ಸಲ್ಲು ಸ್ಟಾರ್ ಆಗೋದಕ್ಕೂ ಮುನ್ನ ಪ್ರೀತಿಸಿದ್ದು ಕಿಯಾರಾ ಅಡ್ವಾಣಿ ಸಂಬಂಧಿಯನ್ನು, ಆದ್ರೆ ಸಂಗೀತಾ ಬಿಜಲಾನಿ ಅಡ್ಡಿ!

Published : Aug 09, 2025, 08:19 PM IST
 salman khan and  SHAHEEN AGGARWAL

ಸಾರಾಂಶ

ಬಾಲಿವುಡ್ ತಾರೆ ಸಲ್ಮಾನ್ ಖಾನ್ ಅವರ ಮೊದಲ ಪ್ರೇಮಿ ಶಾಹೀನ್ ಜಾಫ್ರಿ ಈಗ ಶಾಹೀನ್ ಅಗರ್ವಾಲ್. ಸಿನಿಮಾ ರಂಗವನ್ನು ತೊರೆದು ಸರಳ ಜೀವನ ನಡೆಸುತ್ತಿರುವ ಶಾಹೀನ್, ಕ್ಯಾಥೆಡ್ರಲ್ & ಜಾನ್ ಕ್ಯಾನನ್ ಹೈಸ್ಕೂಲ್‌ನಲ್ಲಿ ನಾಟಕ ಮತ್ತು ಉಚ್ಚಾರಣೆಯನ್ನು ಬೋಧಿಸುತ್ತಿದ್ದಾರೆ.

ಸಾಮಾನ್ಯವಾಗಿ ಸಿನಿ ಕುಟುಂಬದಲ್ಲಿ ಜನಿಸುವ ಮಕ್ಕಳು ಕಾಲಾನಂತರದಲ್ಲಿ ಸಿನಿಮಾರಂಗಕ್ಕೆ ಬರುತ್ತಾರೆ. ಕೆಲವರು ನಟರಾಗುತ್ತಾರೆ, ಇನ್ನು ಕೆಲವರು ಕ್ಯಾಮೆರಾ ಹಿಂದೆ ಕೆಲಸ ಮಾಡುತ್ತಾರೆ. ಆದರೆ ಚಿತ್ರರಂಗವನ್ನು ಬಿಟ್ಟು ಬೇರೆ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತು ಕಂಡುಕೊಳ್ಳುವವರು ಬಹಳ ವಿರಳ. ಆದರೆ ಇಲ್ಲೊಬ್ಬಾಕೆ ಬಾಲಿವುಡ್ ಸೂಪರ್‌ಸ್ಟಾರ್ ಮನೆಯಲ್ಲಿ ಜನಿಸಿದರೂ, ಸಿನಿಮಾ ಲೋಕದ ಗ್ಲಾಮರ್ ಜೀವನವನ್ನು ತ್ಯಜಿಸಿ ಸರಳ ಬದುಕನ್ನು ಆರಿಸಿಕೊಂಡ ನಟಿ. ಈ ಸುಂದರಿ, ನಟಿ ಕಿಯಾರಾ ಅಡ್ವಾಣಿಯವರ ಸಂಬಂಧಿಯಾಗಿದ್ದು, ಬಾಲಿವುಡ್‌ನ ಅತಿ ದೊಡ್ಡ ತಾರೆ ಸಲ್ಮಾನ್ ಖಾನ್‌ ಅವರ ಮೊದಲ ಪ್ರೇಮಿಯಾಗಿದ್ದರು. ಅವರು ಮತ್ಯಾರು ಅಲ್ಲ ಅವರೇ ಶಾಹೀನ್ ಜಾಫ್ರಿ ಈಗ ಅವರ ಹೆಸರು ಶಾಹೀನ್ ಅಗರ್ವಾಲ್.

