ವಿವಾದ, ಟ್ರೋಲ್‌ಗಳ ಬೆನ್ನಲ್ಲೇ 'ಆದಿಪುರುಷ್' ಪ್ರಮೋಷನ್‌‌ಗೆ ಸೈಫ್ ಅಲಿ ಖಾನ್ ಗೈರು; ಕಾರಣವೇನು?

By Shruthi KrishnaFirst Published Apr 26, 2023, 6:35 PM IST
Highlights

ವಿವಾದ ಮತ್ತು ಟ್ರೋಲ್ ಬೆನ್ನಲ್ಲೇ ಪ್ರಭಾಸ್ ನಟನೆಯ 'ಆದಿಪುರುಷ್' ಪ್ರಮೋಷನ್‌‌ಗೆ ಸೈಫ್ ಅಲಿ ಖಾನ್ ಗೈರಾಗಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. 

ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್  ಸಿನಿಮಾ  ರಿಲೀಸ್​ಗೆ ರೆಡಿ ಆಗಿದೆ. ಸಾಕಷ್ಟು ವಿವಾದಗಳ ಬಳಿಕ ಆದಿಪುರುಷ್ ಕೊನೆಗೂ ಚಿತ್ರೀಕರಣ ಮುಗಿಸಿ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲು ಸಜ್ಜಾಗಿದೆ. ಸಿನಿಮಾದ ಮೊದಲ ಟೀಸರ್ ರಿಲೀಸ್ ಆದ ಬಳಿಕ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಆಂಜನೆಯನ ಪಾತ್ರ, ರಾವಣ ಪಾತ್ರ ಚಿತ್ರಿಸಿದ್ದರ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು. ಭಾರಿ ವಿರೋಧದ ಬಳಿಕ ಒಂದಿಷ್ಟು ಬದಲಾವಣೆಯೊಂದಿಗೆ ಆದಿಪುರುಷ್ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ. ಸದ್ಯ ಸಿನಿಮಾತಂಡ ಪ್ರಚಾರ ಕಾರ್ಯಕ್ಕೆ ರೆಡಿಯಾಗಿದೆ. ಈಗಾಗಲೇ ತಯಾರಿ ಮಾಡಿಕೊಂಡಿರುವ ಆದಿಪುರುಷ್ ತಂಡ ಮೇ ತಿಂಗಳಿಂದ ಭರ್ಜರಿ ಪ್ರಚಾರ ಪ್ರಾರಂಭಿಸಲಿದೆ.

ಆದಿಪುರುಷ್ ಸಿನಿಮಾದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಸಿನಿಮಾದ ಪ್ರಚಾರ ಕಾರ್ಯದಿಂದ ಸೈಫ್ ಅಲಿ ಖಾನ್ ಹೊರಗುಳಿಯಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಸಿನಿಮಾತಂಡದ ಆಪ್ತ ಮೂಲಗಳ ಪ್ರಕಾರ ಸೈಫ್ ಸಿನಿಮಾ ಪ್ರಚಾರಕ್ಕೆ ಬರುವುದಿಲ್ಲ. ಪ್ರಭಾಸ್ ಮಾತ್ರ ಸಂಪೂರ್ಣವಾಗಿ ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಪ್ರಭಾಸ್ ಅವರ ವೇಳಪಟ್ಟಿ ಸಿದ್ದಾಗಿದ್ದು ಮೇ ತಿಂಗಳಲ್ಲಿ ಪ್ರಚಾರ ದಿನಾಂಕ ನಿಗಧಿಯಾಗಿದೆಯಂತೆ. 

Latest Videos

ಅಂದಹಾಗೆ ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ಆದಿಪುರುಷ್ ಸಿನಿಮಾದಲ್ಲಿ ರಾಣವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದಿಪುರುಷ್ ಮೊದಲ ಟ್ರೈಲರ್ ರಿಲೀಸ್ ಬಳಿಕ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಅದರಲ್ಲೂ ಸೈಫ್ ಪಾತ್ರಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ರಾವಣ ಸೈಫ್ ಅಲಿ ಖಾನ್ ಲುಕ್ ಸರಿ ಇಲ್ಲ ಎಂದು ಅನೇಕರು ಟೀಕಿಸಿದ್ದರು. ಕಳಪೆ ಗ್ರಾಫಿಕ್ಸ್ ಎಂದು ಜರಿದಿದ್ದರು. ಈ ನಡುವೆ ಸೈಫ್ ಪ್ರಚಾರಕಾರ್ಯದಿಂದ ದೂರ ಉಳಿಯುತ್ತಾರೆ ಎನ್ನುವ ಸುದ್ದಿ ಮತ್ತಷ್ಟು ಅಚ್ಚರಿ ಮೂಡಿಸಿದೆ. 

