ಮೆಗಾ ಸ್ಟಾರ್‌ ಸೋದರ ಸೊಸೆ ಜೊತೆ ಪ್ರಭಾಸ್‌ ಮದುವೆ; ನಡೆಯುತ್ತಿದೆ ಸಿದ್ಧತೆ?

By Suvarna News  |  First Published Apr 27, 2020, 3:00 PM IST

ಮೆಗಾ ಸ್ಟಾರ್‌ ಸೋದರ ಸೊಸೆ ನಿಹಾರಿಕಾ ಕೋಣೆದೆಲ ಜೊತೆ ಖ್ಯಾತ ನಟ ಪ್ರಭಾಸ್ ಮದುವೆ. ಸದ್ದಿಲ್ಲದೇ ನಡೆಯುತ್ತಿದೆ ತಯಾರಿ, ಏನಿದು ಶಾಕಿಂಗ್ ನ್ಯೂಸ್?


ಟಾಲಿವುಡ್‌ ಚಿತ್ರರಂಗದ ಬಾಹುಬಲಿ ಪ್ರಭಾಸ್ ಮದುವೆಯ ವಿಚಾರ ಸದಾ ಸುದ್ದಿಯಲ್ಲಿರುವ ಹಾಟ್‌ ಟಾಪಿಕ್‌. ಇಷ್ಟು ದಿನಗಳ ಕಾಲ ಅನುಷ್ಕಾ ಶೆಟ್ಟಿಯನ್ನು ಮದುವೆಯಾಗುತ್ತಾರೆ ಎಂದು ಸುದ್ದಿ ಹರಿದಾಡುತ್ತಲೇ ಇತ್ತು. ಆದರೀಗ ಫಾರ್‌ ದಿ ಫಸ್ಟ್ ಟೈಂ ಪ್ರಭಾಸ್ ಮದ್ವೆಯಾಗೋ ಹುಡುಗಿ ಜಾಗದಲ್ಲಿ ಅನುಷ್ಕಾ ಬದಲು ಮತ್ತೊಬ್ಬರ ಹೆಸರು ಕೇಳಿ ಬರುತ್ತಿದೆ!

ಹೌದು! ಮೆಗಾ ಸ್ಟಾರ್‌ ಚಿರಂಜೀವಿ ಅವರ ಸೋದರ ಸೊಸೆ (niece)ಯೊಂದಿಗೆ ಪ್ರಭಾಸ್‌ ಹೆಸರು ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಇಬ್ಬರು ಮದುವೆಯಾಗುತ್ತಾರೆ, ತಯಾರಿ ನಡೆಯುತ್ತಿದೆ. ಇಲ್ಲವಾದರೆ ಮನೆಗೇಕೆ ಅಷ್ಟೊಂದು ತರಕಾರಿ ತರುತ್ತಾರೆ, ಜನರು ಸೇರುತ್ತಾರೆ ಎಂದೆಲ್ಲಾ ಗಾಳಿ ಮಾತುಗಳು ಕೇಳಿ ಬರುತ್ತಿವೆ.

Tap to resize

Latest Videos

ಅಷ್ಟಕ್ಕೂ ಸತ್ಯವೇನು?

