
ಸ್ಟಾರ್ ನಟಿಯಾಗಬೇಕು ಎಂದರೆ, ಯಾವೆಲ್ಲಾ ರೀತಿಯ 'ಅಡ್ಜಸ್ಟ್' ಮಾಡಿಕೊಳ್ಳಬೇಕು ಎಂಬ ಬಗ್ಗೆ ಇದಾಗಲೇ ಹಲವಾರು ನಟಿಯರು ಹೇಳಿಕೊಂಡಿದ್ದಾರೆ. ತಮಗಾಗಿರುವ ಕಹಿ ಅನುಭವಗಳನ್ನು ಹೇಳಿಕೊಂಡಿದ್ದರೆ, ಮತ್ತೆ ಕೆಲವರು ನಟಿಯರು ಇವಕ್ಕೆಲ್ಲಾ ಮುಂದುವರೆದರೆ ಮಾತ್ರ ಅದನ್ನು ಬಯಸುವ ಪುರುಷರು ಮುಂದೆ ಹೋಗ್ತಾರೆ ಎಂದೂ ಹೇಳಿದ್ದು ಇದೆ. ಮಾಡುವಷ್ಟು ಮಾಡಿಕೊಂಡು ಕೊನೆಗೆ ಅವಕಾಶ ಸಿಗದಾಗ ಈ ರೀತಿಯ ಆರೋಪ ಮಾಡಲಾಗುತ್ತದೆ ಎಂದು ಕೆಲವು ನಟಿಯರು ಗಂಭೀರ ಆರೋಪವನ್ನೂ ಮಾಡಿದ್ದಿದೆ. ಇದೆಲ್ಲಕ್ಕಿಂತಲೂ ಮಿಗಿಲಾಗಿ ಸಂದರ್ಶನವೊಂದರಲ್ಲಿ ಖುದ್ದು ರಾಖಿ ಸಾವಂತ್, ಹೇಗೆ ನಟಿಯರು ಸ್ಟಾರ್ ಪಟ್ಟ ಗಿಟ್ಟಿಸಿಕೊಳ್ಳಲು ನಿರ್ದೇಶಕರು, ನಿರ್ಮಾಪಕರ ಹಿಂದೆ ಹೋಗುತ್ತಾರೆ, ಅವರು ಹೇಳಿದ್ದನ್ನೆಲ್ಲಾ ಅವಕಾಶದ ಸಲುವಾಗಿ ನಿಸ್ಸಂಕೋಚವಾಗಿ ಮಾಡುತ್ತಾರೆ ಎನ್ನುವ ಬಗ್ಗೆಯೂ ಮಾತನಾಡಿದ್ದರು. ಕೆಲವು ಅಶ್ಲೀಲ ಪದಗಳನ್ನೇ ಬಳಸಿದ್ದ ರಾಖಿ ಸಾವಂತ್, ನಟಿಯರು ಇವಕ್ಕೆಲ್ಲಾ ರೆಡಿ ಇರುವುದು ತಿಳಿದೇ ಅವರನ್ನು ಮಂಚಕ್ಕೆ ಕರೆಯುವವರು ಇದ್ದಾರೆ, ಇಂಡಸ್ಟ್ರಿಯಲ್ಲಿ ನೆಲೆಯೂರಲು ಬಹುತೇಕ ನಟಿಯರೂ ಅದನ್ನೇ ಬಯಸುತ್ತಾರೆ ಎಂದೆಲ್ಲಾ ಹೇಳಿ ಕಾಂಟ್ರವರ್ಸಿ ಕ್ರಿಯೇಟ್ ಮಾಡಿದ್ದರು.
ಇದು ಒಂದೆಡೆಯಾದರೆ, ಇದೀಗ ಅಂತೂ ಸಿನಿಮಾಗಳಲ್ಲಿ ಬಟ್ಟೆಗಳ ಬಗ್ಗೆ ಹೇಳುವುದೇ ಬೇಡ. ದೇಹ ಪ್ರದರ್ಶನ ಶುರುವಾಗಿ ದಶಕಗಳೇ ಕಳೆದುಹೋಗಿದ್ದರೂ ಮೈಮಾಟವನ್ನು ತೋರಿಸಲು ಹಲವರು ನಟಿಯರು ಪೈಪೋಟಿ ಮಾಡುವಂತಿದೆ. ಕೆಲವು ನಟಿಯರು ಗಾತ್ರ ಹೆಚ್ಚಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮೊರೆ ಹೋಗಿ ಬಿಂದಾಸ್ ಆಗಿದ್ದರೆ, ಮತ್ತೆ ಹಲವು ನಟಿಯರು ಅವಕಾಶ ಸಿಕ್ಕಾಗೆಲ್ಲಾ ತಮ್ಮ ದೇಹ ಪ್ರದರ್ಶನ ಮಾಡುವುದು ನಡೆದೇ ಇದೆ. ಆದರೆ ಇದೀಗ ಕ್ಯಾಮೆರಾ ಕಣ್ಣುಗಳು ನಟಿಯರು ಎಲ್ಲಾ ಭಾಗಗಳ ಮೇಲೂ ನೆಟ್ಟಿರುವುದರಿಂದ ಅವರ ಪ್ರತಿಯೊಂದು ನಡವಳಿಕೆಗಳೂ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿ ಬಿಡುತ್ತದೆ.
