ಜೈಲಿನಲ್ಲಿ ಟಾಯ್ಲೆಟ್​ಗೆ, ಟೀ ಕುಡಿಯಲು ಒಂದೇ ಮಗ್ ಬಳಸಿ, ಶೌಚಾಲಯ ಕ್ಲೀನ್​ ಮಾಡಿದ್ದ ಸಲ್ಮಾನ್​ ಖಾನ್!

Published : Aug 18, 2023, 11:03 AM IST
ಜೈಲಿನಲ್ಲಿ ಟಾಯ್ಲೆಟ್​ಗೆ,  ಟೀ ಕುಡಿಯಲು ಒಂದೇ ಮಗ್ ಬಳಸಿ, ಶೌಚಾಲಯ ಕ್ಲೀನ್​ ಮಾಡಿದ್ದ ಸಲ್ಮಾನ್​ ಖಾನ್!

ಸಾರಾಂಶ

ಸಲ್ಮಾನ್​ ಖಾನ್​ ತಾವು ಜೈಲಿನಲ್ಲಿದ್ದಾಗ ಹೇಗೆ ಟಾಯ್ಲೆಟ್​ ಕ್ಲೀನ್​ ಮಾಡಿದ್ದೆ ಎನ್ನುವುದನ್ನು ಈಗ ನೆನಪಿಸಿಕೊಂಡಿದ್ದಾರೆ. ಅವರು ಹೇಳಿದ್ದೇನು?   

ಬಿಗ್ ಬಾಸ್ OTT ಸೀಸನ್ 2 ರ ಗ್ರ್ಯಾಂಡ್ ಫಿನಾಲೆಯನ್ನು ಹೋಸ್ಟ್ ಮಾಡುತ್ತಿರುವ ಸಲ್ಮಾನ್​ ಖಾನ್​, ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ಬಿಗ್​ಬಾಸ್​ ಸೀಸನ್​ನಲ್ಲಿ  ವಾಷ್​ ರೂಂ ಅನ್ನು ಸ್ವಚ್ಛವಾಗಿಟ್ಟಿದ್ದಕ್ಕಾಗಿ ನಟಿ ಮತ್ತು ಕಾರ್ಯಕ್ರಮದ ಸ್ಪರ್ಧಿಗಳಲ್ಲಿ ಒಬ್ಬರಾದ ಪೂಜಾ ಭಟ್ ಅವರನ್ನು ಹೊಗಳಿದ ಸಲ್ಮಾನ್​ ಖಾನ್​, ತಾವು ಬಾತ್ ರೂಂ ಕ್ಲೀನ್ ಮಾಡುತ್ತಿದ್ದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.  ' ನಾನು ವಸತಿ ಶಾಲೆಯಲ್ಲಿ ವಾಸಿಸುತ್ತಿದ್ದೆ. ನಾನು ನನ್ನ ಕೆಲಸಗಳನ್ನು ಮಾಡುತ್ತಿದ್ದೆ. ಆ ಸಮಯದಲ್ಲಿ ವಾಷ್​ರೂಮ್ (Wash Room)​, ಟಾಯ್ಲೆಟ್​ಗಳನ್ನೂ ಕ್ಲೀನ್​ ಮಾಡಿದ್ದೇನೆ. ಯಾವ ಕೆಲಸವೂ ಕಡಿಮೆ ಅಲ್ಲ' ಎಂದಿದ್ದಾರೆ. ಇದೇ ವೇಳೆ ಜೈಲಿನಲ್ಲಿದ್ದಾಗಲೂ ತಾವು ಟಾಯ್ಲೆಟ್​ ಕ್ಲೀನ್​ ಮಾಡಿದ್ದನ್ನು ನಟ ನೆನಪಿಸಿಕೊಂಡಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ,  ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್‌ಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆ ಸಮಯದಲ್ಲಿ ಅವರು ಕೆಲ ವರ್ಷ ಜೈಲಿನಲ್ಲಿಯೇ ಇದ್ದರು. ಆಗ ತಾವು ಟಾಯ್ಲೆಟ್​ ಕ್ಲೀನ್​ ಮಾಡಿದ್ದನ್ನು ನಟ ನೆನಪಿಸಿಕೊಂಡರು. 1998ರಲ್ಲಿ ನಡೆದ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್‍ ದೋಷಿ ಎಂದು ಜೋಧ್‌ಪುರ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
 
