ಬಾಲಿವುಡ್ ನಟ ಸೈಫ್ ಆಲಿ ಖಾನ್ ಅನಾಮಿಕನ ದಾಳಿಯಿಂದ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವು ನಟ ನಟಿಯರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಇತ್ತ ಪೊಲೀಸರು ಆರೋಪಿ ಅರೆಸ್ಟ್ ಮಾಡಲು ತನಿಖೆ ಚುರುಕುಗೊಳಿಸಿದ್ದಾರೆ. ಇದರ ನಡುವೆ ದಾಳಿಗೆ ಕಾರಣವೇನು ಅನ್ನೋ ಪ್ರಶ್ನೆಗಳು ಹುಟ್ಟುತ್ತಿರುವಾಗಲೇ ಯುವತಿಯೊಬ್ಬಳು ಆಸ್ಪತ್ರೆಗೆ ದೌಡಾಯಿಸಿದ ಕಾರಣ ಬಿಚ್ಚಿಟ್ಟಿದ್ದಾಳೆ
ಮುಂಬೈ(ಜ.16) ಬಾಲಿವುಡ್ ನಟ ಸೈಫ್ ಆಲಿ ಖಾನ್ ಮೇಲಿನ ದಾಳಿ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ಸೈಫ್ ಆಲಿ ಖಾನ್ ಮನೆಗೆ ನುಗ್ಗಿದ ಅನಾಮಿಕ ದಾಳಿ ಮಾಡಿದ್ದಾನೆ. ಸೈಫ್ ಆಲಿ ಖಾನ್ ಇದೀಗ ಮುಂಬೈನ ಲೀಲಾವತಿ ಆಸ್ಪ್ರತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯ ಸೈಫ್ ಆರೋಗ್ಯ ಸ್ಥಿರವಾಗಿದೆ ಅನ್ನೋ ಮಾಹಿತಿಯನ್ನು ವೈದ್ಯರು ನೀಡಿದ್ದಾರೆ. ಇತ್ತ ಪೊಲೀಸರ ತಂಡ ಆರೋಪಿಯ ಸಿಸಿಟಿವಿ ದೃಶ್ಯವನ್ನು ಬಿಡುಗಡೆ ಮಾಡಿದೆ. ಇದೇ ವೇಳೆ ಆರೋಪಿ ಪತ್ತೆ ಹಚ್ಚಿ ಅರೆಸ್ಟ್ ಮಾಡಲು ಪೊಲೀಸರು ಬಲೆ ಬೀಸಿದ್ದಾರೆ. ಇತ್ತ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು ಈ ಘಟನೆ ಹಿಂದೆ ಯಾರಿದ್ದಾರೆ, ದಾಳಿಗೆ ಕಾರಣ ಪತ್ತೆ ಹಚ್ಚುತ್ತಿದ್ದಾರೆ. ಇದೇ ವೇಳೆ ಮಹಿಳೆಯೊಬ್ಬರು ಹೆಣ್ಣು ಮಗುವಿನೊಂದಿಗೆ ಮುಂಬೈನ ಲೀಲಾವತಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಇಷ್ಟೇ ಅಲ್ಲ ಸೈಫ್ ಮೇಲಿನ ದಾಳಿಗೆ ಕಾರಣ ಬಿಚ್ಚಿಟ್ಟಿದ್ದಾಳೆ.
ಬೆಳಗಿನ ಜಾವ ನಡೆದ ದಾಳಿ ಬಳಿಕ ಬಾಲಿವುಡ್ ಚಿತ್ರರಂಗ ಆತಂಕಗೊಂಡಿದೆ. ದಾಳಿಗೆ ಕಾರಣವೇನು? ಇದರ ಹಿಂದೆ ಯಾರಿದ್ದಾರೆ ಅನ್ನೋ ಚರ್ಚೆಗಳು ಶುರುವಾಗಿದೆ. ಈ ಚರ್ಚೆ ನಡೆವೆ ಮಹಿಳಾ ಅಭಿಮಾನಿಯೊಬ್ಬರು ಹೆಣ್ಣುಮಗಳೊಂದಿಗೆ ಮುಂಬೈನ ಲೀಲಾವತಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಮಹಿಳಾ ಅಭಿಮಾನಿ ಕೈಯಲ್ಲಿ ಪ್ಲಕಾರ್ಡ್ ಹಿಡಿದು ಆಗಮಿಸಿದ್ದಾರೆ. ಸೈಫ್ ಆಲಿ ಖಾನ್ ಹಾಗೂ ರಾಣಿ ಮುಖರ್ಜಿ ಅಬಿನಯದ ಹಮ್ ತುಮ್ ಪ್ಲಕಾರ್ಡ್ ಹಿಡಿದು ಆಸ್ಪತ್ರೆ ಬಳಿ ಆಗಮಿಸಿದ್ದಾರೆ. ಬಳಿಕ ಸೈಫ್ ಮೇಲಿನ ದಾಳಿಗೆ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
ಮನೆಯಲ್ಲಿ ದುಬಾರಿ ಕಾರಿದ್ದರೂ ಸೈಫ್‌ನನ್ನು ಪುತ್ರ ಆಟೋ ರಿಕ್ಷಾ ಮೂಲಕ ಆಸ್ಪತ್ರೆ ಕರೆದೊಯ್ದಿದ್ದೇಕೆ?
