ಬಿಷ್ಣೋಯ್ ವಿರುದ್ಧ ವೈರತ್ವ ಅಂತ್ಯಕ್ಕೆ 5 ಕೋಟಿ ರೂ, ಸಲ್ಮಾನ್‌ಗೆ ಬಂದ ಬೆದರಿಕೆ ಮೆಸೇಜ್‌ನಲ್ಲಿ ಟ್ವಿಸ್ಟ್!

By Chethan KumarFirst Published Oct 21, 2024, 10:46 PM IST
Highlights

ಬಿಷ್ಣೋಯ್ ಗ್ಯಾಂಗ್ ಬೆದರಿಕೆ ನಡುವೆ ಬಂದ ವ್ಯಾಟ್ಸಾಪ್ ಬೆದರಿಕೆ ಮೆಸೇಜ್ ಭಾರಿ ತಲೆನೋವಿಗೆ ಕಾರಣವಾಗಿತ್ತು. ಬಿಷ್ಣೋಯ್ ವಿರುದ್ದ ವೈರತ್ವ ಅಂತ್ಯಗೊಳಿಸಲು 5 ಕೋಟಿ ರೂ ಪಾವತಿಸಿ ಎಂಬ ಬೆದರಿಕೆ ಮೆಸೇಜ್ ಕಳುಹಿಸಿದ್ದ ಕಿರಾತಕ ಇದೀಗ ಮತ್ತೊಂದು ಮೆಸೇಜ್ ಮಾಡಿ ಪ್ರಕರಣ ಟ್ವಿಸ್ಟ್ ನೀಡಿದ್ದಾನೆ.

ಮುಂಬೈ(ಅ.21) ಲಾರೆನ್ಸ್ ಬಿಷ್ಣೋಯ್ ಹೆಸರು ಕೇಳಿದರೆ ಇದೀಗ ಬಾಲಿವುಡ್ ನಡುಗುತ್ತಿದೆ. ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಬಳಿಕ ನಡುಕ ಹೆಚ್ಚಾಗಿದೆ. ಸಲ್ಮಾನ್ ಖಾನ್‌‌ಗೆ ಈಗಾಗಲೇ ಬೆದರಿಕೆ ಹಾಕಿದ್ದ ಬಿಷ್ಣೋಯ್ ಗ್ಯಾಂಗ್ ಇದೀಗ ಈ ಬೆದರಿಕೆ ತೀವ್ರಗೊಳಿಸಿದೆ. ಇತ್ತ ಸಲ್ಮಾನ್ ಖಾನ್  ಬುಲೆಟ್ ಪ್ರೂಫ್ ಕಾರು, ಹೆಚ್ಚುವರಿ ಭದ್ರತೆಯಲ್ಲಿ ತಿರುಗಾಡುವಂತಾಗಿದೆ. ಇದರ ನಡುವೆ ಬಿಷ್ಣೋಯ್ ಗ್ಯಾಂಗ್ ವಿರುದ್ಧದ ವೈರತ್ವ ಅಂತ್ಯಗೊಳಿಸಲು 5 ಕೋಟಿ ರೂಪಾಯಿ ಪಾವತಿಸಿ. ಮೊತ್ತ ಪಾವತಿಸಿದರೆ ಜೀವಂತವಾಗಿ ಉಳಿಯುತ್ತಿಯಾ, ಇಲ್ಲಾ ಅಂದರೆ ಪರಿಣಾಮ ಎದುರಿಸಬೇಕು ಅನ್ನ ಮೆಸೇಜ್ ಎಲ್ಲರ ನಿದ್ದೆಗೆಡಿಸಿತ್ತು.  ಆದರೆ ಈ ಬೆದರಿಕೆ ಮೆಸೇಜ್‌‌ಗೆ ಟ್ವಿಸ್ಟ್ ಸಿಕ್ಕಿದೆ.

ಅಕ್ಟೋಬರ್ 18 ರಂದು ಮುಂಬೈ ಟ್ರಾಫಿಕ್ ಪೊಲೀಸ್ ವ್ಯಾಟ್ಸ್ಆ್ಯಪ್ ನಂಬರ್‌ಗೆ ಮೆಸೇಜ್ ಒಂದು ಬಂದಿತ್ತು. ಮೊದಲೇ ಮುಂಬೈ ನಡುಗಿತ್ತು. ಬಿಷ್ಣೋಯ್ ಗ್ಯಾಂಗ್ ಬೆದರಿಕೆಗೆ ಮುಂಬೈ ಪೊಲೀಸರು ಸಲ್ಮಾನ್ ಖಾನ್ ಸೇರಿ ಕೆಲವರಿಗೆ ಹೆಚ್ಚುವರಿ ಭದ್ರತೆ , ತನಿಖೆಯ ತಲೆನೋವಿನಲ್ಲಿತ್ತು. ಇದರ ನಡುವೆ ಪೊಲೀಸರಿಗೆ ಬಂದ ವ್ಯಾಟ್ಸ್ಆ್ಯಪ್ ಮೆಸೇಜ್ ಮತ್ತಷ್ಟು ಆತಂಕ ಸೃಷ್ಟಿಸಿತ್ತು. 

