ನಂಬಬೇಡಿ, ಈ ತಾರೆಯರ ಆಕರ್ಷಕ ಸ್ತನಗಳು ನಿಜವಲ್ಲ!

By Suvarna News  |  First Published Aug 26, 2021, 5:50 PM IST

ಕೆಲವರು ಬಾಲಿವುಡ್ ತಾರೆಯರನ್ನು ನೋಡಿದಾಗ ಅವರ ಆಕರ್ಷಕವಾದ, ಎದ್ದು ಕಾಣುವ ಎದೆಯ ಸಂಪತ್ತಿಗೆ ಪಡ್ಡೆ ಹುಡುಗರು ಮಾರು ಹೋಗುತ್ತಾರೆ. ಆದರೆ ಮೇಲ್ನೋಟಕ್ಕೆ ಕಾಣುವುದೆಲ್ಲವೂ ನಿಜವಲ್ಲ. ಎದೆಯನ್ನು ಹಿಗ್ಗಿಸಿಕೊಂಡ ತಾರೆಯರು ಇಲ್ಲಿದ್ದಾರೆ ನೋಡಿ.


ಬಾಲಿವುಡ್‌ ಮತ್ತು ಫ್ಯಾಶನ್ ಇಂಡಸ್ಟ್ರಿಯಲ್ಲಿ ಇರುವ ಸೆಲೆಬ್ರಿಟಿಗಳಿಗೆ ಒಳಗೊಳಗೇ ಒಂದು ಆತಂಕವಿರುತ್ತದೆ. ವಯಸ್ಸಾದಂತೆ ತಮ್ಮ ಆಕರ್ಷಣೆ ಕುಂದಿದರೆ ಜನ ತಮ್ಮನ್ನು ನೋಡಲು ಬರೋಲ್ಲ ಎಂಬುದೇ ಈ ಆತಂಕಕ್ಕೆ ಕಾರಣ. ಹೀಗಾಗಿ ತಮ್ಮ ಆಕರ್ಷಣೆ ಉಳಿಸಿಕೊಳ್ಳೋಕೆ ಇವರು ಮೂಗನ್ನು ತಿದ್ದುವ ಸರ್ಜರಿ, ಕಪೋಲಕ್ಕೆ ಹೊಳಪು ತರುವ ಕಾಸ್ಮೆಟಿಕ್ ಸರ್ಜರಿ, ಹುಬ್ಬುಗಳನ್ನು ಆಕರ್ಷಕಗೊಳಿಸುವ, ಗಲ್ಲದಲ್ಲಿ ಉಳಿ ಕೂರಿಸುವ ಪ್ಲಾಸ್ಟಿಕ್ ಸರ್ಜರಿ ಇತ್ಯಾದಿಗಳನ್ನೆಲ್ಲಾ ಮಾಡಿಕೊಳ್ಳುತ್ತಾರೆ. ಕಲೆದ ಒಂದು ದಶಕದಿಂದ ಹೆಚ್ಚಾಗಿರುವ ಇನ್ನೊಂದು ಸರ್ಜರಿ ಅಂದರೆ ಬ್ರೆಸ್ಟ್ ಇಂಪ್ಲಾಂಟ್ ಅಥವಾ ಎದೆಯ ವಿಸ್ತರಣೆ. ತಮ್ಮ ಸ್ತನಗಳಲ್ಲಿ ಸಿಲಿಕಾ ತುಂಬಿಸಿಕೊಂಡು ಅದನ್ನು ಇನ್ನಷ್ಟು ಎದ್ದು ಕಾಣುವಂತೆ ಮಾಡುವ ಈ ತಾರೆಯರ ಪಡಿಪಾಡಲು ಬಹಳ. ಇವರ ಎದೆಗಾರಿಕೆ ನೋಡಿ ಮೋಸಹೋಗಬೇಡಿ, ಇವು ನಿಜವಲ್ಲ. ಅಂಥ ಹಲವಾರು ಸೆಲೆಬ್ರಿಟಿಗಳ ವಿವರ ಇಲ್ಲಿದೆ. 