ಕೆಲ ವರ್ಷಗಳ ಹಿಂದೆ ಮುಂಬೈನಲ್ಲಿ ಪ್ರೀತಿ, ಪ್ರಯಣದ ಸಿನಿಮಾಗಳನ್ನು ಮಾಡಲಾಗುತ್ತಿತ್ತು. ಈ ಲವ್ ಸ್ಟೋರಿ, ರೋಮ್ಯಾಂಟಿಕ್ ಸ್ಟೋರಿಗಳನ್ನು ನೋಡಿ ಭಾರತವೇ ಸಂಭ್ರಮಿಸಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್‌ನಲ್ಲಿ ಹಿಂಸೆಯ ಚಿತ್ರಗಳನ್ನು ಮಾಡಲಾಗುತ್ತದೆ. ಹಿಂಸೆಯನ್ನ ವೈಭವೀಕರಿಸಲಾಗುತ್ತಿದೆ. ಇದು ದಾಳಿಗೆ ಕಾರಣವಾಗಿದೆ ಎಂದು ಮಹಿಳೆ ಹೇಳಿದ್ದಾರೆ.
ಬಾಲಿವುಡ್ ನನ್ನ ಕುಟುಂಬ. ಬಾಲ್ಯದಿಂದಲೂ ಬಾಲಿವುಡ್ ಚಿತ್ರಗಳನ್ನು ನೋಡಿ ಬೆಳೆದಿದ್ದೇನೆ. ಇವತ್ತು ಬಾಲಿವುಡ್ ಎದುರಿಸುತ್ತಿರುವ ಈ ಸಮಸ್ಯೆ ನನಗೆ ನೋವುಂಟು ಮಾಡಿದೆ. ನನ್ನ ಕುಟುಂಬ ಸದಸ್ಯರ ಮೇಲೆ ದಾಳಿಯಾಗಿದೆ. ನಾನು ಜನಸಾಮಾನ್ಯರನ್ನು ಪ್ರತಿನಿಧಿಸುತ್ತೇನೆ. ಯಾರೂ ಕೂಡ ಹಿಂಸೆ ಚಿತ್ರಗಳನ್ನು ವೀಕ್ಷಿಸಲು ಇಷ್ಟಪಡುವುದಿಲ್ಲ. ಈ ಚಿತ್ರಗಳನ್ನು ನೋಡಿದ ಹಲವರು ಪ್ರೇರಿತರಾಗಿದ್ದಾರೆ. ಹೀಗಾಗಿ ದಾಳಿ, ಅಶಾಂತಿಗಳು ಹೆಚ್ಚಾಗಿದೆ ಎಂದು ಮಹಿಳೆ ಹೇಳಿದ್ದಾರೆ. ಈ ರೀತಿಯ ಚಿತ್ರಗಳನ್ನು ಜನಸಾಮಾನ್ಯರು ಕೇಳುವುದಿಲ್ಲ, ನೋಡಲು ಇಷ್ಟಪಡುವುದಿಲ್ಲ ಎಂದು ಮಹಿಳೆ ಹೇಳಿದ್ದಾರೆ.
ಮಹಿಳೆಯ ಪ್ಲಕಾರ್ಡ್‌ನಲ್ಲಿ ಪ್ರೀತಿ ಪ್ರಣಯದ ಚಿತ್ರ ಮಾಡಿ, ಹಿಂಸೆ ಚಿತ್ರ ನಿಷೇಧಿಸಿ. ಸೈಫ್ ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಬರೆಯಲಾಗಿದೆ. ಆದರೆ ಮಹಿಳೆಯ ಈ ಸಾಹಸಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಇದು ಪ್ರಚಾರದ ತಂತ್ರ ಎಂದು ಹಲವರು ಮಹಿಳೆಯನ್ನು ಟೀಕಿಸಿದ್ದಾರೆ. ಹಿಂಸೆ, ಕಳ್ಳತನದ ಚಿತ್ರಗಳು ಅದೇ ವರ್ಗದ ಜನರಿಗೆ ಪ್ರೇರಣೆ ನೀಡಬಹುದು. ಆದರೆ ಸಮಾಜದಲ್ಲಿ ಉತ್ತಮವಾಗಿ ಬದುಕುವವರಿಗೆ ಪ್ರೇರಣೆಯಾಗುವುದಿಲ್ಲ, ಪಾಠವಾಗಲಿದೆ. ಚಿತ್ರ ಪ್ರಚೋದನೆ, ಪ್ರೇರಣೆ ನೀಡುವುದು ಸಹಜ. ಆದರೆ ಈ ಮಟ್ಟಿನ ದಾಳಿಗೆ ಚಿತ್ರಗಳು ಕಾರಣ ಅನ್ನೋದು ಸಮಂಜಸವಲ್ಲ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ.
ಸೈಫ್ ಆಲಿ ಖಾನ್ ಆರೋಗ್ಯ ಚೇತರಿಸುತ್ತಿದೆ. ಸದ್ಯ ಸೈಫ್ ಆಲಿ ಖಾನ್ ಅಪಾಯದಿಂದ ಪಾರಾಗಿದ್ದಾರೆ. ಆದರೆ ಗಾಯದ ಪ್ರಮಾಣ ಹೆಚ್ಚಾಗಿರುವ ಕಾರಣ ಸತತ ಚಿಕಿತ್ಸೆ ಮುಂದುವರಿಯಲಿದೆ ಎಂದು ವೈದ್ಯರು ಹೇಳಿದ್ದಾರೆ.
ಸೈಫ್ ಅಲಿ ಖಾನ್ ಮೇಲೆ ಚಾಕು ದಾಳಿ, ಆಸ್ಪತ್ರೆಗೆ ದಾಖಲು