ಟಾಲಿವುಡ್ ಚಿತ್ರರಂಗಕ್ಕೆ ಈಗಷ್ಟೇ ಕಾಲಿಟ್ಟಿರುವ ನಟಿ ನಿಹಾರಿಕಾ ಉತ್ತಮ ಕಥೆ ಹೊಂದಿರುವ ಸಿನಿಮಾಗಳಲ್ಲಿ ಅಭಿನಯಿಸಿ, ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಬೇಕೆಂಬ ಇರಾದೆ ಹೊಂದಿದ್ದಾರೆ. ತನ್ನ ವೈಯಕ್ತಿಕ ಜಿವನದ ಬಗ್ಗೆ ಹರಿದಾಡುತ್ತಿರುವ ಗಾಳಿ ಮಾತುಗಳನ್ನು ಕೇಳಲಾಗದೇ,  ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಕೊರೋನಾ ಲಾಕ್‌ಡೌನ್‌ನಿಂದ ಮನೆಯಲ್ಲಿಯೇ ಇರುವ ನಿಹಾರಿಕಾ ಲೈವ್‌ ಮಾಡುವ ಮೂಲಕ, ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಲೈವ್‌ ಚಾಟ್‌ನಲ್ಲಿ ಅಭಿಮಾನಿಯೊಬ್ಬ 'ನೀವು ಪ್ರಭಾಸ್‌ರನ್ನು ಮದುವೆಯಾಗುತ್ತಿದ್ದೀರಾ?' ಎಂದು ಪ್ರಶ್ನಿಸಿದಾಗ. ನಿಹಾರಿಕಾ 'ಈ ವಿಚಾರ ನಿಜವಲ್ಲ. ಪ್ರಭಾಸ್‌ ಜೊತೆ ನನ್ನ ಮದುವೆ ಎಂಬ ಸುದ್ದಿ ಬೇಸ್‌ಲೆಸ್‌' ಎಂದು ಹೇಳಿದ್ದಾರೆ.  ಇಬ್ಬರು ಒಂದೇ ಚಿತ್ರರಂಗದಲ್ಲಿರುವ ಕಾರಣ ಒಟ್ಟಾಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು, ಫೋಟೋಗಳಲ್ಲಿ ಸೆರೆಯಾಗಿರಬಹುದು. ಆದರೆ, ಇದರರ್ಥ ನಾನು ಅವರನ್ನೇ ವರಿಸುತ್ತಿದ್ದೇನೆ ಎಂದಲ್ಲ.  ಮನೆಗೆ ತರಕಾರಿ ತರುತ್ತಿರುವುದು ಹಾಗೂ ಜನರು ಸೇರಿರುವುದಕ್ಕೆ ಕಾರಣ ಲಾಕ್‌ಡೌನ್. ಒಟ್ಟಾಗಿ ಮನೆಯಲ್ಲಿ ಕುಟುಂಬ ಸಮೇತ ಸೇರಿ, ಕಾಲ ಕಳೆಯುತ್ತಿದ್ದೇವೆ. ದೊಡ್ಡ ಕುಟುಂಬವಾದ ಕಾರಣ ನೋಡುವವರಿಗೆ ಸಮಾರಂಭದಲ್ಲಿ ಜನರು ಸೇರಿದಂತೆ ಕಾಣಿಸುತ್ತಿದೆ, ಎಂದು ಸಮಜಾಯಿಷಿ ನೀಡಿದ್ದಾರೆ. 

ಪ್ರಭಾಸ್ ಜೊತೆ ನಟಿಸಲು ದೀಪಿಕಾ ಕೇಳಿದ ಸಂಭಾವನೆ ಎಷ್ಟು ಗೊತ್ತಾ?

ಯಾರು ಈ ನಿಹಾರಿಕಾ?
ವೆಬ್ ಸೀರಿಸ್‌ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಿಹಾರಿಕ 'ಒಕ ಮನಸ್ಸು' ಚಿತ್ರದ ಮೂಲಕ ನಾಯಕಿಯಾಗಿ ಟಾಲಿವುಡ್‌ಗೆ ಎಂಟ್ರಿ ಕೊಟ್ಟವರು. 'ಹ್ಯಾಪಿ ವೆಡ್ಡಿಂಗ್' ಹಾಗೂ 'ಸೂರ್ಯಕಾಂತಂ' ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಸೆಲೆಬ್ರಿಟಿಗಳ ಕುಟುಂಬದಲ್ಲಿರುವ ನಿಹಾರಿಕಾಳ ಫೋಟೋಸ್ ಹೆಚ್ಚಾಗಿ ಬಹುತೇಕ ಎಲ್ಲ ಸ್ಟಾರ್ ನಟರ ಜೊತೆಯೂ ಇವೆ.

ಇನ್ನು ಚಿತ್ರರಂಗದಲ್ಲಿ ಪ್ರಭಾಸ್‌ ಹೆಸರು ಹೆಚ್ಚಾಗಿ ಕೇಳಿ ಬರುವುದು ಅನುಷ್ಕಾ ಶೆಟ್ಟಿ ಜೊತೆ. ಆದರೆ ಕೆಲವು ದಿನಗಳ ಹಿಂದೆ ಅನುಷ್ಕಾ ವಿಚ್ಛೇದಿತ ನಿರ್ದೇಶಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಅದಾದ ಮೇಲೆ ಖ್ಯಾತ ಕ್ರಿಕೆಟಿಗನೊಬ್ಬರನ್ನು ಮದುವೆಯಾಗುತ್ತಾರೆ ಎಂದೂ ಮತ್ತೊಂದು ಗಾಸಿಪ್ ಹರಿದಾಡಿತ್ತು. ಆದರೆ ಯಾರೊಟ್ಟಿಗೆ ಬಾಳ ಪಯಣ ನಡೆಸಲಿದ್ದಾರೆಂಬುದನ್ನು ಇನ್ನೂ ಬಾಹುಬಲಿ ನಟಿ ರಿವೀಲ್ ಮಾಡಿಲ್ಲ. ಮುದ್ದಾದ ಸ್ವೀಟಿ ಶ್ರೀಘ್ರದಲ್ಲಿ ಮದುವೆಯಾಗಲಿ ಎಂದು ಅಭಿಮಾನಿಗಳು ಹಾಗೂ ಸಿನಿ ಸ್ನೇಹಿತರು ಬಯಸುತ್ತಿದ್ದಾರೆ.

