Salman Khan Drives Auto : ಆಟೋ ಚಾಲಕನಾದ ಸಲ್ಮಾನ್,  ವಿಡಿಯೋ ಇಲ್ಲಿದೆ!

Published : Dec 29, 2021, 10:10 PM ISTUpdated : Dec 29, 2021, 10:16 PM IST
Salman Khan Drives Auto : ಆಟೋ ಚಾಲಕನಾದ ಸಲ್ಮಾನ್,  ವಿಡಿಯೋ ಇಲ್ಲಿದೆ!

ಸಾರಾಂಶ

* ಆಟೋ ಓಡಿಸಿದ ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ * ಅಭಿಮಾನಿಗಳು ವಿಡಿಯೋ ಶೇರ್ ಮಾಡುತ್ತಲೇ ಇದ್ದಾರೆ * ಹಾವು ಕಚ್ಚಿದ್ದರಿಂದ ಆಸ್ಪತ್ರೆ ಸೇರಿದ್ದ ಖಾನ್ * ಆಟೋ ಏರಿ ಹೊರಟ ಸಲ್ಮಾನ್ ಖಾನ್

ಮುಂಬೈ(ಡಿ. 29)  ಬಾಲಿವುಡ್ (Bollywood) ಬಾಕ್ಸಾಫೀಸ್ ಸುಲ್ತಾನ ಸಲ್ಮಾನ್ ಖಾನ್ (Salman Khan) ಆಟೋ ಓಡಿಸಲು ಶುರುಮಾಡಿದ್ದಾರೆ.  ಸೋಶಿಯಲ್ ಮೀಡಿಯಾದಲ್ಲಿ (Social Media) ಹಿಂದಿ ಬಿಗ್  ಬಾಸ್ (Bigg Boss) ಹವಾ.  

ಹಾವು (Snake Bite) ಕಚ್ಚಿ ಆಸ್ಪತ್ರೇ ಸೇರಿದ್ದ ಸಲ್ಮಾನ್ ಖಾನ್ಅಭಿಮಾನಿಗಳಿಗೆ ತಾವು ಗುಣಮುಖರಾಗಿರುವುದನ್ನು ಖಾತ್ರಿ ಪಡಿಸಿದ್ದರು. ಇದೀಗ ಖಾನ್ ಆಟೋ ಚಾಲಕರಾಗಿದ್ದಾರೆ.

ಮಹಾರಾಷ್ಟ್ರದ ರಾಯಘಡ್ ಜಿಲ್ಲೆಯ ಪನ್ವೇಲ್ ನ ತಮ್ಮ ಫಾರ್ಮ್ ಹೌಸ್ ಗೆ ಸಲ್ಮಾನ್ ಸದಾ ಭೇಟಿ ನೀಡುತ್ತಲೇ ಇರುತ್ತಾರೆ.  ಜಾಕ್ವೇಲಿನ್ ಜತೆಗೂಡಿ ಇಲ್ಲಿ ಶೂಟಿಂಗ್ ಸಹ ಮಾಡಿದ್ದರು. ಜನ್ಮದಿನವನ್ನು ಆಚರಿಸಿಕೊಂಡಿದ್ದರು. ಇದೇ ಪ್ರದೇಶದಲ್ಲಿ ಆಟೋ ಓಡಿಸಿದ್ದಾರೆ.

ಸ್ಥಳೀಯ ಆಟೋ ಚಾಲಕನ ಬಳಿಯಿಂದ ಆಟೋ ಪಡೆದುಕೊಂಡ ಖಾನ್ ಆಟೋ ಏರಿ ಹೊರಟರು.  ಇದನ್ನು ಅಲ್ಲಿಯೇ ಇದ್ದ ಒಬ್ಬರು ವಿಡಿಯೋ ಮಾಡಿ ಹಂಚಿದ್ದು ಅಭಿಮಾಣಿಗಳು ತಾಮುಂದು ನೀ ಮುಂದು ಎಂದು ಶೇರ್  ಮಾಡಿಕೊಂಡಿದ್ದಾರೆ.  ಸಲ್ಮಾನ್ ಖಾನ್ ಜನ್ಮದಿನಾಚರಣೆಗೆ ಒಂದು ದಿನ ಇರುವಾಗ ಹಾವು ಕಚ್ಚಿತ್ತು.  ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡು ಖಾನ್ ಹೊರಗೆ ಬಂದಿದ್ದರು. 

