ಉತ್ತರ ಪ್ರದೇಶದ ಕಾನ್ಸ್ಟೆಬಲ್ ಹುದ್ದೆಗೆ ಹಾಟ್ ಬ್ಯೂಟಿ ಸನ್ನಿ ಲಿಯೋನ್ ಅರ್ಜಿ ಸಲ್ಲಿಸಿದ್ದು ಇದೀಗ ವೈರಲ್ ಆಗಿದೆ. ಅಷ್ಟಕ್ಕೂ ನಟಿಗೆ ಆಗಿದ್ದಾದ್ರೂ ಏನು?
ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿ, ಐಟಂ ಸಾಂಗ್‌ಗಳಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ಮಾಜಿ ನೀಲಿ ತಾರೆ, ನಟಿ ಸನ್ನಿ ಲಿಯೋನ್, ಈಚೆಗಷ್ಟೇ, ಐಷಾರಾಮಿ ಹೋಟೆಲ್ ತೆರೆಯುವ ಮೂಲಕ ಸದ್ದು ಮಾಡುತ್ತಿದ್ದಾರೆ. ಅಷ್ಟಕ್ಕೂ ನಟಿ ರೆಸ್ಟೋರೆಂಟ್ ತೆರೆದಿರುವುದು ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 129 ರಲ್ಲಿ. ಉತ್ತರ ಪ್ರದೇಶದ ಅಯೋಧ್ಯೆಗೆ ಭಾರಿ ಡಿಮಾಂಡ್ ಬರುತ್ತಲೇ ನಟಿ ಸನ್ನಿ ಲಿಯೋನ್ ಉತ್ತರ ಪ್ರದೇಶದಲ್ಲಿಯೇ ರೆಸ್ಟೋರೆಂಟ್ ಓಪನ್ ಮಾಡಿದ್ದಾರೆ. ಅಯೋಧ್ಯೆಯಿಂದ ಇದು ಸುಮಾರು 700 ಕಿಲೋ ಮೀಟರ್ ದೂರವಿದೆ. ಇದರ ವಿಡಿಯೋಗಳನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ಚಿಕಲೋಕ ನೋಯ್ಡಾ ಎಂದು ರೆಸ್ಟೋರೆಂಟ್ಗೆ ನಾಮಕರಣ ಮಾಡಿರುವ ನಟಿ ಶೇರ್ ಮಾಡಿರುವ ಫೋಟೋಗಳಲ್ಲಿ ಭರ್ಜರಿ ಅಡುಗೆಗಳನ್ನು ಕಾಣಬಹುದು. ತಮ್ಮ ವೈಯಕ್ತಿಯ ಖಾತೆ ಮಾತ್ರವಲ್ಲದೇ ರೆಸ್ಟೋರೆಂಟ್ ಹೆಸರಿನಲ್ಲಿಯೇ Instagram ಖಾತೆಯನ್ನೂ ನಟಿ ಓಪನ್ ಮಾಡಿದ್ದಾರೆ. ಇದರಲ್ಲಿ ಭರ್ಜರಿ ಓಪನಿಂಗ್ ಸೆರಮನಿಯೂ ನಡೆದಿದ್ದು, ಇದರಲ್ಲಿ ಹಲವಾರು ತಾರೆಯರು ಭಾಗಿಯಾಗಿದ್ದರು. ಈ ರೆಸ್ಟೋರೆಂಟ್ನಲ್ಲಿ ಐಷಾರಾಮಿ ವಸ್ತುಗಳಿಗೇನೂ ಕೊರತೆ ಇಲ್ಲ. ಅಬ್ಬಬ್ಬಾ ಎನ್ನುವಷ್ಟರ ಮಟ್ಟಿಗೆ ಈ ರೆಸ್ಟೋರೆಂಟ್ ಇದೆ. ಭಾರತೀಯ, ಏಷ್ಯನ್, ಯುರೋಪಿಯನ್ ಮತ್ತು ಇಟಾಲಿಯನ್ ಪಾಕಪದ್ಧತಿಯನ್ನು ಸವಿಯಬಹುದು.
