ಸೆಲ್ಫೀ ಕ್ಲಿಕ್ಕಿಸಲು ಬಂದ ಅಭಿಮಾನಿಯನ್ನು ಸಲ್ಮಾನ್ ಖಾನ್ ಬಾಡಿಗಾರ್ಡ್ ಮಾಡಿದ ರೀತಿ ಕಂಡು ಟ್ರೋಲಿಗರು ಭಾರಿ ಟ್ರೋಲ್ ಮಾಡುತ್ತಿದ್ದಾರೆ. ಆಗಿದ್ದೇನು?
ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khna) ಇತ್ತೀಚಿನ ದಿನಗಳಲ್ಲಿ ತಮ್ಮ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಸಂಬಂಧ ಇತ್ತೀಚೆಗಷ್ಟೇ ದುಬೈಗೆ ತೆರಳಿದ್ದ ಅವರು, ಅಲ್ಲಿಂದ ಬುಧವಾರ ವಾಪಸಾಗಿದ್ದರು. ಮುಂಬೈ ವಿಮಾನ ನಿಲ್ದಾಣದಿಂದ ಸಲ್ಮಾನ್ ಖಾನ್ ಅವರ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ, ಇದರಲ್ಲಿ ಅವರು ಹಲವಾರು ಅಂಗರಕ್ಷಕರಿಂದ ಸುತ್ತುವರೆದಿರುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅವರ ಅಂಗರಕ್ಷಕರೊಬ್ಬರು ಅಭಿಮಾನಿಯೊಬ್ಬರಿಗೆ ನಡೆಸಿಕೊಂಡ ರೀತಿಯಲ್ಲಿ ಈ ವಿಡಿಯೋ ಭಾರಿ ಟ್ರೋಲ್ಗೆ ಒಳಗಾಗುತ್ತಿದೆ. ವಾಸ್ತವವಾಗಿ, ವಿಮಾನ ನಿಲ್ದಾಣದಲ್ಲಿ ಸಲ್ಮಾನ್ ಅವರನ್ನು ನೋಡಿದ ಅವರ ಅಭಿಮಾನಿಗಳು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಲು ಅವರ ಹತ್ತಿರ ಹೋಗಲು ಪ್ರಯತ್ನಿಸಿದ್ದಾರೆ. ಆದರೆ ಸಲ್ಮಾನ್ ಅವರ ಅಂಗರಕ್ಷಕರು ಆ ಅಭಿಮಾನಿಯೊಂದಿಗೆ ಅನುಚಿತವಾಗಿ ವರ್ತಿಸಿಸಿದ್ದಾರೆ. ಅಂಗರಕ್ಷಕ ಆ ಅಭಿಮಾನಿಯ ಕೈ ಹಿಡಿದು ಸೆಲ್ಫಿ ತೆಗೆಯಲು ಯತ್ನಿಸಿದ ಅಭಿಮಾನಿಯನ್ನು ತಳ್ಳಿದ್ದಾನೆ. ಅಂಗರಕ್ಷಕರ ಈ ವರ್ತನೆ ಕಂಡು ಇಂಟರ್ನೆಟ್ ಬಳಕೆದಾರರು (Social Media)ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ, ಹಲವು ಬಳಕೆದಾರರು ಅವರ ಭದ್ರತೆಯನ್ನು ಕಂಡು ಟ್ರೋಲ್ ಮಾಡುತ್ತಿದ್ದಾರೆ.
ಚಿತ್ರ ನೋಡಲು ಫ್ಯಾನ್ಸ್ (Fans) ಬೇಕು, ಒಂದು ಸೆಲ್ಫೀ ಕ್ಲಿಕ್ಕಿಸಲುಬಂದರೆ ಈ ರೀತಿಯ ದುರ್ವತನೆ ಮಾಡುವುದು ಸರಿಯಲ್ಲ ಎಂದು ಹಲವರು ಹೇಳಿದ್ದಾರೆ. ಅಂಗರಕ್ಷಕ ಈ ರೀತಿ ಅಭಿಮಾನಿಯನ್ನು ತಳ್ಳಿದರೂ ಸಲ್ಮಾನ್ ಖಾನ್ ಸುಮ್ಮನೆ ಇದ್ದುದು ಸರಿಯಲ್ಲ ಎಂದು ಹಲವರು ಹೇಳಿದ್ದಾರೆ. ಆದರೆ ಸಲ್ಮಾನ್ ಖಾನ್ ಪರ ಫ್ಯಾನ್ಸ್ ನಿಂತಿದ್ದಾರೆ. ಅವರ ಜೀವಕ್ಕೆ ಭಯ ಇರುವ ಹಿನ್ನೆಲೆಯಲ್ಲಿ ಹೀಗೆ ಯಾರೇ ಬರುವುದು ಸರಿಯಲ್ಲ ಎಂದಿದ್ದಾರೆ. ಸಲ್ಮಾನ್ ಖಾನ್‌ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಕೆಲವು ಸಮಯದಿಂದ ಕೊಲೆ ಬೆದರಿಕೆಗಳು ಬರುತ್ತಿವೆ. ಇದಷ್ಟೇ ಅಲ್ಲದೇ ಸಲ್ಮಾನ್ ಖಾನ್ ಮಾತ್ರವಲ್ಲದೇ ಅಭಿಮಾನಿಗಳು ಯಾವುದೇ ಸೆಲೆಬ್ರಿಟಿಗಳು ಬಂದಾಗ ಅತಿರೇಕ ಮಾಡಬಾರದು ಎಂದು ಹಲವರು ಹೇಳಿದ್ದಾರೆ. ಸಲ್ಮಾನ್ ಖಾನ್ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಇತ್ತೀಚೆಗೆ ದುಬೈನಿಂದ ಬುಲೆಟ್ ಪ್ರೂಫ್ (Bulletproof) ಎಸ್‌ಯುವಿಯನ್ನು ಆಮದು ಮಾಡಿಕೊಂಡಿರುವುದು ಉಲ್ಲೇಖಾರ್ಹ.
