
ಭಾರತದ ಜನಪ್ರಿಯ ಆಧ್ಯಾತ್ಮಿಕ ಗುರು, ಇಶಾ ಫೌಂಡೇಷನ್ನ ಜಗ್ಗಿ ವಾಸುದೇವ್ ಹಾಲಿವುಡ್ನ ಹಾಲಿವುಡ್ ಸಿನಿಮಾನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಲಿವುಡ್ನ ಜನಪ್ರಿಯ ಗಾಯಕಿ, ಸಂಗೀತಗಾರ್ತಿ ಜೆನ್ನಿಫರ್ ಲೊಪೇಜ್ರ ಹೊಸ ಮ್ಯೂಸಿಕ್ ಆಲ್ಬಂ ‘ದಿಸ್ ಈಸ್ ಮಿ ನೌ: ಎ ಲವ್ ಸ್ಟೋರಿ’ (This is me… Now)ಯಲ್ಲಿ ಸದ್ಗುರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೆನ್ನಿಫರ್ ಲೋಪೆಜ್ ಅವರ ಒಂಬತ್ತನೇ ಚಿತ್ರ ಇದಾಗಿದ್ದು, ಇದೇ 16ರಂದು ಇದು ಬಿಡುಗಡೆಯಾಗಿದೆ. ಬಾಲಿವುಡ್ ಹಲವಾರು ನಟ-ನಟಿಯರು ಹಾಲಿವುಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದಿಷ್ಟು ಮಂದಿಯನ್ನು ಹೆಸರಿಸುವುದಾದರೆ, ಇರ್ಫಾನ್ ಖಾನ್, ನಾಸಿರುದ್ದೀನ್ ಶಾ, ಐಶ್ವರ್ಯಾ ರೈ , ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ, ಆಲಿಯಾ ಭಟ್, ಧನುಶ್ ಮುಂತಾದವರು.
Jennifer Lopez ಅವರ ಮಹಿಳಾ ಪ್ರಾಧಾನ್ಯತೆಯ 'ದಿಸ್ ಈಸ್ ಮಿ ನೌ: ಎ ಲವ್ ಸ್ಟೋರಿ' ಸಿನಿಮಾದಲ್ಲಿ ಬೆನ್ ಅಫ್ಲೆಕ್, ಟ್ರೆವರ್ ನೋಹ್, ಸೋಫಿಯಾ ವೆರ್ಗರಾ, ಕೇಕೆ ಪಾಲ್ಮರ್, ಪೋಸ್ಟ್ ಮ್ಯಾಲೋನ್ ಮತ್ತು ನೀಲ್ ಡಿಗ್ರಾಸ್ ಟೈಸನ್ ಸಹ ನಟಿಸಿದ್ದಾರೆ. ಇವರುಗಳ ಜೊತೆ ಸದ್ಗುರು ಜಗ್ಗಿ ವಾಸುದೇವ್ ಕಾಣಿಸಿಕೊಂಡಿದ್ದಾರೆ. ಸದ್ಗುರು 'ರಾಶಿಚಕ್ರ ಕೌನ್ಸಿಲ್' ಹೆಸರಿನ ಗುಂಪು ಪ್ರವೇಶ ಮಾಡುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಜೆನ್ನಿಫರ್ ಲೋಪೆಜ್ ಮತ್ತು ಆಕೆಯ ರಿಲೆಷನ್‌ಶಿಪ್‌ಗಳ ನಡುವಿನ ಸಮಸ್ಯೆಗಳು ಬಗ್ಗೆ ಚರ್ಚಿಸುವ ದೃಶ್ಯದಲ್ಲಿ ಸದ್ಗುರು ಪಾತ್ರ ನಿರ್ವಹಿಸಿದ್ದಾರೆ.
ನಟ ವಿಜಯ್ ದೇವರಕೊಂಡಗೆ ವಿದ್ಯಾರ್ಥಿನಿಯರಿಂದ ವಿಚಿತ್ರ ಬೇಡಿಕೆ: ನಟನ ಉತ್ತರಕ್ಕೆ ಫ್ಯಾನ್ಸ್ ಫಿದಾ
ಸಮಯವನ್ನು ಕಾಪಾಡುವ ದೇವರ ಸೇವಕರಲ್ಲಿ ಒಬ್ಬರಾಗಿ ಸದ್ಗುರು ಕಾಣಿಸಿಕೊಂಡಿದ್ದಾರೆ. ಸದ್ಗುರು ಜೊತೆಗೆ ಜೆನ್ನಿಫರ್ ಲೊಪೇಜ್ ಸೇರಿದಂತೆ ಇನ್ನೂ ಕೆಲವು ಹಾಲಿವುಡ್ ಸ್ಟಾರ್ ನಟರು ಸಹ ನಟಿಸಿದ್ದಾರೆ. ಖ್ಯಾತ ಬಾಹ್ಯಾಕಾಶ ವಿಜ್ಞಾನಿ ನೀಲ್ ಡಿಗ್ರೆಸ್ ಸಹ ಸದ್ಗುರು ಜೊತೆ ನಟಿಸಿದ್ದಾರೆ. ಸದ್ಗುರು ಅವರು ಕೆಲವು ಡೈಲಾಗ್ಗಳನ್ನೂ ಇದರಲ್ಲಿ ಕೇಳಬಹುದು. ಸದ್ಗುರು ತಮ್ಮ ಸಾಧಾರಣ ಉಡುಗೆಯಾದ ಬರಿಮೈಗೆ ಒಂದು ಶಲ್ಯವನ್ನು ಸುತ್ತಿಕೊಂಡು, ಪೇಟವೊಂದನ್ನು ತೊಟ್ಟುಕೊಂಡು ಕಾಣಿಸಿಕೊಂಡಿದ್ದಾರೆ.
ಅಮೆಜಾನ್ ಒರಿಜಿನಲ್, ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಲೋಪೆಜ್ ಈ ಸಿನಿಮಾಕ್ಕಾಗಿ ಸುಮಾರು 20 ಶತಕೋಟಿ ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ. ನುಯೋರಿಕನ್ ಪ್ರೊಡಕ್ಷನ್ಸ್ (Nuyorican Productions) ಮತ್ತು BMG ರೈಟ್ಸ್ ಮ್ಯಾನೇಜ್‌ಮೆಂಟ್ ಸಹಕಾರವಿದೆ. ಇದಕ್ಕೂ ಮುಂಚೆ, ಫೆಬ್ರವರಿ 13 ರಂದು, ಗಾಯಕಿ ʻದಿಸ್ ಈಸ್ ಮಿʼ ಸಾಂಗ್‌ನ ಪೋಸ್ಟರ್ ಲುಕ್ ಹಂಚಿಕೊಂಡಿದ್ದರು.
ಉತ್ತರ ಪ್ರದೇಶದ ಕಾನ್ಸ್ಟೆಬಲ್ ಹುದ್ದೆಗೆ ಹಾಟ್ ಬ್ಯೂಟಿ ಸನ್ನಿ ಲಿಯೋನ್ ಅರ್ಜಿ! ನಟಿಗೆ ಆಗಿದ್ದಾದ್ರೂ ಏನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.