ಒನ್ ನೈಟ್ ಸ್ಟ್ಯಾಂಡ್ ನಂತ್ರ ಪ್ರೆಗ್ನೆಂಟ್, ಗರ್ಭಪಾತದ ನಿರ್ಧಾರ ನಂದು, ಒಂಟಿಯಾಗಿ ಎಲ್ಲವನ್ನು ಮುಗಿಸಿದ್ದೆ ಎಂದ ನಟಿ

Published : Mar 05, 2025, 01:03 PM ISTUpdated : Mar 05, 2025, 02:41 PM IST
ಒನ್ ನೈಟ್ ಸ್ಟ್ಯಾಂಡ್ ನಂತ್ರ ಪ್ರೆಗ್ನೆಂಟ್, ಗರ್ಭಪಾತದ ನಿರ್ಧಾರ ನಂದು, ಒಂಟಿಯಾಗಿ ಎಲ್ಲವನ್ನು ಮುಗಿಸಿದ್ದೆ ಎಂದ ನಟಿ

ಸಾರಾಂಶ

ನಟಿ ಕುಬ್ರಾ ಸೇಠ್ ಗರ್ಭಪಾತದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಅವಿವಾಹಿತೆ  ಕುಬ್ರಾ ಸೇಠ್  ವೃತ್ತಿಜೀವನಕ್ಕೆ ಆದ್ಯತೆ ನೀಡಿ ಗರ್ಭಪಾತ ಮಾಡಿಸಿಕೊಂಡರು. ಈ ನಿರ್ಧಾರವನ್ನು ಕುಟುಂಬ ಮತ್ತು ಸ್ನೇಹಿತರಿಗೆ ತಿಳಿಸಿರಲಿಲ್ಲ. ತಾವೊಬ್ಬರೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದರು. ತಾಯಿಯಾಗಲು ಸಿದ್ಧರಿಲ್ಲದ ಕಾರಣ ಈ ನಿರ್ಧಾರ ತೆಗೆದುಕೊಂಡೆ ಎಂದು ಕುಬ್ರಾ ಹೇಳಿದ್ದಾರೆ.

ಸೇಕ್ರೆಡ್ ಗೇಮ್ಸ್ ಸಿರೀಸ್ (Sacred Games Series) ಮೂಲಕ ಪ್ರಸಿದ್ಧಿಗೆ ಬಂದ ನಟಿ ಕುಬ್ರಾ ಸೇಠ್ (Actress Kubra sait) ಸದ್ಯ ಗರ್ಭಪಾತದ ವಿಷ್ಯಕ್ಕೆ ಚರ್ಚೆಯಲ್ಲಿದ್ದಾರೆ. ಅವಿವಾಹಿತ ಕುಬ್ರಾ ಸೇಠ್ಗೆ ಈಗ 41 ವರ್ಷ. ತಮ್ಮ ವೃತ್ತಿಗೆ ಹೆಚ್ಚು ಆದ್ಯತೆ ನೀಡ್ತಿರೋ ಕುಬ್ರಾ ಸೇಠ್, ಈ ಹಿಂದೆ ಪುಸ್ತಕವೊಂದರಲ್ಲಿ ಒನ್ ನೈಟ್ ಸ್ಟ್ಯಾಂಡ್ ಹಾಗೂ ತಮ್ಮ ಗರ್ಭಧಾರಣೆ ಬಗ್ಗೆ ಬರೆದಿದ್ರು. ಇದನ್ನು ಕೇಳಿ ಫ್ಯಾನ್ಸ್ ಶಾಕ್ನಲ್ಲಿದ್ರು. ಆದ್ರೀಗ ಕುಬ್ರಾ ಸೇಠ್, ಗರ್ಭಪಾತದ ಬಗ್ಗೆ ಮಾತನಾಡಿದ್ದಾರೆ. ಮಗು ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದ ಕುಬ್ರಾ ಸೇಠ್, ಒಬ್ಬರೇ ಆಸ್ಪತ್ರೆಗೆ ಹೋಗಿ ಆಪರೇಷನ್ ಮಾಡಿಸಿಕೊಂಡಿದ್ರು. ಈ ಬಗ್ಗೆ ಅವರ ಪಾಲಕರಿರಲಿ, ಆಪ್ತ ಸ್ನೇಹಿತೆಯರಿಗೂ ತಿಳಿದಿರಲಿಲ್ಲ. ಗರ್ಭಪಾತ ಮಾಡಿಸ್ಕೊಳ್ಳೋದು ನನ್ನ ಸ್ವಂತ ನಿರ್ಧಾರವಾಗಿತ್ತು ಎಂದು ಕುಬ್ರಾ ಸೇಠ್, ಸಂದರ್ಶನದಲ್ಲಿ ಹೇಳಿದ್ದಾರೆ.

