
ಬೆಂಗಳೂರು: ಸ್ಯಾಂಡಲ್‌ವುಡ್ ನ ಕನಕಾವತಿ ರುಕ್ಮಿಣಿ ವಸಂತ್ ಬಹು ಬೇಡಿಕೆಯ ನಟಿ. ರಶ್ಮಿಕಾ ಮಂದಣ್ಣ ಜಾಗವನ್ನ ತುಂಬಬಲ್ಲ ಟ್ಯಾಲೆಂಟ್ ಇರೋ ರುಕ್ಮಿಣಿ ಇದೀಗ ಸದ್ದಿಲ್ಲದೆ ಮತ್ತೊಂದು ಬೃಹತ್ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹಾಗಾದ್ರೆ ಕನಕಾವತಿಯ ಆ ಕನಸಿನ ಸಿನಿಮಾ ಯಾವ್ದು ನೋಡೋಣ ಬನ್ನಿ.
ರುಕ್ಮಿಣಿ ವಸಂತಾ. ಸೌತ್ ಸಿನಿ ಜಗತ್ತನ್ನ ನಿಧಾನಕ್ಕೆ ಆವರಿಸಿಕೊಳ್ಳುತ್ತಿರೋ ಕನ್ನಡದ ಹುಡುಗಿ. ಈಗಾಗ್ಲೆ ರಶ್ಮಿಕಾ ಮಂದಣ್ಣ ಹಾಗು ಶ್ರೀಲೀಲಾ ಬೀಡು ಬಿಟ್ಟು ಮೆರೆಯುತ್ತಿದ್ದಾರೆ. ರಶ್ಮಿಕಾ ಮದುವೆ ಆಗಿ ಹೊಸ ರೂಟ್ ಹಿಡಿದಿರೋ ಟೈಮ್ನಲ್ಲಿ ಈಗ ಭಾರಿ ಶೈನ್ ಆಗುತ್ತಿರೋದು ರುಕ್ಮಿಣಿ ವಸಂತಾ. ಈಕೆಯ ಕಾಲ್ ಶೀಟ್ಗಾಗಿ ಬಿಗ್ ಪ್ರೊಡಕ್ಷನ್ ಹೌಸ್ಗಳು ಕಾಯ್ತಾ ಇವೆ. ಇದೀಗ ನಮ್ಮ ರುಕ್ಕು ಬಿಗ್ ಪ್ರೊಡಕ್ಷನ್ ಹೌಸ್ ಜೊತೆ ಹೊಸದೊಂದು ಹೆಜ್ಜೆ ಇಟ್ಟಿದ್ದಾರೆ.
ಹೌದು, ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಮೂಲಕ ಕನ್ನಡಿಗರ ಮನಗೆದ್ದ ನಟಿ ರುಕ್ಮಿಣಿ ವಸಂತ್ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿರುವ ರುಕ್ಮಿಣಿ ಇದೀಗ ಅದೇ ನಿರ್ಮಾಣ ಸಂಸ್ಥೆಯ ಮತ್ತೊಂದು ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಕೆವಿಎನ್ ಪ್ರೊಡಕ್ಷನ್ ನಿರ್ಮಾಣದ ಹೊಸ ಸಿನಿಮಾದಲ್ಲಿ ಕನಕಾವತಿ ಕನಸಿನ ಸಿನಿಮಾ ಮಾಡುತ್ತಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಹೊಸ ಪ್ರಾಜೆಕ್ಟ್ ಒಂದರಲ್ಲಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ವಿಶೇಷ ಎಂದರೆ ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. ಮೂಲಗಳ ಪ್ರಕಾರ ಇದೊಂದು ಅಪ್ಪಟ ಕನ್ನಡ ಸಿನಿಮಾ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನಿರ್ದೇಶಕ ಹೇಮಂತ್ ರಾವ್ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
ಕೆವಿಎನ್ ಪ್ರಾಜೆಕ್ಟ್ ಮಾತ್ರವಲ್ಲ. ರುಕ್ಮಿಣಿ ಟಾಲಿವುಡ್ ಅಂಗಳಕ್ಕೂ ಕಾಲಿಟ್ಟಾಗಿದೆ. ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್ ಟಿ ಆರ್ ಕಾಂಬಿನೇಷನ್ನ ಸಿನಿಮಾದಲ್ಲಿ ರುಕ್ಕು ನಾಯಕಿ. ಈ ಮೂಲಕ ಕಾಂತಾರದ ಕನಕಾವತಿ ದಕ್ಷಿಣ ಭಾರತ ಚಿತ್ರರಂಗ ಆಳೋ ಕನಸು ಕಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.