ತಂದೆ ಮುಖ ಮರೆಯುತ್ತಾಳಾ ಮಗಳು?; ರಣಬೀರ್‌ ಕಪೂರ್‌ಗೆ ಕಾಡುತ್ತಿರುವ ಭಯ ಬಿಚ್ಚಿಟ್ಟ ಆಲಿಯಾ ಭಟ್

Published : Apr 27, 2023, 10:13 AM IST
ತಂದೆ ಮುಖ ಮರೆಯುತ್ತಾಳಾ ಮಗಳು?; ರಣಬೀರ್‌ ಕಪೂರ್‌ಗೆ ಕಾಡುತ್ತಿರುವ ಭಯ ಬಿಚ್ಚಿಟ್ಟ ಆಲಿಯಾ ಭಟ್

ಸಾರಾಂಶ

ರಾಹಾ ಭಟ್ ಕಪೂರ್‌ನ ಚಿರತೆ ಎಂದು ಕರೆಯುವ ರಣಬೀರ್ ಕಪೂರ್. ತಂದೆಯಾಗಿ ಆಗಾಗ ಕಾಡುತ್ತಿರುವ ಭಯವನ್ನು ರಿವೀಲ್ ಮಾಡಿದ್ದಾರೆ. 

ಬಾಲಿವುಡ್ ಚಿತ್ರರಂಗದ ಪವರ್ ಕಪಲ್ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಪೇರೆಂಟಿಂಗ್ ಜರ್ನಿಯನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇಷ್ಟು ದಿನ ಕಾರ್ಯಕ್ರಮಗಳಲ್ಲಿ ಒಬ್ಬರನ್ನೊಬ್ಬರು ಹೊಗಳುತ್ತಿದ್ದರು ಆದರೆ ಈಗ ಮಗಳನ್ನು ಸೇರಿಸಿಕೊಳ್ಳಲು ಶುರು ಮಾಡಿದ್ದಾರೆ. ಎಲ್ಲೇ ಹೋದರು ಮಗಳ ಬಗ್ಗೆ ಪ್ರಶ್ನೆ ಇದ್ದೇ ಇರುತ್ತೆ. ರಣಬೀರ್ ಕಪೂರ್ ಕೂಡ ಸಹಾಯ ಮಾಡುತ್ತಿರುವ ಕಾರಣ ಕೆಲಸ ಸುಲಭವಾಗಿ ಎಂದು ಈ ಹಿಂದೆಯೇ ಆಲಿಯಾ ರಿವೀಲ್ ಮಾಡಿದ್ದರು. 

'ರಾಹಾ ಸದಾ ಖುಷಿಯಾಗಿರುವ ಮಗು. ರಾಹಾ ಸುಮ್ಮನೆ ಇರುತ್ತಾರೆ ನಾವು ಆಕೆಯನ್ನು ನೋಡಿ ನಕ್ಕರೆ ಸಾಕು ಹೇಳದೆ ಕೇಳದೆ ತಿರುಗಿ ಹತ್ತಷ್ಟು ನಗು ವಾಪಸ್ ಕೊಡುತ್ತಾಳೆ. ಈಗಷ್ಟೇ ಸಣ್ಣ ಪುಟ್ಟ ಸೌಂಡ್ ಮಾಡಲು ಶುರು ಮಾಡಿದ್ದಾಳೆ..ಏನಾದರೂ ಹೇಳುವುದಕ್ಕೂ ಪ್ರಯತ್ನ ಪಟ್ಟಾಗ ಸೌಂಡ್ ಮಾಡುತ್ತಾರೆ ಅದನ್ನು ಕೇಳಿಸಿಕೊಂಡು ನಾವು ಆಕೆಗೆ ಚೀತಾ (ಚಿರತೆ) ಎಂದು ಕರೆಯುತ್ತೀವಿ. ಕೆಲಸ ಮುಗಿಸಿಕೊಂಡು ಮನೆಗೆ ಬಂದು ಎಷ್ಟು ಸುಸ್ತಾಗಿರುತ್ತದೆ ಒಮ್ಮೆ ಆಕೆ ಮುಖ ನೋಡಿದರೆ ಎಲ್ಲವೂ ಮಾಯವಾಗುತ್ತದೆ. ಸಮಯ ಸಿಕ್ಕಾಗ ಆಕೆಯನ್ನು ನನ್ನ ಮಡಿಲಿನಲ್ಲಿ ಮಲಗಿಸಿಕೊಳ್ಳುವೆ ...ಏಕೆಂದರೆ ದೊಡ್ಡವರಾಗುತ್ತ ಓಡಾಡಬೇಕು ಒಂದು ಕಡೆ ಕೂರುವುದಿಲ್ಲ ಆಗ ನನ್ನ ಮಡಿಲಿನಲ್ಲಿ ಮಲಗಬೇಕು ಅಂದ್ರೆ ಒಪ್ಪಿಕೊಳ್ಳುವುದಿಲ್ಲ' ಎಂದು ಆಲಿಯಾ ಭಟ್ ವೋಗ್ ಸಂದರ್ಶನಲ್ಲಿ ಪುತ್ರಿ ಬಗ್ಗೆ ಮಾತನಾಡಿದ್ದಾರೆ.