Bollywood ನಟರ ಬಾಡಿಗಾರ್ಡ್ಸ್ ಸಂಬಳ ಕೇಳಿದ್ರೆ ತಲೆ ತಿರುಗಿ ಬೀಳ್ತೀರಿ
ಹಾಗೆ ನೋಡಿದರೆ, ಸಿನಿ ತಾರೆಯರು ಎಂದರೆ ಅವರಿಗೆ ರಕ್ಷಣೆ ಸದಾ ಅಗತ್ಯವಿರುತ್ತದೆ. ರಾಜಕಾರಣಿಗಳಂತೆಯೇ ಪ್ರಸಿದ್ಧ ನಟ ನಟಿಯರು ಬಾಡಿಗಾರ್ಡ್ಗಳನ್ನು (Body Guard) ನೇಮಕ ಮಾಡಿಕೊಳ್ಳುತ್ತಾರೆ. ರಾಜಕಾರಣಿಗಳಿಗೆ ಜೀವ ಭಯವಿದ್ದರೆ, ಸಿನಿಮಾ ನಟ-ನಟಿಯರು ಹೋದ ಕಡೆಗಳಲ್ಲಿ ಅಭಿಮಾನಿಗಳು ಮುತ್ತಿಕೊಂಡು ತೊಂದರೆ ಕೊಡುವ ಸಾಧ್ಯತೆ ಇರುವುದರಿಂದ ತಮ್ಮ ರಕ್ಷಣೆಗೆ ಹಲವು ತಾರೆಯರು ಬಾಡಿಗಾರ್ಡ್ಗಳನ್ನು ನೇಮಕ ಮಾಡಿಕೊಳ್ಳುತ್ತಾರೆ. ಈ ಅಭಿಮಾನದ ಕಾರಣದಿಂದಾಗಿಯೇ ಖ್ಯಾತಿ ಹೆಚ್ಚಿದಂತೆ ಚಿತ್ರ ನಟರಿಗೆ ರಕ್ಷಣೆಯ ಅಗತ್ಯ ಕಂಡುಬರುತ್ತದೆ.
ಇನ್ನು, ಸಲ್ಮಾನ್ ಖಾನ್ ಅವರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' (Kisi Ka Bhai Kisi ki jaan) ಚಿತ್ರದ ಬಗ್ಗೆ ಹೇಳುವುದಾದರೆ, ಚಿತ್ರವು ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಐದು ದಿನಗಳಲ್ಲಿ 84.46 ಕೋಟಿ ಗಳಿಸಿದೆ. ಚಿತ್ರ 1ನೇ ದಿನ 15.81 ಕೋಟಿ, 2ನೇ ದಿನ 25.75 ಕೋಟಿ, 3ನೇ ದಿನ 26.61 ಕೋಟಿ, 4ನೇ ದಿನ 10.17 ಕೋಟಿ ಹಾಗೂ 5ನೇ ದಿನ 6.12 ಕೋಟಿ ಕಲೆಕ್ಷನ್ ಮಾಡಿದೆ. ಫರ್ಹಾದ್ ಸಾಮ್ಜಿ ನಿರ್ದೇಶಿಸಿದ ಈ ಚಿತ್ರವು 2014 ರಲ್ಲಿ ಬಿಡುಗಡೆಯಾದ ಅಜಿತ್ ಅಭಿನಯದ ತಮಿಳು ಚಿತ್ರ ವೀರಂನ ರಿಮೇಕ್ ಆಗಿದೆ. ಸಲ್ಮಾನ್ ಜೊತೆಗೆ ಪೂಜಾ ಹೆಗ್ಡೆ, ವಿಜೇಂದರ್ ಸಿಂಗ್, ವೆಂಕಟೇಶ್ ಮತ್ತು ಜಗಪತಿ ಬಾಬು ಮುಂತಾದ ತಾರೆಯರು ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ಹೊಂದಿದ್ದಾರೆ.