ಮಾರಾಟ ತೆರಿಗೆ ಇಲಾಖೆ ವಿರುದ್ಧ ಅನುಷ್ಕಾ ಶರ್ಮಾ ಗರಂ; ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ನಟಿ

By Shruthi KrishnaFirst Published Jan 13, 2023, 10:58 AM IST
Highlights

ಬಾಲಿವುಡ್ ನಟಿ, ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಪತ್ನಿ ತೆರಿಗೆ ವಿಚಾರವಾಗಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 

ಬಾಲಿವುಡ್ ನಟಿ,ಟೀಂ ಇಂಡಿಯಾ ಆಟಗಾರ ಆಟಗಾರ ವಿರಾಟ್ ಕೊಹ್ಲಿ ಪತ್ನಿ ತೆರಿಗೆ ವಿಚಾರವಾಗಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 2012-13 ಮತ್ತು 2013-14ರ ಸಾಲಿನ ತೆರಿಗೆ ಬಾಕಿ ಪಾವತಿಸುವಂತೆ ಮಾರಾಟ ತೆರಿಗೆಯ ಉಪ ಆಯುಕ್ತರು ಅನುಷ್ಕಾ ಶರ್ಮಾ ಅವರಿಗೆ ನೋಟಿಸ್ ನೀಡಿದ್ದರು. ಇದನ್ನು ಪ್ರಶ್ನಿಸಿ ನಟಿ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ತಪ್ಪಾಗಿ ತೆರಿಗೆ ವಿಧಿಸಲಾಗಿದ್ದು, ಈ ಸೂಚನೆಯನ್ನು ರದ್ದು ಮಾಡುವಂತೆ ಹೈಕೋರ್ಟ್ ಬಳಿ ಅನುಷ್ಕಾ ಕೋರಿದ್ದಾರೆ. ಅನುಷ್ಕಾ ಮನವಿಗೆ ಉತ್ತರಿಸುವಂತೆ ಮಾರಾಟ ತೆರಿಗೆ ಇಲಾಖೆಗೆ ಕೋರ್ಟ್​ ಸೂಚನೆ ನೀಡಿದ್ದು ಫೆಬ್ರವರಿ 6 ರಂದು ವಿಚಾರಣೆಗೆ ಕಾಯ್ದಿರಿಸಿದೆ. 

ಕಳೆದ ತಿಂಗಳು ಅನುಷ್ಕಾ ತನ್ನ ತೆರಿಗೆ ಸಲಹೆಗಾರರ ​​ಮೂಲಕ ನೋಟಿಸ್ ವಿರುದ್ಧ ಎರಡು ಅರ್ಜಿಗಳನ್ನು ಸಲ್ಲಿಸಿದ್ದಕ್ಕಾಗಿ ಹೈಕೋರ್ಟ್ ಕಟುವಾಗಿ ಟೀಕಿಸಿತು. ಅನುಷ್ಕಾ 2012-13, 2013-14, 2014-15 ಮತ್ತು 2015-16ನೇ  ಸಾಲಿನ ಆರ್ಥಿಕ ವರ್ಷದ ತೆರಿಗೆ ಸಂಬಂಧಿಸಿದಂತೆ ಅನುಷ್ಕಾ ಶರ್ಮಾ ಅವರು ನಾಲ್ಕು ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ. ಅನುಷ್ಕಾ ಶರ್ಮಾ ಅವರ ತೆರಿಗೆ ಸಲಹೆಗಾರ ಶ್ರೀಕಾಂತ್ ವೇಲೇಕರ್ ಅವರು ನಟಿಯ ಪರವಾಗಿ ಈ ಮೊದಲು ಅರ್ಜಿ ಸಲ್ಲಿಕೆ ಮಾಡಿದ್ದರು. ಆಗ ಕೋರ್ಟ್ ಅನುಷ್ಕಾ ಶರ್ಮಾ ಅವರೇ ಅರ್ಜಿ ಸಲ್ಲಿಕೆ ಮಾಡಲಿ ಎಂದು ಸೂಚಿಸಿತ್ತು. ಈ ಕಾರಣಕ್ಕೆ ಅನುಷ್ಕಾ ಶರ್ಮಾ ಕೋರ್ಟ್​ ಮೆಟ್ಟಿಲೇರಿದ್ದಾರೆ.