ಇತ್ತ ಉತ್ತರ ಪ್ರದೇಶದಲ್ಲಿ ಹೋಟೆಲ್ ತೆರೆಯುತ್ತಿದ್ದಂತೆಯೇ ನಟಿ, ಉತ್ತರ ಪ್ರದೇಶದಲ್ಲಿಯೇ ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಕಾನ್ಸ್ಟೆಬಲ್ ಉದ್ಯೋಗಕ್ಕಾಗಿ ಅರ್ಜಿ ಹಾಕಿದ್ದಾರೆ! ಹೌದು. ಉದ್ಯೋಗಕ್ಕಾಗಿ ಅರ್ಜಿ ಹಾಕಿರುವವರ ಅರ್ಜಿಯಲ್ಲಿ ಸನ್ನಿ ಲಿಯೋನ್ ಫೋಟೋ, ಅಡ್ರೆಸ್ ಅವರ ಪರಿಚಯ ಎಲ್ಲವೂ ಇದೆ! ಫೆಬ್ರವರಿ 17ಕ್ಕೆ ಪೊಲೀಸ್ ಕಾನ್ಸ್ಟೆಬಲ್ ಪರೀಕ್ಷೆ ನಡೆದಿದ್ದು ಬಾಲಿಕಾ ಮಹಾವಿದ್ಯಾನಿಲಯದ ಪರೀಕ್ಷಾ ಕೇಂದ್ರದಲ್ಲಿ ಸನ್ನಿ ಲಿಯೋನಿಯ ಅರ್ಜಿ ಪತ್ತೆಯಾಗಿದೆ. ಉತ್ತರ ಪ್ರದೇಶ ಮೂಲದ ಮೊಬೈಲ್ ಸಂಖ್ಯೆ ಹಾಗೂ ಮುಂಬೈನ ವಿಳಾಸವನ್ನು ನೀಡಿ ಸನ್ನಿ ಲಿಯೋನಿಯ ಹೆಸರು ಚಿತ್ರಗಳು ಬಳಸಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲಾಗಿದೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಇದನ್ನೇನೂ ನಟಿ ಹಾಕಲಿಲ್ಲ. ಬದಲಿಗೆ ಯಾರೋ ನಟಿಯ ಹೆಸರಿನಲ್ಲಿ ಯಾರೋ ಕಿಡಿಗೇಡಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಕೂಡ ಕೆಲವು ನಟಿಯರ ಹೆಸರಿನಲ್ಲಿ ಇದೇ ರೀತಿ ವಿವಿಧ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲಾಗಿತ್ತು. ಈಗಲೂ ಹಾಗೆಯೇ ಆಗಿದೆ. ಸನ್ನಿ ಲಿಯೋನಿ ಹೆಸರಲ್ಲಿ ಅರ್ಜಿ ಸಲ್ಲಿಸಲಾಗಿದೆ ಅಷ್ಟೆ ಯಾರೂ ಸಹ ಆ ಪ್ರವೇಶ ಪತ್ರ ಬಳಸಿ ಪರೀಕ್ಷೆ ಬರೆದಿಲ್ಲ. ನಕಲಿ ಮಾಹಿತಿ ಬಳಸಿ ಅರ್ಜಿ ಸಲ್ಲಿಸಿರುವ ಬಗ್ಗೆ ತನಿಖೆ ನಡೆಸಲಿದ್ದೇವೆ ಎಂದು ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
ಅಂದಹಾಗೆ ಸದ್ಯ ನಟಿ, ಮ್ಯೂಸಿಕ್ ವಿಡಿಯೋ 'ಥರ್ಡ್ ಪಾರ್ಟಿ'ಯಲ್ಲಿ ಬಿಜಿಯಾಗಿದ್ದಾರೆ. ಇದರ ಬಗ್ಗೆ ಮಾತನಾಡಿದ ಸನ್ನಿ ಅವರು, ಅಭಿಷೇಕ್ ಸಿಂಗ್ ಚಿತ್ರವನ್ನು ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಹಾಡುಗಳನ್ನು ಚಿತ್ರೀಕರಿಸಿದ್ದಾರೆ. ಅವರೇ ಬರೆದು, ಸಂಗೀತ ಸಂಯೋಜನೆ ಮಾಡಿ ರಂಜನೀಯ ಹಾಡುಗಳನ್ನು ಹಾಡಿದ್ದಾರೆ ಎಂದರು. ತಮ್ಮ ಪ್ರವಾಸದ ವಿಡಿಯೋ ಅನ್ನು ಸನ್ನಿ ಲಿಯೋನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಗಂಗಾ ಆರತಿಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಜೊತೆಗೆ "ವಾರಣಾಸಿಯಲ್ಲಿ ಗಂಗಾ ಆರತಿಯನ್ನು ನೋಡುವುದು ಅತ್ಯಂತ ಅದ್ಭುತ ಅನುಭವ. ಅಭಿಷೇಕ್ ಸಿಂಗ್ ಮತ್ತು ಟಿ ಸೀರಿಸ್‌ಗೆ ಧನ್ಯವಾದಗಳು" ಎಂದು ಶೀರ್ಷಿಕೆ ನೀಡಿದ್ದಾರೆ. ಇನ್ನು 'ಥರ್ಡ್ ಪಾರ್ಟಿ' ಬಗ್ಗೆ ಹೇಳುವುದಾದರೆ, ಇದು ಕಳೆದ ನವೆಂಬರ್ 15ರಂದು ಬಿಡುಗಡೆಯಾಗಿದೆ. ಇದರಲ್ಲಿ ಮಾಜಿ ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ ಮತ್ತು ಸನ್ನಿ ಲಿಯೋನ್ ಇಬ್ಬರೂ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ಸಿಂಗ್ ಹೊಸ ಹಾಡನ್ನು ಹಾಡಿದ್ದಾರೆ. ಹಾಡನ್ನು ಸಂಯೋಜನೆ ಮಾಡಿದ್ದಾರೆ ಮತ್ತು ಅವರೇ ಬರೆದಿದ್ದಾರೆ. ನಟಿಯೇ ಹೇಳಿರುವಂತೆ, ಅಭಿಷೇಕ್ ಸಿಂಗ್ ಚಿತ್ರವನ್ನು ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಹಾಡುಗಳನ್ನು ಚಿತ್ರೀಕರಿಸಿದ್ದಾರೆ.
ನಟ ವಿಜಯ್ ದೇವರಕೊಂಡಗೆ ವಿದ್ಯಾರ್ಥಿನಿಯರಿಂದ ವಿಚಿತ್ರ ಬೇಡಿಕೆ: ನಟನ ಉತ್ತರಕ್ಕೆ ಫ್ಯಾನ್ಸ್ ಫಿದಾ