
ಇದೇ 15ರಂದು ನಟ ಸೈಫ್ ಅಲಿ ಖಾನ್ ಮೇಲೆ ನಡೆದ ಚೂರಿ ಇರಿತದ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಿಸಿಟಿವಿ ಫುಟೇಜ್ನಲ್ಲಿ ಆರೋಪಿಯ ಮುಖ ಅಷ್ಟು ಚೆನ್ನಾಗಿ ಕಾಣಿಸುತ್ತಿದ್ದರೂ, ಘಟನೆ ನಡೆದಿರುವುದು ಸೆಲೆಬ್ರಿಟಿಯ ಮನೆಯಲ್ಲಿ ಆಗಿದ್ದರೂ, ಪೊಲೀಸರು ನಿಜವಾದ ಆರೋಪಿಯನ್ನು ಹಿಡಿಯುವ ಬದಲು ಅಮಾಯಕರ ಜೀವ ಹಿಂಡುತ್ತಿದ್ದಾರೆ ಎನ್ನುವ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಇದಾಗಲೇ 31 ವರ್ಷದ ಆಕಾಶ್ ಕೈಲಾಶ್ ಕನೋಜಿಯಾ ಅನ್ನೋ ಯುವಕನನ್ನು ಅರೆಸ್ಟ್ ಮಾಡಿ ಆತನ ಜೀವನವನ್ನೇ ನರಕದಲ್ಲಿ ತಳ್ಳಿದ್ದಾರೆ ಪೊಲೀಸರು. ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ಈತನನ್ನು ಪೊಲಿಸರು ಅರೆಸ್ಟ್ ಮಾಡಿದ್ದರು. ಛತ್ತೀಸ್ಗಢದ ಈ ಯುವಕ ತನ್ನ ಅಜ್ಜಿಯ ಆರೋಗ್ಯ ಹದಗೆಟ್ಟ ಕಾರಣ ಅಲ್ಲಿಗೆ ಹೋದಾಗ, ಪೊಲೀಸರು ಅರೆಸ್ಟ್ ಮಾಡಿದ್ದರು. ಆಮೇಲೆ ಆತನಲ್ಲ ಎಂದು ತಿಳಿದು ಬಿಟ್ಟಿರುವ ಕಾರಣ, ಈಗ ಯುವಕನ ಮದುವೆಯೂ ಕ್ಯಾನ್ಸಲ್ ಆಗಿದೆ, ಇದ್ದ ಉದ್ಯೋಗವೂ ಹೋಗಿದೆ.
ಆ ಬಳಿಕ ಬಾಂಗ್ಲಾದೇಶದ ಪ್ರಜೆಯಾಗಿದ್ದಾನೆ ಎನ್ನಲಾಗಿರುವ ಆರೋಪಿ ಮೊಹಮ್ಮದ್ ಶೆಹಜಾದ್ ಅರೆಸ್ಟ್ ಆಗಿ ಪೊಲೀಸರ ವಶದಲ್ಲಿದ್ದಾನೆ. ಆದರೆ, ಈತನ ಫಿಂಗರ್ಪ್ರಿಂಟ್ಗೂ, ಸೈಫ್ ಮನೆಯಲ್ಲಿ ಸಿಕ್ಕ ಫಿಂಗರ್ಪ್ರಿಂಟ್ಗೂ ಮ್ಯಾಚ್ ಆಗುತ್ತಿಲ್ಲ. ಅಷ್ಟೇ ಅಲ್ಲದೇ ಇವನ ಅಪ್ಪ ಕೂಡ, ಸಿಸಿಟಿವಿಯಲ್ಲಿ ಇರುವವ ನನ್ನ ಮಗನಲ್ಲ, ಸುಮ್ಮನೇ ತಮ್ಮ ಮಗನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎನ್ನುತ್ತಿದ್ದಾರೆ. ಆದರೆ ಈತನ ಹಿಂದೆಯೇ ಸದ್ಯ ಪೊಲೀಸರು ಬಿದ್ದಿರುವುದಕ್ಕೆ ಕಾರಣವೂ ಇದೆ. ಈತ ಅಕ್ರಮವಾಗಿ ಭಾರತದಲ್ಲಿ ವಾಸಿಸುತ್ತಿದ್ದಾನೆ ಎನ್ನುವುದು ಪೊಲೀಸರ ಅಭಿಮತ. ಸೈಫ್ ಮನೆಯೊಳಗೆ ಹೊಕ್ಕವ ಈತ ಹೌದೋ, ಅಲ್ಲವೋ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಆದರೆ ಅಕ್ರಮ ವಾಸಿ ಈತ ಎನ್ನುತ್ತಿದ್ದಾರೆ ಪೊಲೀಸರು.
