆ. ಜೋಧಪುರ್ ಬಿಷ್ಣೋಯ್ಗಳು ಕೃಷ್ಣಮೃಗವನ್ನು ತಮ್ಮ ಧಾರ್ಮಿಕ ಗುರು ಭಗವಾನ್ ಜಂಬೇಶ್ವರನ ಪುನರ್ಜನ್ಮ ಎಂದು ಪರಿಗಣಿಸುತ್ತಾರೆ. ಕೃಷ್ಣಮೃಗ ಕೊಲ್ಲುವುದನ್ನು ಬಿಷ್ಣೋಯ್ಗಳು ಎಂದಿಗೂ ಸಹಿಸುವುದಿಲ್ಲ. ಹಾಗಾಗಿ ಸಲ್ಮಾನ್ ಖಾನ್ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದು ಸಲ್ಮಾನ್ ಹತ್ಯೆ ಮಾಡಿಯೇ ತೀರುತ್ತೇನೆ ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾನೆ.