
ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಬಿಗ್ ಬಿ ಎಲ್ಲಿಗೆ ಹೋದರೂ ಸಾವಿರಾರು ಅಭಿಮಾನಿಗಳು ಅವರನ್ನು ನೋಡಲು ಬರುತ್ತಾರೆ. ಅಮಿತಾಬ್ ಬಚ್ಚನ್ ಮನೆಯಿಂದ ಹೊರಬಂದ ತಕ್ಷಣ ಅವರ ಜೊತೆಗೆ ಜಿತೇಂದ್ರ ಶಿಂಧೆ ಎಂಬ ವ್ಯಕ್ತಿ ಆಕ್ಟಿವ್ ಆಗಿ ಬಿಡುತ್ತಾರೆ. ಸಖತ್ ಅಲರ್ಟ್ ಆಗಿ ಅಮಿತಾಭ್ ಜೊತೆ ಹೆಜ್ಜೆ ಹಾಕುತ್ತಾರೆ. ಈ ವ್ಯಕ್ತಿ ಅಮಿತಾಬ್ ಬಚ್ಚನ್ ಜೊತೆಗಿನ ಪ್ರತಿಯೊಂದು ಫೋಟೋದಲ್ಲೂ ಕಾಣಿಸಿಕೊಳ್ಳುತ್ತಾರೆ. ಬಿಗ್ ಬಿ ಜೊತೆ ನೆರಳಿನಂತೆ ಬದುಕುವ ಜಿತೇಂದ್ರ ಶಿಂಧೆ ಅಮಿತಾಭ್ ಪರ್ಸನಲ್ ಬಾಡಿಗಾರ್ಡ್.
ಜಿತೇಂದ್ರ ಶಿಂಧೆ ಅಮಿತಾಬ್ ಬಚ್ಚನ್ ಅವರ ವೈಯಕ್ತಿಕ ಅಂಗರಕ್ಷಕರಾಗಿದ್ದು, ಅವರು ಭಾರತ ಹಾಗೂ ವಿದೇಶಗಳಲ್ಲಿ ಅಮಿತಾಬ್ ಬಚ್ಚನ್ ಅವರ ಭದ್ರತೆಯನ್ನು ನೋಡಿಕೊಳ್ಳುತ್ತಾರೆ. ಚಿತ್ರೀಕರಣದಿಂದ ಕೆಸಿಬಿ ಸೆಟ್ ವರೆಗೆ ಅಮಿತಾಬ್ ಬಚ್ಚನ್ ಜೊತೆ ಶಿಂಧೆ ನೆರಳಿನಂತೆ ಬರುತ್ತಾರೆ. ಜಿತೇಂದ್ರ ಶಿಂಧೆ ತನ್ನದೇ ಆದ ಭದ್ರತಾ ಏಜೆನ್ಸಿಯನ್ನು ಹೊಂದಿದ್ದಾರೆ. ಆದರೆ ಅವರು ಸ್ವತಃ ಮೆಗಾಸ್ಟಾರ್‌ಗೆ ಕಾವಲು ನಿಲ್ಲುತ್ತಾರೆ. ಅಮಿತಾಬ್ ಬಚ್ಚನ್ ಬಾಡಿಗಾರ್ಡ್‌ಗೆ ವಾರ್ಷಿಕ 1.5 ಕೋಟಿ ರೂ.ಗಳ ವೇತನವನ್ನು ನೀಡುತ್ತಾರೆ. ಇದು ದೇಶದ ಅನೇಕ ಖಾಸಗಿ ಕಂಪನಿಗಳ ಸಿಇಒಗಳ ಸಂಬಳಕ್ಕಿಂತ ಹೆಚ್ಚಾಗಿದೆ.
ಹೀರೋ ಆಗೋ ಮುನ್ನ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡ್ತಿದ್ದ ಅಮಿತಾಭ್
ಪ್ರಸಿದ್ಧ ಅಮೇರಿಕನ್ ನಟ ಮತ್ತು ನಿರ್ಮಾಪಕ ಎಲಿಜಾ ವುಡ್ ಅವರಿಗೂ ಶಿಂಧೆ ಅವರ ಭಾರತ ಪ್ರವಾಸದ ಸಮಯದಲ್ಲಿ ಭದ್ರತೆಯನ್ನು ಒದಗಿಸಿದ್ದಾರೆ. ವುಡ್ ಗೆ ಭದ್ರತೆ ನೀಡುವಂತೆ ಬಿಗ್ ಬಿ ಶಿಂಧೆ ಅವರನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ. ಹಲವು ವರ್ಷಗಳಿಂದ ಅಮಿತಾಬ್ ಬಚ್ಚನ್ ಅವರಿಗೆ ಅವರು ಭದ್ರತೆ ನೀಡುತ್ತಿದ್ದಾರೆ.
ಬಾಲಿವುಡ್ ತಾರೆ ಅನುಷ್ಕಾ ಶರ್ಮಾಗೆ ವೈಯಕ್ತಿಕ ಅಂಗರಕ್ಷಕ ಸೋನು ಇದ್ದಾರೆ. ಅನುಷ್ಕಾ ಶರ್ಮಾ ತನ್ನ ಸೇವೆಗಳಿಗಾಗಿ ಪ್ರಕಾಶ್ ಸಿಂಗ್ ಅಥವಾ ಸೋನುಗೆ ತುಂಬಾ ಹೆಚ್ಚಿನ ವೇತನ ನೀಡುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.