ಇವಳೇ ಅವಳು... ಕಾಜೋಲ್​ ಮಗಳು... ಹೇಗಿದ್ಲು ಹೇಗಾದ್ಲು ನೋಡಿ ನೀಸಾ ದೇವಗನ್​- ಹಳೆ ಫೋಟೋ ವೈರಲ್

By Suchethana D  |  First Published Oct 21, 2024, 6:46 PM IST

ಹಾಟ್​ ಬ್ಯೂಟಿ, ಸುಂದರಿ ಎಂದೆಲ್ಲಾ ಕರೆಸಿಕೊಳ್ಳುವ ಕಾಜೋಲ್​- ಅಜೆಯ್​ ದೇವಗನ್​ ಪುತ್ರಿ ನೀಸಾ ದೇವಗನ್​ ಹಳೆಯ ಫೋಟೋಗಳು ವೈರಲ್​ ಆಗಿವೆ.   
 


ನಟರಾದ ಅಜಯ್ ದೇವಗನ್ ಮತ್ತು ಕಾಜೋಲ್ (Kajol) ಅವರ ಪುತ್ರಿ ನೀಸಾ ದೇವಗನ್ ಸಾಮಾಜಿಕ ಮಾಧ್ಯಮದ ತಾರೆ. ಇಂಟರ್​ನೆಟ್​ನಲ್ಲಿ ಪ್ರಸಿದ್ಧವಾಗಿರುವ ಎಲ್ಲಾ ಸ್ಟಾರ್​ಕಿಡ್ಸಲ್ಲಿ, ನೀಸಾ ಬಹುಶಃ ಹೆಚ್ಚು ಪ್ರೀತಿಪಾತ್ರರಾಗಿದ್ದಾರೆ. ನೀಸಾ ಪ್ರಸ್ತುತ ಉದ್ಯಮದ ಭಾಗವಾಗಿಲ್ಲ, ಆದರೂ ಅವರು ಅತ್ಯಂತ ಪ್ರಸಿದ್ಧರಾಗಿದ್ದಾರೆ. ಈ ಸ್ಟಾರ್ ಕಿಡ್ ಆಗಾಗ್ಗೆ ಪಾರ್ಟಿ ಮಾಡುವುದು ಮತ್ತು  ಸ್ನೇಹಿತರೊಂದಿಗೆ ಮೋಜು ಮಾಡುವುದು ಕಂಡುಬರುತ್ತದೆ. ಆದ್ದರಿಂದ ಅವರು ಎಲ್ಲೇ  ಹೋದರೂ ಕ್ಯಾಮೆರಾ ಕಣ್ಣುಗಳು ಅವರನ್ನು ಹಿಂಬಾಲಿಸುತ್ತಲೇ ಇರುತ್ತದೆ. ನೀಸಾ ಬಾಲಿವುಡ್‌ನ ಸ್ಟಾರ್ ಕಿಡ್‌ಗಳಲ್ಲಿ ಒಬ್ಬರಾಗಿರುವ ಕಾರಣ  ಅವರ ಹೆಸರು ಸಾಮಾನ್ಯವಾಗಿ ಎಲ್ಲರ ಬಾಯಲ್ಲಿ ಇರುತ್ತದೆ.  ಪ್ರಪಂಚದಾದ್ಯಂತದ ಅನೇಕ ನಗರಗಳಲ್ಲಿ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡುವ ನೀಸಾ,  ಕೆಲವು ಬಾರಿ  ಸ್ಟಾರ್​ ಕಿಡ್ಸ್​ ಜೊತೆ ಕಾಣಿಸಿಕೊಂಡರೆ ಇನ್ನು ಕೆಲವು ಬಾರಿ ಇನ್ನಾರದೋ ಜೊತೆ ಅಮಲಿನಲ್ಲಿ ಇರುವಂತೆ ಕಾಣಿಸಿಕೊಳ್ಳುತ್ತಾರೆ. ಆ ಚಿತ್ರವನ್ನು ನೋಡಿದಾಗಲೆಲ್ಲಾ ಈಕೆ ಈ ಹುಡುಗನ ಜೊತೆ ಡೇಟಿಂಗ್​ ಮಾಡ್ತಾ ಇದ್ದಾರೆ ಎನ್ನುವ ಅನುಮಾನ ಕಾಡುತ್ತದೆ.

