ಅಬ್ಬಾ! 'ದರ್ಬಾರ್‌' ಮಾಡಲು ರಜನಿಕಾಂತ್ ಪಡೆದ ಹಣವೆಷ್ಟು ಗೊತ್ತಾ?

Published : Nov 10, 2019, 02:26 PM IST
ಅಬ್ಬಾ! 'ದರ್ಬಾರ್‌' ಮಾಡಲು ರಜನಿಕಾಂತ್ ಪಡೆದ ಹಣವೆಷ್ಟು ಗೊತ್ತಾ?

ಸಾರಾಂಶ

  'ಪೆಟ್ಟಾ' ಹೊತ್ತು 'ದರ್ಬಾರ್‌'ಗೆ ಕಾಲಿಟ್ಟ ರಜನಿ ಈಗಲೂ ಸೂಪರ್ ಹಿಟ್ ಸ್ಟಾರ್. ಒಂದು ಶೆಡ್ಯೂಲ್ ಫ್ರೀ ಸಿಕ್ಕರೆ ಸಾಕು ಎಂದು ಕಾಯುತ್ತಿರುವ ನಿರ್ದೇಶಕರಿಗೆ ರಜನಿ ಪಡೆಯುತ್ತಿರುವ ಸಂಭಾವೆ ಮೊತ್ತ ಕೇಳಿದ್ರೆ ಶಾಕ್ ಆಗುತ್ತೆ!

 

ಸೂಪರ್ ಸ್ಟಾರ್ ರಜಿನಿಕಾಂತ್ ಇಂದಿಗೂ ಎಂದೆಂದಿಗೂ ' ಒನ್ ಅಂಡ್ ಒನ್ಲಿ ಸ್ಟಾರ್'. ಚಿತ್ರರಂಗಕ್ಕೆ ಕಾಲಿಟ್ಟು 44 ವರ್ಷ ಪೂರೈಸಿದ್ದ ರಜನಿಗೆ ಅಭಿಮಾನಿಗಳು #44YrsofUnmatchableRAJINISM ಎಂಬ ಹ್ಯಾಶ್‌ಟ್ಯಾಗ್‌ ಶುರು ಮಾಡಿಕೊಂಡಿದ್ದರು.

ಖಾಕಿ ತೊಟ್ಟು ರಜನಿಕಾಂತ್ 'ದರ್ಬಾರ್' ಶುರು; ಇಲ್ಲಿದೆ ಫೋಟೋಗಳಿವು!

 

ಇನ್ನು ದರ್ಬಾರ್ ಚಿತ್ರದಲ್ಲಿ ಖಾಕಿ ತೊಟ್ಟು ಖಡಕ್‌ ಆಫೀಸರ್ ರೀತಿಯಲ್ಲಿ ಕಾಣಿಸಿಕೊಳ್ಳುವ ರಜನಿ ಲುಕ್‌ಗೆ ಫ್ಯಾನ್ಸ್‌ ಮಾರು ಹೋಗುತ್ತಾರೆ. ಈ ಚಿತ್ರವು ತಮಿಳು,ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತೆರೆ ಕಾಣಲಿದೆ ಹಾಗೂ ಇದರಲ್ಲಿ ರಜನಿಗೆ ನಯನತಾರಾ ಜೋಡಿಯಾಗಿ ಸಾಥ್‌ ನೀಡುತ್ತಿದ್ದಾರೆ.

ರಜಿನಿಕಾಂತ್ 'ದರ್ಬಾರ್'ಗೆ ರಾಜ್‌ ಪುತ್ರ ವಿಲನ್?

 

ಎ.ಆರ್ ಮುರುಗದಾಸ್ ನಿರ್ದೇಶನದಲ್ಲಿ ಮೋಡಿ ಬರುತ್ತಿರುವ ಚಿತ್ರದ ಒಟ್ಟ ಬಜೆಟ್ 250 ಕೋಟಿ ಆಗಿದ್ದು ರಜನಿಕಾಂತ್ 100 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಹೈ ರ್ಯಾಂಕ್ ಪೊಲೀಸ್‌ ರೀತಿ ಕಾಣಿಸಿಕೊಳ್ಳುತ್ತಿರುವ ರಜನಿಯನ್ನು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರತಂಡದ ಪ್ರಕಾರ ಸಂಕ್ರಾಂತಿ ಹಬ್ಬದ ದಿನ ತೆರೆ ಕಾಣಲು ಸಿದ್ಧವಾಗುತ್ತಿದೆ.

2.0 ಹಾಗೂ 'ಪೆಟ್ಟಾ' ಎರಡು ಚಿತ್ರಗಳು ಸೂಪರ್ ಹಿಟ್ ಆಗಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ಹಾಕಿದ ಬಂಡವಾಳವನ್ನು ಪಡೆದುಕೊಂಡಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?