
ಬಚ್‌ಪನ್ ಕಾ ಪ್ಯಾರ್ ಹಾಡಿನ ಮೂಲಕ ರಾತ್ರೋ ರಾತ್ರಿ ವೈರಲ್ ಆದ ಬಾಲಕ ಸಚ್‌ದೇವ್ ಡಿರ್ಡೋ ಅಪಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ. ಬಚ್‌ಪನ್ ಕಾ ಪ್ಯಾರ್ ಮೇರ ಭೂಲ್ ನಯಿ ಜಾನಾ ಎಂದು ಹಾಡಿದ್ದ ಹುಡುಗನ ವಿಡಿಯೋ ಇನ್‌ಸ್ಟಗ್ರಾಮ್ ಸೇರಿ ಸೋಷಿಯಲ್ ಮಿಡಿಯಾ ಫ್ಲಾಟ್‌ಫಾರ್ಮ್‌ನಲ್ಲಿ ಟ್ರೆಂಡ್ ಆಗಿತ್ತು. ಇದೀಗ ಅಪಘಾತದಲ್ಲಿ ಬಾಲಕನ ತಲೆಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ. ಈ ಕಾರಣಗಳಿಂದಾಗಿ ಬಾಲಕನನ್ನು ಸುಕ್ಮಾದ ಜಿಲ್ಲಾ ಆಸ್ಪತ್ರೆಯಿಂದ ಜಗ್ದಲ್‌ಪುರದ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿದೆ.
ವರದಿಗಳ ಪ್ರಕಾರ ಸಚ್‌ದೇವ್ ಕುಟುಂಬಸ್ಥರೊಂದಿಗೆ ಸುಕ್ಮಾಗೆ ಬರುತ್ತಿದ್ದ. ಈ ಸಂದರ್ಭ ಬೈಕ್ ಕ್ರಾಶ್ ಆಗಿದೆ. ಇದರಿಂದ ಸಚ್‌ದೇವ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಸುಕ್ಮಾದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಬಾಲಕನನ್ನು ವೈದ್ಯಕೀಯ ಕಾಲೇಜಿಗೆ ಶಿಫ್ಟ್ ಮಾಡಲಾಗಿದೆ.
ರ‍್ಯಾಪರ್ ಬಾದ್‌ಶಾ ಜೊತೆ ಹಾಡಲಿದ್ದಾನೆ ಅನುಷ್ಕಾ ಶರ್ಮಾ ನಿದ್ದೆಗೆಡಿಸಿದ ಹುಡುಗ
ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಈ ವಿಚಾರದಲ್ಲಿ ಸಹಾಯ ಮಾಡಿದ್ದಾರೆ. ಸಚ್‌ದೇವ್ ದಿರ್ಡೋ ಅವರ ಅಪಘಾತದ ಸುದ್ದಿಯ ಬಗ್ಗೆ ದುಃಖವನ್ನು ವ್ಯಕ್ತಪಡಿಸಿದ ಮುಖ್ಯಮಂತ್ರಿ ಭೂಪೇಶ್ಬಾಘೇಲ್ ಅವರು ಜಿಲ್ಲಾಧಿಕಾರಿ ಶ್ರೀ ವಿನೀತ್ ನಂದನ್ವಾರ್ ಸುಕ್ಮಾ ಡಿಸ್ಟ್ ಅವರಿಗೆ ಶೀಘ್ರದಲ್ಲಿಯೇ ಉತ್ತಮ ವೈದ್ಯಕೀಯ ನೆರವು ನೀಡುವಂತೆ ಸೂಚಿಸಿದ್ದಾರೆ ಎಂದು ಛತ್ತೀಸ್ಗಢದ ಸಿಎಂಒ ಟ್ವೀಟ್ ಮಾಡಿದ್ದಾರೆ.
ಅನುಷ್ಕಾ ಅವರು ಈ ಹಾಡಿಗೆ ಫಿದಾ ಆಗಿದ್ದರು:
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಚ್ ಪನ್ ಕಾ ಪ್ಯಾರ್ ಖ್ಯಾತಿಯ ಬಾಲಕನಿಗೆ ಬಂಪರ್ ಅವಕಾಶ ಸಿಕ್ಕಿತ್ತು. ಖ್ಯಾತ ರ‍್ಯಾಪರ್ ಬಾದ್ ಶಾ ಜೊತೆ ಹಾಡಿದ್ದ ಈ ಇನ್‌ಸ್ಟಾಗ್ರಾಂ ಬಾಲಕ. ಇನ್‌ಸ್ಟಾಗ್ರಾಂನ ರೀಲ್ಸ್ ಸ್ಕ್ರಾಲ್ ಮಾಡುತ್ತಿದ್ದಂತೆ ಟ್ರೆಂಡ್ ಆಗಿದ್ದ ಹಾಡು ಈ ಬಾಲಕನನ್ನು ವೈರಲ್ ಮಾಡಿತ್ತು. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಈ ಹಾಡಿನಿಂದ ನನಗೆ ನಿದ್ರಿಸಲೂ ಆಗುತ್ತಿಲ್ಲ. ಅಷ್ಟೊಂದು ಕಾಡುತ್ತಿದೆ ಎಂದು ಹೇಳಿದ್ದರು.
ಈ ವೈರಲ್ ಹಾಡಿನ ಮೂಲಕ ಸಚ್‌ದೇವ್ ಡಿರ್ಡೋ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿದ್ದರು. ಛತ್ತೀಸ್‌ಗಡ ಸಿಎಂ ಅವರಿಂದ ಅಭಿನಂದಿಸಲ್ಪಟ್ಟ ಈ ಬಾಲಕ ಇಂಡಿಯನ್ ಐಡಲ್‌ನಲ್ಲಿಯೂ ಕಾಣಿಸಿಕೊಂಡಿದ್ದರು. ಬಾದ್ ಶಾ ಜೊತೆ ಸಿಂಗಿಂಗ್ ಡಿಬಟ್ ಮಾಡಿದ್ದ ಈ ಹುಡುಗ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.