ರಾಣಾ ದಗ್ಗುಬಾಟಿ ಸಿನಿಮಾದಿಂದ ಸಾಯಿ ಪಲ್ಲವಿ ಔಟ್?

Published : May 04, 2019, 03:02 PM IST
ರಾಣಾ ದಗ್ಗುಬಾಟಿ ಸಿನಿಮಾದಿಂದ ಸಾಯಿ ಪಲ್ಲವಿ ಔಟ್?

ಸಾರಾಂಶ

ರಾಣಾ ದಗ್ಗುಬಾಟಿ ಸಿನಿಮಾದಿಂದ ಸಾಯಿ ಪಲ್ಲವಿ ಔಟ್? ’ವಿರಾಟ ಪರ್ವಂ’ ಚಿತ್ರದಿಂದ ಹೊರ ನಡೆಯುತ್ತಾರಾ ಸಾಯಿ ಪಲ್ಲವಿ? ಏನಿದು ಖ್ಯಾತೆ ? ಇಲ್ಲಿದೆ ನೋಡಿ 

ಸೌತ್ ಇಂಡಸ್ಟ್ರಿ ನಟಿ ಸಾಯಿ ಪಲ್ಲವಿ ಆಗಾಗ ಸುದ್ಧಿಯಾಗುತ್ತಿರುತ್ತಾರೆ. ಸಿನಿಮಾಗಳಿಂತ ಹೆಚ್ಚಾಗಿ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ಇದೀಗ ವಿರಾಟ ಪರ್ವಂ ಚಿತ್ರದ ಮೂಲಕ ಸುದ್ಧಿಯಾಗಿದ್ದಾರೆ. 

‘ ವಿರಾಟ ಪರ್ವಂ’ ಚಿತ್ರದಲ್ಲಿ ರಾಣಾ ದಗ್ಗುಬಾಟಿ ಜೊತೆ ಸಾಯಿ ಪಲ್ಲವಿ ನಟಿಸಬೇಕಿತ್ತು. ಆದರೆ ಚಿತ್ರತಂಡದಿಂದ ಹೊರ ನಡೆಯುವುದಾಗಿ ಹೇಳಿದ್ದಾರೆನ್ನಲಾಗಿದೆ. 

ಐಪಿಎಸ್ ಅಧಿಕಾರಿಯಾಗಲಿದ್ದಾರೆ ‘ಮಗಳು ಜಾನಕಿ’

ಕೆಲ ದಿನಗಳ ಹಿಂದೆ ಸಾಯಿ ಪಲ್ಲವಿ ವಿರಾಟ ಪರ್ವಂ ಚಿತ್ರಕ್ಕೆ ಒಪ್ಪಿಕೊಂಡಿದ್ದರು.  ಚಿತ್ರ ತಂಡ ಇನ್ನೂ ಶೂಟಿಂಗ್ ಶುರು ಮಾಡಿಲ್ಲ. ಈಗಾಗಲೇ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇರುವುದರಿಂದ ಶೆಡ್ಯೂಲ್ ಹೊಂದಾಣಿಕೆ ಮಾಡಿಕೊಳ್ಳಲು ಕಷ್ಟವಾಗುತ್ತಿದೆಯಂತೆ. ಶೂಟಿಂಗ್ ಡೇಟ್ ಪಕ್ಕಾ ಮಾಡದಿದ್ದರೆ ಸಿನಿಮಾದಿಂದ ಹೊರನಡೆಯುವುದಾಗಿ ನಿರ್ದೇಶಕರಿಗೆ ಹೇಳಿದ್ದಾರೆ. ಇದುವರೆಗೂ ಚಿತ್ರತಂಡದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 

ವಿರಾಟ ಪರ್ವಂ 1992 ರ ಕಾಲಘಟ್ಟದ ಐತಿಹಾಸಿಕ ಸಿನಿಮಾ. ಈ ಚಿತ್ರದಲ್ಲಿ ರಾಣಾ ದಗ್ಗುಬಾಟಿ, ಪ್ರಿಯಾಮಣಿ, ಟಬು ನಟಿಸುತ್ತಿದ್ದಾರೆ. ಸುಧಾಕರ್ ಚೆರುಕುರಿ ಹಾಗೂ ಸುರೇಶ್ ಬಾಬು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಲಕ್ಷ್ಮೀಪುತ್ರ' ಬಿಡುಗಡೆಗೆ ಮುನ್ನ ಭಾವಿ ಪತ್ನಿ ಜೊತೆ ನಟ ಚಿಕ್ಕಣ್ಣ ಟೆಂಪಲ್​ ರನ್​: ಫೋಟೋ ವೈರಲ್​
ಕುಂಭಮೇಳ ಚೆಲುವೆ ಮೋನಾಲಿಸಾಗೆ ಪೊಲೀಸ್ ರಕ್ಷಣೆಗೆ 'ಒಕೆ' ಎಂದ ಕೋರ್ಟ್; ಎಲ್ಲಿದ್ದಾರೆ ಈಗ ರುದ್ರಾಕ್ಷಿ ಸುಂದರಿ?!