ಬಾಲಿವುಡ್ ಬ್ಯಾಡ್ ಬಾಯ್ ಜೀವನ ಶೈಲಿ ಹೀಗಿದೆ


ಕೊಡುಗೆಗಳ ಸುರಿಮಳೆ: ನಟನ ಮಾಜಿ ಪ್ರೇಯಸಿಯರಾದ ಕತ್ರೀನಾ ಕೈಫ್ ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಕೂಡಾ ವಿಶೇಷ ಕೊಡುಗೆ ನೀಡಿದ್ದರು. ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕತ್ರೀನಾ ಕೈಫ್ ಸಲ್ಲು ಬರ್ತ್‌ಡೇಗೆ ಮಿಸ್ ಮಾಡದೆ ಗಿಫ್ಟ್ ಕೊಟ್ಟಿದ್ದರು.  ಹಾಗೆಯೇ ಜಾಕ್ವೆಲಿನ್ ಸುಕೇಶ್ ಕೇಸ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದರೂ ಸಲ್ಲು ಬರ್ತ್‌ಡೇಗೆ ತಪ್ಪದೆ ವಿಶ್ ಮಾಡಿ ಉಡುಗೊರೆ ಕೂಡಾ ಕೊಟ್ಟಿದ್ದರು.

ಹ್ಯಾಂಡ್ಸಂ ನಟ ತಮ್ಮ ವಿಶೇಷ ದಿನವನ್ನು ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆ ಆಚರಿಸಿದ್ದಾರೆ. ಪಾನ್ವೆಲ್ ಫಾರ್ಮ್‌ಹೌಸ್‌ನಲ್ಲಿ ಬರ್ತ್‌ಡೇ ಆಚರಿಸಿದ್ದು ನಟನ ಪಡೆದ ದುಬಾರಿ ಉಡುಗೊರೆಗಳ ಮಳೆ ಹರಿದು ಬಂದಿತ್ಗತು.

ನಟಿ ಕತ್ರೀನಾ ಕೈಫ್ ಬಾಲಿವುಡ್‌ನಲ್ಲಿ ಬೆಳೆದಿರುವುದರ ಹಿಂದೆ ಸಲ್ಮಾನ್ ಭಾಯ್ ನೆರಳಿದೆ. ಹೌದು, ಸಲ್ಲು ನೆರಳಿನಲ್ಲಿಯೇ ಬಾಲಿವುಡ್ ನಲ್ಲಿ ಬೆಳೆದ ನಟಿ ಈಕೆ. ನಟಿ ಸಲ್ಲುಗೆ 2-3 ಲಕ್ಷ ಬೆಲೆ ಬಾಳುವ ಚಿನ್ನದ ಬ್ರೇಸ್ಲೆಟ್ ಉಡುಗೊರೆಯಾಗಿ ಕೊಟ್ಟಿದ್ದರು. ನಟಿ ಜಾಕ್ವೆಲಿನ್‌ಗೆ ಕೂಡಾ ಗಾಡ್‌ಫಾದರ್‌ನಂತೆ ಇದ್ದಿದ್ದು ಸಲ್ಲು ಮಾತ್ರ. ಶ್ರೀಲಂಕಾ ಸುಂದರಿಯನ್ನು ಬಾಲಿವುಡ್‌ಗೆ ಪರಿಚಯಿಸಿದ ಸಲ್ಮಾನ್ ಖಾನ್ ಹಾಗೂ ಜಾಕಿ ಅತ್ಮೀಯರು. ಅವರಿಬ್ಬರು ಡೇಟ್ ಮಾಡುತ್ತಿದ್ದಾರೆಂದೂ ಸುದ್ದಿ ಇತ್ತು. ನಟಿ ಲಾಕ್‌ಡೌನ್ ಸಂದರ್ಭ ನಟನೊಂದಿಗೆ ಇದ್ದಳು. ಅಲ್ಲಿ ಒಂದು ಆಲ್ಬಂ ಸಾಂಗ ಶೂಟಿಂಗ್ ಕೂಡಾ ನಡೆದಿತ್ತು. ನಟಿ ಆತ್ಮೀಯ ಗೆಳೆಯನಿಗೆ 10-12 ಲಕ್ಷ ಬೆಲೆ ಬಾಳುವ ಚೊಪಾರ್ಡ್ ಬ್ರಾಂಡ್ ವಾಚ್ ಗಿಫ್ಟ್ ಮಾಡಿದ್ದರು.