ಶಾಹೀನ್ ಅಗರ್ವಾಲ್ ದಿಗ್ಗಜ ನಟ ಅಶೋಕ್ ಕುಮಾರ್ ಅವರ ಮೊಮ್ಮಗಳು. ಅಶೋಕ್ ಕುಮಾರ್ ಅವರ ಮಗಳು ಭಾರತಿ ಜಾಫ್ರಿ ಶಾಹೀನ್ ಅವರ ತಾಯಿ. ಭಾರತಿ ಜಾಫ್ರಿ ಖ್ಯಾತ ನಟ ಸಯೀದ್ ಜಾಫ್ರಿ ಅವರ ಸಹೋದರ ಹಮೀದ್ ಅವರನ್ನು ವಿವಾಹವಾದರು. ಹಮೀದ್ ಅವರ ಮೊದಲ ಮದುವೆಯಿಂದ ಜನಿಸಿದ ಮಗಳನ್ನು (ಶಾಹೀನ್), ಭಾರತಿ ತಮ್ಮ ಸ್ವಂತ ಮಗಳಂತೆ ಬೆಳೆಸಿದರು. ನಂತರ, ಭಾರತಿ-ಹಮೀದ್ ದಂಪತಿಗೆ ಅನುರಾಧಾ ಎಂಬ ಮಗಳು ಜನಿಸಿದರು. ಭಾರತಿ ಜಾಫ್ರಿ 2022ರಲ್ಲಿ ನಿಧನರಾದರು.

ಸಲ್ಮಾನ್ ಖಾನ್ ಅವರ ಮೊದಲ ಪ್ರೇಮಿ ಶಾಹೀನ್

ಭಾರತಿ ಜಾಫ್ರಿ ಒಂದು ಸಂದರ್ಶನದಲ್ಲಿ, ಶಾಹೀನ್ ಅವರ ಬಾಲ್ಯದ ದಿನಗಳಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಪ್ರೇಮ ಸಂಬಂಧ ಇತ್ತು ಎಂದು ಬಹಿರಂಗಪಡಿಸಿದ್ದರು. ಸಲ್ಮಾನ್ ಖಾನ್ ಸಿನಿ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡುವ ಮುನ್ನವೇ ಇವರಿಬ್ಬರು ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಅವರು ಪರಸ್ಪರರ ಮನೆಗಳಿಗೆ ಭೇಟಿ ನೀಡುತ್ತಿದ್ದರು ಹಾಗೂ ಕುಟುಂಬಗಳಿಗೂ ಒಳ್ಳೆಯ ಪರಿಚಯವಿತ್ತು. ಆದರೆ ನಂತರ ಸಲ್ಮಾನ್ ಖಾನ್ ಅವರ ಜೀವನದಲ್ಲಿ ಸಂಗೀತಾ ಬಿಜಲಾನಿ ಪ್ರವೇಶಿಸಿದಾಗ ಶಾಹೀನ್-ಸಲ್ಮಾನ್ ಜೋಡಿ ಬೇರ್ಪಟ್ಟಿತು.

ಶಾಹೀನ್ ಜಾಫ್ರಿ ಈಗ ಎಲ್ಲಿದ್ದಾರೆ?

ಚಿತ್ರರಂಗದಿಂದ ದೂರ ಉಳಿದ ನಂತರ, ಶಾಹೀನ್ ಜಾಫ್ರಿ ವಿಮಾನಯಾನ ಕ್ಷೇತ್ರದಲ್ಲಿ ಕೆಲಸ ಪ್ರಾರಂಭಿಸಿದರು. ಅಲ್ಲಿ ಅವರು ಉದ್ಯಮಿ ವಿಕ್ರಮ್ ಅಗರ್ವಾಲ್ ಅವರನ್ನು ಭೇಟಿಯಾಗಿ ಪ್ರೀತಿಸಿ 1994ರಲ್ಲಿ ವಿವಾಹವಾದರು. ದಂಪತಿಗೆ ನಿರ್ವಾನ್ ಎಂಬ ಮಗ ಮತ್ತು ನಾಡಿಯಾ ಎಂಬ ಮಗಳು ಜನಿಸಿದರು. ಪ್ರಸ್ತುತ ಶಾಹೀನ್ ಅಗರ್ವಾಲ್ ಮುಂಬೈನ ವರ್ಲಿಯಲ್ಲಿ ವಾಸವಿದ್ದು, ದಕ್ಷಿಣ ಮುಂಬೈನ ಕ್ಯಾಥೆಡ್ರಲ್ & ಜಾನ್ ಕ್ಯಾನನ್ ಹೈಸ್ಕೂಲ್‌ನಲ್ಲಿ ನಾಟಕ ಮತ್ತು ಉಚ್ಚಾರಣೆಯನ್ನು ಬೋಧಿಸುತ್ತಿದ್ದಾರೆ. ಇದಲ್ಲದೆ, ಅವರು ಸಣ್ಣ ಕಥೆಗಳನ್ನು ಬರೆಯುವಲ್ಲೂ ತೊಡಗಿಸಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?