ಬಾಲಿವುಡ್ ಬಬಲ್ ಜೊತೆ   ಕುಬ್ರಾ ಸೇಠ್ ಮಾತನಾಡಿದ್ದಾರೆ. ಒನ್ ನೈಟ್  ಸ್ಟ್ಯಾಂಡ್ ಮಾಡಿದ್ದ ಕುಬ್ರಾಗೆ ಆರಂಭದಲ್ಲಿ ಅನುಮಾನ ಬಂದಿತ್ತು. ನಂತ್ರ ಪ್ರೆಗ್ನೆಂಟ್ ಅನ್ನೋದು ಕನ್ಫರ್ಮ್ ಆಯ್ತು. ಮಗುವನ್ನು ಬೆಳೆಸುವ ನಿರ್ಧಾರ ಅವ್ರಿಂದ ಸಾಧ್ಯವಿರಲಿಲ್ಲ. ಹಾಗಾಗಿಯೇ ಗರ್ಭಪಾತದ ತೀರ್ಮಾನಕ್ಕೆ ಬಂದ್ರು ಕುಬ್ರಾ ಸೇಠ್. 

ಪರಿಗೆ ಆರು ತಿಂಗಳು, ಮಿಲನಾ ಬೆಸ್ಟ್ ಮದರ್ ಎಂದ ಡಾರ್ಲಿಂಗ್ ಕೃಷ್ಣ

ಗರ್ಭಪಾತದ ಬಗ್ಗೆ ಕುಬ್ರಾ ಹೇಳಿದ್ದೇನು? : ಗರ್ಭಪಾತ ಮಾಡಿಸ್ಕೊಳ್ಳೋಕೆ ಕುಬ್ರಾ ಒಂಟಿಯಾಗಿ ಆಸ್ಪತ್ರೆಗೆ ಹೋಗಿದ್ರು. ಯಾರೊಬ್ಬರೂ ಅವ್ರ ಜೊತೆ ಬಂದಿರಲಿಲ್ಲ. ಆ ಸಮಯದಲ್ಲಿ ನನಗೆ ಧೈರ್ಯ ಇರಲಿಲ್ಲ. ಮುಂದುವರೆಯೋಕೆ ನಾನು ದುರ್ಬಲನಾಗಿದ್ದೆ. ಗರ್ಭಪಾತ ಮಾಡಿಸಿಕೊಳ್ಳದೆ ಮಗು ಜೊತೆ ಮುಂದುವರೆಯುತ್ತೇನೆ ಎಂಬುದನ್ನು ಹೇಳೋಕೆ ನನಗೆ ಶಕ್ತಿ, ಧೈರ್ಯ ಇರಲಿಲ್ಲ. ತಾಯಿಯಾಗಲು ನಾನು ಯೋಗ್ಯನಲ್ಲ ಎನ್ನಿಸಿತ್ತು. ನಾನು ಖಾಲಿ ತನವನ್ನು ಅನುಭವಿಸಿದ್ದೆ. ಬದುಕುಳಿಯಲು ಯೋಗ್ಯನಲ್ಲ ಅಂದುಕೊಂಡಿದ್ದೆ. ಸಂಪೂರ್ಣ ಕುಸಿದು ಹೋಗಿದ್ದೆ ಎಂದು ಕುಬ್ರಾ ಸೇಠ್ ಹೇಳಿದ್ದಾರೆ. ಆದ್ರೆ ನಂತ್ರ ನಾನು ಸ್ಟ್ರಾಂಗ್ ಆದೆ. ನಾನು ನನಗಾಗಿ ನಿರ್ಧಾರ ತೆಗೆದುಕೊಂಡಿದ್ದೇನೆ. ನಾನು ಮಾಡಿದ್ದು ಸಂಪೂರ್ಣ ಸರಿಯಾಗಿದೆ. ನನ್ನ ನಿರ್ಧಾರವನ್ನು ನಾನು ಗೌರವಿಸಿದ್ದೇನೆ. ಸ್ಟೀರಿಯೊಟೈಪ್ ಮಾದರಿಯನ್ನು ಮುರಿಯಲು ನನಗೆ ಸಾಧ್ಯವಾಗಿದೆ. ಆ ಸಾಮಾಜಿಕ ಬಂಧನದಿಂದ ಹೊರಬರುವಲ್ಲಿಯೂ ಯಶಸ್ವಿಯಾಗಿದ್ದೇನೆ. ನಾನು ಯಾರಿಗೂ ವಿಷ್ಯ ತಿಳಿಸಲಿಲ್ಲ. ಈ ಬಗ್ಗೆ ಕುಟುಂಬಸ್ಥರಿಗಾಗ್ಲಿ, ಸ್ನೇಹಿತರಿಗಾಗ್ಲಿ ಹೇಳಲಿಲ್ಲ. ನಾನು ಒಂಟಿಯಾಗಿ ಆಸ್ಪತ್ರೆಗೆ ಹೋದೆ. ಒಂಟಿಯಾಗಿ ಎಲ್ಲವನ್ನು ಮುಗಿಸಿ ಮನೆಗೆ ಬಂದೆ  ಎಂದು ಕುಬ್ರಾ ಹೇಳಿದ್ದಾರೆ. 