ತೈಮೂರ್‌ ರೀತಿ ನನ್ನ ಫೋಟೋ ಕ್ಲಿಕ್ ಮಾಡ್ತಿಲ್ಲ ಅಂತ ಮಗಳು ದೂರಬಾರದು: ಕರೀನಾ ಕಪೂರ್‌ಗೆ ಟಾಂಗ್‌ ಕೊಟ್ಟ ರಣಬೀರ್‌

ರಾಹಾ ಮತ್ತು ರಣಬೀರ್ ಕಪೂರ್ ಒಳ್ಳೆ ಬಾಂಡ್ ಹೊಂದಿದ್ದಾರೆ. ಬಿಡುವಿನ ಸಮಯದಲ್ಲಿ ರಣಬೀರ್ ಮತ್ತು ರಾಹಾ ಒಟ್ಟಿಗೆ ಇರುತ್ತಾರೆ. ಸುತ್ತಲು ನಾನಿಲ್ಲ ಅಂದ್ರೆ ನನ್ನ ಮುಖ ಮರೆಯುತ್ತಾಳೆ ಅನ್ನೋ ಭಯದಲ್ಲಿದ್ದಾರೆ ರಣಬೀರ್ ಎಂದು ಅಲಿಯಾ ಹೇಳಿದ್ದಾರೆ. 

ವೆಡ್ಡಿಂಗ್ ಆನಿವರ್ಸರಿ ದಿನ ಪತ್ನಿಗೆ 10 ಲಕ್ಷ ರೂ. ಬ್ಯಾಗ್‌ ಕೊಟ್ಟ ರಣಬೀರ್; ನೋಡಿ ಬುದ್ಧಿ ಕಲಿ ಎಂದ ಪಕ್ಕದ ಮನೆ ಆಂಟಿ

'ನಾನು ಅರ್ಥ ಮಾಡಿಕೊಂಡಿರುವ ಪ್ರಕಾರ ನೋಡಿರುವ ಪ್ರಕಾರ ರಣಬೀರ್ ಕಪೂರ್ ತುಂಬಾನೇ ಸೆನ್ಸಿಟಿವ್, ಲಾಯಲ್ ಹಾಗೂ ಸಪೋರ್ಟಿವ್. ರಾಹಾ ಹುಟ್ಟಿದ ಮೇಲೆ ರಣಬೀರ್ ಕಪೂರ್ ತುಂಬಾನೇ ಸೆನ್ಸಿಟಿವ್ ಆಗಿ ಬಿಟ್ಟಿದ್ದಾರೆ. ಒಂದು ಕ್ಷಣವೂ ಸುಮ್ಮನೆ ಇರುವುದಿಲ್ಲ ಆಕೆ ಬಗ್ಗೆ ಯೋಚನೆ ಮಾಡುತ್ತಲೇ ಇರುತ್ತಾರೆ. ಅವರಿಬ್ಬರನ್ನು ಒಟ್ಟಿಗೆ ನೋಡಲು ಖುಷಿಯಾಗುತ್ತದೆ ಏಕೆಂದರೆ ಅನಿಮಲ್ ಸಿನಿಮಾಗೆ ರಣಬೀರ್ ಸ್ವಲ್ಪ ತೂಕ ಹೆಚ್ಚಿಸಿಕೊಳ್ಳಬೇಕಿತ್ತು ದಪ್ಪಗಾಗಿರುವ ಕಾರಣ ಆಕೆಯನ್ನು ಎತ್ತಿಕೊಂಡು ಮುದಾಡುವಾಗ ಯಾವುದೋ ದೈತ್ಯ ದೇಹ ಪುಟ್ಟ ನಾಯಿಮರಿಯನ್ನು ಎತ್ತಿಕೊಳ್ಳುತ್ತಿದೆ ಅನಿಸುತ್ತದೆ. ಕೆಲವೊಮ್ಮೆ ರಾಹಾಳನ್ನು ಕಂಟ್ರೋಲ್ ಮಾಡಲು ನನಗೆ ಆಗುವುದಿಲ್ಲ ಆಗ ರಣಬೀರ್ ನೋಡಿಕೊಳ್ಳುತ್ತಾರೆ. ರಣಬೀರ್‌ಗೆ ಇರುವ ಕೈ ಚಳಕ ನನಗೆ ಬಂದಿಲ್ಲ. ನಮ್ಮ ಮನೆಯ ಎದುರು ಇರುವ ದೊಡ್ಡ ಮರದ ಕಿಟಕಿ ಬಳ ಜೋರಾಗಿ ಗಾಳಿ ಬೀಸುತ್ತದೆ ಅಲ್ಲಿ ಮಗಳನ್ನು ಕೂರಿಸಿಕೊಂಡು ರಣಬೀರ್ ದಿನ ಕಳೆಯುತ್ತಾರೆ. ರಣಬೀರ್ ಕೆಲಸದ ಮೇಲೆ ಪ್ರಯಾಣ ಮಾಡುತ್ತಿದ್ದಾರೆ ಹೀಗಾಗಿ ಮರ ತೋರಿಸುವ ಕೆಲಸವನ್ನು ನಾನು ಮಾಡುತ್ತಿರುವೆ ಹೀಗಾಗಿ ಮಗಳು ನನ್ನನ್ನು ಮರೆಯಬಹುದು ಅನ್ನೋ ಭಯ ರಣಬೀರ್‌ಗೆ ಇದೆ' ಎಂದಿದ್ದಾರೆ ಆಲಿಯಾ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್