'ಮಾನಸಿಕ ಸಮಸ್ಯೆ' ಎಂದವರ ವಿರುದ್ಧ ನಟಿ ಶುತ್ರಿ ಹಾಸನ್ ಗರಂ

By Shruthi Krishna  |  First Published Jan 13, 2023, 11:43 AM IST

ಮಾನಸಿಕ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದವರ ವಿರುದ್ಧ ನಟಿ ಶ್ರುತಿ ಹಾಸನ್ ಗರಂ ಆಗಿದ್ದಾರೆ. 


ಸೌತ್ ಸ್ಟಾರ್ ಶ್ರುತಿ ಹಾಸನ್ ಸದ್ಯ ಬಹುನಿರೀಕ್ಷೆಯ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಲಾರ್ ಚಿತ್ರದಲ್ಲಿ ಶ್ರುತಿ ಪ್ರಭಾಸ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ನಡುವೆ ಶ್ರುತಿ ವಾಲ್ತೇರ್ ವೀರಯ್ಯ ಮತ್ತು ವೀರ ಸಿಂಹ ರೆಡ್ಡಿ ಸಿನಿಮಾಗಳ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಟಾಲಿವುಡ್ ಸ್ಟಾರ್ ಚಿರಂಜೀವಿ ಜೊತೆ ಶ್ರುತಿ ತೆರೆ ಹಂಚಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಈ ಸಿನಿಮಾ ರಿಲೀಸ್ ಆಗಿದೆ. ಶ್ರುತಿ ಹಾಸನ್ ಸಿನಿಮಾ ಪ್ರಚಾರದಲ್ಲಿ ಹೆಚ್ಚಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಪ್ರೀ ರಿಲೀಸ್ ಈವೆಂಟ್‌ಗೂ ಗೈರಾಗಿದ್ದರು. ಶ್ರುತಿ ಹಾಸನ್ ಗೈರ್ ನೋಡಿ ನೆಟ್ಟಿಗರು ಅನೇಕ ಪ್ರಶ್ನೆ ಮಾಡಿದ್ದರು. ಅನೇಕರು ಶ್ರುತಿ ಹಾಸನ್ ಅವರಿಗೆ ಮಾನಸಿಕ ಸಮಸ್ಯೆ ಇಂದೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಅನೇಕ ಮಾಧ್ಯಮಗಳು ಸಹ ವರದಿ ಮಾಡಿವೆ. 

ಈ ಬಗ್ಗೆ ನಟಿ ಶ್ರುತಿ ಹಾಸನ್ ಗರಂ ಆಗಿದ್ದಾರೆ. ಸ್ಟ್ರೀನ್ ಶಾಟ್‌ಗಳನ್ನು ಶೇರ್ ಮಾಡಿ ಸರಿಯಾಗಿ ತಿರುಗೇಟು ನೀಡಿದ್ದಾರೆ. ತನಗೆ ಜ್ವರ ಇತ್ತು ಅಷ್ಟೆ ತನ್ನ ಜ್ವರ ಈಗ ಮಾನಸಿಕ ಸಮಸ್ಯೆ ಆಗಿ ಬದಲಾಗಿದೆ ಎಂದು ಹೇಳಿದ್ದಾರೆ. 'ನಾನು ಯಾವಾಗಲೂ ಮಾನಸಿಕ ಆರೋಗ್ಯದ ವಕೀಲನಾಗಿ ಇರುತ್ತೇನೆ. ನಾನು ಯಾವಾಗಲೂ ಎಲ್ಲಾ ರೀತಿ ನನ್ನ ಬಗ್ಗೆ ಕಾಳಜಿ ವಹಿಸುವ ಬಗ್ಗೆ ಉತ್ತೇಜಿಸಿಕೊಳ್ಳುತ್ತೇನೆ. ನನಗೆ ಜ್ವರವಿತ್ತು. ನೀವು ದಯವಿಟ್ಟು ವೈದ್ಯರನ್ನು ಸಂಪರ್ಕಿಸಿ' ಎಂದು ಹೇಳಿದ್ದಾರೆ. 

ಬಾಯ್‌ಫ್ರೆಂಡ್‌ನಿಂದ ಬದಲಾದ ಕಮಲ್ ಪುತ್ರಿ; ರೊಮ್ಯಾಂಟಿಕ್‌ ಕ್ಲಿಕ್‌ಗೆ ಬರೋ ಕಾಮೆಂಟ್‌ ತಪ್ಪದೆ ಓದ್ತೀನಿ ಎಂದ ಶ್ರುತಿ

Tap to resize

Latest Videos

ಅಂದಹಾಗೆ ಶ್ರುತಿ ಹಾಸನ್ ತನ್ನ ಮುಂದಿನ ಸಿನಿಮಾ ಐ ಗ್ರೀಸ್ ಸಿನಿಮಾದಲ್ಲೂ ಸರಿಯಾಗಿ ಭಾಗಿಯಾಗುತ್ತಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಈ ಬಗ್ಗೆಯೂ ಶ್ರುತಿ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಪೋಸ್ಟ್ ಮಾಡಿರುವ ಶ್ರುತಿ ಹಾಸನ್, 'ನಿಮ್ಮ ಪ್ರೀತಿಗೆ ಧನ್ಯವಾದಗಳು. ಗ್ರ್ಯಾಂಡ್ ಲಾಂಚ್‌ಗೆ ಹೋಗಲು ಸಾಧ್ಯವಾಗಿಲ್ಲ. ನಾನು ವಿಶ್ರಾಂತಿ ಮತ್ತು ರಿಸ್ಟಾರ್ಟ್ ಮೂಡ್‌ನಲ್ಲಿ ಇದಿನಿ' ಎಂದು ಹೇಳಿದ್ದಾರೆ.

Nice try !! And Thankyou I’m recovering well from my viral fever pic.twitter.com/oxTYevcK1D

— shruti haasan (@shrutihaasan)

ಬಾಯ್‌ಫ್ರೆಂಡ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ 'ಸಲಾರ್' ನಟಿ ಶ್ರುತಿ ಹಾಸನ್

ಶ್ರುತಿ ಹಾಸನ್ ನಟನೆಯ ಎರಡು ತೆಲುಗು ಸಿನಿಮಾಗಳು ಒಂದೇ ದಿನ ರಿಲೀಸ್ ಆಗಿರುವುದು ವಿಶೇಷ. ಚಿರಂಜೀವಿ ಜೊತೆ ನಟಿಸಿದ್ದ ವಾಲ್ತೇರ್ ವೀರಯ್ಯ ಮತ್ತು ಬಾಲಯ್ಯ ಜೊತೆ ನಟಿಸಿದ್ದ ವೀರ ಸಿಂಹ ರೆಡ್ಡಿ ಸಿನಿಮಾಗಳು ಜನವರಿ 13 ರಂದು ರಿಲೀಸ್ ಆಗಿವೆ. ಇನ್ನೂ ಬಹುನಿರೀಕ್ಷೆಯ ಸಲಾರ್ ಮತ್ತು ದಿ ಐ ಸಿನಿಮಾಗಳು ಶ್ರುತಿ ಕೈಯಲ್ಲಿವೆ. 

click me!