ಅನುಷ್ಕಾಳ 3 ಗಂಟೆ ಫ್ರೆಂಡ್ ಪ್ರಭಾಸ್:
ಲಾಕ್‌ಡೌನ್‌ ಪ್ರರಂಭವಾಗುವ ಮುನ್ನ ಅನುಷ್ಕಾ ಸಂದರ್ಶನವೊಂದರಲ್ಲಿ ಪ್ರಭಾಸ್‌ರನ್ನು 3 ಗಂಟೆ ಫ್ರೆಂಡ್ ಎಂದು ಹೇಳಿಕೊಂಡಿದ್ದರು. ಅಂದರೆ ಮನಸ್ಸಿಗೆ ಹತ್ತಿರವಾದವರನ್ನು 3 ಎಎಂ ಫ್ರೆಂಡ್ ಎನ್ನುತ್ತಾರೆ. ನೆನೆದ ಕೂಡಲೇ ಪ್ರೀತಿ ಪಾತ್ರರನ್ನು ಎಷ್ಟೊತ್ತಿಗೆ ಬೇಕಾದರೂ ಕರೆ ಮಾಡಿ, ಮಾತನಾಡಿಸುವ ಬಾಂಧವ್ಯ ಈ ಸ್ನೇಹಿತರದ್ದಾಗಿರುತ್ತೆ. ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ವಿಡಿಯೋಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇವರಿಬ್ಬರು ಕಣ್ಣಲ್ಲೇ ಮಾತನಾಡುತ್ತಾರೆ, ಎಂದು ಅಭಿಮಾನಿಗಳು ಹೇಳಿದ್ದರು. 

ಪ್ರಭಾಸ್‌ 3 ಗಂಟೆ ಫ್ರೆಂಡ್; ಕೊನೆಗೂ ಗಾಸಿಪ್‌ಗೆ ಬ್ರೇಕ್‌ ಹಾಕಿದ್ರಾ ಅನುಷ್ಕಾ ಶೆಟ್ಟಿ ?

ಒಟ್ಟಿನಲ್ಲಿ ಕುಡ್ಲದ ಕುವರಿ ಮೇಲೆ ಕನ್ನಡಿಗರಿಗೂ ಎಲ್ಲಿಲ್ಲದ ಅಭಿಮಾನ. ಅಷ್ಟೇ ಅಭಿಮಾನವನ್ನು ಅವರೂ ಕರುನಾಡ ಭಾಷೆ, ಸಂಸ್ಕೃತಿ ಮೇಲೂ ರುತ್ತಾರೆ. ಹಾಗಾಗಿ ಅನುಷ್ಕಾ ಮದುವೆ ಬಗ್ಗೆ ಸಿಕ್ಕಾಪಟ್ಟೆ ಕುತೂಹಲ ಹೆಚ್ಚು. ಬಾಹುಬಲಿಯಂಥ ದಾಖಲೆ ನಿರ್ಮಿಸಿದ ಚಿತ್ರದಲ್ಲಿ ನಟಿಸಿ, ಕಮಾಲ್ ಮಾಡಿದ ಜೋಡಿಯೇ ನಿಜ ಜೀವನದಲ್ಲಿ ಒಂದಾಗಲಿ ಎಂಬುವುದು ಅಭಿಮಾನಿಗಳು ಆಶಿಸುವುದು ಸಹಜ. 

ಒಟ್ಟಿನಲ್ಲಿ ಅನುಷ್ಕಾ ಅಥವಾ ಪ್ರಭಾಸ್ ಇಬ್ಬರಲ್ಲಿ ಒಬ್ಬರಿಗೆ ಕಂಕಣ ಭಾಗ್ಯ ಕೂಡಿ ಬಂದರೂ, ಟಾಲಿವುಡ್‌ನಲ್ಲಿ ಗಾಸಿಪ್ ಕಡಿಮೆ ಆಗುವುದಂತೂ ಸುಳ್ಳಲ್ಲ. 

click me!