Latest Videos

ಸಲ್ಮಾನ್ ಹತ್ಯೆಗೆ 25 ಲಕ್ಷ ಡೀಲ್ ಕುದಿರಿಸಿದ್ದ ಬಿಷ್ಣೋಯಿ? ಪಾಕ್‌ನಿಂದ ಬರಲಿದ್ದವು ಎಕೆ-47, ಎಕೆ-92, ಎಂ 16 ಗನ್!

ಬಿಷ್ಣೋಯ್ ಗ್ಯಾಂಗ್ ವಿರುದ್ಧ ವೈರತ್ವ ಅಂತ್ಯಗೊಳಿಸಲು ಸಲ್ಮಾನ್ ಖಾನ್ 5 ಕೋಟಿ ರೂಪಾಯಿ ಪಾವತಿಸಬೇಕು. 5 ಕೋಟಿ ರೂಪಾಯಿ ಪಾವತಿಸಿದರೆ ಜೀವಂತವಾಗಿ ಉಳಿಯುತ್ತೀಯ.ಪಾವತಿಸಲು ಹಿಂದೇಟು ಹಾಕಿದರೆ ಎನ್‌ಸಿಪಿ ನಾಯ ಬಾಬಾ ಸಿದ್ದಿಕಿಗೆ ಆದ ಪರಿಸ್ಥಿತಿಗಿಂತ ಹೀನಾಯವಾಗಿರುತ್ತದೆ. ಈ ಸಂದೇಶವನ್ನು ಲುಘವಾಗಿ ಪರಿಗಣಿಸಬೇಡಿ. ನಿರ್ಧಾರ ನಿಮ್ಮದು ಎಂದು ಬೆದಿರಿಕೆ ಸಂದೇಶ ಕಳುಹಿಸಲಾಗಿತ್ತು. 

ಮುಂಬೈ ಟ್ರಾಫಿಕ್ ಪೊಲೀಸರಿಗೆ ಬಂದ ಈ ಮೇಸೇಜ್ ಕುರಿತು ತನಿಖೆ ಆರಂಭಗೊಂಡಿತ್ತು. ಪ್ರಕರಣ ದಾಖಲಾಗಿತ್ತು. ಈ ಸಂದೇಶ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕಳುಹಿಸಿರುವ ಸಂದೇಶವೇ? ಅಥವಾ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಬಂದ ನಕಲಿ ಸಂದೇಶವೇ ಅನ್ನೋದು ಪತ್ತೆ ಹಚ್ಚಲು ತನಿಖೆ ಆರಂಭಗೊಂಡಿತ್ತು. ಆದರೆ ಈ ಸಂದೇಶವನ್ನು ಮುಂಬೈ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು. ಇಷ್ಟೇ ಅಲ್ಲ ಸಲ್ಮಾನ್ ಖಾನ್ ಭದ್ರತೆಯನ್ನೂ ಹೆಚ್ಚಿಸಿದ್ದರು.

ಮೂರು ದಿನಗಳ ಬಳಿಕ ಇದೀಗ ಮುಂಬೈ ಪೊಲೀಸರಿಗೆ ಅದೇ ಬೆದರಿಕೆ ಬಂದ ನಂಬರ್‌ನಿಂದ ಮತ್ತೊಂದು ಮೆಸೇಜ್ ಬಂದಿದೆ. ಸಲ್ಮಾನ್ ಖಾನ್‌ಗೆ ಕಳುಹಿಸಿರು ಮೆಸೇಜ್ ಬೈ ಮಿಸ್ಟೇಕ್ ಆಗಿ ಮಾಡಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಮೆಸೇಜ್ ಮಾಡಿದ್ದಾನೆ. ಇತ್ತ ಪೊಲೀಸರು ಈ ಮೊಬೈಲ್ ನಂಬರ್ ಟ್ರೇಸ್ ಮಾಡಿದ್ದರೆ. ಲೊಕೇಶನ್ ಜಾರ್ಖಂಡ್‌ನಲ್ಲಿದೆ ಅನ್ನೋ ಮಾಹಿತಿಯೂ ಬಹಿರಂಗವಾಗಿದೆ. ಇದೀಗ ಪೊಲೀಸರ ಒಂದು ತಂಡ ಜಾರ್ಖಂಡ್‌ಗೆ ತೆರಳಿದೆ.

ಪ್ರಾಣಿ ಹತ್ಯೆ ಸಲ್ಮಾನ್​ಗೆ ಆಗಲ್ಲ, ಜಿರಳೆಯನ್ನೂ ಕೊಂದವನಲ್ಲ...ಕ್ಷಮೆ ಯಾಕೆ ಕೇಳ್ಬೇಕು? ಅಪ್ಪ ಸಲೀಂ ಖಾನ್​ ಪ್ರತಿಕ್ರಿಯೆ

click me!