ಐಶ್ವರ್ಯಾನ ಕಿತ್ತಾಕಿ ಕತ್ರಿನಾನ ಹಾಕೊಳ್ಳಿ; ನಿರ್ದೇಶಕ ಬನ್ಸಾಲಿಗೆ ಸಲ್ಮಾನ್ ಖಾನ್ ಹೇಳಿದ್ದ ಮಾತು ಈಗ ವೈರಲ್

By Shruthi Krishna  |  First Published Apr 28, 2023, 4:15 PM IST

ಐಶ್ವರ್ಯಾ ರೈನ ಹೊರಹಾಕಿ ಕತ್ರಿನಾನ ಹಾಕೊಳ್ಳಿ ಎಂದು ನಟ ಸಲ್ಮಾನ್ ಖಾನ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ಅಂದು ಹೇಳಿದ್ದ ಮಾತು ಈಗ ಮತ್ತೆ ವೈರಲ್ ಆಗಿದೆ.  


ಬಾಲಿವುಡ್ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಜೊತೆ ಕೆಲಸ ಮಾಡಲು ಯಾರಿಗೆ ತಾನೆ ಇಷ್ಟವಿಲ್ಲ. ಬನ್ಸಾಲಿ ಜೊತೆ ಸಿನಿಮಾ ಮಾಡಲು ಅನೇಕ ನಾಯಕರು ಹಾಗೂ ನಾಯಕಿಯರು ಕಾಯುತ್ತಿರುತ್ತಾರೆ. ಬಾಜೀರಾವ್ ಮಸ್ತಾನಿ, ರಾಮಲೀಲಾ, ಪದ್ಮಾವತ್ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ ಸಂಜಯ್ ಲೀಲಾ ಬನ್ಸಾಲಿ. ಅಂದಹಾಗೆ ಅಂದುಕೊಂಡಂತೆ ಆಗಿದ್ದರೆ ಬಾಜೀರಾವ್ ಮಸ್ತಾನಿ ಸಿನಿಮಾ ಅನೇಕ ವರ್ಷಗಳ ಹಿಂದೆಯೇ ಸೆಟ್ಟೇರಬೇಕಿತ್ತು. ಅದು ಸಲ್ಮಾನ್ ಖಾನ್ ನಟಿಸಬೇಕಿತ್ತು. ಹೌದು ಈ ಬಗ್ಗೆ ಸ್ವತಃ ಸಂಜಯ್ ಲೀಲಾ ಬನ್ಸಾಲಿ ಅವರೇ ಈ ಬಗ್ಗೆ ಬಹಿರಂಗ ಪಡಿಸಿದ್ದರು. ಈ ಬಗ್ಗೆ ಮತ್ತೊಂದು ಇಂಟ್ರಸ್ಟಿಂಗ್ ಮಾಹಿತಿ ವೈರಲ್ ಆಗಿದೆ. ಅಂದು ಬಾಜೀರಾವ್ ಮಸ್ತಾನಿ ಸಿನಿಮಾ ನಿಂತುಹೋಗಲು ಕಾರಣನೇ ಸಲ್ಮಾನ್ ಖಾನ್ ಎನ್ನಲಾಗಿದೆ. 

ನಿರ್ದೇಶಕ ಸಂಜಯ್ ಲೀಲಾ ಅಂದಿನ ಸೂಪರ್ ಹಿಟ್ ಜೋಡಿ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಜೊತೆ ಬಾಜೀರಾವ್ ಮಸ್ತಾನಿ ಸಿನಿಮಾ ಮಾಡುವ ಕನಸು ಕಂಡಿದ್ದರು. ಎಲ್ಲಾ ತಯಾರಿ ಕೂಡ ನಡೆದಿತ್ತು. ಆದರೆ ಆಗಲೇ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಇಬ್ಬರೂ ಬ್ರೇಕಪ್ ಮಾಡಿಕೊಂಡು ದೂರ ದೂರ ಆದರು. ಇಬ್ಬರದ್ದು ಕೆಟ್ಟ ಬ್ರೇಕಪ್ ಸ್ಟೋರಿ. ಐಶ್ವರ್ಯಾ ಅವರಿಂದ ದೂರಾದ ಸಲ್ಮಾನ್ ಖಾನ್ ಅವರ ಜೊತೆ ಸಿನಿಮಾ ಮಾಡುವುದಿರಲಿ ಐಶ್ವರ್ಯಾ ಅವರನ್ನು ನೋಡಲು ಕೂಡ ಇಷ್ಟಪಡುವುದಿಲ್ಲ. ಇದರಿಂದ ಸಂಜಯ್ ಲೀಲಾ ಬನ್ಸಾಲಿ ಕಂಡ ಕನಸು ಕೂಡ ಎಲ್ಲಗೆ ನಿಂತು ಹೋಗಿತ್ತು. 

