
ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಮತ್ತು ಕರಾವಳಿ ಮೂಲದ ನಟಿ ಪೂಜಾ ಹೆಗ್ಡೆ ಪ್ರೀತಿ-ಪ್ರೇಮದ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸಲ್ಮಾನ್ ಖಾನ್ ಮತ್ತು ಕನ್ನಡ ಮೂಲದ ಖ್ಯಾತ ಬಾಲಿವುಡ್ ನಟಿ ಪೂಜಾ ಹೆಗ್ಡೆ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ, ಫಾರ್ಮ್ ಹೌಸ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ ಎನ್ನುವ ಸುದ್ದಿ ಸಖತ್ ವೈರಲ್ ಆಗಿದೆ. ಅಂದಹಾಗೆ ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ಇಬ್ಬರೂ ಕಿಸಿ ಕಾ ಭಾಯ್ ಕಿಸಿ ಕಾ ಜಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿ ಒಟ್ಟಿಗೆ ಸಮಯ ಇಬ್ಬರ ನಡುವೆ ಪ್ರೀತಿಯಾಗಿದೆ ಎನ್ನುವ ಗುಸು ಗುಸು ಬಾಲಿವುಡ್ ಅಂಗಳದಲ್ಲಿ ಗುಲ್ಲಾಗಿದೆ.
ಅಂದಹಾಗೆ ಇಬ್ಬರೂ ಮೊದಲ ಬಾರಿಗೆ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಸೆಟ್ ನಲ್ಲಿ ಪೂಜಾ ಹೆಗ್ಡೆ ಮೇಲೆ ಸಲ್ಮಾನ್ ಖಾನ್ ಗೆ ಲವ್ ಆಗಿದೆ ಬಳಿಕ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಅಷ್ಟೆಯಲ್ಲದೇ ಸಲ್ಮಾನ್ ಜೊತೆ ಪೂಜಾ ಹೆಗ್ಡೆ ಮತ್ತಷ್ಟು ಸಿನಿಮಾಗಳಿಗೆ ಸಹಿ ಮಾಡಿದ್ದಾರೆ ಎನ್ನುವ ಸುದ್ದಿ ಕೂಡ ಕೇಳಿ ಬಂದಿದೆ. ಸಲ್ಮಾನ್ ಖಾನ್ ಗಿಂತ 24 ವರ್ಷ ಚಿಕ್ಕ ಹುಡುಗಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇಬ್ಬರ ಡೇಟಿಂಗ್ ವಿಚಾರ ಈ ಪರಿ ವೈರಲ್ ಆಗಿದ್ದರೂ ಸಹ ಯಾವುದೇ ಪ್ರತಿಕ್ರಿಯೆ ನೀಡದೆ ಸೈಲೆಂಟ್ ಆಗಿರುವುದು ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡುವಂತೆ ಮಾಡಿದೆ.
Salman Khan: ಸಲ್ಮಾನ್ ಒಬ್ಬ ಕಾಮುಕ ಮೃಗ: ಎಕ್ಸ್ ಗರ್ಲ್‌ಫ್ರೆಂಡ್ ಕಿಡಿ
ಇದೀಗ ಸಲ್ಮಾನ್ ಖಾನ್ ಆಪ್ತರೊಬ್ಬರು ಪ್ರತಿಕ್ರಿಯೆ ನೀಡಿ ಡೇಟಿಂಗ್ ವದಂತಿಯನ್ನು ತಳ್ಳಿಹಾಕಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಸಲ್ಮಾನ್ ಖಾನ್ ಆಪ್ತ, 'ಇಂತಹ ಬೇಜವಾಬ್ದಾರಿ ವದಂತಿಗಳನ್ನು ಹರಡಿಸುವವರಿಗೆ ನಾಚಿಕೆಯಾಗಬೇಕು' ಎಂದು ಆಕ್ರೋಶ ಹೊರಹಾಕಿದರು. ' ಆ ಹುಡುಗಿ (ಪೂಜಾ ಹೆಗ್ಡೆ) ಸಲ್ಮಾನ್ ಮಗಳ ವಯಸ್ಸು. ಅವರು ಒಟ್ಟಿಗೆ ಚಿತ್ರ ಮಾಡುತ್ತಿರುವುದರಿಂದ (ಕಿಸಿ ಕಾ ಭಾಯ್ ಕಿಸಿ ಕಿ ಜಾನ್) ಈ ರೀತಿಯ ಸುದ್ದಿ ಹಬ್ಬಿಸಿದ್ದಾರೆ. ಕೆಲವು ಮೂರ್ಖರು ಚಿತ್ರಕ್ಕೆ ಒಳ್ಳೆಯ ಪ್ರಚಾರ ಎಂದು ಭಾವಿಸಬಹುದು. ಆದರೆ ಇದು ಮುಜುಗರದ ಸಂಗತಿಯಾಗಿದೆ' ಎಂದು ಹೇಳಿದರು. ಈ ಮೂಲಕ ಇಬ್ಬರ ಡೇಟಿಂಗ್ ವದಂತಿಗೆ ಪುಲ್ ಸ್ಟಾಪ್ ಇಡುವ ಪ್ರಯತ್ನ ಮಾಡಿದರು.
ಮತ್ತೇ ಸಲ್ಮಾನ್ ಲವ್ ಸ್ಟೋರಿ ವೈರಲ್; ಕರಾವಳಿ ಸುಂದರಿ ಜೊತೆ ಬ್ಯಾಡ್ ಬಾಯ್ ಡೇಟಿಂಗ್?
ಅಂತಹ ವರದಿಗಳಿಂದ ಸಲ್ಮಾನ್ ಖಾನ್ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು. 'ಸಲ್ಮಾನ್ ಖಾನ್ ಇದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ. ಈ ರೀತಿಯ ವದಂತಿಗೆಲ್ಲ ಅವರು ಪ್ರತಿಕ್ರಿಯಿಸುವುದಿಲ್ಲ' ಎಂದು ಹೇಳಿದರು.
ಅಂದಹಾಗೆ ಸಲ್ಮಾನ್ ಖಾನ್ ಬಗ್ಗೆ ಡೇಟಿಂಗ್ ರೂಮರ್ಸ್ ಹರಿದಾಡುತ್ತಿರುವುದು ಇದೇ ಮೊದಲಲ್ಲ. ಸಲ್ಮಾನ್ ಖಾನ್ ಹೆಸರು ಅನೇಕ ನಟಿಯರ ಜೊತೆ ಕೇಳಿಬಂದಿತ್ತು. ಐಶ್ವರ್ಯಾ ರೈ, ಕತ್ರಿನಾ ಕೈಫ್, ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ಅನೇಕ ನಟಿಯರ ಜೊತೆ ಸಲ್ಮಾನ್ ಹೆಸರು ಥಳಕು ಹಾಕಿಕೊಂಡಿತ್ತು. ಅಂದಹಾಗೆ ಸಲ್ಮಾನ್ ಖಾನ್ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಟೈಗರ್ 3 ಶೂಟಿಂಗ್ ಮುಗಿಸಿರುವ ಸಲ್ಮಾನ್ ಖಾನ್ ರಿಲೀಸ್‌ಗೆ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ಕತ್ರಿನಾ ಕೈಫ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.