ಪ್ರೇಮಂ ನಟಿಯ ಹೊಸ ಲವ್‌ಸ್ಟೋರಿ..! ಲವ್‌ನಲ್ಲಿ ಬಿದ್ರಾ ರೌಡಿ ಬೇಬಿ..?

By Suvarna News  |  First Published Jan 17, 2020, 12:47 PM IST

ರೊಮ್ಯಾಂಟಿಕ್ ಮೂವಿ ಪ್ರೇಮಂ ಮೂಲಕ ಸದ್ದು ಮಾಡಿದ್ದ ನಟಿ ಸಾಯಿ ಪಲ್ಲವಿ ಪ್ರೀತಿಯಲ್ಲಿ ಬಿದ್ದಿದ್ದಾರಾ..? ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿಗೆ ಲವ್ ಆಗಿದ್ಯಾ..? ಅಂತೂ ರೌಡಿ ಬೇಬಿ ಅಂತ ಹಾಡಿದ ಕ್ಯೂಟ್‌ ನಟಿ ಈಗ ಹೊಸ ಲವ್‌ ಸ್ಟೋರಿ ಪ್ರಯಾಣ ಆರಂಭಿಸಿದ್ದಾರೆ. ಏನು..? ಯಾವಾ..? ಇಲ್ಲಿ ಓದಿ.


ರೊಮ್ಯಾಂಟಿಕ್ ಮೂವಿ ಪ್ರೇಮಂ ಮೂಲಕ ಸದ್ದು ಮಾಡಿದ್ದ ನಟಿ ಸಾಯಿ ಪಲ್ಲವಿ ಪ್ರೀತಿಯಲ್ಲಿ ಬಿದ್ದಿದ್ದಾರಾ..? ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿಗೆ ಲವ್ ಆಗಿದ್ಯಾ..? ಅಂತೂ ರೌಡಿ ಬೇಬಿ ಅಂತ ಹಾಡಿದ ಕ್ಯೂಟಿ ನಟಿ ಈಗ ಹೊಸ ಲವ್‌ ಸ್ಟೋರಿ ಪ್ರಯಾಣ ಆರಂಭಿಸಿದ್ದಾರೆ.

ಇದೇನು ಸಾಯಿ ಪಲ್ಲವಿ ಲವ್‌ ಮಾಡ್ತಿದ್ದಾರಾ..? ಎಂದು ಕೆಳ್ತಿದ್ದೀರಾ..? ಹೌದು. ಆದರೆ ಸಾಯಿ ಪಲ್ಲವಿಯ ಲವ್‌ ಸ್ಟೋರಿ ತೆರೆಯ ಮೇಲಿನ ಪ್ರೇಮ ಕಥೆ. ಮಲಯಾಳಂನ ಪ್ರೇಮಂ ಮೂಲಕ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ಮಲಯಾಳಂ, ತೆಲುಗು, ತಮಿಳು ನಟಿಗಳಲ್ಲಿ ಈಗಾಗಲೇ ಹಲವು ಸಿನಿಮಾ ಮಾಡಿದ್ದಾರೆ.

Tap to resize

Latest Videos

undefined

ಟಾಲಿವುಡ್‌, ಮಾಲಿವುಡ್‌ ಆಯ್ತು ಹೊಸ ಸಾಹಸಕ್ಕೆ ಕೈ ಹಾಕಿದ ಸಾಯಿ ಪಲ್ಲವಿ!

ಇದೀಗ ಸಾಯಿ ಪಲ್ಲವಿ ಹಾಗೂ ನಾಗಚೈತನ್ಯ ಜೊತೆಯಾಗಿ ನಟಿಸಿರುವ ತೆಲುಗು ಸಿನಿಮಾ 'ಲವ್‌ ಸ್ಟೋರಿ'ಯ ಮೊದಲ ಪೋಸ್ಟರ್ ಸಂಕ್ರಾಂತಿ ಸಂದರ್ಭ ಬಿಡುಗಡೆಯಾಗಿದೆ. ಹೊಸ ಚಿತ್ರ ಲವ್‌ಸ್ಟೋರಿ ಯುವಜನರು ಮೆಚ್ಚುವಂತಹ ಬ್ಯೂಟಿಫುಲ್‌ ಪ್ರೇಮ ಕಥೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ.

ನಿರ್ದೇಶಕ ಶೇಖರ್ ಕಮ್ಮುಲ ಅವರು ಸಿನಿಮಾ ನಿರ್ದೇಶನ ಮಾಡುತ್ತಿದ್ದು, ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ಮೊದಲಬಾರಿ ಜೊತೆಯಾಗಿ ತೆರೆ ಹಂಚಿಕೊಳ್ಳಲಿದ್ದಾರೆ. ನಿರ್ದೇಶಕ ಕಮ್ಮುಲ ಅವರ ಜೊತೆ ಸಾಯಿ ಪಲ್ಲವಿ ಎರಡನೇ ಬಾರಿಗೆ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಕಮ್ಮುಲ ಜೊತೆ ಕೆಲಸ ಮಾಡಿದ್ದ ಸಾಯಿ ಪಲ್ಲವಿ ಫಿದಾ ಮೂಲಕ ವರುಣ್‌ ತೇಜ್‌ ಜೊತೆಗೆ ತೆರೆ ಹಂಚಿಕೊಂಡಿದ್ದರು. ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ನಟನೆಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ.

There isn’t a better title to reflect the essence of this movie! it is❤️ pic.twitter.com/oZAypqIlpZ

— chaitanya akkineni (@chay_akkineni)

ಸಿನಿಮಾ ಪೋಸ್ಟರ್‌ನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡ ನಟ ನಾಗಚೈತನ್ಯ ಈ ಸಿನಿಮಾದ ತಿರುಳನ್ನು ಬಿಚ್ಚಿಡಲು ಇದಕ್ಕಿಂತ ಒಳ್ಳೆಯಟೈಟಲ್ ಇಲ್ಲ ಎಂದು ಬರೆದುಕೊಂಡಿದ್ದಾರೆ. ನಿರ್ಮಾಪಕ ರಾಮ್ ಮೋಹನ್ ರಾವ್‌ ಈ ಸಿನಿಮಾ ಪ್ರೋಡ್ಯೋಸ್ ಮಾಡುತ್ತಿದ್ದು, ಚಿತ್ರೀಕರಣ ಕೊನೆಯ ಹಂತದಲ್ಲಿದೆ.

click me!