ವಿವಾದದಲ್ಲಿ ಸೈಫ್ ಇರಿತ ಪ್ರಕರಣ! ಹೇಳಿಕೆ ಕೊಟ್ಟಿದ್ಯಾರು? FIR ಇಲ್ಲದೇ ವಿಮೆ ಹಣ ಬಂದದ್ಹೇಗೆ? ತನಿಖೆಗೆ ಆದೇಶ
ಇವುಗಳ ನಡುವೆಯೇ, ಈಗ ಮಹಿಳೆಯೊಬ್ಬಳನ್ನು ಅರೆಸ್ಟ್ ಮಾಡಲಾಗಿದೆ. ಪಶ್ಚಿಮ ಬಂಗಾಳದ ಮೂಲದ ಖುಖುಮೋನಿ ಜಹಾಂಗೀರ್ ಶೇಖ್ ಎಂಬಾಕೆ ಅರೆಸ್ಟ್ ಆಗಿದ್ದಾಳೆ. ಅಷ್ಟಕ್ಕೂ ಈಕೆಯನ್ನು ಬಂಧಿಸಲು ಕಾರಣವೂ ಇದೆ. ಅದೇನೆಂದರೆ, ಸದ್ಯ ಪೊಲೀಸರ ವಶದಲ್ಲಿ ಇರುವ ಆರೋಪಿ, ಬಳಸಿದ ಸಿಮ್ ಈಕೆಯ ಹೆಸರಿನಲ್ಲಿ ದಾಖಲಾಗಿದೆ. ಹಿಂದೂ ಹೆಸರು ಬಳಸಿಕೊಂಡು ಈತ ಭಾರತದಲ್ಲಿ ಇರುವುದಾಗಿ ಪೊಲೀಸರು ಹೇಳಿದ್ದಾರೆ. ಇಲ್ಲಿಯ ದಾಖಲೆ ಮಾಡಿಕೊಳ್ಳಲು ಈ ಮಹಿಲೆ ನೆರವು ನೀಡಿರುವುದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ, ಪೊಲೀಸರು, ಪಶ್ಚಿಮ ಬಂಗಾಳದಲ್ಲಿ ಚುರುಕು ಕಾರ್ಯಾಚರಣೆ ನಡೆಸಿ, ಮಹಿಳೆಯೊಬ್ಬಳನ್ನು ನಾಡಿಯಾ ಜಿಲ್ಲೆಯ ಚಾಪ್ರಾದಿಂದ ಬಂಧಿಸಿದ್ದಾರೆ. ಈಕೆ ಆರೋಪಿ ಶರೀಫುಲ್ಲಾಗೆ ಪರಿಚಯ ಇರುವುದು ತಿಳಿದಿದೆ. ಅಷ್ಟೇ ಅಲ್ಲದೇ, ಈಕೆ ಭಾರತ ಮತ್ತು ಬಾಂಗ್ಲಾದೇಶ ಗಡಿ ಮೂಲಕ ಉತ್ತರ ಬಂಗಾಳದ ಸಿಲಿಗುರಿಯ ಬಳಿ ಅಕ್ರಮವಾಗಿ ಭಾರತ ಪ್ರವೇಶಿಸಿರುವುದು ತಿಳಿದು ಬಂದಿದೆ. ಈ ಮಹಿಳೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಆಂಡುಲಿಯಾ ನಿವಾಸಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ಸೈಫ್ ಅಲಿ ಪ್ರಕರಣ ಪೊಲೀಸರ ತಲೆಬಿಸಿ ಮಾಡಿದೆ. ಸೆಲೆಬ್ರಿಟಿ ಆಗಿರುವ ಕಾರಣ, ಶೀಘ್ರದಲ್ಲಿಯೇ ಕಾರ್ಯಾಚರಣೆ ನಡೆಸುವ ಅನಿವಾರ್ಯತೆ ಇರುವ ಕಾರಣ, ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೆಚ್ಚಾಗಿದೆ.
ಸೈಫ್ ಮನೆಯೆಂದು ಗೊತ್ತಿಲ್ದೇ ನುಗ್ಗಿದ್ನಂತೆ ಕಳ್ಳ! ಪೊಲೀಸರಿಗೆ ಪರೋಟಾ ಸಾಕ್ಷಿ- ಖದೀಮ ಸಿಕ್ಕಿಬಿದ್ದದ್ದೇ ರೋಚಕ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.