ವಿವಾದಗಳ ಬಳಿಕ ಹಾಡಿನ ಟೀಸರ್ ಮೂಲಕ ಬಂದ ಪ್ರಭಾಸ್ 'ಆದಿಪುರುಷ್'; ಜೈ ಶ್ರೀಮ್ ಕೇಳಿ ಫ್ಯಾನ್ಸ್ ರೋಮಾಂಚನ

ಪತ್ನಿ ಜೊತೆ ವಿದೇಶಕ್ಕೆ ಸೈಫ್

ಅಷ್ಟಕ್ಕೂ ಸೈಫ್ ಪ್ರಚಾರದಿಂದ ದೂರ ಉಳಿಯುತ್ತಿರುವುದು ಪತ್ನಿ ಕರೀನಾ ಜೊತೆ ವಿದೇಶಕ್ಕೆ ಹಾರುತ್ತಿದ್ದಾರೆ. ಮೇ ತಿಂಗಳಲ್ಲಿ ಪತ್ನಿ ಕರೀನಾ ಮತ್ತು ಇಬ್ಬರೂ ಮಕ್ಕಳ ಜೊತೆ ವಿದೇಶಕ್ಕೆ ಹಾರುತ್ತಿದ್ದಾರೆ. ಹಾಗಾಗಿ ಆದಿಪುರುಷ್ ಪ್ರಚಾದಿಂದ ಮಿಸ್ ಆಗಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಸೈಫ್ ಹಾಲಿಡೇ ಪ್ಲಾನ್ ಮಾಡಿದ್ದು ಕುಟುಂಬದ ಜೊತೆ ವಿದೇಶಕ್ಕೆ ಹಾರುತ್ತಿದ್ದಾರೆ. ಸೈಫ್ ಗೈರಾಗಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದ್ದಂತೆ ಬೇಕು ಅಂತನೇ ತಪ್ಪಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಸಹ ಕೇಳಿಬರುತ್ತಿದೆ. ಅವರ ಪಾತ್ರದ ಬಗ್ಗೆ ವಿವಾದಾತ್ಮಕ ಪ್ರಶ್ನೆಗಳನ್ನು ತಪ್ಪಿಸಲು ಸೈಫ್ ತಂತ್ರವಾಗಿದಿಯಾ ಎನ್ನುವ ಅನುಮಾನ ಕೂಡ ಮೂಡಿಸಿದೆ.  

ಪ್ರಭಾಸ್ , ದಳಪತಿ ವಿಜಯ್ ಯಾರೂ ಅಲ್ಲ, ಅತೀ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟ ಈಗ ಇವರೇ ನೋಡಿ

ಇತ್ತೀಚೆಗಷ್ಟೆ ಆದಿಪುರುಷ್ ತಂಡ  ಜೈ ಶ್ರೀರಾಮ್ ಹಾಡಿನ ಟೀಸರ್‌ ರಿಲೀಸ್ ಮಾಡಿತ್ತು. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದು ಚಿತ್ರತಂಡಕ್ಕೆ ಖುಷಿ ತಂದಿದ್ದು. ಪೋಸ್ಟರ್ ಅಥವಾ ಟೀಸರ್ ಎಲ್ಲದರಲ್ಲೂ ಟೀಕೆಯನ್ನೆ ಎದುರಿಸುತ್ತಿದ್ದ ಆದಿಪುರುಷ್ ಹಾಡಿನ ಟೀಸರ್ ಮೂಲಕ ಆಶಾದಾಯಕ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆದಿಪುರುಷ್ ಬರೋಬ್ಬರಿ 550 ಕೋಟಿ ರೂಪಾಯಿಗೂ ಅಧಿಕ ಮೊತ್ತದಲ್ಲಿ ತಯಾರಾಗಿದೆ. ರಾಮನಾಗಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಸೀತೆ ಪಾತ್ರದಲ್ಲಿ ಕೃತಿ ಸನೊನ್ ಮಿಂಚಿದ್ದಾರೆ. ರಾವಣ  ಪಾತ್ರದಲ್ಲಿ ಸೈಫ್ ಅಲಿ ಖಾನ್ ಕಾಣಿಸಿಕೊಂಡಿದ್ದಾರೆ. ಓಂ ರಾವುತ್ ಸಾರಥ್ಯದಲ್ಲಿ ಆದಿಪುರುಷ್ ಸಿನಿಮಾ ಮೂಡಿಬಂದಿದೆ.  

click me!