23 ವರ್ಷದ ಕನ್ನಡ ನಟಿಯನ್ನು ಪ್ರೀತಿಸ್ತಿದ್ದಾರಾ ಬಾಲಿವುಡ್‌ ನಟ Kartik Aaryan? ವೈರಲ್‌

ಕುಬ್ರಾ ಭಾವುಕರಾಗಿದ್ದು ಯಾವಾಗ? : ಕುಬ್ರಾ ಎಷ್ಟೆಲ್ಲವನ್ನೂ ಧೈರ್ಯವಾಗಿ ಮುಗಿಸಿದ್ದರು. ಆದ್ರೆ ಮನೆಗೆ ಬಂದ ಸ್ನೇಹಿತೆ ಕೇಳಿದ ಪ್ರಶ್ನೆಗೆ ಅವರು ಭಾವುಕರಾದ್ರು. ಅನೇಕ ವಾರಗಳ ನಂತ್ರ ಅವರ ಸ್ನೇಹಿತೆಯೊಬ್ಬರು ಮನೆಗೆ ಬಂದಿದ್ದರು. ನಮಗೆ ಟೈಂ ನೀಡ್ತಿಲ್ಲ ಎಂದು ಕುಬ್ರಾ ಮೇಲೆ ಆರೋಪ ಮಾಡಿದ್ದರು. ಆಗ ಕುಬ್ರಾ ನಡೆದಿದ್ದನ್ನು ಹೇಳಿದ್ದರು. ಆಪರೇಷನ್ ಆಗಿದೆ ಎಂಬ ವಿಷ್ಯ ತಿಳಿದು ಆಘಾತಕ್ಕೊಳಗಾಗಿದ್ದ ಸ್ನೇಹಿತೆ, ಒಂಟಿಯಾಗಿ ಎಲ್ಲವನ್ನೂ ಮಾಡಿಸಿಕೊಂಡ್ಯಾ ಎಂದು ಪ್ರಶ್ನೆ ಕೇಳಿದ್ದರು. ಆಗ ಕುಬ್ರಾಗೆ ತಾನೆಂಥ ಸ್ಥಿತಿಯನ್ನು ಎದುರಿಸಿದ್ದೇನೆ ಎಂಬುದು ಅರಿವಾಗಿತ್ತು. ಆ ಸಮಯದಲ್ಲಿ ಭಾವುಕನಾದೆ ಎಂದಿದ್ದಾರೆ ಕುಬ್ರಾ. 

ಕುಬ್ರಾ,  ಓಪನ್ ಬುಕ್: ನಾಟ್ ಕ್ವೈಟ್ ಎ ಮೆಮೋಯಿರ್ ಪುಸ್ತಕ ಬರೆದಿದ್ದಾರೆ. ಅದ್ರಲ್ಲಿ ತಮ್ಮ ಜೀವನ ಮತ್ತು ಅನುಭವಗಳನ್ನು ಹಂಚಿಕೊಂಡಿದ್ದಾರೆ. ಒನ್ ನೈಟ್ ಸ್ಟ್ಯಾಂಡ್ ಬಗ್ಗೆಯೂ ಕುಬ್ರಾ ಇದ್ರಲ್ಲಿ ಬರೆದಿದ್ದಾರೆ. ಕುಬ್ರಾ, ರಾಮಾಯಣ ಸಿನಿಮಾದಲ್ಲಿ ಶೂರ್ಪನಖಿ ಪಾತ್ರ ಮಾಡ್ತಾರೆ ಎನ್ನುವ ಸುದ್ದಿ ಇತ್ತು. ಸಂದರ್ಶನದಲ್ಲಿ ಈ ಬಗ್ಗೆ ಕುಬ್ರಾ ಸ್ಪಷ್ಟನೆ ನೀಡಿದ್ದಾರೆ. ನಾನು ಯಾವುದೇ ಪಾತ್ರ ಮಾಡ್ತಿಲ್ಲ. ಆಡಿಷನ್ನಲ್ಲಿ ಪಾಲ್ಗೊಂಡಿದ್ದು ಸತ್ಯ. ಆದ್ರೆ ಆಯ್ಕೆಯಾಗಿಲ್ಲ. ಯಾರು ಶೂರ್ಪನಖಿ ಪಾತ್ರ ಮಾಡ್ತಾರೆ ಎನ್ನುವ ಕುತೂಹಲವಿದೆ ಎಂದಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!
3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್