ಪೌರತ್ವ ವಿವಾದ: ನನ್ನ ಪರ್ಸನಲ್ ವಿಷಯ ಎಂದ ಅಕ್ಷಯ್!

Published : May 03, 2019, 09:24 PM IST
ಪೌರತ್ವ ವಿವಾದ: ನನ್ನ ಪರ್ಸನಲ್ ವಿಷಯ ಎಂದ ಅಕ್ಷಯ್!

ಸಾರಾಂಶ

ಬಾಲಿವುಡ್ ನಟ ಅಕ್ಷಯ್ ಕುಮಾರ್ ಪೌರತ್ವ ವಿವಾದ| ಅಕ್ಷಯ್ ಕುಮಾರ್ ಬಳಿ ಕೆನಡಾದ ಪಾಸ್ ಪೋರ್ಟ್| ಲೋಕಸಭೆ ಚುನಾವಣೆಯಲ್ಲಿ ಮತ ಹಾಕದ ಅಕ್ಷಯ್ ಕುಮಾರ್| ಪೌರತ್ವ ವಿವಾದಕ್ಕೆ ತೆರೆ ಎಳೆದ ಅಕ್ಷಯ್ ಕುಮಾರ್| ‘ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡುವುದು ನನ್ನ ಗುರಿ’|

ಮುಂಬೈ(ಮೇ.03): ತಮ್ಮ ಪೌರತ್ವ ವಿವಾದ ಕುರಿತು ಪ್ರತಿಕ್ರಿಯೆ ನೀಡಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್, ಇದು ತಮ್ಮ ವೈಯಕ್ತಿಕ ವಿಚಾರ ಎಂದು ಹೇಳಿದ್ದಾರೆ.

ತಮ್ಮ ಬಳಿ ಕೆನಡಿಯನ್ ಪಾಸ್ ಪೋರ್ಟ್ ಇರುವುದು ನಿಜವಾದರೂ, ಭಾರತವನ್ನು ಬಲಿಷ್ಟ ರಾಷ್ತ್ರವನ್ನಾಗಿ ಮಾಡುವುದು ತಮ್ಮ ಗುರಿ ಗುರಿ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.

ಈ ಕುರಿತು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಅಕ್ಷಯ್, ತಮ್ಮ ಬಳಿ ಕೆನಡಾದ ಪಾಸ್ ಪೋರ್ಟ್ ಇರುವುದನ್ನು ತಾವೆಂದೂ ಮುಚ್ಚಿಟ್ಟಿಲ್ಲ ಎಂದು ಹೇಳಿದ್ದಾರೆ.

‘ನಾನು ಭಾರತದಲ್ಲಿ ಕೆಲಸ ಮಾಡುತ್ತಿದ್ದೇನೆ ಮತ್ತು ನನ್ನ ಎಲ್ಲ ತೆರಿಗೆಗಳನ್ನು ಭಾರತದಲ್ಲಿ ಪಾವತಿಸುತ್ತೇನೆ. ಈ ಎಲ್ಲಾ ವರ್ಷಗಳಲ್ಲಿ ಭಾರತದ ಮೇಲಿನ ನನ್ನ ಪ್ರೀತಿಯನ್ನು ನಾನು ತೋರಿಸಿದ್ದೇನೆ. ಈ ಕುರಿತು ನಾನೆಂದಿಗೂ ಯಾರಿಗೂ ಉತ್ತರಿಸಬೇಕಾದ ಅಗತ್ಯವಿಲ್ಲ..’ಎಂದು ಅಕ್ಷಯ್ ತಿರುಗೇಟು ನೀಡಿದ್ದಾರೆ. 

ಅಕ್ಷಯ್ ಕುಮಾರ್ ಕಳೆದ ಏ. 29 ರಂದು ನಡೆದ ನಾಲ್ಕನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಮುಂಬೈನಲ್ಲಿ ಮತ ಹಾಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಕ್ಷಯ್ ಭಾರತೀಯ ಪೌರತ್ವ ಕುರಿತಂತೆ ಪ್ರಶ್ನೆಗಳೆದ್ದಿದ್ದವು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?