ಅನುಷ್ಕಾ ಶರ್ಮಾ ಯಶರಾಜ್ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ನಿರ್ಮಾಪಕರು ಮತ್ತು ಈವೆಂಟ್ ಸಂಘಟಕರೊಂದಿಗೆ ತ್ರಿಪಕ್ಷೀಯ ಒಪ್ಪಂದದ ಮಾಡಿಕೊಂಡಿದ್ದಾರೆ. ಚಲನಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಪ್ರಶಸ್ತಿ ಸಮಾರಂಭಗಳಲ್ಲಿ ಪ್ರದರ್ಶನ ನೀಡದ್ದಾರೆ ಎಂದು ಮಾರಾಟ ತೆರಿಗೆ ವಿಧಿಸಿತ್ತು. ಅನುಷ್ಕಾ ಸಿನಿಮಾಗಳ ಮೇಲೆ ಕಾಪಿರೈಟ್ ಹೊಂದಿದ್ದಾರೆ. ಅವಾರ್ಡ್​ ಫಂಕ್ಷನ್​​ಗಳ ಪ್ರಸಾರ ಹಕ್ಕನ್ನು ಅನುಷ್ಕಾ ಮಾರಾಟ ಮಾಡಿದ್ದಾರೆ ಎಂದು ತೆರಿಗೆ ಇಲಾಖೆ ಹೇಳಿತ್ತು. ಆದರೆ ಅನುಷ್ಕಾ ಪರ ವಕೀಲರು ಇದನ್ನು ಅಲ್ಲಗಳೆದಿದ್ದಾರೆ. ಮಾರಾಟ ಹಕ್ಕನ್ನು ಅನುಷ್ಕಾ ಹೊಂದಿಲ್ಲ. ಅದು ಆಯಾ ನಿರ್ಮಾಣ ಸಂಸ್ಥೆಯ ಬಳಿಯೇ ಇರುತ್ತದೆ ಎಂದು ವಾದಿಸಿದ್ದಾರೆ.  

ಸಿನಿಮಾದಲ್ಲಿ ನಟಿಸಿದ ಮಾತ್ರಕ್ಕೆ ಕಲಾವಿದರನ್ನು ಚಿತ್ರದ ನಿರ್ಮಾಪಕ ಅಥವಾ ಸೃಷ್ಟಿಕರ್ತ ಎಂದು ಕರೆಯಲಾಗುವುದಿಲ್ಲ ಮತ್ತು ಚಿತ್ರದ ಹಕ್ಕುಸ್ವಾಮ್ಯವನ್ನು ಹೊಂದಿರಲ್ಲ ಎಂದು ಅನುಷ್ಕಾ ಹೇಳಿದ್ದಾರೆ. 'ಅನುಷ್ಕಾ ಸಿನಿಮಾಗಳಲ್ಲಿ ಯಾವುದೇ ಹಕ್ಕುಸ್ವಾಮ್ಯವನ್ನು ಹೊಂದಿಲ್ಲವಾದ್ದರಿಂದ ಅದನ್ನು ಬೇರೆ ಯಾವುದೇ ವ್ಯಕ್ತಿ ಅಥವಾ ನಿರ್ಮಾಪಕರಿಗೆ ವರ್ಗಾಯಿಸುವ ಅಥವಾ ಮಾರಾಟ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ' ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಮಾರಾಟ ತೆರಿಗೆ ಇಲಾಖೆಯ ಪ್ರಕಾರ, ಅನುಷ್ಕಾ ಶರ್ಮಾ ಅವರು ತಮ್ಮ ಪ್ರದರ್ಶನದ ಹಕ್ಕುಗಳನ್ನು ವರ್ಗಾಯಿಸಿದ್ದರೆ, ಅವರು ಯಾರಿಗೆ ಮಾರಾಟ ಮಾಡಿದ್ದಾರೆ ಎಂಬುದನ್ನು ನಮೂದಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಆದರೆ ನಟನ ಹಕ್ಕುಗಳು ನಟನ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ವರ್ಗಾವಣೆ ಅಥವಾ ಮಾರಾಟಕ್ಕೆ ಅಲ್ಲ ಎಂದು ಅನುಷ್ಕಾ ತನ್ನ ಮನವಿಯಲ್ಲಿ ತಿಳಿಸಿದ್ದಾರೆ.

ಅನುಷ್ಕಾ ಶರ್ಮಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಕಲಾ ಸಿನಿಮಾ ಮೂಲದ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಚಕ್ಡಾ ಎಕ್ಸ‌್‌ಪ್ರೆಸ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಇದು ಲೆಜೆಂಡ್ ಕ್ರಿಕೆಟರ್ ಜೂಲನ್ ಗೋಸ್ವಾಮಿ ಅವರ ಬಯೋಪಿಕ್ ಆಗಿದ್ದು ಅನುಷ್ಕಾ ಈಗಾಗಲೇ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾ ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗುತ್ತಿದೆ. 

click me!