ಬಿಪಾಶ ಬಸು
ಕೃಷ್ಣವರ್ಣದ ಈ ಮಾದಕ ಸುಂದರಿ ತಮ್ಮ ಎದೆಯ ಸಂಪತ್ತನ್ನು ಪ್ರದರ್ಶಿಸಲು ಎಂದೂ ಹಿಂಜರಿದವರಲ್ಲ. ಮಾಡೆಲಿಂಗ್ ಮಾಡುತ್ತಿದ್ದ ಇವರು ರಾಝ್ ಫಿಲಂನಲ್ಲಿ ಬಾಲಿವುಡ್‌ನಲ್ಲಿ ಜನಪ್ರಿಯರಾಗತೊಡಗಿದ ಕೂಡಲೇ, ತಮ್ಮ ಎದೆಗೆ ಇಂಪ್ಲಾಂಟ್ ಮಾಡಿಸಿಕೊಂಡರು. ಭೂತದ ಫಿಲಂಗಳನ್ನು ಸಾಕಷ್ಟು ಮಾಡಿದ್ದಾರೆ, ಆದರೆ ಕ್ಲಿವೇಜ್ ಅನ್ನೂ ಆಗಾಗ ತೋರಿಸಿದ್ದಾರೆ. 
 

Tap to resize

Latest Videos

undefined

ಅಂದು ಅವಮಾನಿಸಿದವರು ಇಂದು ನೆನಪಿದ್ದೀನಾ ಅಂದ್ರು- ಕನ್ನಡತಿಯ ಕಿರಣ್‌ ರಾಜ್‌ ಬಿಚ್ಚಿಟ್ಟ ಕತೆ

ಸುಷ್ಮಿತಾ ಸೇನ್ 
ಈಕೆ ಮಾಜಿ ವಿಶ್ವಸುಂದರಿ. ವಿಶ್ವ ಸುಂದರಿ ಪಟ್ಟಕ್ಕೆ ಆಯ್ಕೆ ಆಗುವಾಗ ಈಕೆಯ ಎದೆಯ ಗಾತ್ರ ಹದವಾಗಿತ್ತು. ಯಾವಾಗ ಬಾಲಿವುಡ್ ಆಫರ್‌ಗಳು ಬರಲು ಆರಂಭಿಸಿ, ಫಿಲಂಗಳಲ್ಲಿ ಮಿಂಚಲು ಶುರು ಮಾಡಿದರೋ, ಆಗ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ತಮ್ಮ ಸ್ತನಗಳನ್ನು ಸರ್ಜರಿ ಮೂಲಕ ಎನ್‌ಹಾನ್ಸ್ ಮಾಡಿಸಿಕೊಂಡರು. ಹೀಗಾಗಿಯೇ ಈಕೆಗೆ ವಯಸ್ಸಾಗಿದ್ದರೂ, ಹಾಗೆ ಹೇಳಲು ಯಾರಿಂದಲೂ ಸಾಧ್ಯವಿಲ್ಲ. 
 

ಶಿಲ್ಪಾ ಶೆಟ್ಟಿ
ಶಿಲ್ಪಾ ಶೆಟ್ಟಿಯ ಮೈಮಾಟ ಸದಾ ಮಾದಕವಾಗಿದ್ದು, ಅದನ್ನು ಆಕೆ ಕಾಪಾಡಿಕೊಂಡಿದ್ದಾರೆ. ಇದಕ್ಕೆ ಯೋಗ, ಪ್ರಾಣಾಯಾಮ, ಧ್ಯಾನಗಳನ್ನೂ ಆಕೆ ಸದಾ ಮಾಡುತ್ತಾರೆ. ಒಳ್ಳೆಯ ಡಯಟ್ ಅನ್ನೂ ಪಾಲಿಸುತ್ತಾರೆ. ಆದರೆ ಬಾಜಿಗರ್‌ನ ದಿನಗಳಿಗೆ ಹೋಲಿಸಿದರೆ, ಇವರ ಮುಖದ ಮಾಟ, ಮೂಗು ಇತ್ಯಾದಿ ಬದಲಾಗಿರುವುದನ್ನು ಗಮನಿಸಬಹುದು. ಮೂಗಿನ ಸರ್ಜರಿ ಮಾಡಿಸಿಕೊಂಡಂತೆ, ಇವರು ಸ್ತನಗಳ ಸರ್ಜರಿಯನ್ನೂ ಮಾಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ.
 