ಹಾಟ್​ನೆಸ್​ನಲ್ಲಿ ಕಾಜೋಲ್​ನಂತೆ ಮಗಳು ಇದ್ದಾಳೆ ಎನ್ನುವುದು ಮಾತು. ನೀಸಾ ಅವರ ಬ್ಯೂಟಿಗೆ ಮನಸೋಲುವವರೇ ಹೆಚ್ಚು. ಆದರೆ ಅಸಲಿಯತ್ತು ಗೊತ್ತಾ? ಬಹುತೇಕ ತಾರೆಯರಂತೆ ನೀಸಾ ಕೂಡ ತಮ್ಮ ಹಲವಾರು ಅಂಗಗಳಿಗೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿದ್ದಾರೆ. ನೀಸಾ ಅವರ ಮೊದಲಿನ ಫೋಟೋ ಹಾಗೂ ಈಗಿನ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ಮೇಲೆ ಇರುವ ಫೋಟೋದಲ್ಲಿ ವ್ಯತ್ಯಾಸವನ್ನು ಸರಿಯಾಗಿ ಗುರುತಿಸಬಹುದು. ಬಹುತೇಕ ನಟಿಯರು ತಮ್ಮ ವಿವಿಧ ಅಂಗಗಳಿಗೆ ಪ್ಲಾಸ್ಟಿಕ್​ ಸರ್ಜರಿ ಹಾಕಿಸಿಕೊಂಡು ಸುಂದರಿಯಾಗಿ ಕಾಣಿಸ್ತಿರೋರೇ. ಶ್ರೀದೇವಿ ಕಾಲದಿಂದಲೂ ಇದು ನಡೆದು ಬಂದಿದೆ. ಅದೇ ರೀತಿ ನೀಸಾ ಕೂಡ ಮುಖದ ಅಂದ ಹೆಚ್ಚಿಸಿಕೊಳ್ಳಲು ಕೆಲವು ಶಸ್ತ್ರಚಿಕಿತ್ಸೆಗಳ ಮೊರೆ ಹೋಗಿರುವುದು ಇದೆ. ಬಹುಶಃ ಇವರ ಮೊದಲಿನ ಫೋಟೋ ನೋಡಿದರೆ, ಅವರೇ ಇವರು ಹೌದಾ ಎನ್ನುವ ಹಾಗಿದೆ. ಒಟ್ಟಿನಲ್ಲಿ ಈಗ ಸೌಂದರ್ಯದಿಂದಲೇ ನೀಸಾ ಎಲ್ಲರ ಮನಸ್ಸನ್ನು ಸೂರೆಗೊಳ್ಳುತ್ತಿದ್ದಾರೆ. 

Tap to resize

Latest Videos

undefined

ವಿಚಿತ್ರ ಬಟ್ಟೆ ಧರಿಸಿ ವೇದಿಕೆಯಲ್ಲಿ ಒಂದೊಂದೇ ಕಳಚಿದ ಉರ್ಫಿ ಜಾವೇದ್! ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು

ಅಷ್ಟಕ್ಕೂ ಕೆಲ ತಿಂಗಳ ಹಿಂದಷ್ಟೇ ಈಕೆಯ ಹೆಸರು ಅರ್ಹಾನ್ ಅವತ್ರಮಣಿ ಎಂಬ ಯುವಕನ ಜೊತೆ ಥಳಕು ಹಾಕಿಕೊಂಡಿತ್ತು. ಪಾರ್ಟಿ, ಫ್ರೆಂಡ್ಸ್, ಟ್ರಿಪ್ ಅಂತ ಓಡಾಡುವ ನಿಸಾ  ಲಂಡನ್‌ನಲ್ಲಿ ಅರ್ಹಾನ್​ ಜೊತೆ ಮೋಜು ಮಸ್ತಿ ಮಾಡುತ್ತಿದ್ದರು. ಅದರ ವಿಡಿಯೋ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿಸಾ ಅವರ ಬೆಸ್ಟ್ ಫ್ರೆಂಡ್‌ಗಳಲ್ಲಿ ಅರ್ಹಾನ್ ಅವತ್ರಮಣಿ ಕೂಡ ಒಬ್ಬರು. ಈತ  ಸಿನಿಮಾರಂಗದಲ್ಲಿ ಇಲ್ಲ. ಆದರೂ ಸ್ಟಾರ್ ಕಿಡ್‌ಗಳ ಜೊತೆ ಸಿಕ್ಕಾಪಟ್ಟೆ ಕ್ಲೋಸ್. ಫ್ಯಾಷನ್ ಕ್ರೇಸ್ ಅರ್ಹಾನ್ ಮತ್ತು ನಿಸಾ ಇಬ್ಬರೂ ಸಿಕ್ಕಾಪಟ್ಟೆ ಕ್ಲೋಸ್ ಆಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ  ಹರಿದಾಡುತ್ತಿತ್ತು. ನಂತರ  ನೀಸಾ ಅವರು  ಖ್ಯಾತ ಉದ್ಯಮಿ ವೇದಾಂತ್ ಮಹಾಜನ್ (Vedanth Mahajan) ಅವರೊಂದಿಗೆ  ಡೇಟಿಂಗ್ (Dating) ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. 
 