ಈ ಹಿಂದೆ ಸಲ್ಮಾನ್​ ಖಾನ್​ ಜೈಲಿನ (Jail) ಸ್ಥಿತಿಯನ್ನು ನೆನಪಿಸಿಕೊಂಡಿದ್ದರು.  ಹಲವು ಬಾರಿ ಕಂಬಿಗಳ ಹಿಂದೆ ಕಾಲ ಕಳೆದಿದ್ದ ನಟ ಅಲ್ಲಿ ತಾವು ಟಾಯ್ಲೆಟ್​ ಕ್ಲೀನ್​ ಮಾಡಿದ್ದನ್ನು ಹೇಳಿದ್ದರು.  1998, 2006 ಮತ್ತು 2007 ರಲ್ಲಿ ಒಟ್ಟು 18 ದಿನಗಳನ್ನು ಸಲ್ಮಾನ್​ ಖಾನ್​  ಜೈಲಿನಲ್ಲಿ ಕಳೆದಿದ್ದಾರೆ.  2018 ರಲ್ಲಿ ಜೋಧ್‌ಪುರ ನ್ಯಾಯಾಲಯವು ಎರಡು ಕೃಷ್ಣಮೃಗಗಳನ್ನು ಕೊಂದ ಆರೋಪದಲ್ಲಿ ತಪ್ಪಿತಸ್ಥನೆಂದು ಆದೇಶಿಸಿದ್ದರಿಂದ ಸ್ವಲ್ಪ ಸಮಯ ಅವರು  ಜೈಲಿನಲ್ಲಿ ಕಳೆದರು ಮತ್ತು ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 10,000 ರೂಪಾಯಿ ದಂಡ ವಿಧಿಸಲಾಗಿತ್ತು. ಅದಾದ ಬಳಿಕ ಅಲ್ಲಿಯ ಅನುಭವ ಹಂಚಿಕೊಂಡಿದ್ದ ನಟ,  'ಜೈಲಿನ ದಿನಗಳು  ತುಂಬಾ ವಿನೋದಮಯವಾಗಿತ್ತು' ಎಂದು ವ್ಯಂಗ್ಯವಾಗಿ ಹೇಳಿದ್ದರು ಮತ್ತು ಅವರು ಎಲ್ಲದಕ್ಕೂ ಒಂದೇ ಮಗ್  ಹೇಗೆ ಬಳಸಿದ್ದೆ  ಎಂಬುದನ್ನು ವಿವರಿಸಿದ್ದರು. ಬೆಳಿಗ್ಗೆ ಚಹಾ ಕುಡಿಯಲು ಮತ್ತು ವಾಶ್‌ರೂಮ್ ಉದ್ದೇಶಗಳಿಗಾಗಿ ಒಂದೇ ಮಗ್ ಬಳಸುವ ಅವಶ್ಯಕತೆ ಇತ್ತು ಎಂದಿದ್ದರು.

ಸಲ್ಮಾನ್​ ಖಾನ್​ ಹೆಸರಲ್ಲಿ ನಡೀತಿದೆ ಭಾರಿ ವಂಚನೆ: ನಟ ಕೊಟ್ಟ ಎಚ್ಚರಿಕೆಯೇನು?
 