ಸಂಜಯ್ ದತ್ ಸಲ್ಮಾನ್ ಖಾನ್‌ಗೆ 7-8 ಲಕ್ಷ ಬೆಲೆ ಬಾಳುವ ವಜ್ರದ ಬ್ರೇಸ್ಲೆಟ್ ಉಡುಗೊರೆಯಾಗಿ ಕೊಟ್ಟಿದ್ದರು. ಸಲ್ಮಾನ್ ಅವರ ಸಹೋದರ ಸೋಹೈಲ್ ಸಲ್ಲುಗೆ 23-25 ಲಕ್ಷ ಬೆಲೆಯ ಬಿಎಂಡಬ್ಲ್ಯೂ ಎಸ್ 1000 ಆರ್‌ಆರ್ ಗಿಫ್ಟ್ ಮಾಡಿದ್ದರು. ಸಲ್ಮಾನ್ ಸಹೋದರ ಅರ್ಬಾಝ್ ನಟನಿಗೆ 2-3 ಕೋಟಿ ಬೆಲೆಯ ಆಡಿ ಗಿಫ್ಟ್ ಮಾಡಿದ್ದಾರೆ ಎನ್ನಲಾಗಿತ್ತು. ನಟ ಅನಿಲ್ ಕಪೂರ್ 27-29 ಲಕ್ಷ ಬೆಲೆ ಬಾಳುವ ಜಾಕೆಟ್ ಗಿಫ್ಟ್ ಮಾಡಿದ್ದಾರೆ ನಟಿ ಶಿಲ್ಪಾ ಶೆಟ್ಟಿ ಸಲ್ಮಾನ್ ಖಾನ್‌ಗೆ ಚಿನ್ನ ಹಾಗೂ ವಜ್ರದ ಬ್ರೇಸ್ಲೆಟ್ ಗಿಫ್ಟ್ ಮಾಡಿದ್ದು ಇದರ ಬೆಲೆ 16-17 ಲಕ್ಷ ರೂಪಾಯಿ. ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಜುಹುವಿನಲ್ಲಿ 12-13 ಕೋಟಿಯ ಅಪಾರ್ಟ್‌ಮೆಂಟ್ ಗಿಫ್ಟ್ ಮಾಡಿದ್ದಾರೆ. ಭಾವ ಆಯುಷ್ ಶರ್ಮಾ 73,000-75,000 ಬೆಲೆಯ ಗೋಲ್ಡ್ ಚೈನ್ ಗಿಫ್ಟ್ ಮಾಡಿದ್ದರು. ಒಟ್ಟಿನಲ್ಲಿ ಸಲ್ಲೂ ಖಜಾನೆ ಮತ್ತಷ್ಟು ಭರ್ತಿಯಾಗಿತ್ತು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?