Tap to resize

Latest Videos

ಅದೇ ಸಮಯದಲ್ಲಿ ಸಲ್ಮಾನ್ ಖಾನ್ ನಿರ್ದೇಶಕ ಬನ್ಸಾಲಿ ಬಳಿ ಹೋಗಿ ಐಶ್ವರ್ಯಾ ಜಾಗಕ್ಕೆ ಕತ್ರಿನಾ ಕೈಫ್ ಅವರನ್ನು ಹಾಕೊಳಿ ಎಂದು ಕೇಳಿಕೊಂಡಿದ್ದರು ಎನ್ನಲಾಗಿದೆ. ಐಶ್ವರ್ಯಾ ರೈ ಜೊತೆ ಸಿನಿಮಾ ಮಾಡಲು ಸಾಧ್ಯವಾಗದೇ ಇರುವಾಗ ಸಲ್ಮಾನ್ ಖಾನ್ ನೇರವಾಗಿ ಬನ್ಸಾಲಿ ಆಫೀಸ್‌ಗೆ ಹೋಗಿ ಮಸ್ತಾನಿಯಾಗಿ ಕತ್ರಿನಾ ಕೈಫ್ ಅವರನ್ನು ಹಾಕೊಳಿ ಎಂದು ಹೇಳಿದ್ದರು. ಕತ್ರಿನಾ ಕೈಫ್ ಅವರನ್ನು ಸಹ ಕರೆದುಕೊಂದು ಹೋಗಿದ್ದರಂತೆ. ಆದರೆ ಸಲ್ಮಾನ್ ಖಾನ್ ಅವರಿಗೆ ಇದು ಅಷ್ಟವಾಗದ ಕಾರಣ ಆ ಸಿನಿಮಾವನ್ನು ಅಲ್ಲಿಗೆ ಕೈಬಿಟ್ಟಿದ್ದರು.  

Sangeeta Bijlani: ಸಲ್ಮಾನ್​ ಕೆನ್ನೆಯ ಹಿಂಡಿದ ಮಾಜಿ ಗೆಳತಿ- ಆಹಾ ಎಂಥ ದೃಶ್ಯ ಎಂದ ನೆಟ್ಟಿಗರು!

ಆದರೀಗ ಬಾಜಿರಾವ್ ಮಸ್ತಾನಿಯಾಗಿ ದೀಪಿಕಾ ಪಡುಕೋಣೆ ಮತ್ತು ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದರು. ಇವರಿಗಾಗಿಯೇ ಈ ಮೊದಲು ಸಿನಿಮಾ ನಿಂತುಹೋಗಿತ್ತೇನೋ ಎನ್ನುವ ಹಾಗೆ ಆಗಿದೆ. ಈ ಸಿನಿಮಾ ಬಳಿಕ ಸಂಜಯ್ ಲೀಲಾ ಬನ್ಸಾಲಿ ಜೊತೆ ದೀಪಿಕಾ ಮತ್ತು ರಣ್ವೀರ ರಾಮ ಲೀಲಾ ಮತ್ತು ಪದ್ಮಾವತ್ 2 ಸಿನಿಮಾಗಳನ್ನು ಮಾಡಿದರು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಬನ್ಸಾಲಿ, 15 ವರ್ಷಗಳ ಹಿಂದಿಯೇ ಸಿನಿಮಾ ಅನೌನ್ಸ್ ಆಗಿತ್ತು. ಆಗ ದೀಪಿಕಾ ಮತ್ತು ರಣ್ವೀರ್ ಎಲ್ಲಾ ಶಾಲೆಗೆ ಹೋಗುತ್ತಿದ್ದರು. ಅಂದು ಸಲ್ಮಾನ್ ಖಾನ್ ಮಾಡಬೇಕಿತ್ತು' ಎಂದು ಹೇಳಿದ್ದರು. ಆದರೆ ಯಾಕೆ ಸಿನಿಮಾ ನಿಂತು ಹೋಗಿತ್ತು ಎನ್ನುವ ಬಗ್ಗೆ ಬಹಿರಂಗ ಪಡಿಸಿರಲಿಲ್ಲ. 

ಶೂಟಿಂಗ್‌ ಸೆಟ್‌ನಲ್ಲಿ ಸಿಗರೇಟು ಸೇದುತ್ತಾ ಕುಳಿತ ಸಲ್ಮಾನ್ ಖಾನ್; ವಿಡಿಯೋ ವೈರಲ್

ಐಶ್ವರ್ಯಾ ಮತ್ತು ಸಲ್ಮಾನ್ ಖಾನ್ ಇಬ್ಬರೂ ಬೇರೆ ಬೇರೆಯಾಗಿ ಬರೋಬ್ಬರಿ 20 ವರ್ಷಗಳ ಮೇಲಾಗಿದೆ. ಆದರೆ ಇಂದಿಗೂ ಅವರು ಎಲ್ಲಿಯೋ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಒಬ್ಬರಿಗೊಬ್ಬರು ಮಾತನಾಡಿಲ್ಲ. ಆದರೆ ಅಭಿಮಾನಿಗಳಿಗೆ ಇಂದಿಗೂ ಐಶ್ವರ್ಯಾ ಮತ್ತು ಸಲ್ಮಾನ್ ಖಾನ್ ಅವರನ್ನು ಒಟ್ಟಿಗೆತೆರೆಮೇಲೆ ನೋಡಲು ಕಾಯುತ್ತಿದ್ದಾರೆ. ಒಂದಲ್ಲೊಂದು ದಿನ ಆಸೆ ನೆರವೇರುತ್ತೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಐಶ್ವರ್ಯಾ ರೈ ಮದುವೆಯಾಗಿ ಮಗಳು ಸಹ ಇದ್ದಾರೆ. ಸಲ್ಮಾನ್ ಖಾನ್ ಮದುವೆಯಾಗದೆ ಸಿಂಗಲ್ ಆಗಿಯೇ ಜೀವನ ನಡೆಸುತ್ತಿದ್ದಾರೆ. ಮುಂದೊಂದು ದಿನ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಾರಾ ಕಾದುನೋಡಬೇಕು ಅಷ್ಟೆ.  

click me!