 ಜೈಲಿನಲ್ಲಿ ಖಾಲಿ ಕುಳಿತಿದ್ದೆ. ಅಲ್ಲಿಯೇ ಆರಾಮಾಗಿದ್ದೆ. ಆದರೆ  ನನ್ನ ಒಂದೇ ಟೆನ್ಶನ್ ಬಾತ್ ರೂಂ (Bath Room) ಆಗಿತ್ತು. ಒಂಬತ್ತು ಅಥವಾ 10 ಕೊಠಡಿಗಳು ಇದ್ದವು, ಪ್ರತಿ ಕೋಣೆಯಲ್ಲಿ ಒಂಬತ್ತು ಅಥವಾ 10 ಜನರಿದ್ದರು. ಮತ್ತು ಕೇವಲ ಒಂದು ಸ್ನಾನಗೃಹ ಮತ್ತು ಒಂದು ಶೌಚಾಲಯ. ಒಬ್ಬ ವ್ಯಕ್ತಿ   ಬೆಳಿಗ್ಗೆ ಚಹಾ ತರುತ್ತಿದ್ದ, ಅದೇ ವ್ಯಕ್ತಿ  ಊಟವನ್ನು ತರುತ್ತಿದ್ದ.  ಚಹಾವನ್ನು ಕುಡಿಯಲು, ಅದನ್ನು ತೊಳೆದುಕೊಳ್ಳಲು ಮತ್ತು ದಾಲ್ ರೈಸ್ ಅಥವಾ ಯಾವುದನ್ನಾದರೂ ಸೇವಿಸಲು  ಒಂದೇ ಮಗ್​ ಬಳಸಬೇಕಿತ್ತು. ಅದನ್ನೇ ಟಾಯ್ಲೆಟ್​ಗೂ ಬಳಸಬೇಕಿತ್ತು. ಸ್ನಾನ ಮಾಡಲೂ ಅದೇ ಮಗ್​ ಆಗಿತ್ತು ಎಂದಿದ್ದರು. ಈಗಲೂ ಅದನ್ನೇ  ನೆನಪಿಸಿಕೊಂಡಿರುವ ನಟ ಯಾವ ಕೆಲಸವನ್ನೂ ಕನಿಷ್ಠ ಎಂದು ತಿಳಿಯಬಾರದು ಎಂದಿದ್ದಾರೆ. 

ಜೈಲಿನಲ್ಲಿ ಇರುವಾಗ ಎಂದಿಗೂ ಬಾಡ್-ಬಿಲ್ಡಿಂಗ್  ಬಿಡಲಿಲ್ಲ.  ನಾನು ಸಾಕಷ್ಟು ಪುಶ್-ಅಪ್‌ಗಳು, ಕ್ರಂಚ್‌ಗಳು ಮತ್ತು ಎಲ್ಲವನ್ನೂ ಮಾಡುತ್ತಿದ್ದೆ. ನಾನು ದಿನಕ್ಕೆ ಎರಡು ಬಾರಿ ವ್ಯಾಯಾಮ ಮಾಡುತ್ತಿದ್ದೆ. ಟಾಯ್ಲೆಟ್​ ಕ್ಲೀನ್​ ಕೂಡ ಮಾಡುತ್ತಿದ್ದೆ ಎಂದಿದ್ದಾರೆ.  ಸದ್ಯ  ಕೋಟಿಗಳ ಒಡೆಯನಾಗಿದ್ದರೂ, ಅಗತ್ಯಕ್ಕಿಂತಲೂ ಹೆಚ್ಚು ಸಂಪತ್ತು, ಯಶಸ್ಸು, ಪ್ರಸಿದ್ಧಿ ಎಲ್ಲವೂ ಇದ್ದರೂ ಯಾವಾಗ ಯಾವ ಸ್ಥಿತಿ ಬರುತ್ತದೆ ಎಂದು ಹೇಳಲಾಗುವುದಿಲ್ಲ ಎನ್ನುವುದು ಸಲ್ಮಾನ್​ ಖಾನ್ ಮಾತಿನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.  ಸಲ್ಮಾನ್ ಖಾನ್ (Salman Khan) ಅವರು ಸದ್ಯ ಬಾಲಿವುಡ್ ಮೂವಿ ಟೈಗರ್ 3 ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. 

ಐಶ್ವರ್ಯ ರೈಗಾಗಿ ಶಾರುಖ್​-ಸಲ್ಮಾನ್​ 5 ವರ್ಷಗಳ ಭಯಂಕರ ಶತ್ರುತ್ವ; ಬಿರಿಯಾನಿ ಮೂಲಕ ಪ್ಯಾಚಪ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!