ಕಂಗನಾ ರನೌತ್
2006ರಲ್ಲಿ ಕಂಗನಾ ರನೌತ್ ಗ್ಯಾಂಗ್‌ಸ್ಟರ್ ಫಿಲಂನಲ್ಲಿ ಬಾಲಿವುಡ್‌ಗೆ ಕಾಲಿಟ್ಟಾಗ, ನಂತರ ಕ್ವೀನ್ ಫಿಲಂನಲ್ಲಿ ನಟಿಸಿದಾಗ, ಆಕೆಯ ಅಭಿನಯ ಪ್ರತಿಭೆಯನ್ನು ಪ್ರಶಂಸಿಸಲಾಗಿತ್ತು. ಆದರೆ ಇತ್ತೀಚೆಗೆ ಅಂದರೆ 2011ರಲ್ಲಿ ಆಕೆ ರ್ಯಾಸ್ಕಲ್ಸ್ ಫಿಲಂನಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡಾಗ ಎಲ್ಲರೂ ಆಕೆಯ ಮಾದಕವಾದ, ಪರ್‌ಪೆಕ್ಟ್ ಮೈಮಾಟ ನೋಡಿ ದಂಗುಬಡಿದುಹೋದರು. ಅಂದಿನಿಂದ ಇಂದಿಗೆ ಆಕೆ ತನ್ನ ಸೊಂಟ ಹಾಗೂ ಸ್ತನಗಳನ್ನು ಮಾಟವಾಗಿರಿಸಲು ಕೆಲವು ಸರ್ಜರಿ ಮಾಡಿಸಿಕೊಂಡಿರುವುದು ವೇದ್ಯ.
 

ಅಯೇಷಾ ಟಾಕಿಯಾ
ಈಕೆ ಎಂದೂ ದೊಡ್ಡ ಸಿನಿಮಾಗಳನ್ನು ಕೊಡಲಿಲ್ಲ. ಆದರೆ ಹಲವು ಮ್ಯೂಸಿಕ್ ಆಲ್ಬಂಗಳನ್ನು ಮಾಡಿದಳು. ನಂತರ ಬಾಲಿವುಡ್‌ನ ಕೆಲವು ಫಿಲಂಗಳಿಂದ ಆಫ್ ಬಂದಿತು. ಆಗ ಆಕೆ ಮ್ಯೂಸಿಕ್‌ನಲ್ಲಿ ಕಾಣಿಸಿಕೊಂಡದ್ದಕ್ಕಿಂತ ಭಿನ್ನವಾಗಿ ಕಾಣಿಸಿಕೊಳ್ಳಬೇಕು ಎಂದು ಸ್ತನಗಳನ್ನು ದೊಡ್ಡದಾಗಿ ಕಾಣುವಂತೆ ಮಾಡಿಸಿಕೊಂಡಳು. ಇದು ಸುದ್ದಿಯಾಯಿತೇ ವಿನಃ ಆಕೆಯ ಅಭಿನಯವಾಗಲೀ ಸಿನಿಮಾವಾಗಲೀ ಸದ್ದು ಮಾಡಲಿಲ್ಲ. 
 