ಸುಂದರಿಯರು ಹೆಚ್ಚಿರೋ ಭಾರತದ ರಾಜ್ಯ ಯಾವುದು ಗೊತ್ತಾ? ಕರ್ನಾಟಕಕ್ಕೆ ಸ್ಥಾನ ಇದ್ಯಾ? ಇಲ್ಲಿದೆ ಡಿಟೇಲ್ಸ್
ಸದ್ಯ ಬಾಲಿವುಡ್ನ ಕೆಲವು ನಟಿಯರ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಆಲಿಯಾ ಭಟ್ ಭಾಷಣ ಮಾಡುವಾಗ, ಪ್ರಾರ್ಥನೆ ಸಲ್ಲಿಸುವಾಗ ಉದ್ದೇಶಪೂರ್ವಕವಾಗಿ ಸೆರಗನ್ನು ಕೈಯಿಂದ ಜಾರಿಸಿಕೊಳ್ಳುವುದನ್ನು ನೋಡಬಹುದಾಗಿದೆ. ಹೀಗೆ ಕೆಲವು ನಟಿಯರು ಉಟ್ಟಿದ್ದು ಸೀರೆಯಾದರೂ ಸೆರಗನ್ನು ಜಾರಿಸಿಕೊಳ್ಳುತ್ತಿದ್ದರೆ, ಶಾರುಖ್ ಪುತ್ರಿ ಸುಹಾನಾ ಖಾನ್ ಕೂಡ ಕಮ್ಮಿಯೇನಲ್ಲ. ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಲೇ ಇದ್ದಾರೆ. ಈ ವಿಡಿಯೋದಲ್ಲಿ ಅವರ ವಿಡಿಯೋ ಕೂಡ ಇದೆ. ಕೆಲ ದಿನಗಳ ಹಿಂದೆ ಶಾರುಖ್ ಖಾನ್ ತಮ್ಮ ಮಗಳ ಹೊಕ್ಕಳು ಕಾಣಬಾರದು ಎಂದು ವೇದಿಕೆಯಲ್ಲಿ ಆಕೆಯ ಡ್ರೆಸ್ ಸರಿಪಡಿಸಿದ್ದ ವಿಡಿಯೋ ವೈರಲ್ ಆಗಿತ್ತು. ಶಾರುಖ್ ಅಭಿಮಾನಿಗಳು ನಟನನ್ನು ಸಿಕ್ಕಾಪಟ್ಟೆ ಕೊಂಡಾಡಿದ್ದರು. ಮಗಳ ಮೇಲೆ ಎಂಥ ಮಮಕಾರ, ಅಪ್ಪನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದೆಲ್ಲಾ ಹೇಳಿದ್ದರು. ಆದರೆ ಸುಹಾನಾ ಖಾನ್ ಸ್ಟಾರ್ ಪುತ್ರಿಯಾದರೂ ಇಂಡಸ್ಟ್ರಿಯಲ್ಲಿ ನೆಲೆಯೂರಲು ಎಲ್ಲವೂ ಅಗತ್ಯವಾಗಿಯೇ ಬೇಕಾಗಿದೆ.
ಇವೆಲ್ಲವುಗಳ ಮಧ್ಯೆ ಗಮನ ಸೆಳೆದಿರುವುದು ಸಿಂಪಲ್ ಬ್ಯೂಟಿ, ಮೇಕಪ್ ರಹಿತ ಸುಂದರಿ ಸಾಯಿ ಪಲ್ಲವಿ. ಹೆಚ್ಚಾಗಿ ಸೀರೆಯಲ್ಲಿಯೇ ಕಂಗೊಳಿಸುವ ಸಾಯಿ ಪಲ್ಲವಿ, ಸೀರೆಯುಟ್ಟು ಡಾನ್ಸ್ ಮಾಡುತ್ತಿದ್ದ ಸಂದರ್ಭದಲ್ಲಿ ಪಕ್ಕದಲ್ಲಿ ಹೊಟ್ಟೆ ಕಾಣಿಸಿತು ಎನ್ನುವ ಕಾರಣಕ್ಕೆ ಸೆರಗನ್ನು ಮುಚ್ಚಿಕೊಳ್ಳುತ್ತಲೇ ನೃತ್ಯ ಮುಂದುರೆಸಿದ್ದರು. ಸೀರೆಯುಟ್ಟಾಗ ಹೊಟ್ಟೆ ಕಾಣುವುದು ದೊಡ್ಡ ವಿಷಯವಲ್ಲ. ಆದರೆ ಅವರು ತಮ್ಮ ಅರಿವಿಗೆ ಬಾರದೇ ಸೆರಗಿನಿಂದ ಅದನ್ನು ಮುಚ್ಚಿಕೊಂಡಿರುವುದಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ.
ಅಪ್ಪನ ಜೊತೆ ನಟಿ ಅದಿತಿ ಪ್ರಭುದೇವ ಎಳನೀರು ಚಾಲೆಂಜ್! ಒಂದು ಸಾವಿರ ರೂ. ಗೆದ್ದೋರು ಯಾರು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.