ಅಂದಹಾಗೆ ಸಾಮಾನ್ಯವಾಗಿ ನ್ಯಾಸ ದೇವಗನ್​ ಎಂದು ಕರೆಸಿಕೊಳ್ಳುವ ಈಕೆಯ  ನಿಜವಾದ ಹೆಸರು ನೀಸಾ (Nysa) ಅಂತೆ. ಆದರೆ  ನ್ಯಾಸ ಎನ್ನುವುದು ಜನಪ್ರಿಯ ಹೆಸರಾಗಿರುವ ಕಾರಣ ಎಲ್ಲರೂ ಹಾಗೆಯೇ ಕರೆಯುವುದುಂಟು.  ಕೆಲವರು ನೈಸಾ, ನಿಶಾ,  ನಿಶ್ಸಾ ಎಂದೂ ಕರೆಯುವುದು ಉಂಟು. ಇದೇ ರೀತಿ ಕರೆದಿರುವುದು ತಮಗೆ ಕಿರಿಕಿರಿ ಉಂಟು ಮಾಡುತ್ತದೆ ಎಂದು ಹಿಂದೊಮ್ಮೆ ನೀಸಾ ಹೇಳಿಕೊಂಡಿದ್ದರು. ಇದರ ವಿಡಿಯೋ ಒಂದು ವೈರಲ್ ಆಗಿತ್ತು. ವೈರಲ್ ವೀಡಿಯೊದಲ್ಲಿ, ನೀಸಾ, ತಮ್ಮ ಹೆಸರು ನ್ಯಾಸಾ ಅಲ್ಲ, ನೀಸಾ ಎನ್ನುವುದನ್ನು ಹೇಳುವುದನ್ನು ಕೇಳಬಹುದು. ಈಕೆ ಬರುತ್ತಿದ್ದಂತೆಯೇ  ಪಾಪರಾಜಿಗಳು ನೈಸಾ, ನೈಶಾ ಎಂದೆಲ್ಲಾ ಕರೆಯಲು ಶುರು ಮಾಡಿದಾಗ ಕಾರಿನ ಒಳಗೆ ಕುಳಿತು ಸ್ವಲ್ಪ ಬೇಸರದಿಂದಲೇ ನನ್ನ ಹೆಸರು ನೀಸಾ ಎನ್ನುತ್ತಾರೆ ಈಕೆ. ವೀಡಿಯೊದಲ್ಲಿ, ನೀಸಾ ಆಪ್ತ ಸ್ನೇಹಿತ ಓರ್ಹಾನ್ ಅವತ್ರಾಮಣಿಯೊಂದಿಗೆ ನೋಡಬಹುದು. ಇಬ್ಬರೂ ರೆಸ್ಟೋರೆಂಟ್‌ನಿಂದ (Restaurant) ಹೊರಬರುತ್ತಿರುವುದು ಕಾಣಿಸುತ್ತದೆ. ವಿಡಿಯೋದಲ್ಲಿ ಅಜಯ್​ ದೇವಗನ್​  ಪುತ್ರಿ ನೀಸಾ ದೇವಗನ್ ಕಾರಿನಲ್ಲಿ ಕುಳಿತುಕೊಳ್ಳಲು ಹೋಗುವಾಗ  ಪಾಪರಾಜಿಗಳು ಅವರನ್ನು ನ್ಯಾಸ ನ್ಯಾಸ ಎಂದು ಕರೆಯುತ್ತಾರೆ. ಅದಕ್ಕೆ ಆಕೆ,  'ನನ್ನ ಹೆಸರು ನೀಸಾ' ಎಂದು ಹೇಳಿದರು.
 

ನದಿ ಬಳಿ ನಿಂತು ಬದುಕಿದ್ದರೆ ಮತ್ತೆ ಸಿಗ್ತೇನೆ ಎಂದ 'ಭಾಗ್ಯಲಕ್ಷ್ಮಿ' ನಟಿ ಸುಷ್ಮಾ: ಆತಂಕಗೊಂಡ ಫ್ಯಾನ್ಸ್​

click me!