ಎದೆತುಂಬಿ ಹಾಡುವೆನು: ಉಗ್ಗು ಸಮಸ್ಯೆ ಮೆಟ್ಟಿ ಕನ್ನಡಿಗರ ಹೃದಯ ಗೆದ್ದ ಸೂರ್ಯಕಾಂತ್‌

ಶ್ರೀದೇವಿ
ಖ್ಯಾತ ನಟಿ ಶ್ರೀದೇವಿ ಮೂಗು ಸರ್ಜರಿ ಮಾಡಿಸಿಕೊಂಡದ್ದು ಎಲ್ಲರಿಗೂ ಗೊತ್ತು. ಆದರೆ ಸ್ತನಗಳ ಸರ್ಜರಿ ಕೂಡ ಮಾಡಿಸಿಕೊಂಡಿದ್ದರು. ಇದು ಯಾರಿಗೂ ಗೊತ್ತಿಲ್ಲದಿರಲು ಕಾರಣ ಆಕೆ ಇದನ್ನು ಮಾಡಿಸಿಕೊಂಡಿದ್ದು ದುಬೈಯಲ್ಲಿ. ಈಕೆ ಆಗ ಬಹು ಬೇಡಿಕೆಯ ತಾರೆಯಾಗಿದ್ದಳು. ಅಭಿನಯದಿಂದಲೇ ಹೆಸರಾಗಿದ್ದ ಆಕೆಗೆ ಕೈತುಂಬ ಸಿನಿಮಾಗಳೂ ಇದ್ದವು. ಸರ್ಜರಿಯ ಅಗತ್ಯವೇನೂ ಆಕೆಗೆ ಇರಲಿಲ್ಲ. ಆದರೂ ಆಕೆ ಮಾಡಿಸಿಕೊಂಡಳು.
 

ಮಲ್ಲಿಕಾ ಶೆರಾವತ್
ಈಕೆ ಇಂಡಸ್ಟ್ರಿಗೆ ಬಂದ ಆರಂಭದಲ್ಲಿ ಈಕೆಗೆ ಎದೆಯ ಸಂಪತ್ತು ಅಷ್ಟಾಗಿ ಏನೂ ಇರಲಿಲ್ಲ. ಆದರೆ ನಂತರದ ದಿನಗಳಲ್ಲಿ ಈಕೆ ಅದನ್ನು ಹಿಗ್ಗಿಸಿಕೊಂಡಳು. ಸಾಧ್ಯವಾದಲ್ಲೆಲ್ಲಾ ಅದನ್ನು ಪ್ರದರ್ಶಿಸಿದಳು ಕೂಡ. ಅದರಿಂದ ಮುಂದೆ ಆಕೆಗೆ ಅವಕಾಶಗಳೂ ಲಭ್ಯವಾದವು. ಆಕೆ ಜಾಕಿ ಚಾನ್ ಫಿಲಂಗಳಲ್ಲೂ ನಟಿಸುವಂತಾಯಿತು.
 

ಪೂನಂ ಪಾಂಡೆ
ಈಕೆ ತನ್ನ ಎದೆಗಳನ್ನು ಸಿಲಿಕಾನ್ ಅಳವಡಿಸಿ ಸಾಕಷ್ಟು ಹಿಗ್ಗಿಸಿಕೊಂಡಿದ್ದಾಳೆ. ಈಕೆ ಆ ಕುರಿತು ಕೇಳಿದರೆ ನಿರಾಕರಿಸುತ್ತಾಳಾದರೂ, ಹಿಂದಿನ ಫೋಟೋ ಹಾಗೂ ವಿಡಿಯೋಗಳನ್ನು ಈಗಿನ ಫೋಟೋ ಹಾಗೂ ವಿಡಿಯೋಗಳಿಗೆ ಹೋಲಿಸಿದರೆ ಸತ್ಯ ಗೊತ್ತಾಗುತ್ತದೆ. 
 

ರಾಖಿ ಸಾವಂತ್
ಈಕೆ ಐಟಂ ಗರ್ಲ್ ಆಗಿ ಬಾಲಿವುಡ್‌ನಲ್ಲಿ ಸಾಕಷ್ಟು ಹಣ ಗಳಿಸುತ್ತಿದ್ದಾಗ, ತಮ್ಮ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಎದೆಯನ್ನು ಮತ್ತಷ್ಟು ಹಿಗ್ಗಿಸಿಕೊಂಡರು. ಆದರೆ ಇದು ಆರೋಗ್ಯ ಸಮಸ್ಯೆ ತಂದು ಒಡ್ಡಿತು. ಆ ಬಳಿಕ ಅದನ್ನು ತೆಗೆಸಿಕೊಂಡರು. 
 

 

click me!